ಮಾಹಿತಿ ಇರುವಲ್ಲಿ ಹೋಗಲು

ಅಪ್ಪಅಮ್ಮ ಇಟ್ಟಿರೋ ರೂಲ್ಸ್‌ ನಂಗಿಷ್ಟ ಇಲ್ಲ...ಏನ್‌ ಮಾಡ್ಲಿ?

ಅಪ್ಪಅಮ್ಮ ಇಟ್ಟಿರೋ ರೂಲ್ಸ್‌ ನಂಗಿಷ್ಟ ಇಲ್ಲ...ಏನ್‌ ಮಾಡ್ಲಿ?

ಯುವಜನರ ಪ್ರಶ್ನೆಗಳು

“ನಂಗೆ 15 ವರ್ಷ ಇದ್ದಾಗ ಅಪ್ಪಅಮ್ಮ ಹೇಳಿದ್ದೆಲ್ಲಾ ಕರೆಕ್ಟ್‌ ಅಂತ ಅನಿಸುತ್ತಿತ್ತು. ಆದ್ರೆ ಈಗ ನಂಗೆ 19 ವರ್ಷ. ಅಪ್ಪಅಮ್ಮ ಇಡೋ ರೂಲ್ಸ್‌ ನಂಗೆ ಉಸಿರು ಕಟ್ಟಿಸುತ್ತೆ.”ಸಹನಾ.

ನಿಮ್ಗೂ ಅದೇ ತರ ಅನ್ಸುತ್ತಾ? ಅನ್ಸೋದಾದ್ರೆ, ಅಪ್ಪಅಮ್ಮನ ಜೊತೆ ಇದ್ರ ಬಗ್ಗೆ ಹೇಗೆ ಮಾತಾಡಿದ್ರೆ ಚೆನ್ನಾಗಿರುತ್ತೆ ಅಂತ ಈ ಲೇಖನದಲ್ಲಿದೆ.

 ಯೋಚ್ನೆ ಮಾಡಿ

ಅಪ್ಪಅಮ್ಮ ಇಟ್ಟಿರೋ ರೂಲ್ಸ್‌ ಬಗ್ಗೆ ಅವರತ್ರ ಮಾತಾಡೋಕೆ ಮುಂಚೆ ಈ ವಿಷಯಗಳ ಬಗ್ಗೆ ಯೋಚ್ನೆ ಮಾಡಿ:

  • ರೂಲ್ಸ್‌ ಇಲ್ಲದಿದ್ರೆ ಅನಾಹುತ ಜಾಸ್ತಿ. ಟ್ರಾಫಿಕ್‌ ಜಾಸ್ತಿ ಇರೋ ಮೇನ್‌ ರೋಡಲ್ಲಿ ಸಿಗ್ನಲ್ಲೇ ಇಲ್ಲದಿದ್ರೆ ಆಕ್ಸಿಡೆಂಟ್‌ ಜಾಸ್ತಿ ಅಲ್ವಾ? ಅದೇ ತರ ಜೀವನದಲ್ಲೂ ರೂಲ್ಸ್‌ ಇಲ್ಲಾಂದ್ರೆ ಬದುಕು ಅಲ್ಲೋಲ ಕಲ್ಲೋಲ ಆಗುತ್ತೆ.

  • ನಿಮ್ಮೇಲೆ ಪ್ರೀತಿ ಇರೋದ್ರಿಂದಾನೇ ಅಪ್ಪಅಮ್ಮ ರೂಲ್ಸ್‌ ಇಡ್ತಾರೆ. ಒಂದು ವೇಳೆ ಅಪ್ಪಅಮ್ಮ ರೂಲ್ಸ್‌ ಇಟ್ಟಿಲ್ಲಾಂದ್ರೆ ಅದರ ಅರ್ಥ ಅವರಿಗೆ ನಿಮ್ಮ ಮೇಲೆ ಪ್ರೀತಿ ಇಲ್ಲ, ನಿಮಗೆ ಏನಾದ್ರೂ ಪರ್ವಾಗಿಲ್ಲ ಅಂತ. ಒಳ್ಳೇ ಅಪ್ಪಅಮ್ಮ ಹಾಗೆ ಮಾಡಲ್ಲ ತಾನೇ?

ನಿಮಗೆ ಗೊತ್ತಾ? ಅಪ್ಪಅಮ್ಮಂಗೂ ದೇವ್ರು ರೂಲ್ಸ್‌ ಇಟ್ಟಿದ್ದಾರೆ! ನಂಬೋಕೆ ಆಗ್ತಿಲ್ವಾ? ಬೈಬಲಲ್ಲಿರೋ ಈ ವಚನಗಳನ್ನ ಓದಿ, ಆದಿಕಾಂಡ 2:24; ಧರ್ಮೋಪದೇಶಕಾಂಡ 6:6, 7; ಎಫೆಸ 6:4; 1 ತಿಮೊಥೆಯ 5:8.

