ಮಾಹಿತಿ ಇರುವಲ್ಲಿ ಹೋಗಲು

ನಾನ್ಯಾಕೆ ಸ್ವಾರಿ ಕೇಳ್ಬೇಕು?

ನಾನ್ಯಾಕೆ ಸ್ವಾರಿ ಕೇಳ್ಬೇಕು?

ಯುವ ಜನರ ಪ್ರಶ್ನೆಗಳು

 ಸಾಮಾನ್ಯವಾಗಿ ಈ ಸಂದರ್ಭಗಳಲ್ಲಿ ನೀವೇನು ಮಾಡ್ತಿರಾ?

 1.  1 ಗಲಾಟೆ ಮಾಡಿದ್ರಿ ಅಂತ ಟೀಚರ್‌ ನಿಮ್ಮನ್ನ ಬೈದ್ರು.

   ಟೀಚರ್‌ ಓವರಾಗಿ ಆಡ್ತಾರೆ ಅಂತ ಅನಿಸಿದ್ರೂ ನೀವು ಅವ್ರಿಗೆ ಸ್ವಾರಿ ಕೇಳ್ತಿರಾ?

 2.  2 ನಿಮ್ಮ ಫ್ರೆಂಡ್‌ ಬಗ್ಗೆ ತಪ್ಪಾಗಿ ಮಾತಾಡಿದ್ರಿ ಅಂತ ಅವಳಿಗೆ ಗೊತ್ತಾಯಿತು.

   ನೀವು ಹೇಳಿದ್ದು ನಿಜ ಅಂತ ನಿಮಗೆ ಗೊತ್ತಿದ್ರೂ ನೀವು ಅವ್ರಿಗೆ ಸ್ವಾರಿ ಕೇಳ್ತಿರಾ?

 3.  3 ನಿಮ್ಮ ಡ್ಯಾಡಿಯಿಂದ ನಿಮಗೇನೋ ಬೇಜಾರ್‌ ಆಯ್ತು, ಹಾಗಂತ ನೀವು ಅವ್ರಿಗೆ ಎದ್ರು ಮಾತಾಡ್ತೀರಾ?

   ಒಂದುವೇಳೆ ಡ್ಯಾಡಿದೇ ತಪ್ಪಿದ್ರು ನೀವು ಅವ್ರಿಗೆ ಸ್ವಾರಿ ಕೇಳ್ತಿರಾ?

 ಈ ಮೂರು ಪ್ರಶ್ನೆಗೂ ಉತ್ರ ಒಂದೇ. ಅದು ಹೌದು. ಆದ್ರೆ ಹಾಗ್ಯಾಕೆ? ನನ್ನ ತಪ್ಪಿಲ್ಲ ಅಂದ್ರು ನಾನ್ಯಾಕೆ ಸ್ವಾರಿ ಕೇಳ್ಬೇಕು?

 ಸ್ವಾರಿ ಯಾಕೆ ಕೇಳ್ಬೇಕು?

 •   ಸ್ವಾರಿ ಕೇಳೋದು ಪ್ರೌಢತೆಯ ಲಕ್ಷಣ. ನೀವು ಹೇಳಿದ ಅಥವಾ ಮಾಡಿದ ವಿಷಯಗಳ ಜವಾಬ್ದಾರಿ ತಗೊಳ್ಳೋದು ಪ್ರೌಢತೆಯ ಲಕ್ಷಣವಾಗಿದೆ. ಹೀಗೆ ಮಾಡಿದ್ರೆ ದೊಡ್ಡವರಾದ ಮೇಲೆ ತೋರಿಸೋ ಗುಣಗಳನ್ನ ಈಗಲೇ ತೋರಿಸಿದಂತೆ ಆಗುತ್ತೆ.

   “ಸ್ವಾರಿ ಕೇಳೋಕೆ, ಬೇರೆಯವರು ಹೇಳೋದನ್ನ ಕೇಳಿಸಿಕೊಳ್ಳೋಕೆ ದೀನತೆ ಮತ್ತು ತಾಳ್ಮೆ ಸಹಾಯ ಮಾಡುತ್ತೆ.”—ರೇಚಲ್‌.

