ಮಾಹಿತಿ ಇರುವಲ್ಲಿ ಹೋಗಲು

ಪಾಸ್ಟರ್‌ ಅಂತ ತಪ್ಪಾಗಿ ನೆನಸಿದ್ರು

ಪಾಸ್ಟರ್‌ ಅಂತ ತಪ್ಪಾಗಿ ನೆನಸಿದ್ರು

ಚಿಲಿಯಲ್ಲಿರೋ ಸಮಾಧಿ ಹೊರಗೆ ಒಸ್ಮಾನ್‌ ಮತ್ತು ಅವನ ಹೆಂಡತಿ, ಮಗಳು ಕಾರ್ಟ್‌ ಇಟ್ಟು ಸೇವೆ ಮಾಡ್ತಿದ್ರು. ಇದ್ದಕ್ಕಿದ್ದ ಹಾಗೆ ಜೋರಾಗಿ ಸಂಗೀತ ನುಡಿಸುತ್ತಾ ಅಂತ್ಯಕ್ರಿಯೆಗಾಗಿ ಒಂದು ದೊಡ್ಡ ಗುಂಪು ಬಂತು. ಅದ್ರಲ್ಲಿ ಕೆಲವರು ಒಸ್ಮಾನ್‌ರವರನ್ನ ತಮ್ಮ ಇವಾಂಜೆಲಿಕಲ್‌ ಚರ್ಚ್‌ನ ಪಾಸ್ಟರ್‌ ಅಂತ ತಪ್ಪಾಗಿ ನೆನಸಿದ್ರು. ಹಾಗಾಗಿ ಅವರು ಒಸ್ಮಾನ್‌ರ ಹತ್ರ ಬಂದು, ಮಾತಾಡಿ, ಅಪ್ಕೊಂಡು, “ಪಾಸ್ಟರ್‌, ನೀವು ಬಂದಿದ್ದಕ್ಕೆ ತುಂಬ ಥ್ಯಾಂಕ್ಸ್‌, ನಿಮಗೋಸ್ಕರನೇ ಕಾಯ್ತಾ ಇದ್ವಿ” ಅಂದ್ರು.

ಒಸ್ಮಾನ್‌ ಜನರಿಗೆ ‘ನಾನು ನಿಮ್ಮ ಚರ್ಚಿನ ಪಾಸ್ಟರ್‌ ಅಲ್ಲ’ ಅಂತ ಹೇಳೋಕ್ಕೆ ಪ್ರಯತ್ನಿಸಿದ್ರು. ಆದ್ರೆ ಅಲ್ಲಿ ಜನರ ಸದ್ದುಗದ್ದಲ ಹೆಚ್ಚಿದ್ದರಿಂದ ಇವರು ಹೇಳೋದು ಜನರಿಗೆ ಕೇಳಲಿಲ್ಲ. ಸ್ವಲ್ಪ ಹೊತ್ತಲ್ಲಿ ಜನರೆಲ್ಲ ಸಮಾಧಿ ಹತ್ರ ಹೋದ್ರು. ಅವರಲ್ಲಿ ಕೆಲವರು ವಾಪಸ್ಸ್‌ ಬಂದು “ಪಾಸ್ಟರ್‌, ಸಮಾಧಿ ಹತ್ರ ನಾವೆಲ್ಲ ನಿಮಗೋಸ್ಕರ ಕಾಯ್ತಾ ಇದ್ದೀವಿ” ಅಂದ್ರು.

ಈ ಸದ್ದುಗದ್ದಲವೆಲ್ಲ ನಿಂತ ಮೇಲೆ ಒಸ್ಮಾನ್‌, ‘ನಾನ್ಯಾರು? ನಾನು ಯಾಕೆ ಇಲ್ಲಿ ಬಂದಿದ್ದೇನೆ?’ ಅಂತ ವಿವರಿಸಿ ಹೇಳಿದ್ರು. ಆಗ ಜನ ಒಸ್ಮಾನ್‌ರಿಗೆ, ತಮ್ಮ ಪಾಸ್ಟರ್‌ ಬರದೆ ಇದ್ದದ್ದಕ್ಕೆ ಬೇಜಾರಾಗಿದೆ ಅಂತ ಹೇಳಿ, “ನೀವು ಬಂದು ಬೈಬಲ್‌ನಿಂದ ಒಂದೆರಡು ಮಾತು ಹೇಳ್ತಿರಾ?” ಅಂತ ಕೇಳಿಕೊಂಡ್ರು. ಅದಕ್ಕೆ ಇವ್ರು ಒಪ್ಕೊಂಡ್ರು.

