ಯುವಜನರ ಪ್ರಶ್ನೆಗಳು
ಇಂಟರ್ನೆಟಲ್ಲಿ ಯಾರಾದ್ರೂ ನಂಗೆ ತೊಂದ್ರೆ ಕೊಡ್ತಿದ್ರೆ ಏನ್ ಮಾಡ್ಲಿ?
ನೀವೇನು ತಿಳ್ಕೊಬೇಕು?
ಇಂಟರ್ನೆಟಲ್ಲಿ ತೊಂದ್ರೆ ಕೊಡೋದು (ಸೈಬರ್‌ಬುಲ್ಲಿಯಿಂಗ್) ಸುಲಭ ಆಗ್ಬಿಟ್ಟಿದೆ. “ಇಂಟರ್ನೆಟಲ್ಲಿ ನೀವ್ಯಾರು, ನೀವ್ ಹೇಗಿದ್ದೀರ ಅನ್ನೋದನ್ನ ಮುಚ್ಚಿಡಬಹುದು. ಅದಕ್ಕೇ ಒಳ್ಳೇ ಮಕ್ಕಳು ಕೂಡ ಬೇರೆಯವ್ರಿಗೆ ತೊಂದ್ರೆ ಕೊಡೋಕೆ ಶುರು ಮಾಡಿದ್ದಾರೆ” ಅಂತ ಸೈಬರ್‌ಸೇಫ್ ಅನ್ನೋ ಪುಸ್ತಕ ಹೇಳುತ್ತೆ.
ಯಾರನ್ನ ಟಾರ್ಗೆಟ್ ಮಾಡ್ತಾರೆ? ನಾಚಿಕೆ ಸ್ವಭಾವದವ್ರಿಗೆ, ಜಾಸ್ತಿ ಮಾತಾಡದೇ ಇರೋರಿಗೆ ತೊಂದ್ರೆ ಕೊಡ್ತಾರೆ. ಅಷ್ಟೇ ಅಲ್ಲ ಅವ್ರ ತರ ಇಲ್ಲದೆ ಡಿಪ್ರೆಂಟಾಗಿ ಇರೋರಿಗೂ ತೊಂದ್ರೆ ಕೊಡ್ತಾರೆ.
ಇದು ತುಂಬ ಡೇಂಜರ್. ಇದು ಒಂಟಿತನ ಮತ್ತು ಡಿಪ್ರೆಷನ್‌ಗೆ ನಡೆಸುತ್ತೆ. ಕೆಲವ್ರಂತೂ ಸೂಸೈಡೂ ಮಾಡ್ಕೊಂಡಿದ್ದಾರೆ.
ನೀವೇನು ಮಾಡಬಹುದು?
‘ನನಗೆ ತೊಂದ್ರೆ ಕೊಡೋಕಂತಾನೇ ಇದನ್ನ ಮಾಡಿದ್ದಾರಾ?’ ಅಂತ ಮೊದ್ಲು ಯೋಚಿಸಿ. ಯಾಕಂದ್ರೆ ಕೆಲವ್ರು ಏನೋ ಅಂದ್ಕೊಂಡು ಇನ್ನೇನೋ ಹಾಕ್ಬಿಡ್ತಾರೆ. ನಮಗೆ ತೊಂದ್ರೆ ಕೊಡಬೇಕು ಅನ್ನೋ ಯೋಚ್ನೆನೇ ಅವ್ರಿಗೆ ಇರಲ್ಲ. ಅಂತ ಟೈಮಲ್ಲಿ ಈ ಬೈಬಲ್ ವಚನ ಹೇಳೋ ತರ ಮಾಡಿ:
“ತಟ್ಟಂತ ಕೋಪ ಮಾಡ್ಕೊಬೇಡ. ಯಾಕಂದ್ರೆ ಮೂಗಿನ ತುದಿಯಲ್ಲೇ ಕೋಪ ಇರೋದು ಮೂಢರಿಗೆ.”—ಪ್ರಸಂಗಿ 7:9.