 •   ಸ್ವಾರಿ ಕೇಳೋದ್ರಿಂದ ಶಾಂತಿಯಿಂದ ಇರೋಕೆ ಆಗುತ್ತೆ. ಸ್ವಾರಿ ಕೇಳೋರು ನಾನ್‌ ಸರಿ ಅವರು ತಪ್ಪು ಅಂತ ಪ್ರೂ ಮಾಡೋಕ್ಕೆ ಪ್ರಯತ್ನಿಸದೆ ಶಾಂತಿಯಿಂದ ಇರೋಕೆ ತುಂಬ ಪ್ರಯತ್ನಿಸ್ತಾರೆ.

   “ಕೆಲವೊಮ್ಮ ತಪ್ಪು ನಮ್ಮದಿಲ್ಲದೇ ಇರಬಹುದು, ಆದ್ರೂ ಶಾಂತಿಯಿಂದ ಇರೋದೆ ನಮ್ಮ ಗುರಿಯಾಗಿದೆ. ಕ್ಷಮೆ ಕೇಳೋದ್ರಿಂದ ಫ್ರೆಂಡ್‌ಶಿಪ್‌ ಬೆಳೆಯುತ್ತೆ ಹೊರತು ನಮ್ಮದೇನು ಗಂಟ್‌ ಹೋಗಲ್ಲ.”—ಮಿರಿಯಮ್‌.

 •   ಕ್ಷಮೆ ಕೇಳಿದ್ರೆ ನಿಮಗೆ ಹಾಯಿ ಅನಿಸುತ್ತೆ. ನಿಮ್ಮ ಮಾತು ಅಥವಾ ನಡತೆಯಿಂದ ಇನ್ನೊಬ್ರಿಗೆ ನೋವು ಮಾಡಿದ್ರೆ ನಿಮ್ಮ ಮನಸ್ಸು ಕೊರೆಯುತ್ತಾ ಇರುತ್ತೆ. ಅದೇ ನೀವು ಕ್ಷಮೆ ಕೇಳಿದ್ರೆ ಹೆಗಲ ಮೇಲಿದ್ದ ದೊಡ್ಡ ಹೊರೆಯನ್ನ ಇಳಿಸಿದ ಹಾಗೆ ಅನಿಸುತ್ತೆ. a

   “ಕೆಲವೊಂದು ಸಲ ನನ್ನ ಮಮ್ಮಿ ಅಥವಾ ಡ್ಯಾಡಿ ಜೊತೆ ತುಂಬ ರೂಡ್‌ ಆಗಿ ಮಾತಾಡಿದ್ದೆ. ಹಾಗೆ ನಡಕೊಂಡದಕ್ಕೆ ನನಗೆ ತುಂಬ ಬೇಜಾರ್‌ ಆಗ್ತಿತ್ತು. ಆದ್ರೂ ಕ್ಷಮೆ ಕೇಳೋಕೆ ಕಷ್ಟ ಆಗ್ತಿತ್ತು. ನಾನು ಯಾವಾಗ ಕ್ಷಮೆ ಕೇಳಿದ್ನೊ ಆಗ ಹಾಯಿ ಅನಿಸುತ್ತಿತ್ತು. ಯಾಕೆಂದ್ರೆ ಅದ್ರಿಂದ ಪುನಃ ಕುಟುಂಬದಲ್ಲಿ ಶಾಂತಿ ತುಂಬಿಕೊಳ್ತಿತ್ತು.”—ನಿಯಾ.

