ಮಾಹಿತಿ ಇರುವಲ್ಲಿ ಹೋಗಲು

ಯುವಜನರ ಪ್ರಶ್ನೆಗಳು

ನಿಮಗೆ ಸಲಹೆ ಸ್ವೀಕರಿಸೋಕೆ ಇಷ್ಟನಾ ಕಷ್ಟನಾ?

ನಿಮಗೆ ಸಲಹೆ ಸ್ವೀಕರಿಸೋಕೆ ಇಷ್ಟನಾ ಕಷ್ಟನಾ?

 ನಿಮ್ಮನ್ನೇ ಪರೀಕ್ಷಿಸಿಕೊಳ್ಳಿ

ನಾವು ಕೆಲವು ವಿಷಯಗಳನ್ನ ಇನ್ನೂ ಚೆನ್ನಾಗಿ ಮಾಡೋಕೆ, ಒಳ್ಳೇ ಗುಣಗಳನ್ನ ಬೆಳೆಸಿಕೊಳ್ಳೋಕೆ ಆಗಿಂದಾಗ್ಗೆ ನಮಗೆ ಬೇರೆಯವ್ರ ಸಲಹೆ ಬೇಕಾಗುತ್ತೆ. ನಾವೀಗ ಕೆಲವು ಸನ್ನಿವೇಶಗಳನ್ನ ನೋಡೋಣ.

 1. “ಹೋದ ಸಲ ನೀನು ಪ್ರಾಜೆಕ್ಟನ್ನ ಅರ್ಜೆಂಟಾಗಿ ಮಾಡಿದ ಹಾಗಿತ್ತು. ನೀನು ಇನ್ನೂ ಸ್ವಲ್ಪ ಟೈಮ್‌ ತಗೊಂಡು ರಿಸರ್ಚ್‌ ಮಾಡ್ಬೇಕು” ಅಂತ ನಿಮ್ಮ ಟೀಚರ್‌ ಹೇಳ್ತಾರೆ.

  ಆಗ ನೀವೇನು ಮಾಡ್ತೀರಾ?

  1. ಸಲಹೆಯನ್ನ ತಿರಸ್ಕರಿಸ್ತೀನಿ. (‘ಆ ಟೀಚರ್‌ಗೆ ನನ್‌ ಕಂಡ್ರೆ ಆಗಲ್ಲ.’)

  2. ಸಲಹೆಯನ್ನ ಸ್ವೀಕರಿಸ್ತೀನಿ. (‘ಮುಂದಿನ ಪ್ರಾಜೆಕ್ಟನ್ನ ಅವ್ರು ಹೇಳಿದ ಹಾಗೇ ಮಾಡ್ತೀನಿ.’)

 2. ನೀವೀಗಷ್ಟೇ ರೂಮ್‌ ಕ್ಲೀನ್‌ ಮಾಡಿದ್ರೂ ನಿಮ್ಮ ಅಮ್ಮ ರೂಮ್‌ ಗಲೀಜಾಗಿದೆ ಅಂತ ಹೇಳ್ತಾರೆ.

  ಆಗ ನೀವೇನು ಮಾಡ್ತೀರಾ?

  1. ಸಲಹೆಯನ್ನ ತಿರಸ್ಕರಿಸ್ತೀನಿ. (‘ನಾನೇನು ಮಾಡಿದ್ರೂ ನನ್ನ ಅಮ್ಮಂಗೆ ಇಷ್ಟ ಆಗಲ್ಲ.’)

  2. ಸಲಹೆಯನ್ನ ಸ್ವೀಕರಿಸ್ತೀನಿ. (‘ಇನ್ನೂ ಸ್ವಲ್ಪ ಚೆನ್ನಾಗಿ ಕ್ಲೀನ್‌ ಮಾಡ್ಬಹುದಿತ್ತು.’)

