ಯುವಜನರ ಪ್ರಶ್ನೆಗಳು
ಯಾಕೆ ಪ್ರಾಮಾಣಿಕರಾಗಿರಬೇಕು?
ಕೆಲವರು ಯಾಕೆ ಪ್ರಾಮಾಣಿಕರಾಗಿರಲ್ಲ
‘ಪ್ರಾಮಾಣಿಕರಾಗಿದ್ರೆ ಏನೂ ಪ್ರಯೋಜನ ಇಲ್ಲ’ ಅಂತ ಇವತ್ತು ಜನ ಅಂದ್ಕೊಳ್ತಾರೆ. ಅದಕ್ಕೆ ಹೀಗೆ ಹೇಳ್ತಾರೆ:
‘ನಾನು ಅಪ್ಪಅಮ್ಮಂಗೆ ಸುಳ್ಳು ಹೇಳಿಲ್ಲ ಅಂದ್ರೆ, ಅವರು ನಂಗೆ ಪನಿಷ್ಮೆಂಟ್ ಕೊಡ್ತಾರೆ.’
‘ನಾನು ಈ ಟೆಸ್ಟ್‌ನಲ್ಲಿ ಕಾಪಿ ಹೊಡಿಲಿಲ್ಲ ಅಂದ್ರೆ, ಫೇಲ್ ಆಗ್ಬಿಡ್ತೀನಿ.’
‘ನಾನು ಈ ವಸ್ತುನ ಕದಿಲಿಲ್ಲ ಅಂದ್ರೆ, ಅದಕ್ಕೋಸ್ಕರ ದುಡ್ಡು ಸೇವ್ ಮಾಡೋಕೆ ಕಾಯಬೇಕಾಗುತ್ತೆ.’
‘ಇದ್ರಲ್ಲಿ ಏನು ತಪ್ಪಿದೆ? ಇವತ್ತು ಎಲ್ರೂ ಮೋಸ ಮಾಡ್ತಾರೆ ಅಲ್ವಾ?’ ಅಂತ ಕೆಲವರು ಹೇಳಬಹುದು.
ಆದ್ರೆ ಇದು ನಿಜ ಅಲ್ಲ. ಇವತ್ತು ತುಂಬ ಜನ ಪ್ರಾಮಾಣಿಕರಾಗೂ ಇದ್ದಾರೆ. ‘ಪ್ರಾಮಾಣಿಕತೆ ತೋರಿಸಿದ್ರೆ ಒಳ್ಳೇದಾಗುತ್ತೆ’ ಅಂತ ತುಂಬ ಯುವಜನ್ರೂ ನಂಬ್ತಾರೆ. “ಒಬ್ಬನು ಏನು ಬಿತ್ತುತ್ತಾನೋ ಅದನ್ನೇ ಕೊಯ್ತಾನೆ” ಅಂತ ಬೈಬಲ್ ಹೇಳುತ್ತೆ. (ಗಲಾತ್ಯ 6:7) ಅಂದ್ರೆ, ನಾವು ಒಳ್ಳೇದು ಮಾಡಿದ್ರೆ ನಮಗೆ ಒಳ್ಳೇದಾಗುತ್ತೆ, ಕೆಟ್ಟದು ಮಾಡಿದ್ರೆ ಅದ್ರಿಂದ ತುಂಬ ತೊಂದ್ರೆ ಎದುರಿಸಬೇಕಾಗುತ್ತೆ.
ಉದಾಹರಣೆಗೆ, ಸುಳ್ಳು ಹೇಳಿದ್ರಿಂದ ತಮಗೆ ಏನೆಲ್ಲಾ ತೊಂದ್ರೆ ಆಗಿದೆ ಅಂತ ಕೆಲವು ಯುವಕರು ಹೇಳೋದನ್ನ ಕೇಳಿ.
“ನಾನು ಯಾವ ಹುಡುಗನ ಜೊತೆನೂ ಮಾತಾಡಿಲ್ಲ ಅಂತ ಅಮ್ಮನಿಗೆ ಸುಳ್ಳು ಹೇಳಿದೆ. ಆದ್ರೆ ಅದು ಸುಳ್ಳು ಅಂತ ಅಮ್ಮನಿಗೆ ಮೊದ್ಲೇ ಗೊತ್ತಿತ್ತು. ಇದೇ ತರ ಮೂರು ಸಲ ಸುಳ್ಳು ಹೇಳಿದೆ. ಆಗ ಅಮ್ಮನಿಗೆ ತುಂಬ ಕೋಪ ಬಂತು. ಅದಕ್ಕೆ ಅವರು ನನ್ನನ್ನ, ಎರಡು ವಾರ ಎಲ್ಲೂ ಹೋಗೋಕೆ, ಫೋನ್ ಮತ್ತು ಟಿವಿ ನೋಡೋಕೆ ಬಿಡ್ಲಿಲ್ಲ. ಅವತ್ತಿಂದ ನಾನು ಅವ್ರಿಗೆ ಸುಳ್ಳು ಹೇಳೋದನ್ನ ಬಿಟ್ಟುಬಿಟ್ಟೆ.”—ಅನಿಟಾ.