  ತಪ್ಪು ಮಾಡಿದೆ ಅನ್ನೋ ಕೊರಗು ದೊಡ್ಡ ಬಂಡೆ ಹಿಡಕೊಂಡ ಹಾಗೆ. ಒಂದು ಸಲ ಕ್ಷಮೆ ಕೇಳಿದ್ರೆ ಆ ಭಾರನ ಮುಂದೆ ಯಾವತ್ತು ಹಿಡ್ಕೊಂಡು ಇರಬೇಕಾಗಿಲ್ಲ

 ಕ್ಷಮೆ ಕೇಳೋದು ಅಷ್ಟು ಸುಲಭನಾ? ಇಲ್ಲ. ಡೆನಾ ಅನ್ನೋ ಹುಡುಗಿ ಮಮ್ಮಿ ಒಟ್ಟಿಗೆ ತುಂಬ ರೂಢಾಗಿ ನಡಕೊಂಡಿದ್ರಿಂದ ತುಂಬ ಸಲ ಸ್ವಾರಿ ಕೇಳಬೇಕಾಗಿ ಬಂತು. ಅವಳು ಹೇಳೋದು “ಸ್ವಾರಿ ಹೇಳೋದು ಅಷ್ಟು ಸುಲಭ ಅಲ್ಲ. ಒಂಥರಾ ಗಂಟಲಲ್ಲಿ ಏನೋ ಸಿಕ್ಕಿ ಹಾಕೊಂಡ ಹಾಗೆ ಅನಿಸುತ್ತಿತ್ತು, ಮಾತೇ ಬರ್ತಿರಿಲಿಲ್ಲ.”

 ಹೇಗೆ ಸ್ವಾರಿ ಕೇಳೋದು?

 •   ನೇರವಾಗಿ ಕ್ಷಮೆ ಕೇಳಿ. ಒಬ್ರ ಹತ್ರ ನೇರವಾಗಿ ಕ್ಷಮೆ ಕೇಳಿದ್ರೆ ನಮ್ಮ ತಪ್ಪು ನಮಗೆ ಅರಿವಾಗಿ ಮನಸಾರೆ ಕ್ಷಮೆ ಕೇಳ್ತಿದ್ದೀವಿ ಅಂತ ಅವರಿಗೆ ಗೊತ್ತಾಗುತ್ತೆ. ಒಂದುವೇಳೆ ನೀವು ಮೆಸೆಜ್‌ನಲ್ಲಿ ಸ್ವಾರಿ ಕೇಳಿದ್ರೆ ಆ ವ್ಯಕ್ತಿ ನಿಮ್ಮನ್ನ ನಂಬಲ್ಲ. ಅಷ್ಟೇ ಅಲ್ಲ ಅಳು ತೋರಿಸೋ ಎಮೋಜಿಯನ್ನ (ಸ್ಮೈಲಿ) ಕಳಿಸಿದ್ರೂ ಅವ್ರಿಗೆ ನಾವು ಮನಸ್ಸಿಂದ ಕ್ಷಮೆ ಕೇಳ್ತಿಲ್ಲ ಅಂತ ಅನಿಸುತ್ತೆ.

   ಕಿವಿಮಾತು: ಒಂದುವೇಳೆ ಕ್ಷಮೆ ಕೇಳೋಕೆ ಆ ವ್ಯಕ್ತಿ ಹತ್ತಿರ ಹೋಗೋಕೆ ಆಗಿಲ್ಲ ಅಂದ್ರೆ ಫೋನ್‌ ಮಾಡಿ ಅಥವಾ ಒಂದು ಕಾರ್ಡ್‌ನಲ್ಲಿ ಬರೆದು ಕಳಿಸಿ. ಏನೇ ಮಾಡಿದ್ರು ನಿಮ್ಮ ಪದಗಳನ್ನ ಯೋಚಿಸಿ ಹೇಳಿ.

   ಬೈಬಲ್‌ ತತ್ವ: “ಶಿಷ್ಟನ ಹೃದಯ ವಿವೇಚಿಸಿ ಉತ್ತರಕೊಡುತ್ತದೆ; ದುಷ್ಟನ ಬಾಯಿ ಕೆಟ್ಟದ್ದನ್ನು ಕಕ್ಕುತ್ತದೆ.”—ಜ್ಞಾನೋಕ್ತಿ 15:28.