ಆದ್ರೆ ಇನ್ನು ಕೆಲವ್ರು ಬೇಕು ಬೇಕಂತಾನೇ ಅವಮಾನ ಮಾಡ್ತಾರೆ, ಚುಡಾಯಿಸ್ತಾರೆ ಅಥವಾ ಕೆಟ್ ಕೆಟ್ಟದಾಗಿ ಮಾತಾಡ್ತಾರೆ, ಬೆದರಿಕೆ ಹಾಕ್ತಾರೆ. ಇದನ್ನ ಸೈಬರ್‌ಬುಲ್ಲಿಯಿಂಗ್ ಅಂದ್ರೆ ಇಂಟರ್ನೆಟಲ್ಲಿ ತೊಂದ್ರೆ ಕೊಡೋದು ಅಂತ ಕರೀತಾರೆ.
ನಿಮ್ಗೆ ಯಾರಾದ್ರೂ ತೊಂದ್ರೆ ಕೊಡ್ತಿದ್ರೆ ಏನು ಮಾಡಬೇಕು? ಆಗ ನೀವೇನು ಮಾಡ್ತಿರೋ ಅದ್ರಿಂದ ಆ ತೊಂದ್ರೆ ಕಮ್ಮಿನೂ ಆಗಬಹುದು ಜಾಸ್ತಿನೂ ಆಗಬಹುದು. ನಿಮ್ಮ ತೊಂದ್ರೆ ಕಮ್ಮಿ ಆಗಬೇಕಂದ್ರೆ ಈ ಕೆಳಗಿರೋದನ್ನ ಮಾಡಿ.
ಅವ್ರನ್ನ ತಲೆಗೇ ಹಾಕೋಬೇಡಿ. ಬೈಬಲ್ ಹೀಗೆ ಹೇಳುತ್ತೆ: “ಜ್ಞಾನ ಇರೋ ವ್ಯಕ್ತಿ ತನ್ನ ನಾಲಿಗೆಗೆ ಕಡಿವಾಣ ಹಾಕ್ತಾನೆ, ವಿವೇಚನೆ ಇರೋ ವ್ಯಕ್ತಿ ಶಾಂತವಾಗಿ ಇರ್ತಾನೆ.”—ಜ್ಞಾನೋಕ್ತಿ 17:27.
ಈ ತರ ಶಾಂತವಾಗಿ ಇದ್ರೆ ತುಂಬ ಪ್ರಯೋಜನ ಆಗುತ್ತೆ. ಯಾಕಂದ್ರೆ, “ನಿಮ್ಗೆ ಕೋಪ ಬರಬೇಕಂತಾನೇ ಅವರು ತೊಂದ್ರೆ ಕೊಡ್ತಾರೆ. ನೀವು ಕೋಪ ಮಾಡ್ಕೊಂಡು ಏನಾದ್ರೂ ಹೇಳಿದ್ರೆ ನೀವು ಅವ್ರ ಕೈಗೊಂಬೆ ಆಗ್ತೀರ” ಅಂತ ಸೈಬರ್‌ಬುಲ್ಲಿಯಿಂಗ್ ಆ್ಯಂಡ್ ಸೈಬರ್‌ತ್ರೆಟ್ಸ್ ಅನ್ನೋ ಪುಸ್ತಕದಲ್ಲಿ ನ್ಯಾನ್ಸಿ ವಿಲರ್ಡ್ ಹೇಳ್ತಾರೆ.
ಇದನ್ನ ನೆನಪಿಡಿ: ಕೆಲವು ಸಲ ಮಾತಾಡದೇ ಸುಮ್ನಿರೋದೇ ಒಳ್ಳೇದು.