 3. ‘ನೀನು ಅಧಿಕಾರ ಚಲಾಯಿಸ್ತೀಯ, ಅದು ನಂಗೆ ಇಷ್ಟ ಆಗಲ್ಲ’ ಅಂತ ನಿಮ್ಮ ತಂಗಿ ಹೇಳ್ತಾಳೆ.

  ಆಗ ನೀವೇನು ಮಾಡ್ತೀರಾ?

  1. ಸಲಹೆಯನ್ನ ತಿರಸ್ಕರಿಸ್ತೀನಿ. (‘ಅವ್ಳು ಯಾರು ನಂಗೆ ಅದೆಲ್ಲಾ ಹೇಳಕ್ಕೆ?’)

  2. ಸಲಹೆಯನ್ನ ಸ್ವೀಕರಿಸ್ತೀನಿ. (‘ನಾನು ಅವಳ ಜೊತೆ ಇನ್ನೂ ಪ್ರೀತಿಯಿಂದ ನಡ್ಕೊಬಹುದು ಅಂತ ಅನಿಸುತ್ತೆ.’)

ಕೆಲವ್ರನ್ನ “ಮುಟ್ಟಿದ್ರೆ ಮುನಿ” ಅಂತ ಕರೀತಾರೆ. ಯಾಕಂದ್ರೆ ಒಂದು ಮಾತು ಹೇಳಿದ್ರೆ ಸಾಕು ಅವ್ರು ಕೋಪ ಮಾಡ್ಕೊಳ್ತಾರೆ. ನೀವೂ ಆ ತರ ಇದ್ದೀರಾ? ಹಾಗಿರೋದಾದ್ರೆ ನಿಮ್ಗೇ ನಷ್ಟ. ಬೇರೆಯವ್ರು ಕೊಡೋ ಸಲಹೆಯನ್ನ ಸ್ವೀಕರಿಸೋಕೆ ಕಲಿತುಕೊಳ್ಳೋದು ತುಂಬ ಪ್ರಾಮುಖ್ಯ. ಅದ್ರಿಂದ ಈಗ ಮತ್ತು ಮುಂದೆ ನಿಮ್ಗೆ ತುಂಬ ಪ್ರಯೋಜನ ಆಗುತ್ತೆ.

ನಿಮಗೆ ಸಲಹೆಯನ್ನ ಕೇಳೋಕೆ ಇಷ್ಟ ಇಲ್ಲದಿರಬಹುದು. ಹಾಗಂತ ಅದನ್ನ ಕೇಳಿಸಿಕೊಳ್ಳೋ ಅಗತ್ಯನೇ ಇಲ್ಲ ಅಂತ ನೆನಸಬಾರದು.

 ನಂಗೆ ಸಲಹೆ ಯಾಕೆ ಬೇಕು?

 • ನಾವೆಲ್ಲರೂ ಅಪರಿಪೂರ್ಣರು. ಬೈಬಲ್‌ ಹೀಗೆ ಹೇಳುತ್ತೆ: “ನಾವೆಲ್ಲ ತುಂಬಾ ಸಲ ತಪ್ಪು ಮಾಡುತ್ತೇವೆ.” (ಯಾಕೋಬ 3:2) ಹಾಗಾಗಿ ನಮಗೆಲ್ಲರಿಗೂ ಸಲಹೆ ಬೇಕೇಬೇಕು.

  “ನಾವೆಲ್ಲರೂ ಅಪರಿಪೂರ್ಣರು. ಹಾಗಾಗಿ ತಪ್ಪು ಮಾಡುವುದು ಸಹಜ ಅನ್ನೋ ವಿಷಯವನ್ನ ನಾನು ಮನಸ್ಸಲ್ಲಿ ಇಟ್ಕೊಳ್ತೇನೆ. ಹಾಗಾಗಿ ಯಾರಾದರೂ ನನಗೆ ಸಲಹೆ ಕೊಟ್ಟಾಗ ನಾನು ಅದನ್ನು ಸ್ವೀಕರಿಸ್ತೇನೆ. ಪುನಃ ಆ ತಪ್ಪನ್ನ ಮಾಡದೆ ಇರೋಕೆ ಪ್ರಯತ್ನಿಸುತ್ತೇನೆ.”—ಡೇವಿಡ್‌.