 •   ಬೇಗನೇ ಕ್ಷಮೆ ಕೇಳಿ. ಕ್ಷಮೆ ಕೇಳಲು ಎಷ್ಟು ಹೆಚ್ಚು ಸಮಯ ತಗೊಳ್ತಿರೋ ಸಮಸ್ಯೆ ಸಹ ಅಷ್ಟೆ ದೊಡ್ಡದಾಗಿ ಬಿಡುತ್ತೆ. ಯಾರಿಗೆ ನೀವು ನೋವು ಮಾಡಿದ್ದೀರೋ ಅವರೊಟ್ಟಿಗಿನ ನಿಮ್ಮ ಸಂಬಂಧನೂ ಇನ್ನಷ್ಟು ಹಾಳಾಗುತ್ತೆ.

   ಕಿವಿಮಾತು: ಒಂದು ಗುರಿ ಇಡಿ. ಉದಾಹರಣೆಗೆ, ‘ಇವತ್ತೇ ಸ್ವಾರಿ ಕೇಳ್ತಿನಿ.’ ಯಾವಾಗ ನೀವು ಕ್ಷಮೆ ಕೇಳ್ತಿರಾ ಅಂತ ನೀವು ನಿರ್ಣಯ ಮಾಡಿ. ನಿಮ್ಮ ನಿರ್ಣಯದಂತೆ ಕ್ಷಮೆ ಕೇಳಿ.

   ಬೈಬಲ್‌ ತತ್ವ: ‘ಬೇಗನೆ ವಿಷಯಗಳನ್ನು ಇತ್ಯರ್ಥಮಾಡಿಕೊಳ್ಳಿ.’—ಮತ್ತಾಯ 5:25.

 •   ಮನಸಾರೆ ಕ್ಷಮೆ ಕೇಳಿ.ನಿಮಗೆ ಹಾಗೆ ಅನಿಸಿದ್ರೆ ಸ್ವಾರಿ” ಅಂತ ಹೇಳೋದು ಕ್ಷಮೆ ಕೇಳೋ ಸರಿಯಾದ ರೀತಿ ಅಲ್ಲ! ಜೆನಲ್‌ ಅನ್ನೊ ಹುಡುಗಿ ಹೇಳಿದ್ದು “ನೀವು ಮಾಡಿದ ವಿಷಯಕ್ಕೆ ಪೂರ್ತಿ ಜವಾಬ್ದಾರಿಯನ್ನ ನೀವೇ ತಗೊಂಡರೆ ತಪ್ಪು ಮಾಡಿದ ವ್ಯಕ್ತಿಗೆ ನಿಮ್ಮೇಲೆ ಗೌರವ ಹೆಚ್ಚಾಗುತ್ತೆ.”

   ಕಿವಿಮಾತು: ಕಂಡಿಷನ್‌ ಹಾಕಿ ಸ್ವಾರಿ ಕೇಳಬೇಡಿ. “ನೀನು ನಿನ್ನ ತಪ್ಪನ್ನ ಒಪ್ಪಿಕೊಂಡ್ರೆ ನಾನ್‌ ನನ್ನ ತಪ್ಪನ್ನ ಒಪ್ಪಿಕೊಳ್ತೇನೆ” ಅಂತ ಹೇಳ್ಬೇಡಿ.

   ಬೈಬಲ್‌ ತತ್ವ: ‘ಶಾಂತಿಯನ್ನು ಉಂಟುಮಾಡುವ . . . ವಿಷಯಗಳನ್ನು ಬೆನ್ನಟ್ಟೋಣ.’—ರೋಮನ್ನರಿಗೆ 14:19.

a ಬೇರೆಯವರಿಗೆ ಸೇರಿದ ವಸ್ತುವನ್ನ ಅಥವಾ ಬೇರೆ ಯಾವುದನ್ನ ನೀವು ಹಾಳು ಮಾಡಿದ್ರೆ ನೀವು ಸ್ವಾರಿ ಹೇಳೋದು ಮಾತ್ರವಲ್ಲ ಅದರ ನಷ್ಟ ಅಥವಾ ಖರ್ಚನ್ನೂ ಕೊಡಿ.