ಹೋಮ್‌ವರ್ಕ್‌ನ್ನ ಹೇಗೆ ಮುಗಿಸಲಿ?
ಯುವ ಜನರ ಪ್ರಶ್ನೆಗಳು
“ಬೆಳಿಗ್ಗೆ ಒಂದು ಗಂಟೆ ತನಕ ಹೋಮ್‌ವರ್ಕ್ ಮಾಡಿದ್ರೆ ನೀವು ಸತ್ತೇ ಹೋಗ್ತಿರಾ. ಆ ಸಮಯದಲ್ಲಿ ನಿಮ್ಮ ಕಣ್ಣು ನಿದ್ರೆಯಲ್ಲಿ ತುಗಾಡ್ತಾ ಇರುತ್ತೆ.”—ಡೇವಿಡ್.
“ಕೆಲವೊಮ್ಮೆ ನಾನು ಬೆಳಿಗ್ಗೆ 4:30 ತನಕ ಹೋಮ್‌ವರ್ಕ್ ಮಾಡ್ತಾ ಇರ್ತಿನಿ. ನಂತ್ರ ಸ್ಕೂಲಿಗೆ ಹೋಗಕ್ಕೆ ಬೆಳಿಗ್ಗೆ 6 ಗಂಟೆಗೆ ಎದ್ದೇಳಬೇಕು. ಹಾಗಾಗಿ ನಿದ್ದೆ ಸರಿ ಆಗದೆ ತುಂಬ ಕಿರಿಕಿರಿಯಾಗುತ್ತೆ!”—ತೆರೆಸಾ.
ನೀವು ಹೋಮ್‌ವರ್ಕ್ ಮಾಡೋದ್ರಲ್ಲೇ ಮುಳುಗಿ ಹೋಗಿದ್ದೀರಾ? ಹಾಗಾದ್ರೆ ನಿಮಗೆ ಈ ಲೇಖನ ಸಹಾಯ ಮಾಡುತ್ತೆ.
ಟೀಚರ್ ಯಾಕೆ ಹೋಮ್‌ವರ್ಕ್ ಕೊಡ್ತಾರೆ?
ಹೋಮ್‌ವರ್ಕ್ ಮಾಡೋದ್ರಿಂದ
ನಿಮ್ಮ ತಿಳುವಳಿಕೆ ಹೆಚ್ಚುತ್ತೆ
ನೀವು ನಿಮ್ಮ ಮೇಲೆ ಹೊಂದಿಕೊಂಡು ಕೆಲಸ ಮಾಡೋಕೆ ಕಲಿಸುತ್ತೆ
ನಿಮ್ಮ ಸಮಯವನ್ನ ಚೆನ್ನಾಗಿ ಬಳಿಸಿಕೊಳ್ಳೋಕೆ ಸಹಾಯ ಮಾಡುತ್ತೆ
ನೀವು ಕ್ಲಾಸಲ್ಲಿ ಕಲಿತ ವಿಷ್ಯಗಳನ್ನ ಇನ್ನಷ್ಟು ಚೆನ್ನಾಗಿ ಅರ್ಥಮಾಡಿಕೊಳ್ಳೋಕೆ, ಅನ್ವಯಿಸಿಕೊಳ್ಳೋಕೆ ಸಹಾಯ ಮಾಡುತ್ತೆ. a
“ಸ್ಕೂಲಲ್ಲಿ ಕಲಿತದ್ದನ್ನ ಒಂದು ಕಿವಿಯಲ್ಲಿ ಕೇಳಿ ಇನ್ನೊಂದು ಕಿವಿಯಲ್ಲಿ ಬಿಡೋದಕ್ಕಿಂತ ಅದನ್ನ ಮಕ್ಕಳು ಅನ್ವಯಿಸಲಿಕ್ಕಾಗಿ ಟೀಚರ್ ಹೋಮ್‌ವರ್ಕ್ ಕೊಡ್ತಾರೆ.”—ಮ್ಯಾರಿ.
