ಮಾಹಿತಿ ಇರುವಲ್ಲಿ ಹೋಗಲು

ಬೈಬಲ್‌ ಓದೋದ್ರಿಂದ ಏನಾದ್ರೂ ಪ್ರಯೋಜ್ನ ಇದ್ಯಾ?—ಭಾಗ 1: ಬೈಬಲ್‌ ಬಗ್ಗೆ ತಿಳ್ಕೊಳ್ಳಿ

ಬೈಬಲ್‌ ಓದೋದ್ರಿಂದ ಏನಾದ್ರೂ ಪ್ರಯೋಜ್ನ ಇದ್ಯಾ?—ಭಾಗ 1: ಬೈಬಲ್‌ ಬಗ್ಗೆ ತಿಳ್ಕೊಳ್ಳಿ

ಯುವ ಜನರ ಪ್ರಶ್ನೆಗಳು

“ನಾನು ತುಂಬ ಸಲ ಬೈಬಲ್‌ ಓದೋಕೆ ಪ್ರಯತ್ನ ಪಡ್ತೀನಿ, ಆದ್ರೆ ಅದರ ಸೈಜ್‌ ನೋಡಿ ಸುಸ್ತಾಗಿಬಿಡ್ತೀನಿ.”—ಬ್ರಿಯಾನ.

ನಿಮಗೂ ಹೀಗೇ ಅನ್ಸುತ್ತಾ? ಹಾಗಿದ್ರೆ ಈ ಲೇಖನ ಸಹಾಯಮಾಡುತ್ತೆ.

 ಬೈಬಲ್‌ನ ಯಾಕೆ ಓದಬೇಕು?

ಕೆಲವ್ರಿಗೆ ಬೈಬಲ್‌ ಓದೋದು ಬೋರಿಂಗ್‌ ಅನ್ಸುತ್ತೆ. ಯಾಕಂದ್ರೆ, ಅದ್ರಲ್ಲಿ ಸಾವಿರಾರು ಪೇಜ್‌ಗಳು ಇರುತ್ತೆ, ಅಷ್ಟೇನು ಚಿತ್ರಗಳು ಇರಲ್ಲ. ಟೀವಿ, ವಿಡಿಯೋ ನೋಡ್ವಾಗ ಸಿಗೋ ಮಜಾ ಇದ್ರಲ್ಲಿ ಸಿಗಲ್ಲ ಅಂತ ಕೆಲವ್ರು ಬೈಬಲ್‌ ಓದೋಕೆ ಹೋಗಲ್ಲ.

ಸ್ವಲ್ಪ ಯೋಚನೆ ಮಾಡಿ: ಒಂದು ಹಳೇ ಕಾಲದ ನಿಧಿ ಪೆಟ್ಟಿಗೆ ನಿಮಗೆ ಸಿಕ್ಕಿದ್ರೆ ಅದ್ರಲ್ಲಿ ಏನಿದೆ ಅಂತ ನೋಡೋಕೆ ನೀವು ಇಷ್ಟ ಪಡಲ್ವಾ?

ಬೈಬಲ್‌ ಕೂಡ ಒಂದು ನಿಧಿ ತರ. ಅದ್ರಲ್ಲಿ ನಿಮಗೆ ಸಹಾಯ ಮಾಡೋ ವಿವೇಕದ ಮುತ್ತು ರತ್ನಗಳಿವೆ. ಉದಾಹರಣೆಗೆ, ಮುಂದಿನ ಈ ಕೆಲವು ವಿಷ್ಯಗಳಿಗೆ ಅದು ನಿಮ್ಗೆ ಸಹಾಯ ಮಾಡುತ್ತೆ.

