ಮಾಹಿತಿ ಇರುವಲ್ಲಿ ಹೋಗಲು

ಯೆಹೋವನ ಸಾಕ್ಷಿಗಳು ವೈದ್ಯಕೀಯ ಚಿಕಿತ್ಸೆಯನ್ನು ಪಡೆಯುತ್ತಾರಾ?

ಯೆಹೋವನ ಸಾಕ್ಷಿಗಳು ವೈದ್ಯಕೀಯ ಚಿಕಿತ್ಸೆಯನ್ನು ಪಡೆಯುತ್ತಾರಾ?

ಹೌದು ಪಡೆಯುತ್ತೇವೆ. ಯೆಹೋವನ ಸಾಕ್ಷಿಗಳಾದ ನಾವು ಔಷಧ ಮತ್ತು ವೈದ್ಯಕೀಯ ಚಿಕಿತ್ಸೆಯನ್ನು ಖಂಡಿತ ಪಡೆಯುತ್ತೇವೆ. ಉತ್ತಮ ಆರೋಗ್ಯವನ್ನು ಕಾಪಾಡಿಕೊಳ್ಳಲು ನಾವು ಪ್ರಯತ್ನಿಸಿದರೂ ಕೆಲವೊಮ್ಮೆ ನಮಗೆ ‘ವೈದ್ಯರ ಅಗತ್ಯವಿರುತ್ತದೆ.’ (ಲೂಕ 5:31) ಅಷ್ಟೇ ಯಾಕೆ, ಮೊದಲನೇ ಶತಮಾನದ ಲೂಕನಂತೆ ಇಂದು ಸಹ ಯೆಹೋವನ ಸಾಕ್ಷಿಗಳಲ್ಲಿ ಅನೇಕರು ವೈದ್ಯರಾಗಿದ್ದಾರೆ.​—ಕೊಲೊಸ್ಸೆ 4:14.

ಹಾಗಿದ್ದರೂ ಕೆಲವು ಚಿಕಿತ್ಸೆಗಳು ಬೈಬಲ್‌ ಮೂಲತತ್ವಗಳಿಗೆ ವಿರುದ್ಧವಾಗಿವೆ. ಅಂಥವುಗಳನ್ನು ನಾವು ಸ್ವೀಕರಿಸುವುದಿಲ್ಲ. ಉದಾಹರಣೆಗೆ, ನಾವು ರಕ್ತ ಪೂರಣವನ್ನು ಸ್ವೀಕರಿಸುವುದಿಲ್ಲ ಏಕೆಂದರೆ ಬೈಬಲ್‌ ಅದನ್ನು ನಿಷೇಧಿಸುತ್ತದೆ. (ಅಪೊಸ್ತಲರ ಕಾರ್ಯಗಳು 15:20) ಅದೇ ರೀತಿ, ಮಾಟಮಂತ್ರಕ್ಕೆ ಸಂಬಂಧಿಸಿದ ಚಿಕಿತ್ಸೆ ಅಥವಾ ಚಿಕಿತ್ಸಾ ವಿಧಾನಗಳನ್ನು ಬೈಬಲ್‌ ನಿಷೇಧಿಸುತ್ತದೆ.​—ಗಲಾತ್ಯ 5:​19-21.

ಹಾಗಿದ್ದರೂ ಇಂದಿರುವ ಅನೇಕ ವೈದ್ಯಕೀಯ ಚಿಕಿತ್ಸೆಗಳು ಬೈಬಲ್‌ ಮೂಲತತ್ವಗಳಿಗೆ ವಿರುದ್ಧವಾಗಿರುವುದಿಲ್ಲ. ಇಂಥ ವಿಷಯದಲ್ಲಿ ಯಾವ ಚಿಕಿತ್ಸೆಯನ್ನು ಸ್ವೀಕರಿಸಬೇಕು ಎಂಬುದು ವೈಯಕ್ತಿಕ ಆಯ್ಕೆಯಾಗಿದೆ. ಚಿಕಿತ್ಸಾ ವಿಧಾನವೊಂದು ಒಬ್ಬರಿಗೆ ಸರಿಯೆನಿಸಬಹುದು ಆದರೆ ಇತರರು ಅದನ್ನು ನಿರಾಕರಿಸಬಹುದು.​—ಗಲಾತ್ಯ 6:5.