ಮಾಹಿತಿ ಇರುವಲ್ಲಿ ಹೋಗಲು

ಸ್ಕೂಲಲ್ಲಿ ಫೇಲ್‌ ಆದ್ರೆ ಏನ್‌ ಮಾಡಲಿ?

ಸ್ಕೂಲಲ್ಲಿ ಫೇಲ್‌ ಆದ್ರೆ ಏನ್‌ ಮಾಡಲಿ?

ಯುವ ಜನರ ಪ್ರಶ್ನೆಗಳು

“ನನ್ನ ಕೆಲವು ಕ್ಲಾಸ್‌ಮೇಟ್ಸ್‌ ಟೆಸ್ಟ್‌ಬುಕ್‌ ಇಲ್ಲದೆ ಕ್ಲಾಸಿಗೆ ಬರ್ತಾರೆ. ಟೀಚರ್‌ ಪಾಠ ಮಾಡುವಾಗ ಹೆಡ್‌ಫೋನ್‌ ಹಾಕೊಂಡು ಮ್ಯೂಸಿಕ್‌ ಕೇಳ್ತಾ ಇರ್ತಾರೆ. ಅವ್ರಿಗೆ ತಾವು ಯಾಕೆ ಫೇಲ್‌ ಆಗ್ತಿದ್ದೀವಿ ಅಂತ ಆಶ್ಚರ್ಯ ಆಗುತ್ತೆ. ಇನ್ನೊಂದು ಕಡೆ ನನ್ನಂಥವರು ತುಂಬ ಪ್ರಯತ್ನ ಹಾಕಿ ಚೆನ್ನಾಗಿ ಓದಿದ್ರೂ ಒಳ್ಳೇ ಮಾರ್ಕ್ಸ್‌ ಬರಲ್ಲ. ಯಾಕೆ ಹೀಗೆ ಆಗುತ್ತೆ ಅಂತ ಗೊತ್ತಿಲ್ಲ. ವಾರ ಪೂರ್ತಿ ನಿದ್ರೆ ಇಲ್ಲದೆ ರಾತ್ರಿಯೆಲ್ಲ ಕೂತು ಓದಿದ್ರೂ ಒಳ್ಳೇ ಮಾರ್ಕ್ಸ್‌ ಬಂದಿಲ್ಲ ಅಂದ್ರೆ ಖಂಡಿತ ಬೇಜಾರ್‌ ಆಗುತ್ತೆ.”—ಯೋಲಂಡ.

ಯೋಲಂಡಗೆ ಅನಿಸಿದ ಹಾಗೆ ನಿಮಗೂ ಅನ್ಸಿದಿಯಾ? ನಿಮಗೆ ಕಡಿಮೆ ಮಾರ್ಕ್ಸ್‌ ಬರ್ತಾ ಇದ್ರೆ ತುಂಬ ಬೇಜಾರ್‌ ಆಗುತ್ತೆ. ಆದ್ರೆ ಇದನ್ನ ಮೆಟ್ಟಿ ನಿಲ್ಲೋಕೆ ಆಗುತ್ತೆ.

ಕೆಲವು ಯುವಕರು ಸ್ಕೂಲಲ್ಲಿ ಫೇಲ್‌ ಆದ್ರೆ ಮತ್ತೆ ಒಳ್ಳೇ ಮಾರ್ಕ್ಸ್‌ ಪಡಿಯೋಕೆ ಪ್ರಯತ್ನಿಸಲ್ಲ. ಕೆಲವರಂತೂ ಸ್ಕೂಲಿಗೆ ಹೋಗೋದನ್ನ ಬಿಟ್ಟುಬಿಡ್ತಾರೆ. ಈ ಎರಡು ವಿಷ್ಯಗಳನ್ನ ಮಾಡೋಕೆ ನಿಮ್ಮ ಮನಸ್ಸು ಹೇಳ್ತಿದ್ರೂ ಇದನ್ನ ಮೆಟ್ಟಿ ನಿಲ್ಲೋಕೆ ಇನ್ನೊಂದು ದಾರಿ ಇದೆ. ಒಳ್ಳೇ ಮಾರ್ಕ್ಸ್‌ ಪಡಿಯೋಕೆ ಆರು ಸಲಹೆಗಳು ಇಲ್ಲಿದೆ.

 ನೀವೇನು ಮಾಡಬಹುದು?

 • ಕ್ಲಾಸ್‌ ಮಿಸ್‌ ಮಾಡಬೇಡಿ. ‘ಇದೇನು ದೊಡ್ಡ ವಿಷ್ಯ ಅಲ್ಲ. ಎಲ್ಲರಿಗೂ ಗೊತ್ತಿರೋದೆ’ ಅಂತ ನಿಮಗೆ ಅನಿಸಬಹುದು. ಆದ್ರೆ ನೀವು ಕ್ಲಾಸ್‌ನ್ನ ಮಿಸ್‌ ಮಾಡ್ತಾ ಇದ್ರೆ ಖಂಡಿತ ನಿಮಗೆ ಕಡಿಮೆ ಮಾರ್ಕ್ಸ್‌ ಬರುತ್ತೆ.

