ಮಾಹಿತಿ ಇರುವಲ್ಲಿ ಹೋಗಲು

ಬೈಬಲ್‌ ಅಧ್ಯಯನ ಎಂದರೇನು?

ಬೈಬಲ್‌ ಅಧ್ಯಯನ ಎಂದರೇನು?

ಯೆಹೋವನ ಸಾಕ್ಷಿಗಳು ಆಸಕ್ತ ಜನರಿಗೆ ಬೈಬಲ್‌ ಅಧ್ಯಯನವನ್ನು ನೀಡುತ್ತಾರೆ. ಆ ಅಧ್ಯಯನದಲ್ಲಿ ಅನೇಕ ಪ್ರಶ್ನೆಗಳಿಗೆ ಉತ್ತರ ದೊರೆಯುತ್ತದೆ. ಉದಾ:

  • ದೇವರು ಯಾರು?

  • ದೇವರಿಗೆ ನನ್ನ ಬಗ್ಗೆ ನಿಜವಾಗಿ ಚಿಂತೆ ಇದೆಯಾ?

  • ನನ್ನ ವೈವಾಹಿಕ ಜೀವನವನ್ನು ಹೇಗೆ ಉತ್ತಮಗೊಳಿಸಬಲ್ಲೆ?

  • ನನ್ನ ಬದುಕಲ್ಲಿ ಆನಂದವನ್ನು ಹೇಗೆ ಕಂಡುಕೊಳ್ಳಬಲ್ಲೆ?

ನಮ್ಮ ಬೈಬಲ್‌ ಅಧ್ಯಯನ ಕಾರ್ಯಕ್ರಮದ ಕುರಿತು ಸಾಮಾನ್ಯವಾಗಿ ಜನರು ಕೇಳುವ ಪ್ರಶ್ನೆಗಳಿಗೆ ಉತ್ತರ ಇಲ್ಲಿವೆ.

ಅಧ್ಯಯನವನ್ನು ಹೇಗೆ ಮಾಡಲಾಗುತ್ತದೆ? “ದೇವರು” ಅಥವಾ “ಮದುವೆ” ಮುಂತಾದ ವಿಷಯಗಳನ್ನು ಆರಿಸಿ, ಆ ವಿಷಯಕ್ಕೆ ಸಂಬಂಧಿಸಿದ ಬೇರೆ ಬೇರೆ ಬೈಬಲ್‌ ವಚನಗಳನ್ನು ಪರಿಶೀಲಿಸುತ್ತೇವೆ. ನಂತರ ವಚನಗಳನ್ನು ಒಂದಕ್ಕೊಂದು ಹೋಲಿಸಿ ನೋಡಿ ಆ ವಿಷಯದ ಕುರಿತು ಬೈಬಲ್‌ ಏನನ್ನುತ್ತದೆ ಎನ್ನುವುದನ್ನು ತಿಳುಕೊಳ್ಳುತ್ತೇವೆ. ಹೀಗೆ ಪ್ರತಿಯೊಂದು ವಿಷಯದ ಬಗ್ಗೆ ಬೈಬಲೇ ಮಾತಾಡುವಂತೆ ಬಿಡುತ್ತೇವೆ.

ಬೈಬಲ್‌ ನಿಜವಾಗಿಯೂ ಏನನ್ನು ಬೋಧಿಸುತ್ತದೆ? ಎಂಬ ಪುಸ್ತಕದ ಸಹಾಯದಿಂದ ಬೈಬಲ್‌ ಅಧ್ಯಯನ ನಡೆಸುತ್ತೇವೆ. ಈ ಪುಸ್ತಕದಲ್ಲಿ ದೇವರು ಯಾರು, ಯೇಸು ಯಾರು, ಭವಿಷ್ಯದಲ್ಲಿ ಏನಾಗಲಿದೆ ಎಂಬೆಲ್ಲಾ ವಿಷಯಗಳ ಕುರಿತು ಬೈಬಲ್‌ ಏನನ್ನುತ್ತದೆ ಎಂಬ ಸ್ಪಷ್ಟ ವಿವರವಿದೆ.

