ಮಾಹಿತಿ ಇರುವಲ್ಲಿ ಹೋಗಲು

ಯುವಜನರ ಪ್ರಶ್ನೆಗಳು

ಚಿಂತೆ ಬಂದಾಗ ಏನು ಮಾಡಿದ್ರೆ ಒಳ್ಳೇದು?

ಚಿಂತೆ ಬಂದಾಗ ಏನು ಮಾಡಿದ್ರೆ ಒಳ್ಳೇದು?

 ನಿಮಗೆ ಯಾಕೆ ಚಿಂತೆ ಆಗುತ್ತೆ?

 ಕೆಳಗೆ ಕೊಡಲಾಗಿರೋ ಅನುಭವದ ಥರನೇ ನಿಮಗೂ ಕೆಲವೊಂದು ಸಲ ಅನಿಸುತ್ತಾ?

 “ನಾನ್‌ ಯಾವಾಗ್ಲೂ: ‘ಹಂಗ್‌ ಆಗ್ಬಿಟ್ರೆ, ಹಿಂಗ್‌ ಆಗ್ಬಿಟ್ರೆ . . . ?’ ‘ಅಕಸ್ಮಾತ್‌ ಆಕ್ಸಿಡೆಂಟ್‌ ಆದ್ರೆ ಏನ್‌ ಗತಿ?’ ‘ನಾನಿರೋ ಪ್ಲೇನ್‌ ಕೆಳಗೆ ಬಿದ್ರೆ ಏನ್‌ ಮಾಡ್ಲಿ?’ ಅಂತ ಜನ ಯೋಚ್ನೆ ಮಾಡ್ದೇ ಇರೋದನ್ನೆಲ್ಲ ನಾನು ಯೋಚ್ನೆ ಮಾಡಿ ಚಿಂತೆ ಜಾಸ್ತಿ ಮಾಡ್ಕೊತೀನಿ.”—ಚಾರ್ಲ್ಸ್‌.

 “ನಂಗೆ ಯಾವಾಗ್ಲೂ ಚಿಂತೆ ಕಾಡ್ತಿರುತ್ತೆ, ಬುಗುರಿ ಥರ ತಿರುಗ್ತಾ ಇರ್ತಿನಿ. ಆದ್ರೆ ಇದ್ದ ಜಾಗ್ದಲ್ಲೇ ಇರ್ತೀನಿ. ಜೀವ ಹೋಗೋ ಅಷ್ಟು ಚಿಂತೆ ಮಾಡಿ ಏನಪ್ಪಾ ಸಾಧಿಸ್ದೆ ಅಂತ ನೋಡಿದ್ರೆ ಕಾಣೋದು ದೊಡ್ಡ ಸೊನ್ನೆ!”—ಆ್ಯನಾ.

 “ನೀನಿನ್ನೂ ಸ್ಕೂಲಲ್ಲಿರೋದ್ರಿಂದ ತುಂಬ ಮಜಾ ಮಾಡ್ಬಹುದು ಅಂತ ಜನ ಹೇಳ್ತಾರೆ. ಅವ್ರಿಗೇನು ಗೊತ್ತು ಸ್ಕೂಲಲ್ಲಿ ಎಷ್ಟು ಪ್ರೆಶರ್‌ ಇರುತ್ತೆ ಅಂತ.”—ಡ್ಯಾನಿಯೇಲ್‌.

 “ನಾನ್‌ ಪ್ರೆಶರ್‌ ಕುಕ್ಕರ್‌ ಥರ. ಯಾವಾಗ್ಲೂ ಮುಂದೇನಾಗುತ್ತೆ, ಇಲ್ಲಾ ಮುಂದೆ ನಾನೇನು ಮಾಡ್ಬೇಕು ಅಂತ ಯೋಚಿಸ್ತಾ ಇರ್ತೀನಿ.”—ಲೋರಾ.

