ಯುವಜನರ ಪ್ರಶ್ನೆಗಳು
ದುಃಖ ತಾಳ್ಕೊಳ್ಳೋಕೆ ಏನು ಮಾಡಬೇಕು?
“ಕಷ್ಟಗಳು ಮನುಷ್ಯರಿಗೆ ಬರದೇ ಮರಗಳಿಗೆ ಬರುತ್ತಾ?” ಅನ್ನೋ ಮಾತು ಕಷ್ಟ ಸಾಮಾನ್ಯ ಅಂತ ಹೇಳುತ್ತೆ. “ವೇಗದ ಓಟಗಾರ ಯಾವಾಗ್ಲೂ ಗೆಲ್ಲಲ್ಲ, ಶೂರರಿಗೆ ಯಾವಾಗ್ಲೂ ಜಯ ಸಿಗಲ್ಲ” ಅಂತ ಬೈಬಲ್ ಕೂಡ ಹೇಳಿದೆ. “ಯಾಕಂದ್ರೆ ನೆನೆಸದ ಸಮ್ಯದಲ್ಲಿ ಅನಿರೀಕ್ಷಿತ ಘಟನೆಗಳು ಎಲ್ರ ಜೀವನದಲ್ಲೂ ನಡೆಯುತ್ತೆ.” (ಪ್ರಸಂಗಿ 9:11) ಯುವಕರಿಗೂ ಈ ಕಷ್ಟಗಳು ಕಟ್ಟಿಟ್ಟ ಬುತ್ತಿನೇ. ದುಃಖ, ನೋವು ಆದಾಗ ಯುವಕರು ಹೇಗೆ ಎದುರಿಸಿದ್ದಾರೆ ಗೊತ್ತಾ? ಒಂದೆರಡು ಉದಾಹರಣೆ ನೋಡೋಣ ಬನ್ನಿ.
ರೆಬೆಕ
ನನಗೆ 14 ವರ್ಷ ಇದ್ದಾಗ ನಮ್ಮ ಅಪ್ಪ ಅಮ್ಮ ಡಿವೋರ್ಸ್ ತಗೊಂಡ್ರು.
ನಮ್ಮ ಅಪ್ಪ ಅಮ್ಮ ಏನೇ ಆದ್ರೂ ಡಿವೋರ್ಸ್ ತಗೊಳ್ಳಲ್ಲ ಅಂತ ಮೊದ್ಲು ಅಂದ್ಕೊಂಡಿದ್ದೆ. ಅಪ್ಪಂಗೆ ಅಮ್ಮನ ಜೊತೆ ಅಡ್ಜಸ್ಟ್ ಆಗೋಕೆ ಸ್ವಲ್ಪ ಟೈಮ್ ಬೇಕಷ್ಟೇ. ಅಪ್ಪಾಗೆ ಅಮ್ಮ ಅಂದ್ರೆ ತುಂಬ ಇಷ್ಟ, ಅವರು ಯಾಕೆ ಅಮ್ಮನ ಬಿಟ್ಟು ಹೋಗ್ತಾರೆ? ನನ್ನನ್ನ ಯಾಕೆ ದೂರ ಮಾಡ್ಕೊತಾರೆ? ಅಂತ ನನ್ನಲ್ಲೇ ಯೋಚಿಸ್ತಿದ್ದೆ.
ನಮ್ಮ ಮನೆಯಲ್ಲಿ ಏನಾಗ್ತಿದೆ ಅಂತ ಬೇರೆಯವ್ರ ಹತ್ರ ಹೇಳ್ಕೊಳೋಕೆ ನಂಗೆ ತುಂಬ ಕಷ್ಟ ಆಗ್ತಿತ್ತು. ಅದನ್ನು ನಾನು ಮರೀಬೇಕು ಅಂತ ಅಂದ್ಕೊಳ್ತಿದ್ದೆ. ಆದ್ರೆ ನಂಗೆ ಒಳಗೊಳಗೇ ಕೋಪ ಬರ್ತಿತ್ತು. ನನ್ನೊಳಗೆ ಏನಾಗ್ತಿದೆ ಅಂತ ನಂಗೇ ಅರ್ಥ ಆಗ್ತಿರ್ಲಿಲ್ಲ. ಆಗ ನನಗೆ ಚಿಂತೆ, ಖಿನ್ನತೆ ಶುರುವಾಯ್ತು, ನಿದ್ದೆ ಹೋಗೋಕೆ ಕಷ್ಟ ಪಡ್ತಿದ್ದೆ.
