ಮಾಹಿತಿ ಇರುವಲ್ಲಿ ಹೋಗಲು

ನಾನು ಸ್ಕೂಲ್‌ ಬಿಟ್ಟುಬಿಡ್ಲಾ?

ನಾನು ಸ್ಕೂಲ್‌ ಬಿಟ್ಟುಬಿಡ್ಲಾ?

ಯುವ ಜನರ ಪ್ರಶ್ನೆಗಳು

“ಸ್ಕೂಲ್‌ ಅಂದ್ರೆ ನನ್ಗೆ ಬಿಲ್‌ಕುಲ್‌ ಇಷ್ಟ ಇಲ್ಲ!” ಈ ತರ ಹೇಳೋರಿಗೆ ಸ್ಕೂಲ್‌ಗೆ ಹೋಗೋದನ್ನ ಬಿಟ್ಟುಬಿಡಬೇಕು ಅನ್ಸೋದು ಸಹಜ. ಆದ್ರೆ ಒಳ್ಳೇ ನಿರ್ಧಾರ ಮಾಡೋಕೆ ಈ ಲೇಖನ ಸಹಾಯ ಮಾಡುತ್ತೆ.

 ಕೆಲವ್ರು ಯಾಕೆ ಸ್ಕೂಲ್‌ ಬಿಟ್ಟುಬಿಡ್ತಾರೆ?

ಸ್ಕೂಲ್‌ ಅರ್ಧದಲ್ಲೇ ಬಿಡೋಕೆ ಏನೆಲ್ಲಾ ಕಾರಣಗಳು ಇರಬಹುದು ಅಂತ ಕೆಲವು ಪರಿಣಿತರ ಅಭಿಪ್ರಾಯ:

 • ಓದೋಕೆ ಕಷ್ಟ. ‘ನನ್ನ ಮಾರ್ಕ್ಸ್‌ ಕಡಿಮೆ ಆಗ್ತಾನೇ ಇದೆ.’

 • ನಿರಾಸಕ್ತಿ. ‘ಸ್ಕೂಲಲ್ಲಿ ಕಲಿಯೋ ವಿಷ್ಯಗಳಿಂದ ನನ್ಗೆ ಏನೂ ಪ್ರಯೋಜನ ಇಲ್ಲ ಅನ್ಸುತ್ತೆ.’

 • ಆರ್ಥಿಕ ಸಂಕಷ್ಟ. ‘ನನ್ನ ಕುಟುಂಬದ ಹೊಟ್ಟೆ ತುಂಬ್ಸೋಕೆ ನಾನೂ ಕೆಲ್ಸಕ್ಕೆ ಹೋಗಬೇಕು.’

 ಪರಿಣಾಮದ ಬಗ್ಗೆ ಯೋಚ್ನೆ ಮಾಡಿ

“ಜಾಣನು ತನ್ನ ನಡತೆಯನ್ನು ಚೆನ್ನಾಗಿ ಗಮನಿಸುವನು” ಅಂತ ಬೈಬಲ್‌ ಹೇಳುತ್ತೆ. (ಜ್ಞಾನೋಕ್ತಿ 14:15) ಇದ್ರಿಂದ ಏನ್‌ ಗೊತ್ತಾಗುತ್ತೆ? ಒಂದುವೇಳೆ ಸ್ಕೂಲ್‌ ಬಿಟ್ಟುಬಿಡಬೇಕು ಅಂತ ನಿಮ್ಗೆ ಅನ್ಸಿದ್ರೆ ಅದ್ರಿಂದ ಮುಂದೆ ಆಗೋ ಪರಿಣಾಮಗಳನ್ನ ಕೂಡ ಎದುರಿಸೋಕೆ ನೀವು ರೆಡಿ ಇರಬೇಕು.

ನಿಮ್ಮನ್ನೇ ಹೀಗೆ ಕೇಳಿಕೊಳ್ಳಿ:

 • ‘ಓದೋದನ್ನ ಬಿಟ್ಟುಬಿಟ್ರೆ ಮುಂದೆ ಕೆಲ್ಸ ಸಿಗುತ್ತಾ?’

  “ನಿಮ್ಗೆ ಒಳ್ಳೆ ಕೆಲ್ಸ ಸಿಕ್ಕಿ ನಿಮ್ಮ ಕುಟುಂಬನ ಚೆನ್ನಾಗಿ ನೋಡ್ಕೊಬೇಕಾ? ನೀವು ಹೈಸ್ಕೂಲೂ ಮುಗ್ಸಿಲ್ಲ ಅಂದ್ರೆ ಹೇಗೆ ಕೆಲ್ಸ ಸಿಗುತ್ತೆ?”—ಜೂಲಿಯಾ.

 • ‘ಸ್ಕೂಲ್‌ ಬಿಟ್ಟುಬಿಟ್ರೆ ಮುಂದೆ ಬರೋ ಕಷ್ಟಗಳನ್ನ ಎದುರಿಸೋಕೆ ಆಗುತ್ತಾ?’

