ಮಾಹಿತಿ ಇರುವಲ್ಲಿ ಹೋಗಲು

ಯುವಜನರ ಪ್ರಶ್ನೆಗಳು

ನಾನು ನನಗಿರೋ ಸಮಯನ ಹೇಗೆ ಚೆನ್ನಾಗಿ ಉಪಯೋಗಿಸಿಕೊಳ್ಳಬಹುದು?

ನಾನು ನನಗಿರೋ ಸಮಯನ ಹೇಗೆ ಚೆನ್ನಾಗಿ ಉಪಯೋಗಿಸಿಕೊಳ್ಳಬಹುದು?

 ಇದು ಯಾಕೆ ಮುಖ್ಯ?

 • ಸಮಯ ಹಣದ ತರ. ನಾವದನ್ನು ವೇಸ್ಟ್‌ ಮಾಡಿದ್ರೆ, ನಂತರ ಬೇಕು ಅಂತ ಅನಿಸಿದಾಗ ಮತ್ತೆ ಸಿಗಲ್ಲ. ಆದರೆ ಸಮಯನ ಪ್ಲ್ಯಾನ್‌ ಮಾಡಿ ಉಪಯೋಗಿಸಿದರೆ ನಮಗಿಷ್ಟ ಆಗೋ ವಿಷ್ಯಗಳನ್ನ ಮಾಡೋಕೂ ಸಮಯ ಸಿಗುತ್ತೆ.

  ಬೈಬಲ್‌ ತತ್ವ: “ಸೋಮಾರಿಯ ಆಶೆಯು ವ್ಯರ್ಥ; ಉದ್ಯೋಗಿಯ ಆತ್ಮಕ್ಕೆ ಪುಷ್ಟಿ.”—ಜ್ಞಾನೋಕ್ತಿ 13:4.

  ನೆನಪಿಡಿ: ಸಮಯನ ಚೆನ್ನಾಗಿ ಉಪಯೋಗಿಸೋಕೆ ಕಲಿತರೆ ನಿಮ್ಮ ಸ್ವಾತಂತ್ರ್ಯ ಕಡಿಮೆ ಆಗಲ್ಲ, ಹೆಚ್ಚು ಸ್ವಾತಂತ್ರ್ಯ ಸಿಗುತ್ತೆ.

 • ಸಮಯನ ಚೆನ್ನಾಗಿ ಉಪಯೋಗಿಸೋದನ್ನು ಕಲಿತರೆ ದೊಡ್ಡವರಾಗುತ್ತಾ ನಿಮಗೆ ತುಂಬ ಪ್ರಯೋಜನ ಆಗುತ್ತೆ. ಮುಂದೆ ನೀವು ಕೆಲಸಕ್ಕೆ ಸೇರಿದರೆ ಅದ್ರಲ್ಲಿ ಉಳಿತೀರಾ ಇಲ್ವಾ ಅನ್ನೋದು ನೀವು ಸಮಯನ ಹೇಗೆ ಉಪಯೋಗಿಸ್ತೀರಿ ಅನ್ನೋದರ ಮೇಲೆ ಹೊಂದಿಕೊಂಡಿದೆ. ನೀವೇ ಹೇಳಿ, ನಿಮ್ಮದೇ ಅಂತ ಒಂದು ಕಂಪೆನಿ ಇದ್ದು, ಅಲ್ಲಿಗೆ ಯಾವಾಗ ನೋಡಿದರೂ ಒಬ್ಬರು ತಡವಾಗಿ ಬರ್ತಿದ್ರೆ ಅವ್ರನ್ನ ಹಾಗೇ ಕೆಲಸದಲ್ಲಿ ಇಟ್ಟುಕೊಳ್ತೀರಾ?

  ಬೈಬಲ್‌ ತತ್ವ: “ಅತ್ಯಲ್ಪವಾಗಿರುವುದರಲ್ಲಿ ನಂಬಿಗಸ್ತನಾಗಿರುವ ವ್ಯಕ್ತಿಯು ಬಹಳವಾದುದರಲ್ಲಿಯೂ ನಂಬಿಗಸ್ತನಾಗಿರುವನು.”—ಲೂಕ 16:10.

  ನೆನಪಿಡಿ: ನೀವು ಸಮಯನ ಹೇಗೆ ಉಪಯೋಗಿಸ್ತೀರಿ ಅನ್ನೋದು ನೀವು ಎಂಥ ವ್ಯಕ್ತಿ ಅಂತ ತೋರಿಸಿಕೊಡುತ್ತೆ.