 • ಸರಿಯಾದ ನಿರ್ಧಾರಗಳನ್ನ ಮಾಡೋಕೆ

 • ಅಪ್ಪ ಅಮ್ಮನ ಮಾತು ಕೇಳೋಕೆ

 • ಒಳ್ಳೇ ಫ್ರೆಂಡ್ಸ್‌ ಮಾಡ್ಕೊಳ್ಳೋಕೆ

 • ಸಮಸ್ಯೆಗಳನ್ನ ಸರಿಮಾಡೋಕೆ

ಬೈಬಲ್‌ ಹಳೇಕಾಲದ ಪುಸ್ತಕ ಆಗಿದ್ರೂ ಅದ್ರಿಂದ ಈಗಿನ ಕಾಲದ ಜನ್ರಿಗೂ ಪ್ರಯೋಜ್ನ ಆಗುತ್ತಾ? ಖಂಡಿತ ಆಗುತ್ತೆ. ಯಾಕಂದ್ರೆ “ಪವಿತ್ರ ಗ್ರಂಥದಲ್ಲಿರೋ ಎಲ್ಲ ಮಾತುಗಳನ್ನ ದೇವರೇ ಕೊಟ್ಟಿದ್ದು.” (2 ತಿಮೊತಿ 3:16) ಅಂದ್ರೆ ಬೈಬಲಿನಲ್ಲಿರೋ ಒಂದೊಂದು ಮಾತು ದೇವರಿಂದಾನೇ ಬಂದಿರೋದ್ರಿಂದ ಇದಕ್ಕಿಂತ ಉತ್ತಮವಾದ ಸಲಹೆಗಳು ಪ್ರಪಂಚದಲ್ಲಿ ಬೇರೆಲ್ಲೂ ಸಿಗಲ್ಲ.

ವಿವೇಕದ ಮುತ್ತುರತ್ನಗಳಿರೋ ನಿಧಿನೇ ಬೈಬಲ್‌

 ನಾನು ಬೈಬಲ್‌ನ ಹೇಗೆ ಓದಬೇಕು?

ಪ್ರಾರಂಭದಿಂದ ಕೊನೇವರೆಗೂ ಓದಿ. ಹೀಗೆ ಓದೋದ್ರಿಂದ ಬೈಬಲ್‌ನಲ್ಲಿ ಏನಿದೆ ಅಂತ ಚೆನ್ನಾಗಿ ಅರ್ಥ ಆಗುತ್ತೆ. ಈ ತರ ಓದೋದಿಕ್ಕೆ ತುಂಬ ವಿಧಾನಗಳಿವೆ. ಅದ್ರಲ್ಲಿ ಎರಡನ್ನ ನಾವೀಗ ನೋಡೋಣ.

 •  ಬೈಬಲಿನಲ್ಲಿ 66 ಪುಸ್ತಕಗಳಿವೆ. ಆರಂಭದ ಪುಸ್ತಕ ಆದಿಕಾಂಡದಿಂದ ಕೊನೇ ಪುಸ್ತಕ ಪ್ರಕಟನೆವರೆಗೂ ಒಂದೊಂದಾಗಿ ಓದಬಹುದು.

 •  ಕಾಲಾನುಕ್ರಮಕ್ಕೆ ತಕ್ಕ ಹಾಗೆ ಓದಬಹುದು. ಅಂದ್ರೆ ಘಟನೆಗಳು ನಡೆದ ಕ್ರಮದ ಪ್ರಕಾರ ಓದಬಹುದು.

ಸಲಹೆ: ಹೊಸ ಲೋಕ ಭಾಷಾಂತರದ ಪರಿಶಿಷ್ಟ ಎ7 ರಲ್ಲಿ ಯೇಸುವಿನ ಜೀವನದಲ್ಲಿ ನಡೆದ ಘಟನೆಗಳನ್ನ ಕಾಲಾನುಕ್ರಮದಲ್ಲಿ ಕೊಡಲಾಗಿದೆ. ಅದರ ಪ್ರಕಾರ ನೀವು ಓದಬಹುದು.

ನೀವು ಎದುರಿಸ್ತಿರೋ ಯಾವುದಾದ್ರೂ ಸಮಸ್ಯೆಗಳಿಗೆ ತಕ್ಕ ವೃತ್ತಾಂತವನ್ನ ಓದಬಹುದು. ಉದಾಹರಣೆಗೆ,

 • ಒಳ್ಳೇ ಫ್ರೆಂಡ್ಸ್‌ ಮಾಡಿಕೊಳ್ಳೋದು ಹೇಗಂತ ಗೊತ್ತಾಗಬೇಕಾ? ಯೋನಾತಾನ ಮತ್ತು ದಾವೀದನ ಕಥೆ ಓದಿ. (1 ಸಮುವೇಲ, 18-20 ಅಧ್ಯಾಯಗಳು) “ಹೌ ಟು ಫೈಂಡ್‌ ಲಾಯಲ್‌ ಫ್ರೆಂಡ್ಸ್‌” ಅನ್ನೋ ವರ್ಕ್‌ಶೀಟನ್ನ ಉಪಯೋಗಿಸಿ, ಆ ವೃತ್ತಾಂತದಿಂದ ಯಾವೆಲ್ಲಾ ಪಾಠಗಳನ್ನ ಕಲೀಬಹುದು ಅಂತ ಬರೀರಿ.