  “ನಿಮ್ಮ ಜೀವನದಲ್ಲಿ ಬರೋ ಸವಾಲುಗಳನ್ನ ಎದುರಿಸೋಕೆ ಸ್ಕೂಲ್‌ ನಿಮ್ಮನ್ನ ರೆಡಿ ಮಾಡುತ್ತೆ. ಸ್ಕೂಲಲ್ಲಿ ನೀವು ಹೊಸ ವ್ಯಕ್ತಿಗಳನ್ನ, ಒತ್ತಡಗಳನ್ನ, ಬೇರೆ ಬೇರೆ ಕೆಲ್ಸಗಳನ್ನ ಮಾಡಿರ್ತೀರ. ಮುಂದೆ ನೀವು ದೊಡ್ಡವರಾದ ಮೇಲೆ ಇದೇ ತರ ಪರಿಸ್ಥಿತಿ ಎದುರಿಸೋದ್ರಿಂದ ಆಗ ನಿಮ್ಗೆ ಸುಲಭ ಆಗುತ್ತೆ.”—ಡ್ಯಾನಿಯೆಲ್‌.

 • ‘ಸ್ಕೂಲ್‌ ಬಿಟ್ಟುಬಿಟ್ರೆ ದೊಡ್ಡವನಾದಾಗ ಇರಬೇಕಾದ ಸಾಮರ್ಥ್ಯ ನನಗಿರುತ್ತಾ?’

  “ಸ್ಕೂಲ್‌ನಲ್ಲಿ ಕಲಿಯೋದು ಏನೂ ಪ್ರಯೋಜ್ನ ಇಲ್ಲ ಅಂತ ಈಗ ನಿಮ್ಗೆ ಅನಿಸಬಹುದು. ಆದ್ರೆ ನಿಮ್ಗೆ 23 ವರ್ಷ ಆಗಿ ದುಡ್ಡು ಕಾಸಿನ ವ್ಯವಹಾರ ನೋಡ್ಕೊಳ್ಳುವಾಗ, ‘ನಾನು ಮ್ಯಾತ್ಸ್‌ ಕ್ಲಾಸಲ್ಲಿ ಗಮನ ಕೊಟ್ಟಿದ್ದು ಸಾರ್ಥಕ ಆಯ್ತು’ ಅನ್ಸುತ್ತೆ.”—ಆ್ಯನ.

 ಏನ್‌ ಮಾಡಿದ್ರೆ ಒಳ್ಳೇದು?

 • ಸಹಾಯ ಪಡ್ಕೊಳ್ಳಿ. “ತುಂಬ ಸಲಹೆಗಾರರು ಇದ್ರೆ ಯಶಸ್ಸು ಖಂಡಿತ” ಅಂತ ಬೈಬಲ್‌ ಹೇಳುತ್ತೆ. (ಜ್ಞಾನೋಕ್ತಿ 11:14, NW) ನಿಮ್ಗೆ ಕಮ್ಮಿ ಮಾರ್ಕ್ಸ್‌ ಬರ್ತಿದ್ರೆ ನಿಮ್ಮ ಅಪ್ಪ ಅಮ್ಮ ಹತ್ರನೋ, ನಿಮ್ಮ ಟೀಚರ್‌ ಹತ್ರನೋ ಅಥವಾ ಯಾರಾದ್ರೂ ದೊಡ್ಡವ್ರ ಹತ್ರ ಮಾತಾಡಿ. ಚೆನ್ನಾಗಿ ಮಾರ್ಕ್ಸ್‌ ತೆಗಿಯೋಕೆ ಏನು ಮಾಡಬೇಕು ಅಂತ ಕೇಳಿ.

  “ಓದೋದಿಕ್ಕೆ ಕಷ್ಟ ಆಗ್ತಿದ್ರೆ ಟೀಚರ್‌ ಹತ್ರ ಮಾತಾಡಿ. ಕೆಲವೊಮ್ಮೆ ಟೀಚರೇ ಸರಿಯಾಗಿ ಪಾಠ ಮಾಡ್ತಿಲ್ಲ ಅಂತ ನಿಮ್ಗೆ ಅನಿಸಬಹುದು. ಆದ್ರೆ ಅವ್ರ ಸಹಾಯ ತಗೊಂಡ್ರೆ ಖಂಡಿತ ಒಳ್ಳೇ ಮಾರ್ಕ್ಸ್‌ ತೆಗೀಬಹುದು.”—ಎಡ್ವರ್ಡ್‌.

