ಮಾಹಿತಿ ಇರುವಲ್ಲಿ ಹೋಗಲು

ನನ್ನ ಫ್ರೆಂಡ್‌ ನನಗೆ ನೋವು ಮಾಡಿದ್ರೆ ಏನ್‌ ಮಾಡಲಿ?

ನನ್ನ ಫ್ರೆಂಡ್‌ ನನಗೆ ನೋವು ಮಾಡಿದ್ರೆ ಏನ್‌ ಮಾಡಲಿ?

ಯುವ ಜನರ ಪ್ರಶ್ನೆಗಳು

 ನಿಮಗೆ ಏನ್‌ ಗೊತ್ತಿರಬೇಕು?

  • ಎಲ್ಲ ಮಾನವರ ಮಧ್ಯ ಸಮಸ್ಯೆ ಇದ್ದೆ ಇರುತ್ತೆ. ನಿಮ್ಮ ಫ್ರೆಂಡ್‌ ಅಥವಾ ನಿಮ್ಮ ಬೆಸ್ಟ್‌ ಫ್ರೆಂಡ್‌ ಪರಿಪೂರ್ಣರಲ್ಲದ ಕಾರಣ ಅವರ ಮಾತು, ನಡತೆಯಿಂದ ನಿಮಗೆ ನೋವು ಆಗಬಹುದು. ನೀವು ಕೂಡ ಪರಿಪೂರ್ಣರಲ್ಲ. ಹಾಗಾಗಿ ನಿಮ್ಮಿಂದನೂ ಬೇರೆಯವರಿಗೆ ನೋವು ಆಗಿರಬಹುದಲ್ಲಾ?—ಯಾಕೋಬ 3:2.

  • ಇಂಟರನೆಟ್‌ನಿಂದ ನಿಮಗೆ ನೋವಾಗೋ ಸಾಧ್ಯತೆ ಹೆಚ್ಚು. ಉದಾಹರಣೆಗೆ, ಡೇವಿಡ್‌ ಅನ್ನೋ ಹುಡುಗ ಹೀಗೆ ಹೇಳ್ತಾನೆ: “ನೀವು ಆನ್‌ಲೈನ್‌ನಲ್ಲಿ ಇದ್ದಾಗ ನಿಮ್ಮ ಫ್ರೆಂಡ್ಸ್‌ ಎಲ್ಲ ಸೇರಿ ಪಾರ್ಟಿ ಮಾಡ್ತಿರೋ ಫೋಟೋ ನೋಡ್ತಿರಾ. ಆಗ ನನಗೆ ಯಾಕೆ ಕರಿಲಿಲ್ಲ ಅಂತ ಯೋಚನೆ ಮಾಡೋಕೆ ಶುರು ಮಾಡ್ತೀರಾ. ಅಲ್ಲದೆ ಅವರು ನಿಮಗೆ ಮೋಸ ಮಾಡಿದ್ದಾರೆ ಅಂತ ಅಂದ್ಕೊಂಡು ಬೇಜಾರ್‌ ಮಾಡ್ಕೊಳ್ತಿರಾ.”

  • ಸಮಸ್ಯೆಯನ್ನ ಹೇಗೆ ಸರಿಪಡಿಸೋದು ಅಂತ ಕಲಿಯಿರಿ.

 ನೀವೇನು ಮಾಡಬಹುದು?

ನಿಮ್ಮನೇ ಪರೀಕ್ಷಿಸಿಕೊಳ್ಳಿ. ಬೈಬಲ್‌ ಹೀಗೆ ಹೇಳುತ್ತೆ: “ತಟ್ಟಂತ ಕೋಪ ಮಾಡ್ಕೊಬೇಡ. ಯಾಕಂದ್ರೆ ಮೂಗಿನ ತುದಿಯಲ್ಲೇ ಕೋಪ ಇರೋದು ಮೂಢರಿಗೆ.”—ಪ್ರಸಂಗಿ 7:9.

“ಕೆಲವು ಸಲ ನಿಮಗೆ ಯಾವ ವಿಷ್ಯದ ಮೇಲೆ ಬೇಜಾರ್‌ ಆಗಿದೆಯೋ ಅದು ಅಷ್ಟು ದೊಡ್ಡ ವಿಷ್ಯನೇ ಅಲ್ಲ ಅಂತ ನಿಮಗೆ ಆಮೇಲೆ ಗೊತ್ತಾಗುತ್ತೆ.”ಅಲಿಸಾ.

ಸ್ವಲ್ಪ ಯೋಚಿಸಿ: ನೀವು ಯಾವಾಗ್ಲೂ ಅತಿಯಾಗಿ ಯೋಚಿಸ್ತೀರಾ? ಬೇರೆಯವರ ಅಪರಿಪೂರ್ಣತೆಯನ್ನ ಸಹಿಸಿಕೊಳ್ಳೋಕೆ ನೀವು ಕಲಿಯೋಕಾಗುತ್ತಾ?—ಪ್ರಸಂಗಿ 7:21, 22.