ಸೇಡು ತೀರಿಸೋಕೆ ಹೋಗಬೇಡಿ. ಇದ್ರ ಬಗ್ಗೆ ಬೈಬಲ್ ಹೀಗೆ ಹೇಳುತ್ತೆ: “ಕೆಟ್ಟದು ಮಾಡಿದವ್ರಿಗೆ ಕೆಟ್ಟದು ಮಾಡಬೇಡಿ. ಅವಮಾನ ಮಾಡಿದವ್ರಿಗೆ ಅವಮಾನ ಮಾಡಬೇಡಿ.”—1 ಪೇತ್ರ 3:9.
ಈ ತರ ಮಾಡೋದು ತುಂಬ ಮುಖ್ಯ. ಯಾಕಂದ್ರೆ, “ಕೋಪನ ಕಂಟ್ರೋಲಲ್ಲಿ ಇಟ್ಕೊಳ್ಳದೇ ಇರೋದು ಮೂರ್ಖರ ಲಕ್ಷಣ. ನೀವು ಕೋಪದಲ್ಲಿ ಏನಾದ್ರೂ ಹೇಳಿಬಿಟ್ರೆ ಅವ್ರು ನಿಮ್ಮನ್ನ ಇನ್ನೂ ಜಾಸ್ತಿ ರೇಗಿಸ್ತಾರೆ” ಅಂತ ಸೈಬರ್-ಸೇಫ್ ಕಿಡ್ಸ್, ಸೈಬರ್ ಸ್ಸಾವೀ ಟೀನ್ಸ್ ಅನ್ನೋ ಪುಸ್ತಕ ಹೇಳುತ್ತೆ. ಅವ್ರೇನೋ ಮಾಡಿದ್ರು ಅಂತ ಕೋಪದಲ್ಲಿ ತಿರುಗಿಸಿ ನೀವೂ ಏನಾದ್ರೂ ಮಾಡೋಕೋದ್ರೆ ನೋಡೋರ್ ಕಣ್ಣಿಗೆ ನಿಮಗೂ ಅವ್ರಿಗೂ ವ್ಯತ್ಯಾಸನೇ ಇರಲ್ಲ.
ಇದನ್ನ ನೆನಪಿಡಿ: ಉರಿಯೋ ಬೆಂಕಿಗೆ ಪೆಟ್ರೋಲ್ ಸುರಿಬೇಡಿ.
ಬುದ್ಧಿ ಉಪಯೋಗಿಸಿ. ಬೈಬಲ್ ಹೀಗೆ ಹೇಳುತ್ತೆ: “ಕೆಟ್ಟದು ನಿನ್ನನ್ನ ಗೆಲ್ಲೋಕೆ ಬಿಡಬೇಡ.” (ರೋಮನ್ನರಿಗೆ 12:21) ಸಮಸ್ಯೆನ ದೊಡ್ಡದು ಮಾಡದೇ ಇರೋಕೆ ಕೆಳಗೆ ಕೊಟ್ಟಿರೋ ವಿಷ್ಯಗಳನ್ನ ಮಾಡಿ ನೋಡಿ:
ನಿಮಗೆ ಮೆಸೆಜ್ ಕಳಿಸ್ತಿರೋರನ್ನ ಬ್ಲಾಕ್ ಮಾಡಿ. ಆಗ “ನೀವು ಆ ಮೆಸೆಜನ್ನ ಓದೋದೂ ಇಲ್ಲ, ನಿಮಗೆ ಬೇಜಾರೂ ಆಗಲ್ಲ” ಅಂತ ಮೀನ್ ಬಿಹೈಂಡ್ ದ ಸ್ಕ್ರೀನ್ ಅನ್ನೋ ಪುಸ್ತಕ ಹೇಳುತ್ತೆ.
