ಮಾಹಿತಿ ಇರುವಲ್ಲಿ ಹೋಗಲು

ಯೆಹೋವನ ಸಾಕ್ಷಿಗಳು ಏಕೆ ಈಸ್ಟರ್‌ ಆಚರಿಸುವುದಿಲ್ಲ?

ಯೆಹೋವನ ಸಾಕ್ಷಿಗಳು ಏಕೆ ಈಸ್ಟರ್‌ ಆಚರಿಸುವುದಿಲ್ಲ?

ಸಾಮಾನ್ಯ ತಪ್ಪುಕಲ್ಪನೆ

ತಪ್ಪಭಿಪ್ರಾಯ: ಯೆಹೋವನ ಸಾಕ್ಷಿಗಳು ಕ್ರೈಸ್ತರಲ್ಲದ ಕಾರಣ ಈಸ್ಟರ್‌ ಆಚರಿಸುವುದಿಲ್ಲ.

ವಾಸ್ತವಾಂಶ: ಯೇಸು ಕ್ರಿಸ್ತನು ರಕ್ಷಕನೆಂದು ನಾವು ನಂಬುತ್ತೇವೆ. ಆತನ ‘ಹೆಜ್ಜೆಜಾಡನ್ನು ನಿಕಟವಾಗಿ ಅನುಸರಿಸಲು’ ನಮ್ಮಿಂದಾದೆಲ್ಲಾ ಪ್ರಯತ್ನ ಹಾಕುತ್ತೇವೆ.​—1 ಪೇತ್ರ 2:21; ಲೂಕ 2:11.

ತಪ್ಪಭಿಪ್ರಾಯ: ಯೇಸು ಪುನರುತ್ಥಾನವಾಗಿದ್ದಾನೆ ಎಂದು ನೀವು ನಂಬುವುದಿಲ್ಲ.

ವಾಸ್ತವಾಂಶ: ಯೇಸು ಪುನರುತ್ಥಾನವಾಗಿದ್ದಾನೆ ಎಂದು ನಾವು ನಂಬುತ್ತೇವೆ. ಪುನರುತ್ಥಾನ ಕ್ರೈಸ್ತ ನಂಬಿಕೆಯ ಬುನಾದಿ ಎಂದು ನಾವು ಒಪ್ಪುತ್ತೇವೆ. ನಾವು ಸಾರುವ ಮುಖ್ಯ ವಿಷಯವೂ ಅದೇ ಆಗಿದೆ.—1 ಕೊರಿಂಥ 15:​3, 4, 12-15.

ತಪ್ಪಭಿಪ್ರಾಯ: ನೀವು ಈಸ್ಟರ್‌ ಆಚರಿಸದಿರುವ ಕಾರಣ ನಿಮ್ಮ ಮಕ್ಕಳು ಎಷ್ಟೆಲ್ಲ ಸಂತೋಷವನ್ನು ಕಳೆದುಕೊಳ್ಳುತ್ತಾರೆಂದು ನೀವು ಯೋಚಿಸುವುದೇ ಇಲ್ಲ.

ವಾಸ್ತವಾಂಶ: ನಾವು ನಮ್ಮ ಮಕ್ಕಳನ್ನು ಪ್ರೀತಿಸುತ್ತೇವೆ. ಅವರ ತರಬೇತಿ ಮತ್ತು ಸಂತೋಷಕ್ಕಾಗಿ ನಮ್ಮನ್ನು ನೀಡಿಕೊಳ್ಳುತ್ತೇವೆ.​—ತೀತ 2:4.

ಯೆಹೋವನ ಸಾಕ್ಷಿಗಳು ಏಕೆ ಈಸ್ಟರ್‌ ಆಚರಿಸುವುದಿಲ್ಲ?

  • ಈಸ್ಟರ್‌ ಆಚರಣೆ ಬೈಬಲ್‌ ಆಧಾರಿತವಾಗಿಲ್ಲ.

  • ಯೇಸು ತನ್ನ ಮರಣದ ದಿನವನ್ನು ನೆನಪಿಸಿಕೊಳ್ಳುವುದಕ್ಕೆ ಹೇಳಿದ್ದಾನೇ ಹೊರತು ಪುನರುತ್ಥಾನವನ್ನಲ್ಲ. ನಾವು ಪ್ರತಿವರ್ಷ ಬೈಬಲಿನ ಚಂದ್ರಮಾನ ಕ್ಯಾಲೆಂಡರ್‌ಗೆ ಅನುಗುಣವಾಗಿ ಆತನ ಮರಣವನ್ನು ಸ್ಮರಿಸುತ್ತೇವೆ.​—ಲೂಕ 22:​19, 20.

  • ಈಸ್ಟರ್‌ ಹಬ್ಬ ವಿಧರ್ಮಿ ಮೂಲದಿಂದ ಬಂದಿದೆ. ಇದನ್ನು ಪುರಾತನ ಕಾಲದಲ್ಲಿ ಸಂತಾನೋತ್ಪತ್ತಿಯ ಹೆಚ್ಚುಸುವಿಕೆಗಾಗಿ ಆಚರಿಸುತ್ತಿದ್ದರು. ಹಾಗಾಗಿ ಇದನ್ನು ದೇವರು ಒಪ್ಪುವುದಿಲ್ಲ ಎಂದು ನಾವು ನಂಬುತ್ತೇವೆ. ನಾವಾತನಿಗೆ ಅನನ್ಯ ಭಕ್ತಿಯನ್ನು ಸಲ್ಲಿಸಬೇಕೆಂದು ದೇವರು ಬಯಸುತ್ತಾನೆ. ತಾನು ಒಪ್ಪದ ಆಚಾರವಿಚಾರಗಳನ್ನು ತನ್ನ ಆರಾಧನೆಯ ಒಳಗೆ ತಂದರೆ ದೇವರು ಎಂದಿಗೂ ಸಹಿಸುವುದಿಲ್ಲ.​—ವಿಮೋಚನಕಾಂಡ 20:5; 1 ಅರಸು 18:21.

ಈಸ್ಟರ್‌ ಆಚರಿಸುವುದಿಲ್ಲ ಎಂಬ ನಮ್ಮ ನಿರ್ಧಾರ ಬೈಬಲ್‌ ಆಧರಿತ. ಮಾನವ ಸಂಪ್ರದಾಯಗಳನ್ನು ಕಣ್ಮುಚ್ಚಿ ಆಚರಿಸುವ ಬದಲು “ಪ್ರಾಯೋಗಿಕ ವಿವೇಕವನ್ನೂ ಯೋಚನಾ ಸಾಮರ್ಥ್ಯವನ್ನೂ” ಉಪಯೋಗಿಸುವಂತೆ ಬೈಬಲ್‌ ಪ್ರೋತ್ಸಾಹಿಸುತ್ತದೆ. (ಜ್ಞಾನೋಕ್ತಿ 3:​21, NW; ಮತ್ತಾಯ 15:3) ಈಸ್ಟರ್‌ ಬಗ್ಗೆ ನಮಗಿರುವ ನಂಬಿಕೆಯ ಕುರಿತು ಇತರರು ಕೇಳುವಾಗ ತಿಳಿಸುತ್ತೇವೆ. ಆದರೆ ಅದನ್ನು ಆಚರಿಸಬೇಕೋ, ಬೆಡವೋ ಎಂಬದು ಅವರವರ ವೈಯಕ್ತಿಕ ನಿರ್ಧಾರ. ಆ ನಿರ್ಧಾರವನ್ನು ನಾವು ಗೌರವಿಸುತ್ತೇವೆ.​—1 ಪೇತ್ರ 3:15.