 • ನಿಮಗೆ ಇನ್ನೂ ಪ್ರಗತಿ ಮಾಡಲು ಆಗುತ್ತೆ. ಬೈಬಲ್‌ ಹೀಗೆ ಹೇಳುತ್ತೆ: “ವಿವೇಕಿಗೆ ಕಲಿಸು, ಅವನು ಇನ್ನಷ್ಟು ವಿವೇಕಿಯಾಗ್ತಾನೆ.” (ಜ್ಞಾನೋಕ್ತಿ 9:9) ಸಲಹೆಯನ್ನು ಸ್ವೀಕರಿಸಿದರೆ ಖಂಡಿತ ಪ್ರಯೋಜನ ಸಿಗುತ್ತೆ.

  “ಮುಂಚೆ ನನಗೆ ಯಾರಾದರೂ ಸಲಹೆ ಕೊಟ್ಟರೆ ಇಷ್ಟಾನೇ ಆಗ್ತಿರಲಿಲ್ಲ. ಸಲಹೆ ತಗೊಂಡ್ರೆ ನಾನು ಕೆಟ್ಟವಳು ಅಂತ ನಾನೇ ಒಪ್ಪಿಕೊಂಡ ಹಾಗೆ ಅಂತ ಅನಿಸ್ತಿತ್ತು. ಆದರೆ ಈಗ ನಾನು ಸಲಹೆಯನ್ನು ಸ್ವೀಕರಿಸ್ತೀನಿ. ನಾನು ಯಾವ ವಿಷಯದಲ್ಲಿ ಪ್ರಗತಿ ಮಾಡಬೇಕು ಅಂತ ತಿಳಿದುಕೊಳ್ಳಲಿಕ್ಕಾಗಿ ಬೇರೆಯವರ ಸಲಹೆ ಕೇಳ್ತೀನಿ.”—ಸಲೀನ.

ನಾವು ಸಲಹೆಯನ್ನು ಕೇಳಿದಾಗ ಯಾರಾದರೂ ಸಲಹೆ ಕೊಟ್ಟರೆ ಸ್ವೀಕರಿಸುವುದು ತುಂಬ ಸುಲಭ. ಆದರೆ ನಾವು ಸಲಹೆ ಕೇಳದೆನೇ ಯಾರಾದ್ರೂ ಕೊಟ್ಟರೆ ಅದನ್ನು ಸ್ವೀಕರಿಸೋಕೆ ಕಷ್ಟ ಆಗುತ್ತೆ. ನತಾಲಿಗೆ ಸಲಹೆಗಳು ಇರುವ ಒಂದು ಕಾರ್ಡ್‌ ಅನಿರೀಕ್ಷಿತವಾಗಿ ಸಿಕ್ತು. ಅದ್ರ ಬಗ್ಗೆ ಅವಳು ಹೀಗೆ ಹೇಳ್ತಾಳೆ: “ನನಗೆ ತುಂಬಾ ಆಶ್ಚರ್ಯ, ಬೇಜಾರು ಆಯ್ತು. ನಾನು ತುಂಬಾ ಪ್ರಯತ್ನಪಟ್ಟಿದ್ದೆ. ಆದ್ರೂ ಕೊನೆಯಲ್ಲಿ ನನಗೆ ಸಿಕ್ಕಿದ್ದು ಬರಿ ಸಲಹೆನೇ.”

ನಿಮಗೂ ಯಾವತ್ತಾದರೂ ಈ ರೀತಿ ಆಗಿದೆಯಾ? ಹಾಗಾದರೆ ನೀವು ಏನು ಮಾಡಬಹುದು?