ಬೈಬಲ್‌ ಅಧ್ಯಯನ ಪಡೆದುಕೊಳ್ಳಲು ತಗಲುವ ವೆಚ್ಚ ಎಷ್ಟು? ಈ ಅಧ್ಯಯನವನ್ನು ಉಚಿತವಾಗಿ ನೀಡಲಾಗುತ್ತದೆ. ಮಾತ್ರವಲ್ಲ, ಅಧ್ಯಯನ ಮಾಡಲು ಉಪಯೋಗಿಸುವ ಸಾಹಿತ್ಯಕ್ಕೂ ಯಾವುದೇ ಹಣವನ್ನು ಪಡೆಯಲಾಗುವುದಿಲ್ಲ.

ಪ್ರತಿ ಅಧ್ಯಯನದ ಅವಧಿ ಎಷ್ಟು? ಅನೇಕರು ನಮ್ಮೊಂದಿಗೆ ಬೈಬಲ್‌ ಅಧ್ಯಯನ ಮಾಡಲು ಪ್ರತಿವಾರ ಹೆಚ್ಚು ಕಡಿಮೆ ಒಂದು ತಾಸನ್ನು ಬದಿಗಿಡುತ್ತಾರೆ. ಆದರೆ ಇಷ್ಟೇ ಸಮಯ ನೀಡಬೇಕೆಂದೇನಿಲ್ಲ. ನಿಮ್ಮ ಅನುಕೂಲಕ್ಕೆ ತಕ್ಕಂತೆ ಅದನ್ನು ಹೊಂದಿಸಿಕೊಳ್ಳಬಹುದು.

ನಾನು ಬೈಬಲ್‌ ಅಧ್ಯಯನವನ್ನು ವಿನಂತಿಸಿದಾಗ ಏನು ಮಾಡಲಾಗುತ್ತದೆ? ನೀವು ಬೈಬಲ್‌ ಅಧ್ಯಯನವನ್ನು ವಿನಂತಿಸಿದಾಗ ಯೆಹೋವನ ಸಾಕ್ಷಿಗಳಲ್ಲಿ ಒಬ್ಬರು ನಿಮಗೆ ಅನುಕೂಲವಾದ ಸ್ಥಳ ಮತ್ತು ಸಮಯದಲ್ಲಿ ನಿಮ್ಮನ್ನು ಭೇಟಿ ಮಾಡುವರು. ಅಧ್ಯಯನವನ್ನು ಹೇಗೆ ನಡೆಸಲಾಗುತ್ತದೆ ಎಂದು ಕೆಲವೇ ನಿಮಿಷಗಳಲ್ಲಿ ತೋರಿಸಿಕೊಡುವರು. ನಿಮಗಿಷ್ಟವಾದರೆ ನೀವು ಅದನ್ನು ಮುಂದುವರಿಸಬಹುದು.

ಬೈಬಲ್‌ ಅಧ್ಯಯನವನ್ನು ಸ್ವೀಕರಿಸಿದ ಮೇಲೆ ನಾನೊಬ್ಬ ಯೆಹೋವನ ಸಾಕ್ಷಿ ಆಗಲೇ ಬೇಕಾ? ಇಲ್ಲ. ಬೈಬಲಿನ ಕುರಿತು ಜನರಿಗೆ ಕಲಿಸಲು ಯೆಹೋವನ ಸಾಕ್ಷಿಗಳಾದ ನಾವು ಹರ್ಷಿಸುತ್ತೇವೆ. ಆದರೆ ನಮ್ಮ ಧರ್ಮದ ಸದಸ್ಯರಾಗಬೇಕೆಂದು ಯಾರನ್ನೂ ಒತ್ತಾಯಿಸುವುದಿಲ್ಲ. ಬೈಬಲ್‌ ಏನು ಬೋಧಿಸುತ್ತದೆ ಎನ್ನುವುದನ್ನು ಜನರಿಗೆ ತಿಳಿಸುತ್ತೇವೆ. ಅದನ್ನು ನಂಬುವುದು ಇಲ್ಲವೆ ನಂಬದಿರುವುದು ವ್ಯಕ್ತಿಗೆ ಬಿಟ್ಟ ವಿಷಯವಾಗಿದೆ. ತನಗೆ ಇಷ್ಟವಾದ ವಿಷಯವನ್ನು ಆಯ್ಕೆ ಮಾಡುವ ಹಕ್ಕು ಪ್ರತಿಯೊಬ್ಬನಿಗಿದೆ.—1 ಪೇತ್ರ 3:15.