ಆದರೆ, ಸಮಯನ ಸರಿಯಾಗಿ ಉಪಯೋಗಿಸೋದು ಅಷ್ಟೊಂದು ಸುಲಭ ಅಲ್ಲ. ಇದಕ್ಕೆ ಯಾವೆಲ್ಲಾ ಅಡ್ಡಿ-ತಡೆ ಬರಬಹುದು? ನೋಡಿ.

ಮೊದಲನೇ ತಡೆ: ಸ್ನೇಹಿತರು

“ಸ್ನೇಹಿತರು ನನ್ನನ್ನ ಎಲ್ಲಿಗಾದ್ರೂ ಕರೆದರೆ ನನಗೆ ಸಮಯ ಇಲ್ಲದಿದ್ದರೂ ಹೋಗಿಬಿಡ್ತೀನಿ. ‘ಇರೋ ಕೆಲಸನ ಮನೆಗೆ ಬಂದ ಮೇಲೆ ಬೇಗ ಬೇಗ ಮಾಡಿದ್ರಾಯ್ತು’ ಅಂತ ಅಂದ್ಕೊಳ್ತೀನಿ. ಆದರೆ, ಯಾವಾಗಲೂ ಆ ರೀತಿ ಮಾಡೋಕಾಗಲ್ಲ, ಎಷ್ಟೋ ಸಲ ಆ ಮೇಲೆ ತುಂಬ ಕಷ್ಟಪಟ್ಟಿದ್ದೀನಿ.”—ಸಿಂತ್ಯ.

ಎರಡನೇ ತಡೆ: ಮನರಂಜನೆ ವಿಷಯಗಳು

“ಟಿವಿನೂ ವ್ಯಾಕ್ಯೂಮ್‌ ಕ್ಲೀನರ್‌ ತರ. ಪ್ರೋಗ್ರಾಂಗಳು ಮತ್ತು ಸಿನೆಮಾಗಳ ಮೂಲಕ ಅದು ನಮ್ಮನ್ನ ಎಳೆದುಕೊಂಡು ಬಿಡುತ್ತೆ. ಇದ್ರಿಂದ ತಪ್ಪಿಸಿಕೊಳ್ಳೋದು ತುಂಬ ಕಷ್ಟ.”—ಐವಿ.

“ನಾನು ಟ್ಯಾಬ್‌ ಹಿಡುಕೊಂಡುಬಿಟ್ರೆ ಸಮಯ ಹೋಗಿದ್ದೇ ಗೊತ್ತಾಗಲ್ಲ. ಬ್ಯಾಟರಿ ಖಾಲಿ ಆದಾಗಲೇ ನಾನದನ್ನ ನಿಲ್ಸೋದು, ಆದ್ರೆ ಆಮೇಲೆ ಮನಸ್ಸು ಚುಚ್ಚುತ್ತೆ.”—ಮೇರಿ.

ಮೂರನೇ ತಡೆ: ಮುಂದೂಡುವ ಸ್ವಭಾವ

“ನಾನು ಹೋಮ್‌ವರ್ಕನ್ನ ಮತ್ತು ಯಾವುದೇ ಕೆಲಸನಾದರೂ ಆ ಮೇಲೆ ಮಾಡಿದರಾಯ್ತು ಅಂತ ಮುಂದೂಡುತ್ತೀನಿ. ಬೇಡದಿರೋದನ್ನೆಲ್ಲಾ ಮಾಡ್ತಾ ಕೊನೇ ಗಳಿಗೆಯಲ್ಲಿ ಎದ್ದು ಹೋಮ್‌ವರ್ಕ್‌ ಮಾಡೋಕೆ ಕೂತುಕೊಳ್ತೀನಿ. ಈ ರೀತಿ ಸಮಯ ಹಾಳು ಮಾಡೋದು ಸರಿ ಅಲ್ಲ.”—ಬೆತ್‌.