ಸ್ವಲ್ಪ ಯೋಚಿಸಿ: ಮತ್ತೆ ಅಮ್ಮನ ನಂಬಿಕೆ ಗಳಿಸೋಕೆ ಅನಿಟಾಗೆ ಯಾಕೆ ತುಂಬ ಟೈಮ್ ಬೇಕಾಗುತ್ತೆ?
ಬೈಬಲ್ ಹೇಳೋ ಮಾತು: “ನೀವೀಗ ಮೋಸ ಮಾಡೋದನ್ನ ಬಿಟ್ಟಿರೋದ್ರಿಂದ ಒಬ್ರು ಇನ್ನೊಬ್ರ ಹತ್ರ ಸತ್ಯಾನೇ ಹೇಳಿ.”—ಎಫೆಸ 4:25.
“ನಾನು ಅಪ್ಪಅಮ್ಮನಿಗೆ ಒಂದು ಸುಳ್ಳು ಹೇಳಿ ಒಂದ್ಸಲ ಅವ್ರ ಕೈಯಿಂದ ತಪ್ಪಿಸ್ಕೊಂಡೆ. ಆದ್ರೆ ಸ್ವಲ್ಪ ದಿನ ಆದ್ಮೇಲೆ ಮತ್ತೆ ಆ ವಿಷ್ಯದ ಬಗ್ಗೆ ಅವರು ನನ್ನನ್ನ ಕೇಳಿದ್ರು. ಆದ್ರೆ ಅವ್ರಿಗೆ ನಾನು ಮೊದಲು ಏನ್ ಸುಳ್ಳು ಹೇಳಿದ್ದೇ ಅನ್ನೋದು ನನಗೇ ನೆನಪಿರಲಿಲ್ಲ. ಅವರು ಮೊದಲನೇ ಸಲ ಕೇಳಿದಾಗಲೇ ನಾನು ಸತ್ಯ ಹೇಳಿದಿದ್ರೆ ನಂಗೆ ಈ ಪರಿಸ್ಥಿತಿ ಬರ್ತಿರಲಿಲ್ಲ.”—ಆ್ಯಂಟನಿ.
ಸ್ವಲ್ಪ ಯೋಚಿಸಿ: ಆ್ಯಂಟನಿಗೆ ಈ ಪರಿಸ್ಥಿತಿ ಬರಬಾರದಿತ್ತು ಅಂದ್ರೆ ಅವನು ಏನು ಮಾಡಬೇಕಿತ್ತು?
ಬೈಬಲ್ ಹೇಳೋ ಮಾತು: “ಸುಳ್ಳು ಹೇಳೋ ನಾಲಿಗೆ ಯೆಹೋವನಿಗೆ ಅಸಹ್ಯ, ನಂಬಿಗಸ್ತರನ್ನ ನೋಡಿದ್ರೆ ಆತನಿಗೆ ಖುಷಿ.”—ಜ್ಞಾನೋಕ್ತಿ 12:22.
“ನಂಗೆ ಒಬ್ಬ ಫ್ರೆಂಡ್ ಇದ್ದಾಳೆ. ಅವಳು ಬಣ್ಣ ಹಚ್ಚಿ ತುಂಬ ಚೆನ್ನಾಗಿ ಮಾತಾಡ್ತಾಳೆ. ಚಿಕ್ಕ ವಿಷ್ಯನ ದೊಡ್ಡದು ಮಾಡಿ ಹೇಳ್ತಾಳೆ. ನಂಗೆ ಅವಳಂದ್ರೆ ಇಷ್ಟ, ಆದ್ರೆ ಅವಳು ಹೇಳ್ತಿರೋದು ನಿಜನಾ ಇಲ್ಲವಾ ಅಂತ ನಾನು ಜಾಸ್ತಿ ತಲೆ ಕೆಡಿಸ್ಕೊಳ್ಳಲ್ಲ. ಅವಳನ್ನ, ಅವಳು ಹೇಳೋ ವಿಷ್ಯನ ನಂಬೋಕೆ ನಂಗೆ ಕಷ್ಟ ಆಗುತ್ತೆ.”—ಇವಾನಿ.