ಇಷ್ಟೆಲ್ಲಾ ಯೋಚನೆ ಮಾಡಿದ ಮೇಲೂ ಅಪ್ಪಅಮ್ಮ ಇಟ್ಟಿರೋ ರೂಲ್ಸ್‌ ಸರಿ ಇಲ್ಲಾ ಅನ್ಸಿದ್ರೆ ಏನು ಮಾಡ್ತೀರಾ?

 ಇದನ್ನ ಟ್ರೈ ಮಾಡಿ

ಅವ್ರತ್ರ ಮಾತಾಡೋ ಮುಂಚೆ ಯೋಚ್ನೆ ಮಾಡಿ. ಅಪ್ಪಅಮ್ಮ ಇಟ್ಟಿರೋ ಎಲ್ಲಾ ರೂಲ್ಸ್‌ನಾ ನೀವು ಪಾಲಿಸ್ತೀರಾ? ಪಾಲಿಸ್ತಿಲ್ಲಾಂದ್ರೆ ಸದ್ಯಕ್ಕೆ ಮಾತಾಡೋಕೆ ಹೋಗ್ಬೇಡಿ. ಬದ್ಲಿಗೆ “ಅಪ್ಪಅಮ್ಮಗೆ ನನ್ಮೇಲೆ ನಂಬ್ಕೇನೇ ಇಲ್ಲ—ನಂಬೋಥರ ಏನ್ಮಾಡ್ಲಿ?” ಅನ್ನೋ ಲೇಖನ ಓದಿ.

ಎಲ್ಲ ರೂಲ್ಸ್‌ ಪಾಲಿಸ್ತಾ ಇರೋದಾದ್ರೆ ನೀವು ಮಾತಾಡಬಹುದು. ಆದ್ರೆ ಏನು ಮಾತಾಡ್ಬೇಕಂತ ಮೊದಲೇ ಯೋಚ್ಸಿ. ಯೋಚ್ಸಿದ್ದನ್ನ ಬರೆದಿಟ್ಟುಕೊಂಡ್ರೆ ಯಾವ ರೂಲ್ಸ್‌ ಪಾಲಿಸೋಕೆ ಕಷ್ಟ ಆಗುತ್ತೆ, ಯಾಕೆ ಕಷ್ಟ ಆಗುತ್ತೆ ಅಂತ ಮಾತಾಡೋಕೆ ಸುಲಭ ಆಗುತ್ತೆ. ಆಮೇಲೆ ಯಾವಾಗ ಮಾತಾಡೋದು ಎಲ್ಲಿ ಮಾತಾಡೋದು ಅಂತ ಅಪ್ಪಅಮ್ಮನ್ನ ಕೇಳಿ. ಆರಾಮಾಗಿ ಕೂತು ಮಾತಾಡೋ ತರ ಜಾಗನಾ ಸೆಲೆಕ್ಟ್‌ ಮಾಡಿದ್ರೆ ಚೆನ್ನಾಗಿರುತ್ತೆ. ಮಾತಾಡುವಾಗ ಈ ವಿಷಯಗಳು ನಿಮ್ಮ ಮನಸ್ಸಲ್ಲಿರಲಿ:

ಗೌರವ ಕೊಡಿ. ಕಟು ಮಾತು ಕೋಪಾನ ಜಾಸ್ತಿ ಮಾಡುತ್ತೆ ಅಂತ ಬೈಬಲ್‌ ಹೇಳುತ್ತೆ. (ಜ್ಞಾನೋಕ್ತಿ 15:1) ಅಪ್ಪಅಮ್ಮನ ಜೊತೆ ವಾದ ಮಾಡಿದ್ರೆ, ಅವರು ಮಾಡ್ತಿರೋದು ತಪ್ಪು ಅನ್ನೋರೀತಿ ಮಾತಾಡಿದ್ರೆ, ಅವ್ರಿಗೆ ಕೋಪ ಬರುತ್ತೆ, ಮಾತುಕತೆ ಅಲ್ಲೇ ನಿಂತ್ಹೋಗುತ್ತೆ.