ಸಮಯನ ಚೆನ್ನಾಗಿ ಉಪಯೋಗಿಸೋಕೆ ಕಲಿತರೆ ನಿಮ್ಮ ಸ್ವಾತಂತ್ರ್ಯ ಕಡಿಮೆ ಆಗಲ್ಲ, ಹೆಚ್ಚು ಸ್ವಾತಂತ್ರ್ಯ ಸಿಗುತ್ತೆ

 ನೀವೇನು ಮಾಡಬಹುದು

 1. 1. ಯಾವೆಲ್ಲಾ ಕೆಲಸಗಳನ್ನು ಮಾಡಬೇಕು ಅಂತ ಬರೆಯಿರಿ. ಯಾವೆಲ್ಲಾ ಹೋಮ್‌ವರ್ಕ್‌ ಮಾಡ್ಲಿಕ್ಕಿದೆ, ಮನೆಯಲ್ಲಿ ನಿಮಗೆ ಏನೆಲ್ಲಾ ಕೆಲಸ ಮಾಡ್ಲಿಕ್ಕಿದೆ ಅಂತ ಬರೆಯಿರಿ. ಒಂದು ವಾರದಲ್ಲಿ ನೀವು ಮಾಡಬೇಕಿರೋ ಒಂದೊಂದು ಕೆಲಸಕ್ಕೂ ಸಾಧಾರಣ ಎಷ್ಟು ಸಮಯ ಬೇಕಾಗುತ್ತೆ ಅನ್ನೋದನ್ನ ಬರೆಯಿರಿ.

  ಬೈಬಲ್‌ ತತ್ವ: ‘ಪ್ರಮುಖವಾದ ವಿಷಯಗಳನ್ನು ಖಚಿತಪಡಿಸಿಕೊಳ್ಳಿ.’—ಫಿಲಿಪ್ಪಿ 1:10.

 2. 2. ಫ್ರೀ ಟೈಮಲ್ಲಿ ನೀವೇನೆಲ್ಲಾ ಮಾಡೋಕೆ ಇಷ್ಟಪಡ್ತೀರಿ ಅಂತ ಬರೆಯಿರಿ. ಇಂಟರ್‌ನೆಟ್‌ ಉಪಯೋಗಿಸೋದು, ಟಿವಿ ನೋಡೋದು, ಹೀಗೆ ಬೇರೆ ಬೇರೆ ವಿಷಯಗಳನ್ನು ಬರೆಯಬಹುದು. ಒಂದು ವಾರದಲ್ಲಿ ಪ್ರತಿಯೊಂದು ವಿಷಯಕ್ಕೂ ಎಷ್ಟೆಷ್ಟು ಸಮಯ ಕಳೆಯಬೇಕು ಅಂತಿದ್ದೀರಿ ಅಂತ ಬರೆಯಿರಿ.

  ಬೈಬಲ್‌ ತತ್ವ: “ಸಮಯವನ್ನು ಸರಿಯಾಗಿ ಉಪಯೋಗಿಸಿಕೊಳ್ಳುತ್ತಾ . . . ವಿವೇಕದಿಂದ ನಡೆದುಕೊಳ್ಳುತ್ತಾ ಇರಿ.”—ಕೊಲೊಸ್ಸೆ 4:5, nwt *.

 3. 3. ಪ್ಲ್ಯಾನ್‌ ಮಾಡಿ. ನೀವು ಮಾಡಿದ ಎರಡೂ ಪಟ್ಟಿಗಳನ್ನು ನೋಡಿ. ನೀವು ಮಾಡಬೇಕಿರುವ ಒಂದೊಂದು ಕೆಲಸಕ್ಕೂ ಸಾಕಷ್ಟು ಸಮಯ ಇದೆಯಾ? ಇಲ್ಲಾಂದ್ರೆ ಫ್ರೀ ಟೈಮಲ್ಲಿ ಮಾಡಬೇಕು ಅಂದ್ಕೊಂಡಿರೋ ವಿಷಯಗಳನ್ನ ಸ್ವಲ್ಪ ಕಟ್‌ ಮಾಡ್ಬೇಕಾ? ಅಂತ ನೋಡಿ.

  ಕಿವಿಮಾತು: ಒಂದು ದಿನದಲ್ಲಿ ಏನೆಲ್ಲಾ ಮಾಡ್ಬೇಕಂತ ಪಟ್ಟಿ ಮಾಡಿ. ಒಂದೊಂದೇ ಕೆಲಸ ಮಾಡಿದ ಹಾಗೆ ಅದರ ಪಕ್ಕದಲ್ಲಿ ಟಿಕ್‌ ಮಾಡ್ತಾ ಹೋಗಿ.

