ಮಾಹಿತಿ ಇರುವಲ್ಲಿ ಹೋಗಲು

ಅಮೆರಿಕದಲ್ಲಿರುವ ಬೆತೆಲ್‌ಗೆ ಭೇಟಿ ನೀಡಿ

ಅಮೆರಿಕದಲ್ಲಿರುವ ಬೆತೆಲ್‌ಗೆ ಭೇಟಿ ನೀಡಿ

“ಬೆತೆಲ್‌ಗೆ ಭೇಟಿ ನೀಡಿದ್ದನ್ನು ಮರೆಯುವುದಕ್ಕೆ ಸಾಧ್ಯನೇ ಇಲ್ಲ. ಈ ಸವಿನೆನಪು ನಮ್ಮಲ್ಲಿ ಅಚ್ಚಳಿಯದೆ ಉಳಿಯುತ್ತದೆ.” ಅಮೆರಿಕದಲ್ಲಿರುವ ಯೆಹೋವನ ಸಾಕ್ಷಿಗಳ ಬೆತೆಲ್‌ಗಳಿಗೆ ಭೇಟಿ ನೀಡಿದ ದಂಪತಿ ಹೇಳಿದ ಮಾತಿದು. ಅವರು ವಾನುಆಟುವಿನಿಂದ ಬಂದಿದ್ದರು. ಕೇವಲ ಇವರಿಬ್ಬರೇ ಅಲ್ಲ, ಪ್ರತಿವರ್ಷ ಈ ಬೆತೆಲ್‌ಗಳನ್ನು ನೋಡಲು ಬರುವ 70 ಸಾವಿರಕ್ಕಿಂತ ಹೆಚ್ಚಿನ ಜನರು ಇದನ್ನೇ ಹೇಳುತ್ತಾರೆ.

ನೀವು ಅಮೆರಿಕದಲ್ಲಿರುವ ಬೆತೆಲ್‌ಗಳಿಗೆ ಭೇಟಿ ನೀಡಿದ್ದೀರೋ? ಇಲ್ಲವಾದಲ್ಲಿ, ದಯವಿಟ್ಟು ಒಮ್ಮೆ ಭೇಟಿ ನೀಡಿ.

ಮುಖ್ಯ ಕಾರ್ಯಾಲಯ, ಬ್ರೂಕ್ಲಿನ್‌, ನ್ಯೂಯಾರ್ಕ್‌. ಲೋಕವ್ಯಾಪಕವಾಗಿ ಸುವಾರ್ತೆ ಸಾರುವ ಕೆಲಸವನ್ನು ಈ ಮುಖ್ಯ ಕಾರ್ಯಾಲಯದಿಂದಲೇ ಯೋಜಿಸಲಾಗುತ್ತದೆ ಮತ್ತು ನಿರ್ದೇಶಿಸಲಾಗುತ್ತದೆ. ಇಲ್ಲಿಗೆ ಭೇಟಿ ನೀಡಿದರೆ ಈ ಕೆಲಸಗಳನ್ನು ಹೇಗೆ ಮಾಡಲಾಗುತ್ತದೆ ಎನ್ನುವುದನ್ನು ತಿಳಿದುಕೊಳ್ಳಬಹುದು. ನಿಮ್ಮ ಸಹಾಯಕ್ಕೆಂದು ಒಬ್ಬ ಗೈಡ್ ಇರುತ್ತಾರೆ. ಈ ಕಾರ್ಯಾಲಯದಲ್ಲಿ ಎರಡು ಪ್ರದರ್ಶನಗಳನ್ನು ಸಹ ನೀವು ನೋಡಬಹುದು. ಒಂದರ ಹೆಸರು, “ಯೆಹೋವನ ಹೆಸರಿಗಾಗಿ ಜೀವಿಸುತ್ತಿರುವ ಜನ.” ಈ ಪ್ರದರ್ಶನವು ಮೊದಲ ಶತಮಾನದಿಂದ ಹಿಡಿದು ಈವರೆಗಿನ ಯೆಹೋವನ ಜನರ ಇತಿಹಾಸವನ್ನು ತಿಳಿಸುತ್ತದೆ. ಇನ್ನೊಂದು ಪ್ರದರ್ಶನದ ಹೆಸರು, “ಬೈಬಲ್‌ ಮತ್ತು ದೇವರ ಹೆಸರು.” ದೇವರ ಹೆಸರಿರುವ ಅನೇಕ ಬೈಬಲ್‌ ಭಾಷಾಂತರಗಳನ್ನು ಈ ಪ್ರದರ್ಶನದಲ್ಲಿ ಇಡಲಾಗಿದೆ.