ಸ್ವಲ್ಪ ಯೋಚಿಸಿ: ಇವಾನಿ ಫ್ರೆಂಡ್ ‘ಚಿಕ್ಕ ಪುಟ್ಟ’ ಸುಳ್ಳು ಹೇಳ್ತಾಳೆ, ಬಣ್ಣ ಹಚ್ಚಿ ಮಾತಾಡ್ತಾಳೆ. ಇದ್ರಿಂದ ಇವಾನಿ ಫ್ರೆಂಡಿಗೆ ಗೌರವ ಸಿಗುತ್ತಾ?
ಬೈಬಲ್ ಹೇಳೋ ಮಾತು: “ಎಲ್ಲ ವಿಷ್ಯದಲ್ಲೂ ಪ್ರಾಮಾಣಿಕವಾಗಿ ಇರೋಕೆ ಬಯಸ್ತೀವಿ.”—ಇಬ್ರಿಯ 13:18.
ಅಡಿಪಾಯ ಬಿರುಕು ಬಿಟ್ರೆ ಇಡೀ ಬಿಲ್ಡಿಂಗ್ ವೀಕ್ ಆಗುತ್ತೆ. ಅದೇ ತರ ಸುಳ್ಳು ಹೇಳ್ಕೊಂಡು ಜೀವನ ಮಾಡ್ತಿದ್ರೆ ನಮ್ಮ ಮರ್ಯಾದೆ ಹಾಳಾಗಿ ಹೋಗುತ್ತೆ
ಪ್ರಾಮಾಣಿಕರಾಗಿದ್ರೆ ಏನು ಪ್ರಯೋಜನ
ಪ್ರಾಮಾಣಿಕರಾಗಿದ್ರೆ ಏನೆಲ್ಲಾ ಒಳ್ಳೇದಾಗುತ್ತೆ ಅಂತ ಈಗ ನೋಡೋಣ.
“ನನ್ನ ಮುಂದೆ ಹೋಗ್ತಿದ್ದ ಸ್ತ್ರೀ ಗೊತ್ತಿಲ್ಲದೇ ಕೆಳಗೆ ದುಡ್ಡು ಬೀಳಿಸ್ಕೊಂಡು ಬಿಟ್ರು. ನಾನು ಅವ್ರನ್ನ ಕರೆದು ಅದನ್ನ ಎತ್ತಿ ಕೊಟ್ಟೆ. ಅವ್ರಿಗೆ ತುಂಬ ಖುಷಿ ಆಯ್ತು. ಅವರು ನನಗೆ, ‘ತುಂಬ ಥ್ಯಾಂಕ್ಸ್, ನಿಮ್ಮಂಥ ಪ್ರಾಮಾಣಿಕ ಜನ್ರು ತುಂಬ ಕಮ್ಮಿ’ ಅಂತ ಹೇಳಿ ನನ್ನನ್ನ ಮೆಚ್ಕೊಂಡ್ರು. ಇದ್ರಿಂದ ನಂಗೆ ತುಂಬ ಖುಷಿ ಆಯ್ತು.”—ವಿವಿಯನ್.
ಸ್ವಲ್ಪ ಯೋಚಿಸಿ: ವಿವಿಯನ್ ಪ್ರಾಮಾಣಿಕತೆ ನೋಡಿ ಆ ಸ್ತ್ರೀಗೆ ಯಾಕೆ ಆಶ್ಚರ್ಯ ಆಗಿರುತ್ತೆ? ಪ್ರಾಮಾಣಿಕತೆ ತೋರಿಸಿದ್ರಿಂದ ವಿವಿಯನ್‌ಗೆ ಏನು ಪ್ರಯೋಜನ ಆಯ್ತು?
ಬೈಬಲ್ ಹೇಳೋ ಮಾತು: “ಯಾವಾಗ್ಲೂ ಸರಿಯಾಗಿ ಇರೋದನ್ನೇ ಮಾಡೋರು ಭಾಗ್ಯವಂತರು.”—ಕೀರ್ತನೆ 106:3.