ಕ್ಷಮಿಸೋದ್ರಿಂದ ಸಿಗೋ ಪ್ರಯೋಜನಗಳ ಬಗ್ಗೆ ಯೋಚಿಸಿ. ಬೈಬಲ್‌ ಹೀಗೆ ಹೇಳುತ್ತೆ: “ತಪ್ಪನ್ನ ಗಮನಿಸದೆ ಇರೋದು . . . ಗೌರವ ತರುತ್ತೆ.”—ಜ್ಞಾನೋಕ್ತಿ 19:11.

“ನೀವು ತಪ್ಪು ಹೊರಿಸಲು ಕಾರಣ ಇದ್ರು ಮನಸಾರೆ ಕ್ಷಮಿಸಿ. ಅಂದ್ರೆ ಆ ವ್ಯಕ್ತಿಯ ತಪ್ಪನ್ನ ಪದೇ-ಪದೇ ನೆನಪಿಸುತ್ತಾ ಅವರು ಪ್ರತೀ ಸಲ ಕ್ಷಮೆ ಕೇಳೋ ತರ ಮಾಡೋದಲ್ಲ. ನೀವು ಒಂದು ಸಲ ಕ್ಷಮಿಸಿದ್ರೆ ಅಲ್ಲಿಗೆ ಅದು ಮುಗಿತು, ಮತ್ತೆ ಅದನ್ನ ನೆನಪಿಸಿಕೊಳ್ಳಬಾರದು.”ಮಾಲರೀ.

ಸ್ವಲ್ಪ ಯೋಚಿಸಿ: ಈ ವಿಷ್ಯ ಅಷ್ಟು ಗಂಭೀರವಾದದ್ದಾ? ಶಾಂತಿ ಕಾಪಾಡಿಕೊಳ್ಳೋಕೆ ನೀವು ಕ್ಷಮಿಸಬಹುದಾ?—ಕೊಲೊಸ್ಸೆ 3:13.

ಫ್ರೆಂಡ್‌ಶಿಪ್‌ನಲ್ಲಿ ಬರೋ ಸಮಸ್ಯೆಗಳನ್ನ ಆಗಾಗ ನೆನಪಿಸಿಕೊಳ್ಳೋದು ಚಳಿಗಾಲದಲ್ಲಿ ಆಗಾಗ ಬಾಗಿಲನ್ನ ತೆರೆದು ಬೆಚ್ಚಗಿರೋ ರೂಮಲ್ಲಿ ಚಳಿಗಾಳಿ ಒಳಗೆ ಬರುವಂತೆ ಬಿಡೋ ತರ ಇರುತ್ತೆ

ಬೇರೆಯವರ ಬಗ್ಗೆ ಯೋಚಿಸಿ. ಬೈಬಲ್‌ ಹೀಗೆ ಹೇಳುತ್ತೆ: “ನಿಮ್ಮ ಬಗ್ಗೆ ಮಾತ್ರ ಯೋಚಿಸದೆ, ಬೇರೆಯವ್ರ ಬಗ್ಗೆನೂ ಯೋಚ್ನೆ ಮಾಡಿ.”—ಫಿಲಿಪ್ಪಿ 2:4.

“ಫ್ರೆಂಡ್‌ಶಿಪ್‌ನಲ್ಲಿ ಪ್ರೀತಿ, ಗೌರವ ಇದ್ರೆ ಸಮಸ್ಯೆಗಳನ್ನ ಬೇಗನೇ ಪರಿಹಾರ ಮಾಡೋಕೆ ಒಂದು ಬಲವಾದ ಕಾರಣ ಇರುತ್ತೆ. ಫ್ರೆಂಡ್‌ಶಿಪ್‌ ಉಳಿಸಿಕೊಳ್ಳೋಕೆ ನೀವು ಸಮಯ, ಶಕ್ತಿ ಮತ್ತು ಪ್ರಯತ್ನ ಹಾಕಿದ್ದೀರಾ. ಹಾಗಾಗಿ ಅದನ್ನ ಕಳಕೊಳ್ಳೋಕೆ ನೀವು ಬಯಸಲ್ಲ.”­ನಿಕೋಲ್‌.

ಸ್ವಲ್ಪ ಯೋಚಿಸಿ: ಬೇರೆಯವರಲ್ಲಿರೋ ಕೆಲವು ಒಳ್ಳೇ ಗುಣಗಳನ್ನ ಕಂಡುಹಿಡಿಯೋಕೆ ಆಗುತ್ತಾ?—ಫಿಲಿಪ್ಪಿ 2:3.

ಸಾರಾಂಶ: ನೋವಾದಾಗ ಅದನ್ನ ಎದುರಿಸೋಕೆ ಕಲಿಯೋದು ಒಂದು ಕೌಶಲ್ಯವಾಗಿದೆ. ಅದನ್ನ ಕಲಿತರೆ ಮುಂದೆ ದೊಡ್ಡವರಾದಾಗ ನಿಮಗೆ ಸಹಾಯ ಆಗುತ್ತೆ. ಅದನ್ನ ಯಾಕೆ ಈಗಲೇ ಕಲಿಯಬಾರದು?