 • ಮುಂದೆ ಸಿಗೋ ಪ್ರಯೋಜ್ನ ತಿಳ್ಕೊಳ್ಳಿ. ಬೈಬಲ್‌ “ಆದಿಗಿಂತ ಅಂತ್ಯವು ಲೇಸು” ಅಂತ ಹೇಳುತ್ತೆ. (ಪ್ರಸಂಗಿ 7:8) ನೀವು ಸ್ಕೂಲಲ್ಲಿ ಬರೀ ಪಾಠಗಳನ್ನಷ್ಟೇ ಕಲಿಯಲ್ಲ. ಅದರ ಜೊತೆ ಜೀವನ ಮಾಡೋದಿಕ್ಕೆ ಬೇಕಾದ ಕೌಶಲ್ಯಗಳು ಮತ್ತು ಗುಣಗಳ ಬಗ್ಗೆ ಕಲಿತ್ಕೊತೀರ.

  “ನೀವು ದೊಡ್ಡವರಾದ ಮೇಲೆ ಪ್ರಬಂಧಗಳನ್ನ ಬರಿಬೇಕಾಗಿಲ್ಲ, ಎಕ್ಸಾಂಗೆ ಓದೋ ಟೆನ್ಷನ್‌ ಇರಲ್ಲ. ಆದ್ರೆ ನೀವು ಸ್ಕೂಲಲ್ಲಿ ಒತ್ತಡಗಳನ್ನ ಹೇಗೆ ನಿಭಾಯಿಸಬೇಕು ಅಂತ ಕಲ್ತಿರೋದ್ರಿಂದ ಮುಂದೆ ಜೀವನದಲ್ಲಿ ಬರೋ ಸಮಸ್ಯೆಗಳನ್ನ ಸುಲಭವಾಗಿ ಎದುರಿಸ್ತೀರ.”—ವಿರ.

  ಸ್ಕೂಲನ್ನ ಅರ್ಧದಲ್ಲೇ ಬಿಡೋದು ದಡ ಮುಟ್ಟೋಕೆ ಮುಂಚೆ ದೋಣಿಯಿಂದ ಇಳಿದ ಹಾಗೆ ಇರುತ್ತೆ. ಆಮೇಲೆ ದೊಣಿಯಲ್ಲೇ ಇದ್ದಿದ್ರೆ ಚೆನ್ನಾಗಿರ್ತಿತ್ತು ಅಂತನ್ಸುತ್ತೆ

 • ಓದೋಕೆ ಬೇರೆ ದಾರಿ ಹುಡುಕಿ. “ಆತುರಪಡುವವರು ಬಡತನಕ್ಕೆ ಬೀಳ್ತಾರೆ” ಅಂತ ಬೈಬಲ್‌ ಹೇಳುತ್ತೆ. (ಜ್ಞಾನೋಕ್ತಿ 21:5, NW) ಸ್ಕೂಲ್‌ ಬಿಡೋದು ಒಂದೇ ದಾರಿ ಅಂತ ತಕ್ಷಣ ತೀರ್ಮಾನ ತಗೊಬೇಡಿ. ಆನ್‌ಲೈನ್‌ ಸ್ಕೂಲ್‌ ಮೂಲಕ ಅಥ್ವಾ ಹೋಮ್‌ ಸ್ಕೂಲ್‌ ಮೂಲಕ ನಿಮ್ಮ ಶಿಕ್ಷಣನಾ ಮುಗ್ಸಕ್ಕಾಗುತ್ತಾ ಅಂತ ಯೋಚ್ನೆ ಮಾಡಿ.

  “ಕಷ್ಟಪಟ್ಟು ಕೆಲಸ ಮಾಡೋದು, ಸಮಸ್ಯೆಗಳನ್ನ ಪರಿಹಾರ ಮಾಡೋದು, ಒಬ್ರಿಗೊಬ್ರು ಸಹಕಾರ ಕೊಡೊದು ಹೇಗೆ ಅಂತ ಸ್ಕೂಲ್‌ ನಮ್ಗೆ ಟ್ರೈನಿಂಗ್‌ ಕೊಡುತ್ತೆ. ಇದ್ರಿಂದ ಜೀವನ ಪೂರ್ತಿ ಪ್ರಯೋಜ್ನ ಇದೆ. ಅದಕ್ಕೆ ಸ್ಕೂಲನ್ನ ಅರ್ಧಕ್ಕೆ ಬಿಡದೆ ಪೂರ್ತಿ ಓದಿ ಮುಗ್ಸೋದು ಒಳ್ಳೆದು.”—ಬೆಂಜಮಿನ್‌.

ಪಾಠ: ಅರ್ಧದಲ್ಲೇ ಸ್ಕೂಲ್‌ ಬಿಡದೆ ಓದಿ ಮುಗಿಸೋದ್ರಿಂದ ತುಂಬ ವಿಷ್ಯಗಳನ್ನ ಕಲೀಬಹುದು. ಇದ್ರಿಂದ ನಿಮ್ಮ ಜೀವನದಲ್ಲಿ ಮುಂದೆ ತುಂಬ ಪ್ರಯೋಜ್ನ ಸಿಗುತ್ತೆ.