ಗಣಿತ ಮತ್ತು ವಿಜ್ಞಾನ ನಿಮಗೆ ಪ್ರಾಬ್ಲಮ್ ಸಾಲ್ವ್ ಮಾಡಲು ಕಲಿಸಿಕೊಡುತ್ತೆ. ಇದ್ರ ಬಗ್ಗೆ ತಜ್ಞರು ಹೀಗೆ ಹೇಳ್ತಾರೆ, ಇದರಿಂದ ಮೆದುಳಲ್ಲಿ ಹೊಸ ನರಕೋಶಗಳು ಬೆಳೆದು ಮೆದುಳು ಇನ್ನೂ ಚೆನ್ನಾಗಿ ಕೆಲಸ ಮಾಡೋಕೆ ಸಹಾಯ ಮಾಡುತ್ತೆ. ಹಾಗಾಗಿ ಹೋಮ್‌ವರ್ಕ್ ಮಾಡೋದ್ರಿಂದ ನಿಮ್ಮ ಮೆದುಳಿಗೆ ಕೆಲಸ ಕೊಟ್ಟ ಹಾಗೆ ಆಗುತ್ತೆ.
ಹೋಮ್‌ವರ್ಕ್‌ನಿಂದ ಪ್ರಯೋಜನ ಇದೆ ಅಥವಾ ಇಲ್ಲ ಅಂತ ನಿಮಗೆ ಅನಿಸಿದ್ರು ಅದನ್ನಂತೂ ನೀವು ಮಾಡಲೇಬೇಕು. ಒಂದು ಒಳ್ಳೇ ವಿಷ್ಯ ಏನಂದ್ರೆ, ನಿಮಗಿರೋ ಹೋಮ್‌ವರ್ಕ್‌ನ್ನ ಕಡಿಮೆ ಮಾಡೋಕೆ ಆಗದಿದ್ರೂ ಕಡಿಮೆ ಸಮಯದಲ್ಲಿ ಅದನ್ನ ಮಾಡಿ ಮುಗಿಸಬಹುದು. ಅದು ಹೇಗಂತ ಈಗ ನೋಡೋಣ.
ಓದೋಕೆ ಸಲಹೆಗಳು
ಹೋಮ್‌ವರ್ಕ್ ಮಾಡೋಕೆ ನಿಮಗೆ ಕಷ್ಟ ಆಗ್ತಿದ್ರೆ ಚಿಂತೆ ಮಾಡಬೇಡಿ. ನೀವು ಕಷ್ಟಪಟ್ಟು ಹೋಮ್‌ವರ್ಕ್ ಮಾಡೋದಕ್ಕಿಂತ ತಲೆ ಉಪಯೋಗಿಸಿ ಹೋಮ್‌ವರ್ಕ್ ಮಾಡಿ. ನೀವು ಏನ್ ಮಾಡಬಹುದು ಅಂದ್ರೆ,
ಓದೋಕೆ ಸಲಹೆ 1: ಮೊದಲೇ ಪ್ಲ್ಯಾನ್ ಮಾಡಿ. “ಶ್ರಮಶೀಲರಿಗೆ ತಮ್ಮ ಯತ್ನಗಳಿಂದ ಸಮೃದ್ಧಿ” ಅಂತ ಬೈಬಲ್ ಹೇಳುತ್ತೆ. (ಜ್ಞಾನೋಕ್ತಿ 21:5) ನೀವು ಹೋಮ್‌ವರ್ಕ್ ಆರಂಭಿಸೋ ಮುಂಚೆನೆ ಅದಕ್ಕೆ ಬೇಕಾದದ್ದೆಲ್ಲ ಇದೆಯಾ ಅಂತ ನೋಡ್ಕೊಳ್ಳಿ. ಅದಕ್ಕಾಗಿ ಸುಮ್ಮನೆ ಪದೇಪದೇ ಹೋಗಬೇಡಿ.
