ಮಾಹಿತಿ ಇರುವಲ್ಲಿ ಹೋಗಲು

ಯೆಹೋವನ ಸಾಕ್ಷಿಗಳೇಕೆ ಮನೆಯಿಂದ ಮನೆಗೆ ಹೋಗುತ್ತಾರೆ?

ಯೆಹೋವನ ಸಾಕ್ಷಿಗಳೇಕೆ ಮನೆಯಿಂದ ಮನೆಗೆ ಹೋಗುತ್ತಾರೆ?

“ಎಲ್ಲ ಜನಾಂಗಗಳ ಜನರನ್ನು ಶಿಷ್ಯರನ್ನಾಗಿ ಮಾಡಿರಿ” ಎಂದು ಯೇಸು ತನ್ನ ಹಿಂಬಾಲಕರಿಗೆ ಹೇಳಿದನು. (ಮತ್ತಾಯ 28:19, 20) ಅವನು ತನ್ನ ಶಿಷ್ಯರನ್ನು ಈ ಕೆಲಸಕ್ಕೆ ಕಳುಹಿಸಿದಾಗ ಜನರ ಮನೆಗಳಿಗೆ ಹೋಗುವಂತೆ ಅವರಿಗೆ ಹೇಳಿದನು. (ಮತ್ತಾಯ 10:7, 11-13) ಯೇಸುವಿನ ಮರಣದ ನಂತರ, ಒಂದನೇ ಶತಮಾನದ ಕ್ರೈಸ್ತರು “ಸಾರ್ವಜನಿಕವಾಗಿಯೂ ಮನೆಮನೆಯಲ್ಲಿಯೂ” ಸುವಾರ್ತೆ ಸಾರುವುದನ್ನು ಮುಂದುವರಿಸಿದರು. (ಅಪೊಸ್ತಲರ ಕಾರ್ಯಗಳು 5:42; 20:20) ಆ ಆದಿ ಕ್ರೈಸ್ತರ ಮಾದರಿಯನ್ನು ನಾವಿಂದು ಅನುಸರಿಸುತ್ತೇವೆ. ಜನರನ್ನು ಭೇಟಿಯಾಗಲು ಮನೆಮನೆ ಸೇವೆಯೇ ಉತ್ತಮ ಮಾರ್ಗ ಎಂದು ಕಂಡುಕೊಂಡಿದ್ದೇವೆ.