ಮಾಹಿತಿ ಇರುವಲ್ಲಿ ಹೋಗಲು

ಪಾದ್ರಿಗೆ ಉತ್ತರ ಸಿಕ್ತು

ಪಾದ್ರಿಗೆ ಉತ್ತರ ಸಿಕ್ತು

ಒಂದಿನ ಯೆಹೋವನ ಸಾಕ್ಷಿಯಾದ ಎಲಿಸೋ ಆಸಕ್ತಿ ತೋರಿಸಿದ ಸ್ತ್ರೀಯೊಟ್ಟಿಗೆ ಬೈಬಲ್‌ ಅಧ್ಯಯನ ಮಾಡ್ತಿದ್ದಳು. ಆಗ ಆ ಸ್ತ್ರೀಯ ಮನೆಗೆ ಅಚ್ಚಾನಕ್ಕಾಗಿ ಇಬ್ರು ಬಂದ್ರು. ಯಾರಂತ ನೋಡಿದ್ರೆ ಒಬ್ಬ ಪಾದ್ರಿ ಮತ್ತು ಅವನ ಹೆಂಡ್ತಿ. ಇತ್ತೀಚೆಗೆ ಅವರ ಒಬ್ಬನೇ ಮಗ ತೀರಿಕೊಂಡ ಅಂತ ಎಲಿಸೋಗೆ ಗೊತ್ತಾಯ್ತು.

ಇದನ್ನ ಕೇಳಿ ಬೇಜಾರಾಯ್ತು ಅಂತ ಎಲಿಸೋ ಹೇಳಿದಾಗ ಆ ಪಾದ್ರಿ ಮತ್ತು ಅವನ ಹೆಂಡ್ತಿ ಇಬ್ರು ಜೋರಾಗಿ ಅತ್ರು. ನಂತ್ರ ಆ ಪಾದ್ರಿ ಸಿಟ್ಟಿಂದ, “ದೇವರು ನನಗೆ ಇಂಥ ಕಷ್ಟ ಯಾಕೆ ಕೊಡ್ತಿದ್ದಾನೆ ಅಂತ ನನಗೆ ಅರ್ಥನೇ ಆಗ್ತಿಲ್ಲ! ದೇವರಿಗೆ ನನ್ನ ಒಬ್ಬನೇ ಮಗನನ್ನ ಕಿತ್ಕೊಳ್ಳೋಕೆ ಮನಸ್ಸಾದ್ರೂ ಹೇಗ್‌ ಬಂತು? 28 ವರ್ಷದಿಂದ ನಾನು ದೇವರ ಕೆಲಸ ಮಾಡ್ತಿದ್ದೀನಿ, ಎಷ್ಟೋ ಒಳ್ಳೇ ಕೆಲಸಗಳನ್ನ ಮಾಡಿದ್ದೀನಿ, ಅದಕ್ಕೆ ದೇವರು ವಾಪಸ್‌ ನನಗೆ ಇದೇನಾ ಕೊಟ್ಟಿದ್ದು? ದೇವರು ನನ್ನ ಮಗನನ್ನ ಯಾಕೆ ಸಾಯಿಸಿದಾ?” ಅಂದ.

ಎಲಿಸೋ, ದೇವರು ಅವರ ಮಗನನ್ನ ಕಿತ್ಕೊಳ್ಳಿಲ್ಲ ಅಂತ ಅವರಿಗೆ ವಿವರಿಸಿದಳು. ಅಲ್ಲದೆ ವಿಮೋಚನ ಮೌಲ್ಯ, ಪುನರುತ್ಥಾನ ಮತ್ತು ದೇವರು ಕೆಟ್ಟದ್ದನ್ನ ಯಾಕೆ ಅನುಮತಿಸ್ತಾನೆ ಅನ್ನೋ ವಿಷ್ಯಗಳ ಬಗ್ಗೆ ಚರ್ಚಿಸಿದಳು. ಆಗ ಅವ್ರಿಬ್ರು ತಾವು ದೇವರಿಗೆ ಯಾವುದಕ್ಕಾಗಿ ಪ್ರಾರ್ಥಿಸ್ತಿದವೋ ಅದಕ್ಕಿಗ ಎಲಿಸೋ ಮೂಲಕ ಉತ್ರ ಸಿಕ್ತು ಅಂತ ಹೇಳಿದ್ರು.

ಮುಂದಿನ ವಾರ ಆ ಸ್ತ್ರೀಗೆ ಬೈಬಲ್‌ ಅಧ್ಯಯನ ಮಾಡೋವಾಗ ಆ ಪಾದ್ರಿ ಮತ್ತು ಅವನ ಹೆಂಡತಿ ಅಧ್ಯಯನಕ್ಕೆ ಕೂತ್ರು. ಆ ಸಮಯದಲ್ಲಿ ಎಲಿಸೋ ಬೈಬಲ್‌ ನಿಜವಾಗಿಯೂ ಏನನ್ನು ಬೋಧಿಸುತ್ತದೆ? ಪುಸ್ತಕದಿಂದ “ನಿಮ್ಮ ಮೃತ ಪ್ರಿಯ ಜನರಿಗಿರುವ ನಿಜ ನಿರೀಕ್ಷೆ” ಅನ್ನೋ ಅಧ್ಯಾಯವನ್ನ ಕಲಿಸುತ್ತಿದ್ರು. ಈ ಚರ್ಚೆಯಲ್ಲಿ ಅವರಿಬ್ರು ಒಳಗೂಡಿದ್ರು.

ನಂತ್ರ ಅವ್ರಿಬ್ರು ಜಾರ್ಜಿಯಾದ, ಟಿಬಿಲಿಸಿನಲ್ಲಿ ನಡೆದ ಯೆಹೋವನ ಸಾಕ್ಷಿಗಳ ವಿಶೇಷ ಅಧಿವೇಶನಕ್ಕೆ ಹಾಜರಾದ್ರು. ಚರ್ಚಿನವರಿಗೆ ತುಂಬ ಸಮಯದಿಂದ ಯಾವುದ್ರ ಬಗ್ಗೆ ಕಲಿಸಿನೂ ಯಾವುದೇ ಪ್ರಯೋಜನ ಆಗಲಿಲ್ಲವೋ ಆ ಪ್ರೀತಿ, ಐಕ್ಯತೆಯನ್ನ ಅವರು ಇಲ್ಲಿ ನೋಡಿದ್ರು. ಇದು ಅವರ ಮನಸ್ಪರ್ಶಿಸಿತು.