  “ನನ್ನ ಸ್ಕೂಲಲ್ಲಿ ಯಾವ ಮಕ್ಕಳು ಮಾರ್ಕ್ಸ್‌ ಬಗ್ಗೆ ತಲೆ ಕೆಡಿಸ್ಕೊಳ್ಳದೆ ಸ್ಕೂಲಿಗೆ ಬಂಕ್‌ ಹಾಕ್ತಾ ಇದ್ರೋ ಅವ್ರಿಗೇ ನಂತ್ರ ಕಷ್ಟ ಆಯ್ತು.”—ಮ್ಯಾಥ್ಯೂ.

  ಬೈಬಲ್‌ ಕೊಡೋ ಸಲಹೆ: “ಮನುಷ್ಯನು ಏನು ಬಿತ್ತುತ್ತಿದ್ದಾನೊ ಅದನ್ನೇ ಕೊಯ್ಯುವನು.”—ಗಲಾತ್ಯ 6:7.

 • ಪ್ರತಿ ಕ್ಲಾಸಿಂದ ಪ್ರಯೋಜನ ಪಡ್ಕೊಳ್ಳಿ. ನೀವು ಕ್ಲಾಸ್‌ಲ್ಲಿ ಇರೋದು ಅಷ್ಟೇ ಅಲ್ಲ ಆ ಕ್ಲಾಸಿಂದ ಪೂರ್ತಿ ಪ್ರಯೋಜನ ಪಡಿಯೋಕೆ ಪ್ರಯತ್ನ ಮಾಡಿ. ಚೆನ್ನಾಗಿ ನೋಟ್ಸ್‌ ಬರಕೊಳ್ಳಿ. ಟೀಚರ್‌ ಏನ್‌ ಹೇಳ್ತಿದ್ದಾರೆ ಅಂತ ಚೆನ್ನಾಗಿ ಅರ್ಥ ಮಾಡ್ಕೊಳ್ಳಿ. ನಿಮಗೆ ಕ್ಲಾಸ್‌ಲ್ಲಿ ಪ್ರಶ್ನೆ ಕೇಳೋ ಅವಕಾಶ ಸಿಕ್ಕಿದ್ರೆ ಪ್ರಶ್ನೆ ಕೇಳಿ.

  “ನಾನು ಕ್ಲಾಸ್‌ಲ್ಲಿ ತುಂಬ ಪ್ರಶ್ನೆ ಕೇಳ್ತಿನಿ. ಯಾಕೆಂದ್ರೆ ಮಕ್ಕಳಿಗೆ ಅರ್ಥ ಆಗಿಲ್ಲ ಅಂತ ಟೀಚರ್‌ಗೆ ಗೊತ್ತಾದ್ರೆ ಅವರು ಇನ್ನು ಚೆನ್ನಾಗಿ ಅರ್ಥ ಆಗೋ ರೀತಿಯಲ್ಲಿ ಹೇಳಿ ಕೊಡ್ತಾರೆ.”—ಒಲಿವಿಯಾ.

  ಬೈಬಲ್‌ ಕೊಡೋ ಸಲಹೆ: “ನೀವು ಹೇಗೆ ಕಿವಿಗೊಡುತ್ತೀರಿ ಎಂಬುದಕ್ಕೆ ಗಮನಕೊಡಿರಿ.”—ಲೂಕ 8:18.

 • ಕಾಪಿ ಮಾಡಬೇಡಿ. ಅದು ಪ್ರಾಮಾಣಿಕತೆ ಅಲ್ಲ. ಸ್ಕೂಲಲ್ಲಿ ಮೋಸ ಮಾಡೋಕೆ ತುಂಬ ದಾರಿ ಇವೆ. ಅದ್ರಲ್ಲಿ ಒಂದು ಬೇರೆಯವರು ಬರೆದಿದ್ದನ್ನ ಕಾಪಿ ಹೊಡಿಯೋದು. ಇದ್ರಿಂದ ನೀವು ಏನೂ ಕಲಿಯೋಕೆ ಆಗಲ್ಲ.