 ನಿಜ ಏನಂದ್ರೆ: ನಾವು ‘ನಿಭಾಯಿಸೋಕೆ ಕಷ್ಟ ಆಗಿರೋ ಕಾಲದಲ್ಲಿ ಜೀವಿಸ್ತಾ ಇದ್ದೀವಿ’ ಅಂತ ಬೈಬಲ್‌ ಹೇಳುತ್ತೆ. (2 ತಿಮೊಥಿ 3:1) ಹಾಗಾಗಿ ಚಿಂತೆ ದೊಡ್ಡವ್ರನ್ನ ಕಾಡೋ ಥರನೇ, ಚಿಕ್ಕವ್ರನ್ನೂ ಕಾಡುತ್ತೆ.

 ಚಿಂತೆ ಮಾಡೋದೇ ತಪ್ಪಾ?

 ಇಲ್ಲ. ನಮಗೆ ಇಷ್ಟವಾಗಿರೋ ಜನ್ರನ್ನ ಖುಷಿ ಪಡ್ಸೋಕೆ ಚಿಂತೆ ಮಾಡೋದು ಒಳ್ಳೇದೇ ಅಂತ ಬೈಬಲ್‌ ಹೇಳುತ್ತೆ.—1 ಕೊರಿಂಥ 7:32-34; 2 ಕೊರಿಂಥ 11:28.

 ಚಿಂತೆ, ಒಂದೊಂದು ಸಲ ಕೆಲ್ಸ ಮಾಡಿ ಮುಗಿಸೋಕೆ ಶಕ್ತಿ ಕೊಡುತ್ತೆ. ಬರೋ ವಾರ ನಿಮ್ಗೆ ಸ್ಕೂಲಲ್ಲಿ ಟೆಸ್ಟ್‌ ಇದೆ ಅಂದ್ಕೊಳಿ. ಅದ್ರ ಬಗ್ಗೆ ಚಿಂತೆ ಇದ್ರೆ ವಾರನೇ ಚೆನ್ನಾಗಿ ಓದ್ತೀರ. ಹೀಗೆ ಮಾಡಿದ್ರೆ ಟೆಸ್ಟಲ್ಲಿ ಒಳ್ಳೇ ಮಾರ್ಕ್ಸ್‌ ಬರುತ್ತೆ!

 ಸ್ವಲ್ಪ ಮಟ್ಟಿಗೆ ಚಿಂತೆ ಇದ್ರೆ ಅಪಾಯದ ಬಗ್ಗೆ ಎಚ್ಚರಿಕೆ ಸಿಗುತ್ತೆ. “ತಪ್ಪು ಮಾಡ್ತಿದ್ದೀನಿ ಅಂತ ಗೊತ್ತಿದ್ರೆ ನಮ್ಗೆ ಒಳಗೊಳಗೆ ಮಾಡ್ಲಾ ಬೇಡ್ವಾ ಅಂತ ಚಿಂತೆ ಕಾಡ್ತಿರುತ್ತೆ. ಮನಸ್ಸು ನಿರಾಳ ಆಗ್ಬೇಕು ಅಂದ್ರೆ ತಪ್ಪು ಮಾಡೋದನ್ನ ನಿಲ್ಲಿಸ್ಬೇಕು” ಅಂತಾಳೆ ಟೀನೇಜಲ್ಲಿರೋ ಸೆರೆನಾ.—ಯಾಕೋಬ 5:14 ಹೋಲಿಸಿ.

 ನಿಜ ಏನಂದ್ರೆ: ಚಿಂತೆಯಿಂದ ಒಳ್ಳೆದಾಗುತ್ತೆ—ಅದ್ರೆ ಅದು ಒಳ್ಳೇ ಕೆಲಸ ಮಾಡೋಕೆ ನಿಮ್ಮನ್ನ ಪ್ರೇರಿಸಿದ್ರೆ ಮಾತ್ರ.

