ಯುವಜನರ ಪ್ರಶ್ನೆಗಳು
ಅಪ್ಪ-ಅಮ್ಮ ಯಾಕೆ ಯಾವಾಗ್ಲೂ ನನ್ ಮೇಲೆ ಕಣ್ಣಿಟ್ಟಿರ್ತಾರೆ?
ಅಪ್ಪ-ಅಮ್ಮ ಯಾಕೆ ಎಲ್ಲದಕ್ಕೂ ಪ್ರಶ್ನೆ ಕೇಳ್ತಾರೆ?
“ನಿಮ್ಮ ಮೇಲೆ ಪ್ರೀತಿ ಇರೋದಕ್ಕೆ” ಅಂತ ಅವರು ಹೇಳ್ತಾರೆ. ಆದ್ರೆ ನಿಮಗೆ, ನೀವು ಸಿಸಿ ಕ್ಯಾಮೆರಾದ ಕೆಳಗಿರೋ ತರ ಅನ್ಸುತ್ತೆ. ಉದಾಹರಣೆಗೆ:
“ನಮ್ಮಪ್ಪ ನನ್ ಫೋನ್ ತಗೊಂಡು, ‘ಪಾಸ್‌ವರ್ಡ್ ಏನು’ ಅಂತ ಕೇಳ್ತಾರೆ. ನನ್ ಮೆಸೆಜ್‌ನೆಲ್ಲ ಓದ್ತಾರೆ. ನಾನು ಅವ್ರ ಕೈಗೆ ಫೋನ್ ಕೊಡ್ಲಿಲ್ಲಾಂದ್ರೆ ನಾನೇನೋ ಮುಚ್ಚಿಡ್ತಿದ್ದೀನಿ ಅಂದ್ಕೊಳ್ತಾರೆ” ಅಂತ ಎರಿನ್ ಅನ್ನೋ ಹುಡುಗಿ ಹೇಳ್ತಾಳೆ.
ಡೆನಿಸ್ ಅನ್ನೋ ಯುವತಿ ಏನ್ ಹೇಳ್ತಾಳೆ ನೋಡಿ: “ನಮ್ಮಮ್ಮ ನನ್ ಫೋನ್ ಬಿಲ್ ಹಿಡ್ಕೊಂಡು, ಎಲ್ಲಾ ನಂಬರ್‌ಗಳನ್ನ ನೋಡಿ ‘ಈ ನಂಬರ್ ಯಾರದು? ಅವ್ರ ಹತ್ರ ಏನ್ ಮಾತಾಡ್ದೆ?’ ಅಂತ ಸಿಕ್ಕಾಪಟ್ಟೆ ಪ್ರಶ್ನೆಗಳನ್ನ ಕೇಳ್ತಿದ್ರು.”
ಕೇಲಾ ಅನ್ನೋ ಹುಡುಗಿ ಅವ್ರ ಅಮ್ಮ ಅವಳ ಪರ್ಸನಲ್ ಡೈರಿನ ಓದಿದ್ರ ಬಗ್ಗೆ ಹೀಗೆ ಹೇಳ್ತಾಳೆ: “ಅದ್ರಲ್ಲಿ ನನಗೆ ಅನಿಸಿದ್ದನ್ನೆಲ್ಲ ಬರೆದಿದ್ದೆ, ನಮ್ಮಮ್ಮನ ಬಗ್ಗೆನೂ ಬರೆದಿದ್ದೆ! ಅವರು ಹಾಗೆ ಮಾಡಿದ ಮೇಲೆ ಡೈರಿ ಬರಿಯೋದನ್ನೇ ನಿಲ್ಲಿಸಿಬಿಟ್ಟೆ.”
ನೆನಪಿಡಿ: ನಿಮ್ಮನ್ನ ಚೆನ್ನಾಗಿ ನೋಡ್ಕೊಳ್ಳೋ ಜವಾಬ್ದಾರಿ ನಿಮ್ಮ ಅಪ್ಪ-ಅಮ್ಮಂಗಿದೆ. ಅವರು ಆ ಜವಾಬ್ದಾರಿನ ಹೇಗೆ ಮಾಡಬೇಕು ಅಂತ ನೀವು ಹೇಳಕ್ಕಾಗಲ್ಲ. ಅವರು ಕೆಲವೊಮ್ಮೆ ತುಂಬ ಕಟ್ಟುನಿಟ್ಟು ಮಾಡ್ತಾರೆ ಅಂತ ನಿಮಗೆ ಅನಿಸಬಹುದು. ಆದ್ರೆ ಖುಷಿ ವಿಷ್ಯ ಏನ್ ಗೊತ್ತಾ? ನಿಮಗೆ ಹಾಗೆ ಅನಿಸದೇ ಇರೋಕೆ ನೀವು ಕೆಲವು ವಿಷ್ಯಗಳನ್ನ ಮಾಡಬಹುದು.
