ಮಾಹಿತಿ ಇರುವಲ್ಲಿ ಹೋಗಲು

ಯೆಹೋವನ ಸಾಕ್ಷಿಗಳು ನಿರ್ದಿಷ್ಟ ಚಲನಚಿತ್ರ, ಪುಸ್ತಕ ಅಥವಾ ಹಾಡುಗಳನ್ನು ನಿಷೇಧಿಸುತ್ತಾರೋ?

ಯೆಹೋವನ ಸಾಕ್ಷಿಗಳು ನಿರ್ದಿಷ್ಟ ಚಲನಚಿತ್ರ, ಪುಸ್ತಕ ಅಥವಾ ಹಾಡುಗಳನ್ನು ನಿಷೇಧಿಸುತ್ತಾರೋ?

ಇಲ್ಲ. ನಮ್ಮ ಸಂಘಟನೆ ನಿರ್ದಿಷ್ಟ ಚಲನಚಿತ್ರ, ಪುಸ್ತಕ ಅಥವಾ ಹಾಡುಗಳನ್ನು ತ್ಯಜಿಸಬೇಕೆಂದು ತನ್ನ ಸದಸ್ಯರ ಮೇಲೆ ಯಾವುದೇ ನಿರ್ಬಂಧ ಹೇರುವುದಿಲ್ಲ. ಏಕೆ?

ಸರಿ ಮತ್ತು ತಪ್ಪಿನ ಭೇದವನ್ನು ವಿವೇಚಿಸಿ ತಿಳಿದುಕೊಳ್ಳಲು ತಮ್ಮ ತಮ್ಮ “ಗ್ರಹಣ ಶಕ್ತಿಗಳನ್ನು” ತರಬೇತುಗೊಳಿಸಿಕೊಳ್ಳಬೇಕೆಂದು ಬೈಬಲ್‌ ಪ್ರತಿಯೊಬ್ಬರನ್ನು ಉತ್ತೇಜಿಸುತ್ತದೆ.​—ಇಬ್ರಿಯ 5:14.

ಮನೋರಂಜನೆಯನ್ನು ಆರಿಸಲು ಕ್ರೈಸ್ತನೊಬ್ಬನಿಗೆ ನೆರವಾಗುವ ಮೂಲತತ್ತ್ವಗಳನ್ನು ಶಾಸ್ತ್ರವಚನಗಳಲ್ಲಿ ಕೊಡಲಾಗಿದೆ. * ಜೀವನದ ಎಲ್ಲಾ ಕ್ಷೇತ್ರಗಳಲ್ಲಿ ನಮ್ಮ ಗುರಿ ಒಂದೇ. ಅದು: “ಕರ್ತನಿಗೆ ಯಾವುದು ಅಂಗೀಕಾರಾರ್ಹವಾಗಿದೆ ಎಂಬುದನ್ನು ಖಚಿತಪಡಿಸಿಕೊಳ್ಳುತ್ತಾ” ಇರುವುದೇ ಆಗಿದೆ.​—ಎಫೆಸ 5:10.

ಕುಟುಂಬದ ತಲೆಗಳಿಗೆ ತಕ್ಕಮಟ್ಟಿಗಿನ ಅಧಿಕಾರ ಇದೆ ಎಂದು ಬೈಬಲ್‌ ಬೋಧಿಸುತ್ತದೆ. ಆದ್ದರಿಂದ ಯಾವ ರೀತಿಯ ಮನೋರಂಜನೆಯನ್ನು ನೋಡಬಾರದೆಂದು ಅವರು ತಮ್ಮ ಕುಟುಂಬ ಸದಸ್ಯರಿಗೆ ಹೇಳಬಹುದು. (1  ಕೊರಿಂಥ 11:3; ಎಫೆಸ 6:​1-4) ಆದರೆ ನಿರ್ದಿಷ್ಟ ಚಲನಚಿತ್ರ, ಹಾಡುಗಳು ಅಥವಾ ಕಲಾವಿದರಿಗೆ ಸಂಬಂಧಿಸಿದ ಮನೋರಂಜನೆ ಸಭೆಯ ಸದಸ್ಯರಿಗೆ ತಕ್ಕದ್ದಲ್ಲ ಎಂದು ಹೇಳುವ ಅಧಿಕಾರ ಬೇರೆ ಯಾರಿಗೂ ಇಲ್ಲ.​—ಗಲಾತ್ಯ 6:5.

^ ಪ್ಯಾರ. 3 ಉದಾಹರಣೆಗೆ, ಪ್ರೇತವ್ಯವಹಾರ, ಲೈಂಗಿಕ ಅನೈತಿಕತೆ ಅಥವಾ ಹಿಂಸೆ, ಮುಂತಾದವುಗಳನ್ನು ಉತ್ತೇಜಿಸುವ ವಿಷಯಗಳನ್ನು ಬೈಬಲ್‌ ಖಂಡಿಸುತ್ತದೆ.—ಧರ್ಮೋಪದೇಶಕಾಂಡ 18:​10-13; ಎಫೆಸ 5:3; ಕೊಲೊಸ್ಸೆ 3:8.