 ಆದ್ರೆ ಅದೇ ಚಿಂತೆ ನಿಮ್ಮನ್ನ ಜೇಡರ ಬಲೇ ಥರ ಇರೋ ತಪ್ಪಾದ ಯೋಚ್ನೆಲಿ ಸಿಕ್ಕಿ ಹಾಕಿಸಿದ್ರೆ ಏನು ಗತಿ?

ಚಿಂತೆ ಇದ್ದಾಗ, ದಾರಿ ಕಾಣದೆ ಸಿಕ್ಕಿ ಹಾಕಿಕೊಂಡಂತೆ ನಮ್ಗೆ ಅನಿಸುತ್ತೆ, ಆದ್ರೆ ಬೇರೆ ಜಾಗದಲ್ಲಿ ನಿಂತು ನೋಡೋವ್ರು ನಾವು ಹೊರಗೆ ಬರೋ ದಾರಿ ತೋರ್ಸಿ ಸಹಾಯ ಮಾಡ್ತಾರೆ

 ಉದಾಹರಣೆಗೆ: “ಕಷ್ಟದಲ್ಲಿ ಇದ್ದಾಗ ಏನೆಲ್ಲಾ ಆಗ್ಬಹುದು ಅಂತ ಯೋಚಿಸಿದ್ರೆ ನನ್‌ ತಲೆ ಕೆಟ್ಟೋಗುತ್ತೆ,” ಅಂತ 19 ವಯಸ್ಸಿನ ರಿಚರ್ಡ್‌ ಹೇಳ್ತಾನೆ. “ಅದರ ಬಗ್ಗೆನೇ ಪದೇ ಪದೇ ಯೋಚಿಸ್ತಾ ಇದ್ರೆ ಚಿಂತೆ ಮಾಡಿ ಮಾಡಿ ಸುಸ್ತಾಗಿ ಹೋಗ್ತೀನಿ.”

 ‘ಶಾಂತ ಗುಣ ದೇಹಕ್ಕೆ ಜೀವಾಧಾರ’ ಅಂತ ಬೈಬಲ್‌ ಹೇಳುತ್ತೆ. (ಜ್ಞಾನೋಕ್ತಿ 14:30) ಆದ್ರೆ ಈ ರೀತಿ ಚಿಂತೆ ಮಾಡೋದ್ರಿಂದ ಬರೋ ಕಾಯಿಲೆ ಒಂದಾ ಎರಡಾ? ತಲೆನೋವು, ತಲೆ ಸುತ್ತು, ಹೊಟ್ಟೆ ನೋವು, ಎದೆನೋವು ಇವೆಲ್ಲ ಬರೋ ಚಾನ್ಸಸ್‌ ಇದೆ.

 ಚಿಂತೆ ಇಂದ ನಿಮ್ಗೆ ಎಳ್ಳಷ್ಟೂ ಒಳ್ಳೇದಾಗ್ದೆ ಬರೀ ಕೆಟ್ದೇ ಆಗ್ತಿದ್ರೆ ಏನ್ಮಾಡೋದು?

 ನೀವೇನು ಮಾಡ್ಬಹುದು

 •   ನಿಮ್‌ ಚಿಂತೆ ಎಷ್ಟರ ಮಟ್ಟಿಗೆ ನ್ಯಾಯ? ಅಂತ ನಿಮ್ಮನ್ನೇ ಕೇಳ್ಕೊಳ್ಳಿ. “ನಿಮ್‌ ಜವಾಬ್ದಾರಿ ಬಗ್ಗೆ ಯೋಚ್ಸೋದೇ ಬೇರೆ; ಆಕಾಶನೇ ತಲೆ ಮೇಲೆ ಬಿದ್ದೋಗುತ್ತೇನೋ ಅಂತ ಚಿಂತೆ ಮಾಡೋದೇ ಬೇರೆ. ಅತಿಯಾಗಿ ಚಿಂತೆ ಮಾಡೋದು, ಸ್ಟ್ಯಾಂಡ್‌ ಹಾಕಿ ಸೈಕಲ್‌ ತುಳಿದಂತೆ. ತುಳಿತಾನೇ ಇರ್ತೀರ, ಆದ್ರೆ ಒಂದಡಿನೂ ಮುಂದೆ ಹೋಗಿರಲ್ಲ.”—ಕ್ಯಾಥರಿನ್‌.