ನೀವೇನು ಮಾಡಬಹುದು?
ಏನೂ ಮುಚ್ಚಿಡಬೇಡಿ. ‘ಎಲ್ಲ ವಿಷ್ಯದಲ್ಲೂ ಪ್ರಾಮಾಣಿಕವಾಗಿ ಇರಿ’ ಅಂತ ಬೈಬಲ್ ಹೇಳುತ್ತೆ. (ಇಬ್ರಿಯ 13:18) ನಿಮ್ಮ ಅಪ್ಪ-ಅಮ್ಮನ ಜೊತೆ ಹಾಗಿರೋಕೆ ಪ್ರಯತ್ನ ಮಾಡಿ. ನೀವು ಅವ್ರ ಹತ್ರ ಏನೂ ಮುಚ್ಚಿಡದೆ ಎಲ್ಲ ಹೇಳ್ಕೊಳ್ಳಿ. ನೀವು ಅವ್ರ ಜೊತೆ ಎಷ್ಟು ಪ್ರಾಮಾಣಿಕವಾಗಿ ಇರ್ತಿರೋ ಅವರು ನಿಮ್ಮನ್ನ ಅಷ್ಟು ನಂಬ್ತಾರೆ. ಯಾವಾಗ್ಲೂ ನಿಮ್ಮ ಬೆನ್ನ ಹಿಂದೆನೇ ಇರಲ್ಲ.
ಯೋಚ್ನೆ ಮಾಡಿ: ಅಪ್ಪ-ಅಮ್ಮನ ಹತ್ರ ನೀವೆಷ್ಟು ನಂಬಿಕೆ ಸಂಪಾದಿಸಿದ್ದೀರಾ? ಅವರು ಬೇಡ ಅಂದಿದ್ದನ್ನ ಮಾಡದೇ ಇರ್ತೀರಾ? ನಿಮ್ ಫ್ರೆಂಡ್ಸ್ ಯಾರು ಅಂತ ಅವ್ರಿಗೆ ಹೇಳಿದ್ದೀರಾ? ಎಲ್ಲಿಗೆ ಹೋಗ್ತೀರ, ಏನ್ ಮಾಡ್ತೀರ ಅಂತ ನಿಮ್ ಅಪ್ಪ-ಅಮ್ಮ ಹತ್ರ ಸರಿಯಾಗಿ ಹೇಳ್ತೀರಾ?
ನಾನೇನೂ ಮುಚ್ಚಿಡದೇ ಅವರು ಕೇಳಿದ್ದಕ್ಕೆಲ್ಲ ಉತ್ರ ಕೊಡ್ತೀನಿ. ಇದ್ರಿಂದ ಅವ್ರಿಗೆ ನನ್ನ ಮೇಲೆ ನಂಬಿಕೆ ಬಂದಿದೆ. ಅದಕ್ಕೆ ಅವರು ಯಾವಾಗ್ಲೂ ನನ್ ಹಿಂದೆನೇ ಇರಲ್ಲ. ಈಗ ಅವರೂ ಖುಷಿಯಾಗಿದ್ದಾರೆ, ನಾನೂ ಖುಷಿಯಾಗಿದ್ದೀನಿ.”—ಡೆಲೀಯ.
ತಾಳ್ಮೆ ತೋರಿಸಿ. “ನೀವು ಯಾವಾಗ್ಲೂ ಚೆನ್ನಾಗಿ ನಡ್ಕೊಳ್ಳಿ” ಅಂತ ಬೈಬಲ್ ಹೇಳುತ್ತೆ. (1 ಪೇತ್ರ 2:12) ಅಪ್ಪ-ಅಮ್ಮ ನಿಮ್ಮನ್ನ ನಂಬಬೇಕಂದ್ರೆ ನೀವು ಒಂದುಸಲ ಚೆನ್ನಾಗಿ ನಡ್ಕೊಂಡ್ರೆ ಸಾಕಾಗಲ್ಲ, ಯಾವಾಗ್ಲೂ ಚೆನ್ನಾಗಿ ನಡ್ಕೊಳ್ಳಬೇಕು. ನಂಬಿಕೆ ಗಳಿಸೋಕೆ ಸಮಯ ಹಿಡಿಯುತ್ತೆ. ಆದ್ರೆ ಅದನ್ನ ಗಳಿಸೋಕೆ ನೀವು ಹಾಕೋ ಪ್ರಯತ್ನ ಅಂತೂ ವೇಸ್ಟ್ ಆಗಲ್ಲ.