ಗಮನಕೊಟ್ಟು ಹೋಮ್‌ವರ್ಕ್ ಮಾಡೋಕೆ ತಕ್ಕ ಸ್ಥಳವನ್ನ ಆರಿಸಿಕೊಳ್ಳಿ. ಕೆಲವ್ರು ನಿಶ್ಶಬ್ದವಾದ ಮತ್ತು ಬೆಳಕಿರೋ ರೂಮ್‌ನ್ನ ಆರಿಸಿಕೊಳ್ತಾರೆ. ಇನ್ನು ಕೆಲವ್ರು ಲೈಬ್ರರಿಯಲ್ಲಿ ಓದೋಕೆ ಇಷ್ಟಪಡ್ತಾರೆ.
“ನಿಮ್ಮ ಸ್ಕೂಲ್‌ನ ಕ್ಯಾಲೆಂಡರ್‌ನಲ್ಲಿ ಅಸೈನ್‌ಮೆಂಟ್‌ನ್ನ ಯಾವಾಗ ಏನೇನು ಮಾಡಬೇಕು, ಎಷ್ಟು ಸಮಯದೊಳಗೆ ಮಾಡಬೇಕು ಅಂತ ಬರೆದಿಟ್ರೆ ನಿಮ್ಮ ಸಮಯವನ್ನ ಚೆನ್ನಾಗಿ ಬಳಸಿಕೊಳ್ಳೋಕೆ ಆಗುತ್ತೆ. ಇದ್ರಿಂದ ನಿಮಗೆ ಟೆನ್ಶನ್ ಕಮ್ಮಿಯಾಗುತ್ತೆ.”—ರಿಚರ್ಡ್
ಓದೋಕೆ ಸಲಹೆ 2: ಕೆಲಸವನ್ನೆಲ್ಲ ಕ್ರಮವಾಗಿ ಮಾಡಿ. “ಎಲ್ಲವುಗಳು . . . ಕ್ರಮವಾಗಿಯೂ ನಡೆಯಲಿ” ಅಂತ ಬೈಬಲ್ ಹೇಳುತ್ತೆ. (1 ಕೊರಿಂಥ 14:40) ಇದನ್ನ ಮನಸ್ಸಲ್ಲಿಟ್ಟು ಯಾವುದಾದ್ಮೇಲೆ ಯಾವ ಕೆಲಸ ಮಾಡಬೇಕಂತ ನಿರ್ಧರಿಸಿ.
ಕೆಲವ್ರು ಕಷ್ಟ ಇರೋದನ್ನ ಮೊದಲು ಮಾಡ್ತಾರೆ. ಇನ್ನು ಕೆಲವ್ರು ಮೊದಲು ಸುಲಭ ಕೆಲಸ ಮಾಡಿ ಮುಗಿಸಿ ನೆಮ್ಮದಿಯಿಂದ ಇರ್ತಾರೆ. ಇದರಲ್ಲಿ ನಿಮಗೇನು ಇಷ್ಟ ಆಗುತ್ತೋ ಅದನ್ನ ಆರಿಸಿಕೊಳ್ಳಿ.
“ನೀವೊಂದು ಲಿಸ್ಟ್ ಮಾಡಿ ಇಟ್ಕೊಂಡ್ರೆ ಯಾವುದಾದ್ಮೇಲೆ ಯಾವುದು ಮಾಡಬೇಕಂತ ತಿಳಿದುಕೊಳ್ಳೋಕೆ ನಿಮಗೆ ಸಹಾಯ ಆಗುತ್ತೆ. ಆಗ ಎಲ್ಲ ನಿಮ್ಮ ಕೈಯಲ್ಲಿ ಇರೋದ್ರಿಂದ ಹೋಮ್‌ವರ್ಕ್ ಮಾಡೋಕೆ ಕಷ್ಟ ಆಗಲ್ಲ.”—ಹೈಡೀ.