   ಬೈಬಲ್‌ ಹೇಳೋ ಮಾತು: ‘ಚಿಂತೆ ಮಾಡಿ ನಿಮ್ಮಲ್ಲಿ ಯಾರು ತನ್ನ ಆಯುಷ್ಯವನ್ನ ಸ್ವಲ್ಪನಾದ್ರೂ ಹೆಚ್ಚಿಸಿಕೊಳ್ಳಬಲ್ಲರು?’—ಮತ್ತಾಯ 6:27.

   ಏನಿದರ ಅರ್ಥ: ಚಿಂತೆ ಮಾಡಿದ್ಮೇಲೆ ನಿಮ್ಗೆ ಉತ್ತರ ಸಿಗ್ಲಿಲ್ಲ ಅಂದ್ರೆ, ಅದು ನಿಮ್ಮ ತೊಂದ್ರೆನ ಮಾರುದ್ದ ಮಾಡ್ಬಹುದು ಅಥ್ವಾಅದೇ ನಿಮ್ಗೆ ತೊಂದ್ರೆ ಆಗಿಬಿಡ್ಬಹುದು.

 •   ಎಲ್ಲನೂ ಒಂದೇ ದಿನ ತಲೆಗೆ ಹಾಕೋಳ್ಬೇಡಿ. “ಇದ್ರ ಬಗ್ಗೆ ಯೋಚ್ಸಿ. ನೀವು ಚಿಂತೆ ಮಾಡ್ತಿರೋದು ನಾಳೆ ಬಗ್ಗೆನಾ? ಬರೋ ತಿಂಗ್ಳು? ಬರೋ ವರ್ಷ? ಅಥವಾ ಐದು ವರ್ಷಗಳ ನಂತರದ್ದಾ?”—ಆಂಥೋನಿ.

   ಬೈಬಲ್‌ ಹೇಳೋ ಮಾತು: ‘ನಾಳೆ ಬಗ್ಗೆ ಯಾವತ್ತೂ ಚಿಂತೆ ಮಾಡ್ಬೇಡಿ. ನಾಳೆಗೆ ಅದರದ್ದೇ ಆದ ಚಿಂತೆ ಇದೆ. ಆಯಾ ದಿನಕ್ಕಿರೋ ತೊಂದ್ರೆನೇ ಸಾಕು.’—ಮತ್ತಾಯ 6:34.

   ಏನಿದರ ಅರ್ಥ: ನಾಳೆ ಬಗ್ಗೆ ಚಿಂತೆ ಮಾಡೋದು ಸ್ವಲ್ಪ ಮಟ್ಟಿಗೆ ನ್ಯಾಯ ಅನಿಸ್ಬಹುದು. ಆದ್ರೂ ನಾವು ಅಂದ್ಕೊಂಡಿದ್ರಲ್ಲಿ ಎಷ್ಟೊಂದು ನಡೀದೇನೇ ಇರ್ಬಹುದು.

 •   ಬದ್ಲಾಯಿಸೋಕೆ ಆಗ್ದಿರೋದ್ರ ಜೊತೆ ಹೊಂದಾಣಿಕೆ ಮಾಡ್ಕೊಳ್ಳೋಕೆ ಕಲೀರಿ. “ಸಮಸ್ಯೆ ನಿಭಾಯಿಸೋಕೆ ನಿಮ್‌ ಕೈಲಾದಷ್ಟು ತಯಾರಾಗಿರಿ. ಆದ್ರೆ ಕೆಲ್ವೊಂದು ವಿಷ್ಯ ನಿಮ್‌ ಕೈಲಿಲ್ಲ ಅನ್ನೋದನ್ನ ಮರೀಬೇಡಿ.”—ರಾಬರ್ಟ್‌.