 ನಾನು ಸಲಹೆಯನ್ನ ಹೇಗೆ ಸ್ವೀಕರಿಸಬಹುದು?

 • ಕೇಳಿಸಿಕೊಳ್ಳಿ.

  ಬೈಬಲ್‌ ಹೀಗೆ ಹೇಳುತ್ತೆ: “ಜ್ಞಾನ ಇರೋ ವ್ಯಕ್ತಿ ತನ್ನ ನಾಲಿಗೆಗೆ ಕಡಿವಾಣ ಹಾಕ್ತಾನೆ, ವಿವೇಚನೆ ಇರೋ ವ್ಯಕ್ತಿ ಶಾಂತವಾಗಿ ಇರ್ತಾನೆ.” (ಜ್ಞಾನೋಕ್ತಿ 17:27) ನಿಮಗೆ ಯಾರಾದ್ರೂ ಸಲಹೆ ಕೊಡುವಾಗ ಮಧ್ಯದಲ್ಲಿ ಬಾಯಿ ಹಾಕಬೇಡಿ. ಅಥವಾ ತಕ್ಷಣ ಅನಿಸಿದ್ದನ್ನ ಹೇಳಿಬಿಡಬೇಡಿ. ಯಾಕಂದ್ರೆ ನಂತ್ರ ನೀವು ‘ಛೆ, ಈ ತರ ಹೇಳಿಬಿಟ್ನಲ್ಲಾ!’ ಅಂತ ಪರಿತಪಿಸಬಹುದು.

  “ಯಾರಾದ್ರೂ ನಂಗೆ ಸಲಹೆ ಕೊಟ್ರೆ ಸಾಮಾನ್ಯವಾಗಿ ನಾನು ನನ್ನನ್ನೇ ಸಮರ್ಥಿಸಿಕೊಳ್ಳೋಕೆ ಹೋಗ್ತೀನಿ. ಆದ್ರೆ ಹಾಗೆ ಮಾಡದೆ ಅವರ ಸಲಹೆಯನ್ನ ಸ್ವೀಕರಿಸಬೇಕು ಮತ್ತು ಮುಂದಿನ ಸಲ ಇನ್ನೂ ಚೆನ್ನಾಗಿ ಮಾಡೋಕೆ ಪ್ರಯತ್ನಿಸಬೇಕು.”—ಸೆರಾ.

 • ಸಲಹೆಗೆ ಗಮನಕೊಡಿ, ಸಲಹೆ ಕೊಟ್ಟವರಿಗಲ್ಲ.

  ಯಾರಾದ್ರೂ ನಮಗೆ ಸಲಹೆ ಕೊಟ್ಟಾಗ ಅವರ ತಪ್ಪನ್ನ ಹೇಳಿಬಿಡಬೇಕು ಅಂತ ನಮಗೆ ಅನಿಸಬಹುದು. ಆದ್ರೆ ಅದರ ಬದಲಿಗೆ ಬೈಬಲ್‌ ಕೊಡೋ ಈ ಸಲಹೆಯನ್ನ ಪಾಲಿಸೋದು ತುಂಬ ಉತ್ತಮ: “ಪ್ರತಿಯೊಬ್ರೂ ಕೇಳಿಸ್ಕೊಳ್ಳೋದನ್ನ ಜಾಸ್ತಿ ಮಾಡಿ, ಮಾತಾಡೋದನ್ನ ಕಮ್ಮಿ ಮಾಡಿ, ಬೇಗ ಕೋಪ ಮಾಡ್ಕೊಬೇಡಿ.” (ಯಾಕೋಬ 1:19) ಯಾರಾದ್ರೂ ಸಲಹೆ ಕೊಟ್ರು ಅಂದ್ರೆ ಅದ್ರಲ್ಲಿ ಸ್ವಲ್ಪನಾದ್ರೂ ಸತ್ಯ ಇದ್ದೇ ಇರುತ್ತೆ. ನಿಮಗೆ ಸಲಹೆಯನ್ನ ಕೇಳೋಕೆ ಇಷ್ಟ ಇಲ್ಲದಿರಬಹುದು. ಹಾಗಂತ ಅದನ್ನ ಕೇಳಿಸಿಕೊಳ್ಳೋ ಅಗತ್ಯನೇ ಇಲ್ಲ ಅಂತ ನೆನಸಬಾರದು.