 • ತಪ್ಪು ಮಾಡೋ ಒತ್ತಡನಾ ಹೇಗೆ ಜಯಿಸೋದು ಅಂತ ತಿಳ್ಕೊಬೇಕಾ? ಯೋಸೇಫನ ಕಥೆ ಓದಿ. ಅವನು ಹೇಗೆ ಒತ್ತಡನಾ ಜಯಿಸಿದ ಅಂತ ತಿಳ್ಕೊಳ್ಳಿ. (ಆದಿಕಾಂಡ 39 ನೇ ಅಧ್ಯಾಯ) ನಂತರ “ಹೌ ಟು ರೆಸಿಸ್ಟ್‌ ಟೆಂಪ್‌ಟೇಷನ್‌. . .ಜೋಸೆಫ್‌—ಪಾರ್ಟ್‌ 1” ಮತ್ತು “ಫಾಲ್ಸ್‌ಲಿ ಅಕ್ಯೂಸ್ಡ್‌! ಜೋಸೆಫ್‌—ಪಾರ್ಟ್‌ 2” ವರ್ಕ್‌ಶೀಟ್‌ ಉಪಯೋಗಿಸಿ ಪ್ರಾಯೋಗಿಕ ಪಾಠಗಳನ್ನ ಕಲೀರಿ.

 • ಪ್ರಾರ್ಥನೆಯಿಂದ ನಮಗೆ ಹೇಗೆ ಪ್ರಯೋಜನ ಆಗುತ್ತೆ ಅಂತ ತಿಳ್ಕೊಬೇಕಾ? ನೆಹೆಮೀಯನ ಅನುಭವನ ಓದಿ. (ನೆಹೆಮೀಯ 2 ನೇ ಅಧ್ಯಾಯ) ನಂತರ “ಗಾಡ್‌ ಆನ್‌ಸರ್ಡ್‌ ಹಿಸ್‌ ಪ್ರೆಯರ್‌” ಅನ್ನೋ ವರ್ಕ್‌ಶೀಟ್‌ ಉಪಯೋಗಿಸಿ ಅವನ ಅನುಭವದಿಂದ ಪಾಠಗಳನ್ನ ಕಲೀರಿ.

ಸಲಹೆ: ಪ್ರಶಾಂತವಾದ ವಾತಾವರಣದಲ್ಲಿ ಕೂತು ಬೈಬಲ್‌ ಓದಿ. ಆಗ ಚೆನ್ನಾಗಿ ಗಮನ ಕೊಡೋಕೆ ಆಗುತ್ತೆ.

ಯಾವುದಾದರೂ ಒಂದು ವೃತ್ತಾಂತ ಅಥವಾ ಕೀರ್ತನೆಗಳನ್ನ ಓದಿ. ನಂತರ ಅದ್ರಿಂದ ನೀವೇನು ಪಾಠ ಕಲಿಬಹುದು ಅಂತ ನೋಡಿ. ಓದಿದ ಮೇಲೆ ಈ ಕೆಳಗಿನ ಪ್ರಶ್ನೆಗಳನ್ನ ಕೇಳಿಕೊಳ್ಳಿ.

 •  ಯೆಹೋವ ದೇವರು ಇದನ್ನ ಯಾಕೆ ಬೈಬಲಲ್ಲಿ ಬರೆಸಿದ್ರು?

 •  ಇದ್ರಿಂದ ಯೆಹೋವ ದೇವರ ಬಗ್ಗೆ ಅಥವಾ ಆತನು ನಡ್ಕೊಳ್ಳೋ ರೀತಿಯಿಂದ ಏನು ಗೊತ್ತಾಗುತ್ತೆ?

 •  ನನ್ನ ಜೀವನದಲ್ಲಿ ಇದನ್ನ ಹೇಗೆ ಅನ್ವಯ ಮಾಡ್ಕೊಬಹುದು?

ಸಲಹೆ: ಬೈಬಲ್‌ ಓದೋ ಗುರಿಯಿಡಿ. ಯಾವಾಗಿಂದ ಬೈಬಲ್‌ ಓದೋದನ್ನ ಶುರುಮಾಡ್ತೀರ ಅಂತ ಡೇಟ್‌ನ ಬರೆದಿಡಿ.