ಮಾಹಿತಿ ಇರುವಲ್ಲಿ ಹೋಗಲು

ಕೇವಲ ಯೆಹೋವನ ಸಾಕ್ಷಿಗಳಾದ ನೀವು ಮಾತ್ರ ರಕ್ಷಣೆ ಹೊಂದುವುದು ಎಂದು ನೆನಸುತ್ತೀರಾ?

ಕೇವಲ ಯೆಹೋವನ ಸಾಕ್ಷಿಗಳಾದ ನೀವು ಮಾತ್ರ ರಕ್ಷಣೆ ಹೊಂದುವುದು ಎಂದು ನೆನಸುತ್ತೀರಾ?

ಇಲ್ಲ. ಹಿಂದಿನ ಕಾಲದಲ್ಲಿ ಜೀವಿಸಿದ್ದ ಯೆಹೋವನ ಸಾಕ್ಷಿಗಳಲ್ಲದ ಕೋಟ್ಯಂತರ ಜನರಿಗೂ ರಕ್ಷಣೆ ಪಡೆಯುವ ಅವಕಾಶವಿದೆ. ದೇವರು ವಾಗ್ದಾನಿಸಿರುವ ಹೊಸ ಲೋಕದಲ್ಲಿ “ನೀತಿವಂತರಿಗೂ ಅನೀತಿವಂತರಿಗೂ ಪುನರುತ್ಥಾನವಾಗುವುದೆಂದು” ಬೈಬಲ್‌ ತಿಳಿಸುತ್ತದೆ. (ಅಪೊಸ್ತಲರ ಕಾರ್ಯಗಳು 24:15) ಅದಕ್ಕೆ ಕೂಡಿಸಿ, ಈಗ ಬದುಕುತ್ತಿರುವ ಅನೇಕರು ಮುಂದೆ ದೇವರನ್ನು ಆರಾಧಿಸಲು ಶುರುಮಾಡಬಹುದು. ಆಗ ಅವರೂ ರಕ್ಷಣೆ ಹೊಂದುವರು. ಯಾರು ರಕ್ಷಣೆ ಹೊಂದುವರು, ಯಾರು ಹೊಂದುವುದಿಲ್ಲ ಎಂದು ನಿರ್ಣಯಿಸುವುದು ನಮ್ಮ ಕೆಲಸವಲ್ಲ. ಆ ಜವಾಬ್ದಾರಿ ಸಂಪೂರ್ಣವಾಗಿ ಯೇಸುವಿಗೆ ಕೊಡಲಾಗಿದೆ.—ಯೋಹಾನ 5:22, 27.