ಮಾಹಿತಿ ಇರುವಲ್ಲಿ ಹೋಗಲು

ಯೆಹೋವನ ಸಾಕ್ಷಿಗಳು ಮಿಷನರಿ ಕೆಲಸ ಮಾಡುತ್ತಾರಾ?

ಯೆಹೋವನ ಸಾಕ್ಷಿಗಳು ಮಿಷನರಿ ಕೆಲಸ ಮಾಡುತ್ತಾರಾ?

ಹೌದು. ಯೆಹೋವನ ಸಾಕ್ಷಿಗಳು ಎಲ್ಲೇ ಇರಲಿ ತಾವು ಭೇಟಿಯಾಗುವ ಜನರೊಂದಿಗೆ ಕ್ರಮವಾಗಿ ತಮ್ಮ ನಂಬಿಕೆಯ ಕುರಿತು ಹಂಚಿಕೊಳ್ಳುವ ವಿಷಯದಲ್ಲಿ ಮಿಷನರಿ ಮನೋಭಾವವನ್ನು ಕಾಪಾಡಿಕೊಳ್ಳಲು ಪ್ರಯತ್ನಿಸುತ್ತಾರೆ.​—ಮತ್ತಾಯ 28:​19, 20.

ಅಷ್ಟೇ ಅಲ್ಲದೆ, ಕೆಲವು ಸಾಕ್ಷಿಗಳು ತಮ್ಮ ಸ್ವಂತ ದೇಶದಲ್ಲೇ, ಎಲ್ಲಿ ಇನ್ನೂ ಬೈಬಲ್‌ ಸುವಾರ್ತೆ ತಲುಪಿಲ್ಲವೋ ಅಂಥ ಸ್ಥಳದಲ್ಲಿರುವ ಜನರಿಗೆ ಸುವಾರ್ತೆ ಸಾರಲು ಅಲ್ಲಿಗೆ ಭೇಟಿಕೊಡುತ್ತಾರೆ ಅಥವಾ ಸ್ಥಳಾಂತರಿಸುತ್ತಾರೆ. ಇನ್ನೂ ಕೆಲವು ಸಾಕ್ಷಿಗಳು ತಮ್ಮ ಶುಷ್ರೂಷೆಯನ್ನು ವಿಸ್ತರಿಸಲು ಬೇರೆಯೊಂದು ದೇಶಕ್ಕೆ ಸ್ಥಳಾಂತರಿಸುತ್ತಾರೆ. ಯೇಸುವಿನ ಈ ಪ್ರವಾದನೆಯ ನೆರವೇರಿಕೆಯಲ್ಲಿ ಪಾಲುಗಾರರಾಗಲು ಅವರು ಸಂತೋಷಿಸುತ್ತಾರೆ: “ಭೂಮಿಯ ಕಟ್ಟಕಡೆಯ ವರೆಗೂ ನನಗೆ ಸಾಕ್ಷಿಗಳಾಗಿರುವಿರಿ.”​—ಅಪೊಸ್ತಲರ ಕಾರ್ಯಗಳು 1:8.

1943ರಲ್ಲಿ ನಾವು ಒಂದು ಶಾಲೆಯನ್ನು ಆರಂಭಿಸಿದೆವು. ಈ ಶಾಲೆಯಲ್ಲಿ ನಮ್ಮ ಮಿಷನರಿಗಳಿಗೆ ವಿಶೇಷ ತರಬೇತಿ ನೀಡಲಾಗುತ್ತದೆ. ಇದು ಶುರುವಾದಂದಿನಿಂದ ಸುಮಾರು 8,000 ಮಂದಿ ಸಾಕ್ಷಿಗಳು ಈ ಶಾಲೆಗೆ ಹಾಜರಾಗಿದ್ದಾರೆ. ಈ ಶಾಲೆಯ ಹೆಸರು ವಾಚ್‌ಟವರ್‌ ಬೈಬಲ್‌ ಸ್ಕೂಲ್‌ ಆಫ್‌ ಗಿಲ್ಯಡ್‌.