  ಬೈಬಲ್‌ ತತ್ವ: “ಶ್ರಮಶೀಲರಿಗೆ ತಮ್ಮ ಯೋಜನೆಗಳಿಂದ ಸಮೃದ್ಧಿ.”—ಜ್ಞಾನೋಕ್ತಿ 21:5, NW.

 4. 4. ಪ್ಲ್ಯಾನ್‌ ಪ್ರಕಾರ ನಡ್ಕೊಳ್ಳಿ. ಕೆಲವೊಮ್ಮೆ ಫ್ರೆಂಡ್ಸ್‌ ನಿಮ್ಮನ್ನ ಕರೆದಾಗ, ಪ್ಲ್ಯಾನ್‌ ಮಾಡಿರೋ ಕೆಲಸನ ಮಾಡ್ಬೇಕಿರೋದರಿಂದ ಅವರ ಜೊತೆ ಹೋಗೋಕೆ ಆಗದೇ ಇರಬಹುದು. ಆದರೂ ಈ ರೀತಿ ಪ್ಲ್ಯಾನ್‌ ಪ್ರಕಾರ ನಡೆದುಕೊಂಡರೆ ನಿಮಗೆ ಹೆಚ್ಚು ಫ್ರೀ ಟೈಮ್‌ ಸಿಗುತ್ತೆ, ಖುಷಿನೂ ಆಗುತ್ತೆ.

  ಬೈಬಲ್‌ ತತ್ವ: “ನಿಮ್ಮ ಕೆಲಸದಲ್ಲಿ ಆಲಸಿಗಳಾಗಿರಬೇಡಿ.”—ರೋಮನ್ನರಿಗೆ 12:11.

 5. 5. ಮೊದಲು ಕೆಲಸ ಮಾಡಿ, ಆಮೇಲೆ ಎಂಜಾಯ್‌ ಮಾಡಿ. “ಕೆಲವೊಮ್ಮೆ ನಾನು ಪಟ್ಟಿಯಲ್ಲಿರೋ ಒಂದೆರಡು ಕೆಲಸ ಮುಗಿಸಿದ ನಂತರ 15 ನಿಮಿಷ ಟಿವಿ ನೋಡಿ ಮತ್ತೆ ಕೆಲಸ ಮಾಡೋಣ ಅಂದುಕೊಳ್ತೀನಿ. ಆದ್ರೆ, ಆ 15 ನಿಮಿಷ ಇದ್ದದ್ದು 30 ನಿಮಿಷ ಆಗುತ್ತೆ, ನಂತರ ಒಂದು ತಾಸಾಗುತ್ತೆ. ಹೀಗೆ ಟಿವಿ ಮುಂದೆ 2 ತಾಸೇ ಕಳೆದಿರುತ್ತೇನೆ, ನನಗೆ ಸಮಯ ಹೋಗಿದ್ದೇ ಗೊತ್ತಿರಲ್ಲ” ಎನ್ನುತ್ತಾಳೆ ತಾರ ಎಂಬ ಯುವತಿ.

  ಹಾಗಾದರೆ, ಏನು ಮಾಡೋದು? ಮನೋರಂಜನೆ ಅನ್ನೋದು ನಾವು ಕೆಲಸಗಳನ್ನು ಪೂರ್ತಿ ಮಾಡಿ ಮುಗಿಸಿದಾಗ ನಮಗೆ ನಾವೇ ಕೊಡೋ ಬಹುಮಾನ ಆಗಿರಬೇಕೇ ಹೊರತು ಪ್ರತಿ ದಿನ ಇರಲೇಬೇಕಾದ ವಿಷಯ ಅಲ್ಲ.

  ಬೈಬಲ್‌ ತತ್ವ: “ತನ್ನ ಪ್ರಯಾಸದಲ್ಲಿಯೂ ಸುಖವನ್ನನುಭವಿಸುವದಕ್ಕಿಂತ ಇನ್ನೇನೂ ಮನುಷ್ಯನಿಗೆ ಮೇಲಿಲ್ಲ.”—ಪ್ರಸಂಗಿ 2:24.

^ ಪ್ಯಾರ. 18 nwt ಅಂದರೆ ಇಂಗ್ಲಿಷ್‌ನಲ್ಲಿರುವ ಪವಿತ್ರ ಶಾಸ್ತ್ರಗ್ರಂಥದ ನೂತನ ಲೋಕ ಭಾಷಾಂತರದ ಪರಿಷ್ಕೃತ ಆವೃತ್ತಿ.