ಮಾಹಿತಿ ಇರುವಲ್ಲಿ ಹೋಗಲು

ಯೆಹೋವನ ಸಾಕ್ಷಿಗಳು ತಮ್ಮ ಕೂಟದ ಸ್ಥಳವನ್ನು ಚರ್ಚ್‌ ಎಂದು ಏಕೆ ಕರೆಯುವುದಿಲ್ಲ?

ಯೆಹೋವನ ಸಾಕ್ಷಿಗಳು ತಮ್ಮ ಕೂಟದ ಸ್ಥಳವನ್ನು ಚರ್ಚ್‌ ಎಂದು ಏಕೆ ಕರೆಯುವುದಿಲ್ಲ?

ಬೈಬಲ್‌ನಲ್ಲಿ ಕೆಲವೊಂದು ಕಡೆ “ಚರ್ಚ್‌” ಎಂದು ಭಾಷಾಂತರಿಸಲಾದ ಗ್ರೀಕ್‌ ಪದವಿದೆ. ಅದು ಆರಾಧಕರ ಒಂದು ಗುಂಪನ್ನು ಸೂಚಿಸುತ್ತದೆಯೇ ಹೊರತು ಅವರು ಕೂಡುತ್ತಿದ್ದ ಕಟ್ಟಡವನ್ನು ಸೂಚಿಸುವುದಿಲ್ಲ.

ಈ ಉದಾಹರಣೆಯನ್ನು ಗಮನಿಸಿ: ಅಪೊಸ್ತಲ ಪೌಲನು ರೋಮ್‌ನಲ್ಲಿದ್ದ ಕ್ರೈಸ್ತರಿಗೆ ಪತ್ರ ಬರೆದಾಗ, ಅಕ್ವಿಲ್ಲ ಮತ್ತು ಪ್ರಿಸ್ಕಿಲ್ಲ ಎಂಬ ದಂಪತಿಗೆ ವಂದನೆಯನ್ನು ತಿಳಿಸಲು ಹೇಳಿದನು ಮತ್ತು ಮುಂದುವರಿಸುತ್ತಾ: “ಅವರ ಮನೆಯಲ್ಲಿ ಕೂಡುವ ಚರ್ಚ್‌ಗೆ ನನ್ನ ವಂದನೆಯನ್ನು ಹೇಳಿರಿ” ಎಂದನು. (ರೋಮನ್ನರಿಗೆ 16:​5, ಕಂಟೆಂಪರರಿ ಇಂಗ್ಲಿಷ್‌ ವರ್ಷನ್‌) ಇದರರ್ಥ ಪೌಲನು ಕಟ್ಟಡಕ್ಕೆ ವಂದನೆಗಳನ್ನು ತಿಳಿಸುತ್ತಿದ್ದಾನೆ ಎಂದಲ್ಲ. ಬದಲಿಗೆ ಅವನು ವಂದನೆಗಳನ್ನು ಅಲ್ಲಿನ ಜನರಿಗೆ ಅಂದರೆ ಆ ಮನೆಯಲ್ಲಿ ಕೂಡಿ ಬರುತ್ತಿದ್ದ ಸಭೆಗೆ ತಿಳಿಸುತ್ತಿದ್ದನು. *

ಆದ್ದರಿಂದ ನಾವು ಆರಾಧನೆಗಾಗಿ ಕೂಡಿ ಬರುವ ಸ್ಥಳವನ್ನು ಚರ್ಚ್‌ ಎಂದು ಕರೆಯದೆ “ರಾಜ್ಯ ಸಭಾಗೃಹ” ಎಂದು ಕರೆಯುತ್ತೇವೆ.

“ಯೆಹೋವನ ಸಾಕ್ಷಿಗಳ ರಾಜ್ಯ ಸಭಾಗೃಹ” ಎಂದು ಏಕೆ ಕರೆಯುತ್ತೀರಿ?

ಈ ಹೆಸರು ಸೂಕ್ತವಾಗಿದೆ ಎನ್ನಲು ಅನೇಕ ಕಾರಣಗಳಿವೆ:

  • ಕಟ್ಟಡವು ಒಂದು ಸಭಾಗೃಹ ಅಥವಾ ಕೂಡಿ ಬರುವ ಸ್ಥಳವಾಗಿದೆ.

  • ಬೈಬಲಿನಲ್ಲಿ ದೇವರು ಎಂದು ಕರೆದಿರುವ ಯೆಹೋವನನ್ನು ಆರಾಧಿಸಲು, ಆತನ ಕುರಿತು ಸಾಕ್ಷಿ ಹೇಳಲು ಅಥವಾ ದೃಢವಾಗಿ ಮಾತಾಡಲು ಕೂಡಿ ಬರುತ್ತೇವೆ.​—ಕೀರ್ತನೆ 83:18; ಯೆಶಾಯ 43:12.

  • ಯೇಸು ಯಾವಾಗಲೂ ಯಾವುದರ ಬಗ್ಗೆ ಮಾತಾಡಿದನೋ ಆ ದೇವರ ರಾಜ್ಯದ ಬಗ್ಗೆ ಕಲಿಯಲು ನಾವು ಕೂಡಿ ಬರುತ್ತೇವೆ.​—ಮತ್ತಾಯ 6:​9, 10; 24:14; ಲೂಕ 4:43.

ಯೆಹೋವನ ಸಾಕ್ಷಿಗಳು ಕೂಟಗಳನ್ನು ಹೇಗೆ ನಡೆಸುತ್ತಾರೆ ಎಂದು ನೋಡಲು ಹತ್ತಿರದಲ್ಲಿರವ ರಾಜ್ಯಸಭಾಗೃಹಕ್ಕೆ ನಿಮ್ಮನ್ನು ಆಮಂತ್ರಿಸುತ್ತೇವೆ.

^ ಪ್ಯಾರ. 2 ಇಂಥದ್ದೇ ಅಭಿವ್ಯಕ್ತಿಗಳು 1 ಕೊರಿಂಥ 16:19; ಕೊಲೊಸ್ಸೆ 4:15; ಮತ್ತು ಫಿಲೆಮೋನ 2ರಲ್ಲಿವೆ.