ದೈವಿಕ ಶಿಕ್ಷಣ, ಪ್ಯಾಟರ್‌ಸನ್‌, ನ್ಯೂಯಾರ್ಕ್‌. ಇಲ್ಲಿ, ವಾಚ್‍ಟವರ್‌ ಬೈಬಲ್‌ ಸ್ಕೂಲ್‌ ಆಫ್‌ ಗಿಲ್ಯಡ್, ಬ್ರಾಂಚ್‌ ಕಮಿಟಿ ಸದಸ್ಯರು ಮತ್ತು ಅವರ ಪತ್ನಿಯರಿಗಾಗಿ ಶಾಲೆಗಳು ನಡೆಯುತ್ತವೆ. ಇಲ್ಲಿಗೆ ಭೇಟಿ ನೀಡಿದರೆ, ಆ ಶಾಲೆಗಳು ಹೇಗೆ ನಡೆಯುತ್ತವೆ ಎನ್ನುವುದನ್ನು ತಿಳಿದುಕೊಳ್ಳಬಹುದು. ಅಷ್ಟೇ ಅಲ್ಲದೇ, ಕಲಾ ವಿಭಾಗ, ಆಡಿಯೋ ಮತ್ತು ವಿಡಿಯೋಗಳ ವಿಭಾಗ, ಕಾನೂನು ವಿಭಾಗಗಳಲ್ಲಿ ಮತ್ತು ಸರ್ವಿಸ್‌ ಡಿಪಾರ್ಟ್‍ಮೆಂಟ್‍ನಲ್ಲಿ ಹೇಗೆ ಕೆಲಸ ನಡೆಯುತ್ತದೆ ಎಂದು ತಿಳಿಸುವ ಪ್ರದರ್ಶನಗಳನ್ನು ಮತ್ತು ವಿಡಿಯೋಗಳನ್ನು ನೋಡುವ ಅವಕಾಶವೂ ನಿಮಗೆ ಸಿಗುತ್ತದೆ.

ಸಾಹಿತ್ಯ ಮುದ್ರಣ ಮತ್ತು ಸಾಗಣೆ, ವಾಲ್‌ಕಿಲ್‌, ನ್ಯೂಯಾರ್ಕ್‌. ಬೈಬಲ್‌ ಮತ್ತು ಬೈಬಲ್‌ ಆಧರಿತ ಸಾಹಿತ್ಯದ ಮುದ್ರಣ ಮತ್ತು ಅದರ ಸಾಗಣೆಯ ಕೆಲಸ ಇಲ್ಲಿ ನಡೆಯುತ್ತದೆ. ಇಲ್ಲಿ ಮುದ್ರಣಗೊಂಡ ಸಾಹಿತ್ಯವನ್ನು ಅಮೆರಿಕ, ಕೆರಿಬಿಯನ್‌ ಮತ್ತು ಲೋಕದ ಇನ್ನಿತರ ಕಡೆಗಳಿಗೆ ರವಾನೆ ಮಾಡಲಾಗುತ್ತದೆ.

ಇವನ್ನೆಲ್ಲ ನೋಡಲು ಎಷ್ಟು ಸಮಯ ಬೇಕಾಗಬಹುದು?