ಅಮ್ಮನೇ ನನ್ನ ಬೆಸ್ಟ್ ಫ್ರೆಂಡ್, ಆದ್ರೆ ನಂಗೆ 19 ವರ್ಷ ಆದಾಗ ಅವರು ಕ್ಯಾನ್ಸರ್ ಬಂದು ತೀರಿ ಹೋದ್ರು.
ಅಪ್ಪ ಅಮ್ಮನಿಗೆ ಡಿವೋರ್ಸ್ ಆಗಿದ್ದು ಕೇಳಿ ನಾನು ಶಾಕ್ ಆದೆ. ಸ್ವಲ್ಪ ಸಮಯದಲ್ಲೇ ಅಮ್ಮ ತೀರಿ ಹೋದ್ರು, ನಂಗೆ ದಾರಿ ತೋಚಲಿಲ್ಲ. ಆ ನೋವಿನಿಂದ ಹೊರಗೆ ಬರೋಕೆ ನಂಗೆ ಇವತ್ತಿಗೂ ಆಗಿಲ್ಲ. ಅವತ್ತಿಂದ ನಂಗೆ ಸರಿಯಾಗಿ ನಿದ್ದೆ ಮಾಡೋಕೂ ಆಗ್ತಿಲ್ಲ. ಇವತ್ತಿಗೂ ನಂಗೆ ಆ ಚಿಂತೆಯಿಂದ ಹೊರಗೆ ಬರೋಕೆ ಆಗ್ತಿಲ್ಲ.
ಆದ್ರೆ ನನ್ನ ಪರಿಸ್ಥಿತಿನ ನಿಭಾಯಿಸೋಕೆ ಕೆಲವು ಸಲಹೆಗಳು ಸಹಾಯ ಮಾಡಿವೆ. ಉದಾಹರಣೆಗೆ, ಜ್ಞಾನೋಕ್ತಿ 18:1ರಲ್ಲಿ ಜನರಿಂದ ದೂರ ಇರಬಾರದು ಅನ್ನೋ ಸಲಹೆ ಇದೆ. ಈ ಸಲಹೆನ ಫಾಲೋ ಮಾಡೋಕೆ ನಾನು ನನ್ನ ಕೈಲಾದ ಪ್ರಯತ್ನ ಮಾಡ್ತೀನಿ.
ನಾನೊಬ್ಬ ಯೆಹೋವನ ಸಾಕ್ಷಿ ಆಗಿದ್ದೀನಿ. ಬೈಬಲ್ ಆಧಾರಿತ ಪುಸ್ತಕಗಳನ್ನ ಓದೋದ್ರಿಂದ ನಂಗೆ ತುಂಬ ಪ್ರೋತ್ಸಾಹ ಸಿಕ್ಕಿದೆ. ನಮ್ಮ ಅಪ್ಪ ಅಮ್ಮ ಡಿವೋರ್ಸ್ ತಗೊಂಡಾಗ ನಾನು ತುಂಬ ನೋವಲ್ಲಿ ಇದ್ದೆ. ಆಗ ಯುವಜನರ ಪ್ರಶ್ನೆಗಳು— ಕಾರ್ಯಸಾಧಕ ಉತ್ತರಗಳು ಪುಸ್ತಕದ ಎರಡನೇ ಸಂಪುಟದಲ್ಲಿರೋ (ಇಂಗ್ಲಿಷ್) “ಕ್ಯಾನ್ ಐ ಬಿ ಹ್ಯಾಪಿ ಇನ್ ಎ ಸಿಂಗಲ್ ಪೇರೆಂಟ್ ಫ್ಯಾಮಿಲಿ?” ಅನ್ನೋ ಲೇಖನ ಸಹಾಯ ಮಾಡ್ತು.
ಚಿಂತೆನ ಚೆನ್ನಾಗಿ ನಿಭಾಯಿಸೋಕೆ ನಂಗೆ ಬೈಬಲಲ್ಲಿರೋ ವಚನಗಳು ಸಹಾಯ ಮಾಡಿವೆ. ಅದ್ರಲ್ಲಿ ಮತ್ತಾಯ 6:25-34 ನನ್ನ ಫೇವರೆಟ್ ವಚನ. ವಚನ 27ರಲ್ಲಿ ಯೇಸು, ‘ಚಿಂತೆ ಮಾಡಿ ನಿಮ್ಮಲ್ಲಿ ಯಾರಾದ್ರೂ ವಯಸ್ಸನ್ನ ಸ್ವಲ್ಪ ಆದ್ರೂ ಹೆಚ್ಚಿಸ್ಕೊಂಡಿದ್ದೀರಾ?’ ಅಂತ ಕೇಳಿದ್ದಾನೆ.