   ಬೈಬಲ್‌ ಹೇಳೋ ಮಾತು: ‘ವೇಗಿಗಳಿಗೆ ಓಟದಲ್ಲಿ ಗೆಲುವಿಲ್ಲ, ಜ್ಞಾನಿಗಳಿಗೆ ಅನ್ನ ಸಿಕ್ಕಲ್ಲ’ ಯಾರಿಗೆ ಯಾವಾಗ ಏನಾಗುತ್ತೋ ಹೇಳೋಕಾಗಲ್ಲ.—ಪ್ರಸಂಗಿ 9:11.

   ಏನಿದರ ಅರ್ಥ: ಕೆಲ್ವೊಂದು ಸಲ ನಿಮ್‌ ಪರಿಸ್ಥಿತಿನ ಬದ್ಲಾಯ್ಸೋಕೆ ಆಗಲ್ಲ ಅಂದ್ರೂ ಅದನ್ನ ನೀವು ನೋಡೋ ವಿಧಾನನ ಬದ್ಲಾಯಿಸ್ಬಹುದು.

 •   ಬೇರೆ ಥರ ಯೋಚ್ನೆ ಮಾಡಿ. “ನಾನ್‌ ಚಿಕ್ಕ ಚಿಕ್ಕ ವಿಷ್ಯಕ್ಕೂ ಚಿಂತೆ ಮಾಡೋದು ಬಿಟ್ಟು ಬೇರೆ ಥರ ಯೋಚ್ನೆ ಮಾಡ್ಬೇಕು. ಯಾವುದು ಮುಖ್ಯ ಅಂಥ ಯೋಚ್ನೆ ಮಾಡಿ ಇರೋ ಶಕ್ತಿನ ಅದನ್ನ ಪಡ್ಯೋಕೆ ಬಳಸ್ಬೇಕು.”—ಅಲೆಕ್ಸಿಸ್‌.

   ಬೈಬಲ್‌ ಹೇಳೋ ಮಾತು: ‘ಹೆಚ್ಚು ಮುಖ್ಯವಾದ ವಿಷಯಗಳನ್ನು ಖಚಿತಪಡಿಸಿಕೊಳ್ಳಿ.’—ಫಿಲಿಪ್ಪಿ 1:10.

   ಏನಿದರ ಅರ್ಥ: ಎಷ್ಟು ಬೇಕೋ ಅಷ್ಟೇ ಚಿಂತೆ ಮಾಡಿ ಆಗ ಅದ್ರಿಂದ ಹೆಚ್ಚು ತೊಂದ್ರೆ ಆಗಲ್ಲ.

 •   ಯಾರತ್ರನಾದ್ರೂ ಹೇಳ್ಕೊಳಿ. “ನಾನ್‌ ಆರನೇ ಕ್ಲಾಸಲ್ಲಿದ್ದಾಗ, ಮನೆಗೆ ವಾಪಸ್‌ ಬರೋವಾಗೆಲ್ಲ ನಾಳೆ ಮತ್ತೆ ಸ್ಕೂಲಿಗೆ ಹೋಗ್ಬೇಕಲ್ಲಪ್ಪಾ ಅನ್ನೋದೇ ಚಿಂತೆ. ಇದ್ರ ಬಗ್ಗೆ ಅಪ್ಪ ಅಮ್ಮ ಹತ್ರ ಹೇಳ್ಕೊಳ್ತಿದ್ದೆ. ಅವ್ರು ಸಮಾಧಾನವಾಗಿ ಕೇಳಿಸ್ಕೊಳ್ತಿದ್ರು. ಅವ್ರಿಂದ ನಂಗೆ ತುಂಬ ಸಹಾಯ ಆಯ್ತು. ನಾನ್‌ ಅವ್ರತ್ರ ಆರಾಮವಾಗಿ ನಿಶ್ಚಿಂತೆಯಿಂದ ಮಾತಾಡಬಹುದು. ಇದ್ರಿಂದ ಬೆಳಿಗ್ಗೆ ಸ್ಕೂಲಿಗೆ ಹೋಗೋಕೆ ಸಹಾಯ ಆಗ್ತಿತ್ತು.”—ಮರ್ಲಿನ್‌.