ಬ್ರೂಕ್ಲಿನ್‍ನಲ್ಲಿರುವ ಕಾರ್ಯಾಲಯವನ್ನು ನೋಡಲು 1 ತಾಸು, ಪ್ಯಾಟರ್‌ಸನ್‍ನಲ್ಲಿರುವುದನ್ನು ನೋಡಲು ಸುಮಾರು 2 ತಾಸು ಮತ್ತು ವಾಲ್‌ಕಿಲ್‍ನಲ್ಲಿರುವುದನ್ನು ನೋಡಲು ಸುಮಾರು 11⁄2 ತಾಸು ಬೇಕಾಗಬಹುದು.

ಯಾರು ಗೈಡ್ಗಳಾಗಿರುತ್ತಾರೆ?

ಬೆತೆಲ್‍ನಲ್ಲಿ ವಿವಿಧ ಡಿಪಾರ್ಟ್‍ಮೆಂಟ್‌ಗಳಲ್ಲಿ ಕೆಲಸ ಮಾಡುವವರೇ ಬೆತೆಲ್‌ ಬಗ್ಗೆ ವಿವರಿಸುವ ಗೈಡ್ಗಳಾಗಿರುತ್ತಾರೆ. ಈ ಕೆಲಸ ಲೋಕವ್ಯಾಪಕವಾಗಿ ನಡೆಯುವ ಶೈಕ್ಷಣಿಕ ತರಬೇತಿಯ ಒಂದು ಭಾಗವಾಗಿದೆ ಎಂದೇ ಅವರೆಲ್ಲ ಭಾವಿಸುತ್ತಾರೆ. ಮೇ 2014⁠ರಲ್ಲಿ 5,000ಕ್ಕಿಂತ ಹೆಚ್ಚಿನ ಜನರು ಇಲ್ಲಿ ಕೆಲಸ ಮಾಡುತ್ತಿದ್ದರು. ಅವರಲ್ಲಿ 3,600ಕ್ಕಿಂತ ಹೆಚ್ಚಿನ ಜನರಿಗೆ ಬೆತೆಲ್‌ ಬಗ್ಗೆ ಹೇಗೆ ವಿವರಿಸಬೇಕೆಂದು ತರಬೇತಿ ನೀಡಲಾಗಿದೆ. ಬೆತೆಲ್‍ನಲ್ಲಿ ಹೇಗೆ ಕೆಲಸ ನಡೆಯುತ್ತದೆಂದು ಸುಮಾರು 40 ಭಾಷೆಗಳಲ್ಲಿ ತಿಳಿಸಲಾಗುತ್ತದೆ.

ಬೆತೆಲನ್ನು ನೋಡಲು ಎಷ್ಟು ಹಣ ಕೊಡಬೇಕು?

ಹಣ ಕೊಡಬೇಕಾಗಿಯೇ ಇಲ್ಲ. ಎಲ್ಲ ಉಚಿತ.

ಈ ಬೆತೆಲ್‌ಗಳನ್ನು ನೋಡಬೇಕೆಂದರೆ ನಾವು ಯೆಹೋವನ ಸಾಕ್ಷಿಗಳಾಗಿರಬೇಕಾ?

ಹಾಗೇನಿಲ್ಲ. ಕೇವಲ ಯೆಹೋವನ ಸಾಕ್ಷಿಗಳಲ್ಲದೆ, ಬೇರೆಯವರು ಸಹ ಈ ಬೆತೆಲ್‌ ನೋಡಲು ಬರುತ್ತಾರೆ. ಯೆಹೋವನ ಸಾಕ್ಷಿಗಳು ಲೋಕವ್ಯಾಪಕವಾಗಿ ಸುವಾರ್ತೆ ಸಾರುವುದರಲ್ಲಿ ಹಾಕುವ ಪರಿಶ್ರಮದ ಬಗ್ಗೆ ತಿಳಿದುಕೊಳ್ಳುತ್ತಾರೆ.