  “ಎಕ್ಷಾಮ್‌ನಲ್ಲಿ ನಿಮಗೆ ಅರ್ಥ ಆಗಿಲ್ಲ ಅಂದ್ರೆ ಬೇರೆಯವರನ್ನ ನೋಡಿ ಕಾಪಿ ಹೊಡಿ ಬೇಡಿ. ಈ ರೀತಿ ಕಾಪಿ ಮಾಡಿದ್ರೆ ನಿಮಗೆ ನೀವೇ ಸಹಾಯ ಮಾಡ್ಕೊಳ್ಳೋಕೆ ಆಗಲ್ಲ. ಪ್ರಾಬ್ಲಮ್ಸ್‌ನ್ನ ನೀವೇ ಸರಿ ಮಾಡ್ಕೊಳ್ಳೋಕೆ ಕಲಿಯೋದ್ರ ಬದಲು ನೀವು ಬೇರೆಯವ್ರ ಮೇಲೆ ಡಿಪೆಂಡ್‌ ಆಗಬೇಕು ಅಂತ ಕಲಿತ್ತೀರ.”—ಜೊನಾಥನ್‌.

  ಬೈಬಲ್‌ ಕೊಡೋ ಸಲಹೆ: ‘ಪ್ರತಿಯೊಬ್ಬನು ಸ್ವಂತ ಕೆಲಸವನ್ನು ಪರೀಕ್ಷಿಸಿಕೊಳ್ಳಲಿ, ಆಗ ಅವನಿಗೆ ತನ್ನ ವಿಷಯದಲ್ಲೇ ಹೆಚ್ಚಳಪಡಲು ಕಾರಣ ಇರುವುದು.’—ಗಲಾತ್ಯ 6:4.

 • ಹೋಮ್‌ವರ್ಕ್‌ನ್ನ ಮೊದಲು ಮಾಡಿ. ಬೇರೆ ಯಾವುದೇ ಕೆಲಸಗಳನ್ನ ಮಾಡೋ ಮುಂಚೆ ಅದ್ರಲ್ಲೂ ಮನರಂಜನೆಯಲ್ಲಿ ತೊಡಗೋ ಮುಂಚೆ ಹೋಮ್‌ವರ್ಕ್‌ ಮುಗಿಸಿ. * ಆಗ ನಿಮ್ಮ ಬಿಡುವಿನ ಸಮಯವನ್ನ ಇನ್ನು ಚೆನ್ನಾಗಿ ಬಳಸಬಹುದು!

  “ನಾನು ಮೊದಲು ಹೋಮ್‌ವರ್ಕ್‌ ಮಾಡ್ತೀನಿ. ಇದ್ರಿಂದ ನನ್ನ ಮಾರ್ಕ್ಸ್‌ ಹೆಚ್ಚಾಗಿದೆ. ನಾನು ಮನೆಗೆ ಬಂದ ಕೊಡಲೇ ನಿದ್ರೆ ಮಾಡಬೇಕು ಅಥವಾ ಮ್ಯೂಸಿಕ್‌ ಕೇಳಬೇಕು ಅಂತ ಅನಿಸುತ್ತೆ. ಆದ್ರೆ ಮೊದಲು ನಾನು ಹೋಮ್‌ವರ್ಕ್‌ ಮಾಡೋಕೆ ಪ್ರಯತ್ನಿಸ್ತೀನಿ. ಆಮೇಲೆ ವಿಶ್ರಾಂತಿ ತಗೊಳ್ತೀನಿ.”—ಕ್ಯಾಲ್ವಿನ್‌.

  ಬೈಬಲ್‌ ಕೊಡೋ ಸಲಹೆ: ‘ಹೆಚ್ಚು ಪ್ರಮುಖವಾದ ವಿಷಯಗಳನ್ನು ಖಚಿತಪಡಿಸಿಕೊಳ್ಳಿ.’—ಫಿಲಿಪ್ಪಿ 1:10.

 • ಸಹಾಯ ಕೇಳಿ. ಬೇರೆಯವ್ರಿಂದ ಸಹಾಯ ತಗೊಳ್ಳೋಕೆ ಹಿಂದೆ-ಮುಂದೆ ನೋಡಬೇಡಿ. ಅಪ್ಪ-ಅಮ್ಮನ ಸಲಹೆ ತಗೊಳ್ಳಿ. ಚೆನ್ನಾಗಿ ಮಾರ್ಕ್ಸ್‌ ಬರೋಕೆ ನಿಮ್ಮ ಟೀಚರ್‌ ಸಹಾಯ ಕೇಳಿ. ಬೇಕಾಗಿದ್ರೆ, ಟ್ಯೂಷನ್‌ ಟೀಚರ್‌ ಸಹಾಯವನ್ನ ಪಡ್ಕೊಬಹುದು.