ಓದೋಕೆ ಸಲಹೆ 3: ಹೋಮ್‌ವರ್ಕ್ ಮಾಡಿ ಮುಗಿಸಿ. “ನಿಮ್ಮ ಕೆಲಸದಲ್ಲಿ ಆಲಸಿಗಳಾಗಿರಬೇಡಿ” ಅಂತ ಬೈಬಲ್ ಹೇಳುತ್ತೆ. (ರೋಮನ್ನರಿಗೆ 12:11) ಹೋಮ್‌ವರ್ಕ್ ಸಮಯದಲ್ಲಿ ನಿಮಗೆ ಬೇರೇನೋ ಮಾಡೋಕೆ ಆಸೆ ಆಗಬಹುದು. ಆದ್ರೆ ಆ ಸಮಯದಲ್ಲಿ ಬೇರೇನು ಮಾಡೋಕೆ ಹೋಗಬೇಡಿ.
ನಾಳೆ ನಾಳೆ ಅಂತ ಕೆಲಸ ಮುಂದೂಡೋರು ಕೊನೆಗೆ ಹರಿಬರಿಯಲ್ಲಿ ಎಲ್ಲ ಮುಗಿಸ್ತಾರೆ. ಆದ್ರೆ ಅವರು ಅಷ್ಟು ಚೆನ್ನಾಗಿ ಓದಕ್ಕೂ ಆಗಲ್ಲ, ಚೆನ್ನಾಗಿ ಹೋಮ್‌ವರ್ಕೂ ಮಾಡಕ್ಕಾಗಲ್ಲ. ನೀವು ಆದಷ್ಟು ಬೇಗ ಹೋಮ್‌ವರ್ಕ್ ಮುಗಿಸಿದ್ರೆ ನಿಮಗೆ ಮುಂದೆ ಅದ್ರ ಬಗ್ಗೆ ಭಯ, ಚಿಂತೆ ಇರಲ್ಲ.
“ನನಗೆ ಪ್ರಾಜೆಕ್ಟ್ ಸಿಕ್ಕಿದ ಕೂಡ್ಲೆ ಅಥವಾ ಸ್ಕೂಲಿಂದ ಬಂದ ಕೂಡ್ಲೆ ಹೋಮ್‌ವರ್ಕ್ ಮಾಡಿ ಮುಗಿಸ್ತಿನಿ. ನಂತ್ರ ಅದ್ರ ಬಗ್ಗೆ ತಲೆ ಕೆಡಿಸಿಕೊಳ್ಳೋಕೆ ಹೋಗಲ್ಲ. ಬೇರೇನು ಮಾಡಬೇಕಿದ್ರು ಹೋಮ್‌ವರ್ಕ್ ಬಗ್ಗೆ ಟೆನ್ಶನ್ ಇರಲ್ಲ.”—ಸೆರಿನ್.
ಕಿವಿಮಾತು: ಆಯಾ ದಿನದ ಹೋಮ್‌ವರ್ಕ್‌ನ್ನ ಅದೇ ದಿನ ಮುಗಿಸಿ. ಇದ್ರಿಂದ ನಿಮಗೆ ಸ್ವಶಿಸ್ತು ಬೆಳಸಿಕೊಳ್ಳೋಕೆ ಆಗುತ್ತೆ ಮತ್ತು ನೀವು ಎಲ್ಲ ಅಚ್ಚುಕಟ್ಟಾಗಿ ಮಾಡೋಕೆ ಕಲಿಯುತ್ತಿರಿ.
ಓದೋಕೆ ಸಲಹೆ 4: ಗಮನ ಎಲ್ಲೂ ಹೋಗದಿರಲಿ. “ನೆಟ್ಟಗೆ ದೃಷ್ಟಿಸು” ಅಂತ ಬೈಬಲ್ ಹೇಳುತ್ತೆ. (ಜ್ಞಾನೋಕ್ತಿ 4:25) ಈ ಸಲಹೆಯಂತೆ ನಿಮ್ಮ ಗಮನ ಆಕಡೆ ಈಕಡೆ ಹೋಗದೇ ಇರಲಿ. ಅದ್ರಲ್ಲೂ ಡಿಜಿಟಲ್ ಡಿವೈಸ್ ಕಡೆಗಂತೂ ಹೋಗದೇ ಬೇಡ.