“ನಮ್ಮ ಕುಟುಂಬದಲ್ಲಿ ಎಲ್ಲರು ಹೌಸ್ ಕೀಪಿಂಗ್ ಕೆಲಸ ಮಾಡ್ತೀವಿ. ಕೆಲವೊಂದು ಸಲ ಆಫೀಸ್ ಕ್ಲೀನ್ ಮಾಡುವಾಗ ಚಿಲ್ಲರೆ ಬಿದ್ದಿರುತ್ತೆ. ಅದನ್ನ ತಕ್ಷಣ ಟೇಬಲ್ ಮೇಲೆ ಎತ್ತಿಡ್ತೀವಿ. ಇದನ್ನ ಗಮನಿಸಿದ ಎಂಪ್ಲಾಯೀ, ‘ಅದು ಚಿಕ್ಕ ಕಾಯಿನ್ ತಾನೇ ಅದ್ರಲ್ಲಿ ಏನಿದೆ’ ಅಂತ ಸ್ವಲ್ಪ ರೇಗಿದ್ರು. ಆದ್ರೆ ನಿಮಗೆ ಗೊತ್ತಾ? ನಮ್ಮ ನಿಯತ್ತು ನೋಡಿ ಆಕೆ ನಮ್ಮ ಮೇಲೆ ಯಾವಾಗ್ಲೂ ತುಂಬ ನಂಬಿಕೆ ಇಟ್ಟಿದ್ದಾಳೆ.”—ಜೂಲಿಯಾ.
ಸ್ವಲ್ಪ ಯೋಚಿಸಿ: ಜೂಲಿಯ ಕೆಲಸದ ಹತ್ರ ಒಳ್ಳೇ ಹೆಸ್ರು ಮಾಡಿದ್ದಾಳೆ. ಒಂದುವೇಳೆ ಅವಳು ಕೆಲಸ ಬದಲಾಯಿಸಬೇಕಾದ್ರೆ ಇವಳ ಬಗ್ಗೆ ಈ ಕಂಪನಿಯವರು ಏನು ರಿಪೋರ್ಟ್ ಕೊಡಬಹುದು?
ಬೈಬಲ್ ಹೇಳೋ ಮಾತು: “ದೇವರು ಮೆಚ್ಚಿದ ಸೇವಕನಾಗೋಕೆ, ಹುಡುಕಿದ್ರೂ ತಪ್ಪು ಸಿಗದ ಒಳ್ಳೇ ಕೆಲಸಗಾರನಾಗೋಕೆ, . . . ನಿನ್ನಿಂದ ಆಗೋದನ್ನೆಲ್ಲ ಮಾಡು.”—2 ತಿಮೊತಿ 2:15.
“ನಾನು 64 ಗಂಟೆ ಕೆಲಸ ಮಾಡಿದ್ದೆ. ಆದ್ರೆ ನಂಗೆ 80 ಗಂಟೆ ಕೆಲಸದ ಸಂಬಳ ಸಿಕ್ತು. ‘ಇರಲಿ ಬಿಡು’ ಅಂತ ನಾನು ಸುಮ್ಮನೇ ಇರಬಹುದಿತ್ತು. ಆದ್ರೆ ನಾನು ಆ ತರ ಮಾಡಲಿಲ್ಲ. ನನ್ಗೆ ಜಾಸ್ತಿ ಸಂಬಳ ಬಂದಿದೆ ಅಂತ ಮ್ಯಾನೇಜರ್ ಹತ್ರ ಹೋಗಿ ಹೇಳ್ದೆ. ನಾನು ಈ ತರ ಪ್ರಾಮಾಣಿಕವಾಗಿ ಇದ್ದಿದ್ದನ್ನ ನೋಡಿ ಅವರು ಖುಷಿ ಪಟ್ರು. ‘ನಮ್ಮದು ಹೇಗಿದ್ರೂ ದೊಡ್ಡ ಕಂಪನಿ, ಒಳ್ಳೇ ಲಾಭ ಬರುತ್ತೆ ಅಂತ ನಾನು ಆ ದುಡ್ಡನ್ನ ಇಟ್ಕೊಂಡು ಬಿಟ್ರೆ ಕಳ್ಳತನ ಮಾಡಿದ ಹಾಗೆ ಇರ್ತಿತ್ತು.’”—ಬೆಥನಿ.
ಸ್ವಲ್ಪ ಯೋಚಿಸಿ: ಕಂಪನಿ ಹತ್ರ ಕದ್ರೂ ಅಥವಾ ಒಬ್ಬ ವ್ಯಕ್ತಿ ಹತ್ರ ಕದ್ರೂ, ಅದು ಕಳ್ಳತನನೇ ಅಲ್ವಾ?
ಬೈಬಲ್ ಹೇಳೋ ಮಾತು: “ಯೆಹೋವ ಮೋಸಗಾರನನ್ನ ಇಷ್ಟಪಡಲ್ಲ, ಆದ್ರೆ ಆತನು ಪ್ರಾಮಾಣಿಕನ ಆಪ್ತ ಸ್ನೇಹಿತ.”—ಜ್ಞಾನೋಕ್ತಿ 3:32.