ಯೋಚ್ನೆ ಮಾಡಿ: ನಿಮ್ಮ ಅಪ್ಪ-ಅಮ್ಮನೂ ನಿಮ್ಮ ವಯಸ್ಸು ದಾಟಿ ಬಂದಿದ್ದಾರೆ ಅನ್ನೋದನ್ನ ಮರೀಬೇಡಿ. ಆಗ ಯಾಕೆ ಅವರು ಯಾವಾಗ್ಲೂ ನಿಮ್ಮ ಮೇಲೆ ಕಣ್ಣಿಟ್ಟಿರ್ತಾರೆ ಅಂತ ನಿಮಗೆ ಗೊತ್ತಾಗುತ್ತೆ.
“ಅವರು ಯುವಕರಾಗಿದ್ದಾಗ ಮಾಡಿದ್ದ ತಪ್ಪನ್ನ ನಾವು ಮಾಡಬಾರದು ಅಂತ ಅಪ್ಪ-ಅಮ್ಮ ಇಷ್ಟಪಡ್ತಾರೆ.”—ಡ್ಯಾನಿಯೆಲ್.
ಅರ್ಥಮಾಡ್ಕೊಳ್ಳಿ. ನೀವು ನಿಮ್ಮ ಅಪ್ಪ-ಅಮ್ಮನ ಜಾಗದಲ್ಲಿ ನಿಂತು ನೋಡಿ. ಒಬ್ಬ ಒಳ್ಳೇ ಹೆಂಡ್ತಿ “ತನ್ನ ಕುಟುಂಬದವ್ರ ಕೆಲಸಗಳ ಮೇಲೆ ಗಮನ ಇಟ್ಟಿರ್ತಾಳೆ“ ಮತ್ತು ಒಬ್ಬ ಒಳ್ಳೇ ಅಪ್ಪ, ತನ್ನ ಮಕ್ಕಳಿಗೆ ‘ಯೆಹೋವ ಹೇಳೋ ತರಾನೇ ಕಲಿಸ್ತಾ, ತರಬೇತಿ ಕೊಡ್ತಾ ಬೆಳೆಸ್ತಾನೆ’ ಅಂತ ಬೈಬಲ್ ಹೇಳುತ್ತೆ. (ಜ್ಞಾನೋಕ್ತಿ 31:1-27; ಎಫೆಸ 6:4) ಇದನ್ನ ಮಾಡೋದು ಅಷ್ಟು ಸುಲಭ ಅಲ್ಲ, ಅವ್ರಿದನ್ನ ಮಾಡಬೇಕಂದ್ರೆ ನಿಮ್ಮ ಜೀವನದಲ್ಲಿ ಏನು ನಡೀತಿದೆ ಅಂತ ಅವ್ರಿಗೆ ಗೊತ್ತಾಗ್ಲೇಬೇಕು.
ಯೋಚ್ನೆ ಮಾಡಿ: ನೀವೇ ಒಬ್ಬ ಅಪ್ಪ ಅಥವಾ ಅಮ್ಮ ಆಗಿದ್ರೆ, ಹದಿವಯಸ್ಸಿನಲ್ಲಿ ಏನೇನೆಲ್ಲಾ ಆಗುತ್ತೆ ಅಂತ ನಿಮಗೆ ಗೊತ್ತಿದ್ರೂ ನಿಮ್ಮ ಮಕ್ಕಳ ಮೇಲೆ ಕಣ್ಣಿಡದೇ, ಅವ್ರನ್ನ ಅವ್ರಿಗಿಷ್ಟ ಬಂದಂಗೆ ಇರೋಕೆ ಬಿಟ್ಟುಬಿಡ್ತಿದ್ರಾ?
ನಾನೀಗ ದೊಡ್ಡವನಾಗಿದ್ದೀನಿ, ಅಪ್ಪ-ಅಮ್ಮಂಗೆ ನನ್ನ ಮೇಲೆ ಪ್ರೀತಿ ಇದ್ದಿದ್ರಿಂದಾನೇ ಹಾಗೆ ಮಾಡ್ತಿದ್ರು ಅಂತ ನಂಗೀಗ ಅರ್ಥ ಆಗಿದೆ.”—ಜೇಮ್ಸ್.