ನೀವು ಇಂಟರ್‌ನೆಟ್‌ನಲ್ಲಿ ಅದು-ಇದು ನೋಡ್ತಾ ಕೂತರೆ, ಮೆಸೆಜ್ ಕಳಿಸ್ತಾ ಅಥವಾ ನೋಡ್ತಾ ಇದ್ರೆ ನೀವು ಹೋಮ್‌ವರ್ಕಿಗೆ ಕೊಡೋ ಸಮಯ ಹೆಚ್ಚಾಗುತ್ತಾ ಹೋಗುತ್ತೆ. ಆದ್ರೆ ನೀವು ಹೋಮ್‌ವರ್ಕ್‌ಗ್ಗೆ ಪೂರ್ತಿ ಗಮನ ಕೊಟ್ರೆ ನಿಮಗೆ ಟನ್ಶನ್ ಕಮ್ಮಿ, ಸಮಯನೂ ಉಳಿಯುತ್ತೆ.
“ಫೋನ್, ಕಂಪ್ಯೂಟರ್, ವಿಡಿಯೋ ಗೇಮ್ ಮತ್ತು ಟಿವಿ ಇದ್ರೆ ಹೋಮ್‌ವರ್ಕ್‌ಗೆ ಗಮನ ಕೊಡೋಕ್ಕೆ ಕಷ್ಟ ಆಗುತ್ತೆ. ಹಾಗಾಗಿ ಫೋನ್ ಅಥವಾ ಬೇರೆನಾದ್ರು ನನ್ನ ಹತ್ರ ಇದ್ರೆ ಅದನ್ನ ಆಫ್ ಮಾಡಿಬಿಡ್ತನಿ.”—ಜೊಯೆಲ್.
ಓದೋಕೆ ಸಲಹೆ 5: ಎಲ್ಲ ಬ್ಯಾಲೆನ್ಸ್ ಮಾಡೋಕೆ ಕಲಿರಿ. ‘ನಿಮ್ಮ ನ್ಯಾಯಸಮ್ಮತತೆಯು ಎಲ್ಲರಿಗೆ ತಿಳಿದುಬರಲಿ’ ಅಂತ ಬೈಬಲ್ ಹೇಳುತ್ತೆ. (ಫಿಲಿಪ್ಪಿ 4:5) ಹೋಮ್‌ವರ್ಕ್ ಮಾಡ್ತಾ ಮಧ್ಯೆ ಬ್ರೇಕ್ ತಗೊಳ್ಳಿ. ಇದ್ರಿಂದ ನಿಮ್ಮ ಸ್ಟ್ರೆಸ್ ಕಮ್ಮಿಯಾಗುತ್ತೆ. ಬ್ರೇಕ್‌ನಲ್ಲಿ ವಾಕಿಂಗ್‌ಗೆ ಹೋಗಿ ಅಥವಾ ಓಡಿ, ಬೈಕ್ ಅಥವಾ ಸೈಕಲ್‌ನಲ್ಲಿ ಒಂದು ರೌಂಡ್ ಹೋಗಿ ಬನ್ನಿ.
ಹೋಮ್‌ವರ್ಕ್ ಸಿಕ್ಕಾಪಟ್ಟೆ ಇದೆ, ಇಷ್ಟೆಲ್ಲ ಮಾಡೋಕ್ಕೆ ಸಾಧ್ಯ ಇಲ್ಲ ಅಂತ ಈಗಲೂ ನಿಮಗೆ ಅನಿಸ್ತಿದ್ರೆ ನಿಮ್ಮ ಟೀಚರ್ ಹತ್ರ ಮಾತಾಡಿ. ನೀವು ಪ್ರಾಮಾಣಿಕವಾಗಿ ಚೆನ್ನಾಗಿ ಹೋಮ್‌ವರ್ಕ್ ಮಾಡ್ಲಿಕ್ಕೆ ಪ್ರಯತ್ನ ಹಾಕ್ತಿದ್ದೀರ ಅಂತ ಅವರಿಗನಿಸಿದ್ರೆ ಕೆಲವೊಂದು ಬದಲಾವಣೆ ಮಾಡೋಕೆ ಅವರು ನಿರ್ಧರಿಸಬಹುದು.