ಸಮಾಧಿ ಹತ್ರ ಹೋಗ್ತಿದ್ದಾಗ ತೀರಿಕೊಂಡ ಸ್ತ್ರೀ ಬಗ್ಗೆ ತಿಳ್ಕೊಳೋಕ್ಕೆ ಪ್ರಶ್ನೆಗಳನ್ನ ಕೇಳಿದ್ರು. ಅದೇ ಸಮಯದಲ್ಲಿ ಯಾವ ವಚನಗಳನ್ನ ಬಳಸೋದು ಅಂತ ಯೋಚಿಸಿದ್ರು. ಸಮಾಧಿ ಹತ್ರ ಹೋದ ನಂತ್ರ ಅವರು ತನ್ನನ್ನ ಪರಿಚಯಿಸಿಕೊಂಡು ನಾನೊಬ್ಬ ಯೆಹೋವನ ಸಾಕ್ಷಿ ಮತ್ತು ಜನಕ್ಕೆ ಸಿಹಿ ಸುದ್ದಿಯನ್ನ ಸಾರ್ತಿನಿ ಅಂತ ವಿವರಿಸಿದ್ರು.

ನಂತ್ರ ಅವರು ಪ್ರಕಟನೆ 21:3, 4; ಯೋಹಾನ 5:28, 29 ನ್ನು ತೋರಿಸಿ, ಮನುಷ್ಯರು ಸಾಯೋದು ದೇವರ ಉದ್ದೇಶ ಆಗಿರಲಿಲ್ಲ ಅಂತ ವಿವರಿಸಿದ್ರು. ಅಲ್ಲದೆ, ದೇವರು ಸತ್ತವರನ್ನ ಬೇಗನೇ ಎಬ್ಬಿಸ್ತಾನೆ ಮತ್ತು ಅವರು ಇದೇ ಭೂಮಿ ಮೇಲೆ ಸದಾಕಾಲ ಜೀವಿಸ್ತಾರೆ ಅಂತನೂ ಹೇಳಿದ್ರು. ಒಸ್ಮಾನ್‌ ಮಾತು ಮುಗಿಸಿದ ಮೇಲೆ ತುಂಬ ಜನ ಖುಷಿಯಿಂದ ಅವರನ್ನ ಅಪ್ಕೊಂಡು “ಯೆಹೋವನ ಸಿಹಿ ಸುದ್ದಿ” ಹೇಳಿದ್ದಕ್ಕೆ ಥ್ಯಾಂಕ್ಸ್‌ ಹೇಳಿದ್ರು. ಆಮೇಲೆ ಒಸ್ಮಾನ್‌ ತಮ್ಮ ಕಾರ್ಟ್‌ ಹತ್ರ ಬಂದ್ರು.

ಅಂತ್ಯಕ್ರಿಯೆ ಮುಗಿದ ಮೇಲೆ ಅದಕ್ಕೆ ಬಂದವರಲ್ಲಿ ಕೆಲವರು ಕಾರ್ಟ್‌ ಹತ್ರ ಹೋಗಿ ಒಸ್ಮಾನ್‌ ಮತ್ತು ಅವರು ಕುಟುಂಬದವರ ಹತ್ರ ಬೈಬಲ್‌ ಬಗ್ಗೆ ಪ್ರಶ್ನೆ ಕೇಳಿದ್ರು. ಈ ಚರ್ಚೆ ತುಂಬ ಹೊತ್ತು ನಡಿತು. ನಂತ್ರ ಅವರೆಲ್ಲ ಹೋಗುವಾಗ ಕಾರ್ಟ್‌ನಲ್ಲಿದ್ದ ಎಲ್ಲ ಪ್ರಕಾಶನಗಳನ್ನ ತಗೊಂಡು ಹೋದ್ರು.