  “ನೇರ ಟೀಚರ್‌ ಹತ್ರ ಹೋಗಿ. ಸೆಬ್ಜೆಕ್ಟ್‌ ಅನ್ನು ಚೆನ್ನಾಗಿ ಅರ್ಥ ಮಾಡ್ಕೊಳ್ಳೋಕೆ ಮತ್ತು ಮಾರ್ಕ್ಸ್‌ ಹೆಚ್ಚಿಸೋಕೆ ಸಹಾಯ ಕೇಳಿ. ಮುಂದೆ ಬರಬೇಕು ಅನ್ನೋ ನಿಮ್ಮ ಆಸೆ ನೋಡಿ ಟೀಚರ್‌ಗೆ ಖುಷಿ ಆಗುತ್ತೆ. ಆಗ ಅವರು ನಿಮಗೆ ಸಹಾಯ ಮಾಡ್ತಾರೆ.”—ಡೇವಿಡ್‌.

  ಬೈಬಲ್‌ ಕೊಡೋ ಸಲಹೆ: ‘ಬಹು ಮಂದಿ ಆಲೋಚನಾಪರರಿರುವಲ್ಲಿ ಉದ್ದೇಶಗಳು ಈಡೇರುವವು.’—ಜ್ಞಾನೋಕ್ತಿ 15:22.

 • ಸಿಗೋ ಎಲ್ಲ ಅವಕಾಶಗಳನ್ನ ಬಳಸ್ಕೊಳ್ಳಿ. ಕೆಲವೊಂದು ದೇಶದಲ್ಲಿ, ನಿಮ್ಮ ಮಾರ್ಕ್ಸ್‌ ಹೆಚ್ಚಿಸೋಕೆ ಸಹಾಯ ಆಗಲು ಪ್ರಶ್ನೆಪತ್ರಿಕೆಯಲ್ಲಿ ಹೆಚ್ಚು ಪ್ರಶ್ನೆಗಳು ಇರುತ್ತೆ. ಹೆಚ್ಚು ಮಾರ್ಕ್ಸ್‌ ಸಿಗುವಂಥ ಪ್ರಾಜೆಕ್ಟ್‌ಗಳನ್ನ ಮಾಡೋಕೆ ನೀವು ತಯಾರಿದ್ದೀರಿ ಅಂತ ಹೇಳಿ. ಒಂದುವೇಳೆ ನೀವು ಫೇಲ್‌ ಆದ್ರೆ ಮತ್ತೆ ಪರೀಕ್ಷೆ ಬರಿಯೋ ಅವಕಾಶ ಇದ್ದೀಯ ಅಂತ ಕೇಳಿ.

  ಮಾರ್ಕ್ಸ್‌ ತಗೊಳ್ಳೋದು ಒಂದು ತರ ಸಂಗೀತವನ್ನ ನುಡಿಸೋ ಹಾಗೆ. ಅದನ್ನ ನುಡಿಸೋದು ಕಷ್ಟನೇ ಆದ್ರೆ ಶ್ರಮಪಟ್ರೆ ನುಡಿಸೋಕೆ ಖಂಡಿತ ಆಗುತ್ತೆ

  “ನಾನೊಂದು ಸಬ್ಜೆಕ್ಟ್‌ನಲ್ಲಿ ಹೆಚ್ಚು ಮಾರ್ಕ್ಸ್‌ ಪಡಿಬೇಕಂದ್ರೆ ನಾನೇ ಮೊದ್ಲ ಹೆಜ್ಜೆ ತಗೊಳ್ತೀನಿ. ಹೆಚ್ಚು ಮಾರ್ಕ್ಸ್‌ ಸಿಗೋ ಪ್ರಾಜೆಕ್ಟ್‌ ಇದೆಯಾ ಅಥವಾ ಚೆನ್ನಾಗಿ ಮಾರ್ಕ್ಸ್‌ ತಗೊಳ್ಳೋಕೆ ಬೇರೆ ಏನಾದ್ರೂ ನಾನು ಮಾಡಬಹುದಾ ಅಂತ ಟೀಚರ್‌ ಹತ್ರ ಕೇಳ್ತೀನಿ.”—ಮ್ಯಾಕೆಂಜಿ.

  ಬೈಬಲ್‌ ಕೊಡೋ ಸಲಹೆ: “ಶ್ರಮೆಯಿಂದ ಸಮೃದ್ಧಿ.”—ಜ್ಞಾನೋಕ್ತಿ 14:23.

^ ಪ್ಯಾರ. 13 ನಿಮ್ಮ ಓದುವ ರೂಢಿಗಳನ್ನ ಹೆಚ್ಚಿಸಿಕೊಳ್ಳೋಕೆ ಕೆಲವೊಂದು ಒಳ್ಳೇ ಸಲಹೆಗಳಿಗಾಗಿ “ಯುವ ಜನರ ಪ್ರಶ್ನೆಗಳು . . . ಹೌ ಕ್ಯಾನ್‌ ಐ ಫಿನಿಷ್‌ ಮೈ ಹೋಮ್‌ವರ್ಕ್‌?” ಅನ್ನೋ ಲೇಖನ ನೋಡಿ.