ಕಷ್ಟ ದುಃಖಗಳು ಎಲ್ರಿಗೂ ಬರುತ್ತೆ. ಆದ್ರೆ ಅವನ್ನ ನಾವು ಹೇಗೆ ನಿಭಾಯಿಸ್ತೀವಿ ಅನ್ನೋದು ಮುಖ್ಯ ಅಂತ ನಮ್ಮ ಅಮ್ಮನ ನೋಡಿ ಕಲಿತೆ. ಅಮ್ಮ ಅವ್ರ ಜೀವನದಲ್ಲಿ ಎಷ್ಟೋ ಕಷ್ಟಗಳನ್ನ ಎದುರಿಸಿದ್ರು. ಅವ್ರಿಗೆ ಡಿವೋರ್ಸ್ ಆಯ್ತು, ಕ್ಯಾನ್ಸರ್ ಕಾಯಿಲೆ ಬಂತು. ಅಷ್ಟಾದ್ರೂ ಅವರು ಯಾವತ್ತೂ ಕುಗ್ಗಿ ಹೋಗ್ಲಿಲ್ಲ. ಯಾವಾಗ್ಲೂ ಒಳ್ಳೇದನ್ನೇ ಯೋಚನೆ ಮಾಡ್ತಿದ್ರು. ದೇವ್ರ ಮೇಲೆ ಅವ್ರಿಗಿದ್ದ ನಂಬಿಕೆಯನ್ನ ಕೊನೆವರೆಗೂ ಅವರು ಉಳಿಸ್ಕೊಂಡ್ರು. ಅವರು ಯೆಹೋವ ದೇವರ ಬಗ್ಗೆ ಕಲಿಸಿರೋ ಸತ್ಯನ ನಾನು ಯಾವತ್ತೂ ಮರೆಯಲ್ಲ.
ಸ್ವಲ್ಪ ಯೋಚಿಸಿ: ನೋವನ್ನ ಚೆನ್ನಾಗಿ ನಿಭಾಯಿಸೋಕೆ ಬೈಬಲ್ ಮತ್ತು ಬೈಬಲ್ ಆಧಾರಿತ ಪುಸ್ತಕಗಳು ಹೇಗೆ ಸಹಾಯ ಮಾಡುತ್ತೆ.—ಕೀರ್ತನೆ 94:19.
ಕಾರ್ಡೆಲ್
ನಂಗೆ 17 ವರ್ಷ ಆದಾಗ ಅಪ್ಪನ್ನ ಕಳ್ಕೊಂಡೆ. ಆಗ ನನಗಾದ ದುಃಖನ ಮಾತಲ್ಲಿ ಹೇಳೋಕ್ಕಾಗಲ್ಲ. ನನ್ನ ಎದೆ ಒಡೆದು ಹೋಯ್ತು.
ಅವರು ಸತ್ತೋಗಿದ್ದಾರೆ ಅಂತ ನಂಗೆ ನಂಬೋಕೆ ಆಗ್ಲಿಲ್ಲ. ಅವ್ರನ್ನ ಮಣ್ಣಲ್ಲಿ ಇಡುವಾಗ ಅದು ನಮ್ಮ ಅಪ್ಪ ಅಲ್ಲ ಅಂತ ಮನಸಲ್ಲೇ ಅಂದ್ಕೊಂಡೆ. “ನಾಳೆ ನಮ್ಮ ಅಪ್ಪ ಎದ್ದೇಳ್ತಾರೆ ಬಿಡು” ಅಂತ ನಂಗೆ ನಾನೇ ಹೇಳ್ಕೊಂಡೆ. ಅವ್ರನ್ನ ಕಳ್ಕೊಂಡಾಗ ನಂಗೆ ಜೀವನನೇ ಖಾಲಿ ಅನಿಸ್ತು.