   ಬೈಬಲ್‌ ಹೇಳೋ ಮಾತು: ‘ಕಳವಳ ಮನಸ್ಸನ್ನು ಕುಗ್ಗಿಸುತ್ತೆ, ಕನಿಕರದ ಮಾತು ಅದನ್ನು ಹಿಗ್ಗಿಸುತ್ತೆ.’—ಜ್ಞಾನೋಕ್ತಿ 12:25.

   ಏನಿದರ ಅರ್ಥ: ನಿಮ್‌ ಚಿಂತೆನ ಕಡ್ಮೆ ಮಾಡ್ಕೊಳೋದು ಹೇಗಂತ ನಿಮ್‌ ಅಪ್ಪ ಅಮ್ಮ ಅಥವಾ ಫ್ರೆಂಡ್‌ ಯಾರಾದ್ರೂ ಸಲಹೆ ಕೊಡಬಹುದು.

 •   ಪ್ರಾರ್ಥನೆ ಮಾಡಿ. “ನಂಗೆ ಕೇಳಿಸೋ ಥರ ಗಟ್ಟಿಯಾಗಿ ಪ್ರಾರ್ಥನೆ ಮಾಡೋದು ನಂಗೆ ಸಹಾಯ ಮಾಡ್ತು. ಆಗ ನನ್‌ ಚಿಂತೆನ ಬರೀ ತಲೇಲಿ ಇಟ್ಕೊಳ್ದೆ ಬಾಯಲ್ಲಿ ಹೇಳೋಕಾಗ್ತಿತ್ತು. ಆಗ ಯೆಹೋವನ ಮುಂದೆ ನಂಗಿರೋ ಚಿಂತೆ ಏನೇನೂ ಅಲ್ಲ ಅಂತ ಅರ್ಥಮಾಡ್ಕೊಳ್ತಿದ್ದೆ.”—ಲೋರಾ.

   ಬೈಬಲ್‌ ಹೇಳೋ ಮಾತು: “ನಿಮ್ಮ ಚಿಂತೆಯನ್ನೆಲ್ಲಾ ಆತನ ಮೇಲೆ ಹಾಕಿರಿ ಏಕೆಂದರೆ ಆತನು ನಿಮಗೋಸ್ಕರ ಚಿಂತಿಸುತ್ತಾನೆ.”—1 ಪೇತ್ರ 5:7.

   ಏನಿದರ ಅರ್ಥ: ಪ್ರಾರ್ಥನೆ ಮಾಡಿದ್ರೆ ನನ್ನ ಸಮಸ್ಯೆಗಳನ್ನ ನಾನೇ ಪರಿಹರಿಸಬಹುದು ಅಂತ ಅಂದ್ಕೊಳ್ಳಬೇಡಿ. ಅದು ಯೆಹೋವ ದೇವರ ಜೊತೆ ನಾವು ಮಾಡೋ ಮಾತುಕತೆ. ‘ಚಿಂತೆ ಮಾಡ್ಬೇಡ, ನಾನೇ ನಿನ್ನ ದೇವರು. ನಾನು ನಿನ್ನನ್ನು ಬಲಪಡಿಸುತ್ತೇನೆ, ಹೌದು ನಿನಗೆ ಸಹಾಯ ಕೊಡುತ್ತೇನೆ’ ಅಂತ ದೇವ್ರೇ ಮಾತುಕೊಟ್ಟಿದ್ದಾರೆ.—ಯೆಶಾಯ 41:10.