  “ನನ್ನ ಅಪ್ಪ ಅಮ್ಮ ನನ್ನನ್ನ ತಿದ್ದುವಾಗ ನಾನು ಕೋಪದಿಂದ, ‘ನಂಗೊತ್ತು ನಂಗೊತ್ತು’ ಅಂತ ಹೇಳ್ತಿದ್ದೆ. ಆದ್ರೆ ಅವರು ಹೇಳೋದನ್ನ ಚೆನ್ನಾಗಿ ಕೇಳಿಸಿಕೊಂಡು ಅದನ್ನ ಪಾಲಿಸಿದ್ರೆ ಅದ್ರಿಂದ ನಂಗೆ ತುಂಬ ಪ್ರಯೋಜನ ಆಗುತ್ತೆ.”—ಎಡ್ವರ್ಡ್‌.

 • ನಿಮ್ಮ ಬಗ್ಗೆನೇ ಅತಿಯಾಗಿ ಭಾವಿಸಿಕೊಳ್ಳಬೇಡಿ.

  ಯಾರಾದ್ರೂ ನಿಮಗೆ ಸಲಹೆ ಕೊಡುವಾಗ ಅದರರ್ಥ ನೀವೊಬ್ಬ ದಡ್ಡ ಅಂತಲ್ಲ. ಬೇರೆಯವ್ರ ತರನೇ ನಿಮ್ಮಲ್ಲೂ ಕುಂದುಕೊರತೆ ಇದೆ ಅಂತ ಅರ್ಥ. ನಿಮಗೆ ಸಲಹೆ ಕೊಡುವವರಿಗೂ ಆಗಾಗ ಸಲಹೆ ಬೇಕಾಗುತ್ತೆ. ಯಾಕಂದ್ರೆ ಬೈಬಲ್‌ ಹೀಗೆ ಹೇಳುತ್ತೆ: “ಯಾವಾಗ್ಲೂ ಒಳ್ಳೇದನ್ನೇ ಮಾಡ್ತಾ ಪಾಪನೇ ಮಾಡದಿರೋ ನೀತಿವಂತ ಭೂಮಿ ಮೇಲೆ ಯಾರೂ ಇಲ್ಲ.”—ಪ್ರಸಂಗಿ 7:20.

  “ನನ್ನ ಫ್ರೆಂಡ್‌ ಒಬ್ಳು ನನಗೆ ಒಂದು ಸಲಹೆಯನ್ನ ಕೊಟ್ಟಳು. ಅದು ನಂಗೆ ಅಗತ್ಯ ಇರಲಿಲ್ಲ ಅಂತ ಅನಿಸ್ತು. ಅದನ್ನ ಅವಳು ಮುಕ್ತವಾಗಿ ಹೇಳಿದ್ದಕ್ಕೆ ಥ್ಯಾಂಕ್ಸ್‌ ಹೇಳಿದೆ. ಆದ್ರೆ ಒಳಗೊಳಗೇ ನನಗೆ ತುಂಬ ಬೇಜಾರಾಯ್ತು. ಆದ್ರೆ ಅವಳು ಹೇಳಿದ್ರಲ್ಲಿ ನಿಜ ಇತ್ತು ಅಂತ ನಾನು ಆಮೇಲೆ ಅರ್ಥ ಮಾಡಿಕೊಂಡೆ. ಅವಳು ಹೇಳಿದ್ದು ಒಳ್ಳೇದಾಯ್ತು. ನಾನು ಪ್ರಗತಿ ಮಾಡಬೇಕಾದ ಒಂದು ವಿಷ್ಯದ ಬಗ್ಗೆ ಅವಳು ಸಲಹೆ ಕೊಟ್ಟಿದ್ದಳು. ಅವಳು ಅದನ್ನ ನನಗೆ ಹೇಳದೇ ಹೋಗಿದ್ರೆ ನಂಗೆ ಅದ್ರ ಬಗ್ಗೆ ಗೊತ್ತೇ ಆಗ್ತಿರಲಿಲ್ಲ.”—ಸಫೀಯ.