“ಅಪ್ಪಅಮ್ಮಗೆ ನಾನ್‌ ಎಷ್ಟು ಹೆಚ್ಚು ಗೌರವ ಕೊಡ್ತೀನೋ ಅಷ್ಟೇ ಹೆಚ್ಚು ಗೌರವ ಅವ್ರು ನನ್ಗೆ ಕೊಡ್ತಾರೆ. ಹೀಗೆ ಒಬ್ಬರಿಗೊಬ್ರು ಗೌರವ ಕೊಟ್ರೆ ಸರಿಯಾದ ತೀರ್ಮಾನಕ್ಕೆ ಬರೋದು ಸುಲಭ ಆಗುತ್ತೆ.”—ಭಾನು, 19.

ಕೇಳಿಸ್ಕೊಳಿ. ಜಾಸ್ತಿ ಕೇಳಿಸ್ಕೋ ಬೇಕು, ದುಡುಕದೇ ಮಾತಾಡ್ಬೇಕು ಅಂತ ಬೈಬಲ್‌ ಹೇಳುತ್ತೆ. (ಯಾಕೋಬ 1:19) ಬರೀ ನೀವೇ ಮಾತಾಡ್ಬೇಡಿ. ಅವ್ರು ಹೇಳೋದನ್ನೂ ಕೇಳಿಸ್ಕೊಳಿ.

“ದೊಡ್ಡವರಾಗ್ತಾ ಹೋದಂಗೆ, ಅಪ್ಪಅಮ್ಮನಿಗಿಂತ ನಮಗೇ ಜಾಸ್ತಿ ಗೊತ್ತು ಅಂತ ಅನ್ಸುತ್ತೆ. ಆದ್ರೆ ಅದು ನಿಜ ಅಲ್ಲ. ಆದ್ರಿಂದ ಅವ್ರು ಹೇಳೋ ಮಾತನ್ನ ನಾವು ಯಾವಾಗ್ಲೂ ಕೇಳ್ಬೇಕು.”—ದಿವ್ಯ, 20.

ಅವ್ರನ್ನ ಅರ್ಥಮಾಡ್ಕೊಳಿ. ರೂಲ್ಸ್‌ನ ಅವ್ರು ಯಾಕೆ ಮಾಡ್ತಿದ್ದಾರೆ ಅನ್ನೋದನ್ನ ಅವ್ರ ಜಾಗದಲ್ಲಿ ನಿಂತು ಯೋಚ್ಸಿ. ‘ನಿಮ್ಮ ಸ್ವಂತ ವಿಷಯಗಳಲ್ಲೇ ಆಸಕ್ತಿಯನ್ನು ವಹಿಸೋ ಬದ್ಲು ಇತರರ ಅಂದರೆ ನಿಮ್ಮ ಅಪ್ಪಅಮ್ಮನ ವಿಷಯಗಳಲ್ಲಿಯೂ ಆಸಕ್ತಿಯನ್ನು ತೋರಿಸಿ’ ಅಂತ ಬೈಬಲ್‌ ಹೇಳುತ್ತೆ. (ಫಿಲಿಪ್ಪಿ 2:4) ಈ ಸಲಹೆಯನ್ನ ಪಾಲಿಸಿ.

ಇವೆರಡ್ರಲ್ಲಿ ಯಾವ್‌ ತರ ಮಾತಾಡಿದ್ರೆ ಅಪ್ಪಅಮ್ಮ ಕೇಳ್ತಾರೆ?

“ಅಪ್ಪಅಮ್ಮನ್ನ ಫ್ರೆಂಡ್ಸ್‌ ತರ ನೋಡೋ ಬದ್ಲು ಶತ್ರುಗಳ ತರ ನೋಡ್ತಿದ್ದೆ. ಆದ್ರೆ ಈಗ ಏನ್‌ ಗೊತ್ತಾಯ್ತು ಅಂದ್ರೆ, ಒಬ್ಬ ಒಳ್ಳೇ ವ್ಯಕ್ತಿಯಾಗೋಕೆ ನಾನ್‌ ಹೇಗೆ ಪ್ರಯತ್ನ ಮಾಡ್ತಿದ್ದೀನೋ ಹಾಗೇನೇ ಒಳ್ಳೇ ಅಪ್ಪಅಮ್ಮ ಆಗೋಕೆ ಅವ್ರೂ ಪ್ರಯತ್ನ ಮಾಡ್ತಿದ್ದಾರೆ. ಅವ್ರು ಏನೇ ಮಾಡಿದ್ರೂ ಅದಕ್ಕೆ ನನ್ಮೇಲೆ ಇರೋ ಪ್ರೀತೀನೇ ಕಾರಣ.”—ಜಯಂತ್‌, 21.