ಭಾರತದ ಒಬ್ಬ ಮುಸ್ಲಿ೦ ಮಹಿಳೆ ಪ್ಯಾಟರ್‌ಸನ್‌ಗೆ ಭೇಟಿ ನೀಡಿದ್ದಳು. ಅಲ್ಲಿ ಮಾಡುವ ಕೆಲಸಗಳನ್ನು ನೋಡಿದ ಮೇಲೆ, ಆಕೆ ಹೇಳಿದ್ದು: “ನಾನೂ ಇಲ್ಲೇ ಇದ್ದು ಕೆಲಸ ಮಾಡಬೇಕು ಅಂತ ಅನಿಸುತ್ತಿದೆ. ಅದೆಷ್ಟು ಗೌರವದಿಂದ ನಡೆದುಕೊಳ್ಳುತ್ತೀರಿ! ನಿಮಗೆ ತುಂಬ ಥ್ಯಾಂಕ್ಸ್‌.”

ಮಕ್ಕಳು ಸಹ ಈ ಬೆತೆಲ್‌ಗಳನ್ನು ನೋಡಲು ಬರಬಹುದಾ?

ಖಂಡಿತ ಬರಬಹುದು. ಬೆತೆಲನ್ನು ಅವರು ನೋಡುವುದರಿಂದ ಖಂಡಿತ ಪ್ರಯೋಜನ ಪಡೆಯುತ್ತಾರೆ. ಅಮೆರಿಕಾದ ಜಾನ್‌ ಎಂಬ ವ್ಯಕ್ತಿ, ಬೆತೆಲಿಗೆ ಭೇಟಿ ನೀಡಿದ ಮೇಲೆ, ಹೀಗೆ ಬರೆದನು, “ನಮ್ಮ ಜೊತೆ ಬಂದ ಮಕ್ಕಳು ಬೆತೆಲನ್ನು ನೋಡಿದ ಮೇಲೆ, ಮನೆಗೆ ಹೋಗುವವರೆಗೂ ಅದರ ಬಗ್ಗೆ ಮಾತಾಡಿದ್ದೇ ಮಾತಾಡಿದ್ದು. ಅಲ್ಲಿಗೆ ಹೋಗುವ ಮುಂಚೆ ಅವರಿಗೆ, ಬೆತೆಲ್‌ ಸೇವೆ ಅಂದರೇನು ಅನ್ನುವುದರ ಬಗ್ಗೆ ಒಂಚೂರು ಗೊತ್ತಿರಲಿಲ್ಲ, ಆದರೆ ಈಗ, ಬೆತೆಲ್‍ನಲ್ಲಿ ಸೇವೆ ಮಾಡಬೇಕೆನ್ನುವ ಗುರಿಯಿಟ್ಟಿದ್ದಾರೆ.”

ಇತರ ದೇಶಗಳಲ್ಲಿರುವ ಬೆತೆಲ್‌ಗಳಿಗೂ ಭೇಟಿ ನೀಡಬಹುದಾ?

ಹೌದು. ಡಜನ್‌ಗಟ್ಟಲೆ ದೇಶಗಳಲ್ಲಿರುವ ಬೆತೆಲ್‌ಗಳಿಗೂ ನೀವು ಭೇಟಿ ನೀಡಬಹುದು. ಅವುಗಳ ವಿಳಾಸ ತಿಳಿಯಲು ಆಫೀಸ್‌ಗಳು ಮತ್ತು ಭೇಟಿಗಳ ಬಗ್ಗೆ ಮಾಹಿತಿ ಇರುವ ಪೇಜ್‌ಗೆ ಹೋಗಿ. ಯೆಹೋವನ ಸಾಕ್ಷಿಗಳ ಯಾವುದಾದರೊಂದು ಬ್ರಾಂಚ್‌ಗೆ ಭೇಟಿ ನೀಡುವಂತೆ ನಿಮ್ಮನ್ನು ಹಾರ್ದಿಕವಾಗಿ ಸ್ವಾಗತಿಸುತ್ತೇವೆ.