 • ಬದಲಾವಣೆ ಮಾಡಿಕೊಳ್ಳೋಕೆ ಗುರಿ ಇಡಿ.

  ಬೈಬಲ್‌ ಹೀಗೆ ಹೇಳುತ್ತೆ: “ಬೇರೆಯವರು ತಿದ್ದುವಾಗ ಜಾಣ ಸ್ವೀಕರಿಸ್ತಾನೆ.” (ಜ್ಞಾನೋಕ್ತಿ 15:5) ನೀವು ಸಲಹೆಯನ್ನ ಸ್ವೀಕರಿಸಿದ ನಂತ್ರ ನಿಮ್ಮ ಬೇಸರ ಎಲ್ಲಾ ಹೊರಟುಹೋಗುತ್ತೆ. ಆಮೇಲೆ, ಸಿಕ್ಕಂಥ ಆ ಸಲಹೆಯನ್ನ ನಿಮ್ಮ ಜೀವನದಲ್ಲಿ ಅನ್ವಯಿಸೋಕೆ ಪ್ರಯತ್ನಿಸ್ತಾ ಇರುತ್ತೀರಿ. ಇದಕ್ಕಾಗಿ ಒಂದು ಪ್ಲ್ಯಾನ್‌ ಮಾಡಿ. ಆಮೇಲೆ ಮುಂದಿನ ತಿಂಗಳುಗಳಲ್ಲಿ ಎಷ್ಟರ ಮಟ್ಟಿಗೆ ನೀವು ಪ್ರಗತಿ ಮಾಡ್ತೀರ ಅನ್ನೋದನ್ನ ಗುರುತಿಸಿ.

  “ಪ್ರಾಮಾಣಿಕತೆ ಇದ್ರೆನೇ ಸಲಹೆಯನ್ನ ಸ್ವೀಕರಿಸೋಕೆ ಆಗುತ್ತೆ. ಯಾಕಂದ್ರೆ ನಮ್ಮ ತಪ್ಪನ್ನ ಒಪ್ಪಿಕೊಳ್ಳೋಕೆ, ಬೇರೆಯವರ ಹತ್ತಿರ ಕ್ಷಮೆ ಕೇಳೋಕೆ ಮತ್ತು ಪ್ರಗತಿ ಮಾಡೋದು ಹೇಗಂತ ಕಲಿಯೋಕೆ ನಮಗೆ ಪ್ರಾಮಾಣಿಕತೆ ಇರಬೇಕು.”—ಎಮಾ.

ಒಟ್ಟಿನಲ್ಲಿ ಹೇಳೋದಾದ್ರೆ: ಬೈಬಲ್‌ ಹೀಗೆ ಹೇಳುತ್ತೆ: “ಕಬ್ಬಿಣ ಕಬ್ಬಿಣವನ್ನ ಹರಿತ ಮಾಡೋ ತರ, ಸ್ನೇಹಿತ ತನ್ನ ಸ್ನೇಹಿತನನ್ನ ಪ್ರಗತಿ ಮಾಡ್ತಾನೆ.” (ಜ್ಞಾನೋಕ್ತಿ 27:17) ಸಲಹೆಗಳನ್ನ ಸ್ವೀಕರಿಸೋದ್ರಿಂದ ಈಗಲೂ ಮುಂದಕ್ಕೂ ನಮಗೆ ಪ್ರಯೋಜನ ಆಗುತ್ತೆ.