ಬೇರೆ ಏನ್ಮಾಡ್ಬಹುದು ಅಂತ ನೀವೇ ಹೇಳಿ. ನೀವು ತುಂಬ ದೂರದಲ್ಲಿ ನಡೆಯೋ ಒಂದು ಪಾರ್ಟಿಗೆ ಬೈಕಲ್ಲಿ ಹೋಗೋಕೆ ಇಷ್ಟಪಡ್ತಿದ್ದೀರ ಅಂತ ಇಟ್ಕೊಳ್ಳಿ. ಅದಕ್ಕೆ ಅಪ್ಪಅಮ್ಮ ಒಪ್ಪಲ್ಲ. ಹೀಗಿದ್ದಾಗ ಅವ್ರು ಯಾಕೆ ಒಪ್ತಿಲ್ಲ ಅಂತ ಯೋಚ್ನೆ ಮಾಡಿ. ಬೈಕಲ್ಲಿ ಅಷ್ಟು ದೂರ ಹೋಗೋದು ಅವ್ರಿಗೆ ಇಷ್ಟ ಇಲ್ವಾ? ಅಥವಾ ಆ ಪಾರ್ಟಿಗೆ ಹೋಗೋದೇ ಇಷ್ಟ ಇಲ್ವಾ?

  • ಬೈಕಲ್ಲಿ ಹೋಗೋದು ಅವ್ರಿಗೆ ಇಷ್ಟ ಇಲ್ಲಾಂದ್ರೆ, ನೀವು ಬಸ್ಸಲ್ಲೋ, ಟ್ರೈನಲ್ಲೋ ಹೋಗೋಕೆ ಪ್ಲಾನ್‌ ಮಾಡಿ. ಆಗ ಅವ್ರು ಒಪ್ಕೊಬಹುದಲ್ವಾ?

  • ಪಾರ್ಟಿಗೆ ಹೋಗೋದು ಅವ್ರಿಗೆ ಇಷ್ಟ ಇಲ್ಲಾಂದ್ರೆ, ಅದು ಏನ್‌ ಪಾರ್ಟಿ, ಯಾರೆಲ್ಲಾ ಬರ್ತಾರೆ, ಯಾರ್‌ ಅದನ್ನ ಅರೇಂಜ್‌ ಮಾಡಿದ್ದಾರೆ ಅಂತ ವಿವರವಾಗಿ ಹೇಳಬಹುದಾ?

ಇದನ್ನ ತುಂಬ ಗೌರವದಿಂದ ಹೇಳಿ, ಜೊತೆಗೆ ಅವರು ಹೇಳೋದನ್ನೂ ಸಮಾಧಾನವಾಗಿ ಕೇಳಿಸ್ಕೊಳಿ. ನಿಮ್ಮ ‘ತಂದೆತಾಯಿಯನ್ನ ಸನ್ಮಾನಿಸ್ತೀರಿ’ ಅಂತ ನಡೆ ನುಡಿಯಲ್ಲಿ ತೋರಿಸಿ. (ಎಫೆಸ 6:2, 3) ಇಷ್ಟೆಲ್ಲಾ ಮಾಡ್ದಾಗ ಅವ್ರು ನಿಮ್ಮ ಮಾತು ಕೇಳ್ತಾರಾ? ಕೇಳ್ಬಹುದು, ಕೇಳ್ದೇ ಇರಬಹುದು. ಆದ್ರೆ ನೀವು ಮಾತ್ರ ತಪ್ಪದೇ ಏನ್ಮಾಡಬೇಕಂದ್ರೆ . . .

ಅಪ್ಪಅಮ್ಮ ಮಾಡೋ ತೀರ್ಮಾನವನ್ನ ಮನಸಾರೆ ಒಪ್ಕೊಳಿ. ಮುಂದೆ ಅವ್ರು ನಿಮಗೆ ಜಾಸ್ತಿ ಸ್ವಾತಂತ್ರ್ಯ ಕೊಡ್ಬೇಕಂದ್ರೆ ಈಗ ನೀವು ಅವರ ತೀರ್ಮಾನವನ್ನ ಒಪ್ಕೊಳ್ಳೇ ಬೇಕು. ಅದ್ಬಿಟ್ಟು, ಕೇಳಿದ್ದನ್ನ ಅವ್ರು ನಿಮಗೆ ಕೊಟ್ಟಿಲ್ಲ ಅಂತ ಅವ್ರ ಜೊತೆ ಈಗ ವಾದ ಮಾಡಿದ್ರೆ, ಮುಂದಿನ್ಸಾರಿ ನೀವು ಅವರನ್ನ ಒಪ್ಸೋದು ಇನ್ನೂ ಕಷ್ಟ ಆಗುತ್ತೆ.