ನಾನೂ ನಮ್ಮ ಕುಟುಂಬದವ್ರೆಲ್ಲ ಯೆಹೋವನ ಸಾಕ್ಷಿಗಳು. ನಮ್ಮ ಅಪ್ಪನ ಕಳ್ಕೊಂಡಾಗ ನಮ್ಮ ಸಭೆಯವ್ರೆಲ್ಲ ಬಂದು ನಂಗೆ ತುಂಬ ಸಹಾಯ ಮಾಡಿದ್ರು. ಅವರು ಊಟ ಕೊಟ್ರು, ನಮ್ಮ ಜೊತೆಯಲ್ಲೇ ಉಳ್ಕೊಂಡ್ರು. ಒಂದೆರಡು ದಿನ ಅಲ್ಲ, ತುಂಬ ದಿನಗಳು ನಮ್ಮ ಜೊತೆನೇ ಉಳ್ಕೊಂಡ್ರು. ಅವರು ಕೊಟ್ಟ ಈ ಸಹಾಯನೆಲ್ಲ ನೋಡಿದ್ರೆ, ಯೆಹೋವನ ಸಾಕ್ಷಿಗಳೇ ಪ್ರೀತಿ ತೋರಿಸೋ ನಿಜವಾದ ಕ್ರೈಸ್ತರು ಅನ್ನೋ ನಂಬಿಕೆ ಹೆಚ್ಚಾಯ್ತು.—ಯೋಹಾನ 13:35.
ನಾನು ನೋವಲ್ಲಿ ಇದ್ದಾಗ ನಂಗೆ ತುಂಬ ಪ್ರೋತ್ಸಾಹ ಕೊಟ್ಟ ಒಂದು ವಚನ 2 ಕೊರಿಂಥ 4:17, 18. ಅಲ್ಲಿ ಹೀಗೆ ಹೇಳುತ್ತೆ: “ನಾವು ಅನುಭವಿಸ್ತಿರೋ ಕಷ್ಟಗಳು ಸ್ವಲ್ಪ ಕಾಲಕ್ಕಷ್ಟೇ ಮತ್ತು ಅವೆಲ್ಲ ತುಂಬಾ ಚಿಕ್ಕದು. ಆದ್ರೆ ಇದ್ರಿಂದ ನಾವು ಪಡ್ಕೊಳ್ಳೋ ಮಹಿಮೆ ತುಂಬ ಶ್ರೇಷ್ಠ, ಶಾಶ್ವತ. ನಾವು ಕಣ್ಣಿಗೆ ಕಾಣೋ ವಿಷ್ಯಗಳ ಮೇಲಲ್ಲ, ಕಣ್ಣಿಗೆ ಕಾಣದೆ ಇರೋ ವಿಷ್ಯಗಳ ಮೇಲೆ ದೃಷ್ಟಿ ಇಡ್ತೀವಿ. ಯಾಕಂದ್ರೆ ಕಾಣುವಂಥದ್ದು ಸ್ವಲ್ಪ ದಿನ ಇರುತ್ತೆ ಆಮೇಲೆ ಹೋಗುತ್ತೆ ಆದ್ರೆ ಕಾಣದೆ ಇರೋದು ಶಾಶ್ವತ ಇರುತ್ತೆ.”
18ನೇ ವಚನದ ಕೊನೆಯ ಮಾತು ನನಗೆ ತುಂಬ ಬಲ ತುಂಬ್ತು. ನಾವು ಕಷ್ಟಗಳು ಪಟ್ಟಿದ್ದು ಸ್ವಲ್ಪ ದಿನ ಅಷ್ಟೇ. ಆದ್ರೆ ದೇವರು ನಮಗೆ ಕೊಡೋ ಆಶೀರ್ವಾದಗಳು ಶಾಶ್ವತ ಇರುತ್ತೆ ಅಂತ ನಂಗೆ ಅರ್ಥ ಆಯ್ತು. ನಮ್ಮ ಅಪ್ಪನ ನಾನು ಕಳ್ಕೊಂಡ ಮೇಲೆ ನೋವಲ್ಲೇ ಮುಳುಗಿ ಹೋಗ್ಲಿಲ್ಲ. ನನ್ನ ಜೀವನದ ಬಗ್ಗೆ ಯೋಚನೆ ಮಾಡೋಕೆ, ಯಾವ ಗುರಿಗಳನ್ನ ಇಡಬೇಕು, ಅದನ್ನ ಮುಟ್ಟೋಕೆ ಏನು ಮಾಡಬೇಕು ಅಂತ ಯೋಚಿಸೋಕೆ ಸಮಯ ಮಾಡ್ಕೊಂಡೆ.
ಸ್ವಲ್ಪ ಯೋಚಿಸಿ: ನಿಮ್ಮ ಜೀವನದಲ್ಲಾದ ನೋವಿನ ಘಟನೆ ನಿಮ್ಮ ಗುರಿಗಳ ಬಗ್ಗೆ ಸರಿಯಾಗಿ ಯೋಚನೆ ಮಾಡೋಕೆ ನಿಮಗೆ ಹೇಗೆ ಸಹಾಯ ಮಾಡಬಹುದು?—1 ಯೋಹಾನ 2:17.