“ಹೋಮ್‌ವರ್ಕ್‌ನಿಂದ ನೀವು ತುಂಬ ಟೆನ್ಶನ್ ಆಗಬೇಡಿ ಅಥವಾ ನಿಮ್ಮ ಖುಷಿ ಕಳ್ಕೊಬೇಡಿ. ನೀವು ನಿಮ್ಮ ಪ್ರಯತ್ನ ಹಾಕಿ. ನೀವು ಅದನ್ನೆಲ್ಲ ಕಳ್ಕೊಂಡ್ರೆ ನಿಮ್ಮ ಜೀವನದಲ್ಲಿ ಸಮಾಧಾನ, ನೆಮ್ಮದಿ ಇರಲ್ಲ.”—ಜೂಲಿಯ.
ನೀವು ನಿಮ್ಮನ್ನೇ ಹೀಗೆ ಕೇಳಿಕೊಳ್ಳಿ:
ನನ್ನ ಹೋಮ್‌ವರ್ಕ್‌ಗೆ ನನಗೆ ಏನೆಲ್ಲ ಬೇಕು?
ನನ್ನ ಹೋಮ್‌ವರ್ಕ್ ಮಾಡೋಕೆ ಒಳ್ಳೇ ಸಮಯ ಯಾವುದು?
ಯಾವ ಸ್ಥಳದಲ್ಲಿ ನಾನು ಚೆನ್ನಾಗಿ ಗಮನಕೊಡಬಹುದು?
ಹೋಮ್‌ವರ್ಕನ್ನು ಮುಂದೆ ಮುಂದೆ ಹಾಕ್ತ ಹೋಗದಿರೋಕೆ ನಾನೇನು ಮಾಡಬೇಕು?
ನನ್ನ ಕೆಲಸಗಳನ್ನ ಮಾಡದೆ ಇರೋಕೆ ಯಾವುದು ತಡೆಯುತ್ತೆ?
ಡಿಜಿಟಲ್ ಡಿವೈಸ್ ಅಥವಾ ಬೇರೆ ಇನ್ನಿತರ ವಸ್ತುಗಳಿಂದ ನನ್ನ ಗಮನ ಬೇರೆ ಕಡೆ ಹೋಗದೇ ಇರಲಿಕ್ಕಾಗಿ ನಾನೇನು ಮಾಡಬಹುದು?
ಏನೂ ಟೆನ್ಶನ್ ಅಥವಾ ಚಿಂತೆ ಇಲ್ಲದೆ ಹೋಮ್‌ವರ್ಕ್‌ನ್ನ ಮಾಡಿ ಮುಗಿಸೋಕೆ ನಾನೇನು ಮಾಡಬಹುದು?
ನೆನಪಿಡಬೇಕಾದ ವಿಷಯಗಳು: ನಿಮ್ಮ ಹೋಮ್‌ವರ್ಕ್‌ನಲ್ಲಿ ಏನಲ್ಲ ಇದೆ ಅಂತ ಮೊದಲು ಅರ್ಥಮಾಡ್ಕೊಳ್ಳಿ. ನಿಮಗೇನಾದ್ರು ಪ್ರಶ್ನೆ ಇದ್ರೆ ಕ್ಲಾಸ್‌ನಿಂದ ಹೋಗೋ ಮುಂಚೆನೇ ನಿಮ್ಮ ಟೀಚರ್ ಹತ್ರ ಕೇಳಿ.
a ಜೇನ್ ಸ್ಕಾಮ್ ಅನ್ನುವವರ ಸ್ಕೂಲ್ ಪವರ್ ಎಂಬ ಪುಸ್ತಕದಿಂದ ಈ ಅಂಶಗಳನ್ನ ತೆಗೆಯಲಾಗಿದೆ.