ಓದಿಲ್ಲಾಂದ್ರೂ ಡಿಲೀಟ್ ಮಾಡದೆ ಪ್ರೂಫ್‌ಗೋಸ್ಕರ ಅದನ್ನ ಇಟ್ಕೊಳ್ಳಿ. ಅವರು ನಿಮ್ಮನ್ನ ರೇಗಿಸೋಕೆ ಕಳಿಸಿರೋ ಮೆಸೆಜ್‌ಗಳು, ಇ-ಮೇಲ್‌ಗಳು, ನಿಮ್ಮ ಬಗ್ಗೆ ಸೋಶಿಯಲ್ ಮೀಡಿಯಾದಲ್ಲಿ ಹಾಕಿರೋ ಪೋಸ್ಟ್‌ಗಳು, ವಾಯ್ಸ್ ಮೆಸೆಜ್‌ಗಳು ಅಥವಾ ಬೇರೆ ಯಾವುದೇ ಪ್ರೂಫ್ ಇದ್ರೂ ಸೇವ್ ಮಾಡಿಟ್ಕೊಳಿ.
ತೊಂದ್ರೆ ಕೊಡೋದನ್ನ ನಿಲ್ಲಿಸೋಕೆ ಹೇಳಿ. ಸ್ಟ್ರಿಕ್ಟಾಗಿ ಇಷ್ಟೇ ಹೇಳಿ:
“ನಂಗೆ ಮೆಸೆಜ್ ಮಾಡೋದನ್ನ ನಿಲ್ಲಿಸಿ.”
“ನೀವು ಹಾಕಿರೋ ಪೋಸ್ಟನ್ನ ಡಿಲೀಟ್ ಮಾಡಿ.”
“ನೀವು ಮಾಡ್ತಿರೋದನ್ನ ನೀವಾಗೇ ನಿಲ್ಲಿಸಿದ್ರೆ ಒಳ್ಳೇದು. ಇಲ್ಲಾಂದ್ರೆ ನಾನೇ ಏನಾದ್ರೂ ಮಾಡಬೇಕಾಗುತ್ತೆ.”
ಕಾನ್ಫಿಡೆಂಟ್ ಆಗಿರಿ. ನೀವು ಯಾವುದ್ರಲ್ಲಿ ವೀಕ್ ಅಂತ ಯೋಚ್ನೆ ಮಾಡೋದಕ್ಕಿಂತ ನೀವು ಯಾವುದ್ರಲ್ಲಿ ಸ್ಟ್ರಾಂಗ್ ಅಂತ ಯೋಚ್ನೆ ಮಾಡಿ. (2 ಕೊರಿಂಥ 11:6) ಯಾಕಂದ್ರೆ ರೋಡಲ್ಲಿ ಯಾರನ್ನ ರೇಗಿಸ್ತಾರೆ ಹೇಳಿ, ಇನೋಸೆಂಟಾಗಿ ಕಾಣಿಸೋರನ್ನೇ ಅಲ್ವಾ? ಇಂಟರ್ನೆಟಲ್ಲೂ ಇದೇ ತರ. ಅದಕ್ಕೆ ನೀವು ಸ್ಟ್ರಾಂಗ್ ಆಗಿರಿ.
ದೊಡ್ಡವ್ರಿಗೆ ಹೇಳಿ. ಮೊದ್ಲು ಅಪ್ಪ-ಅಮ್ಮಂಗೆ ಹೇಳಿ. ಆಮೇಲೆ ನಿಮ್ಮನ್ನ ರೇಗಿಸೋಕೆ ಬಳಸ್ತಿರೋ ವೆಬ್‌ಸೈಟಿಗೆ ಆ ವ್ಯಕ್ತಿ ಬಗ್ಗೆ ಕಂಪ್ಲೇಂಟ್ ಮಾಡಿ. ವಿಷ್ಯ ಕೈಮೀರಿ ಹೋಗಿದ್ರೆ ನೀವೂ ಮತ್ತೆ ನಿಮ್ಮ ಅಪ್ಪ-ಅಮ್ಮ ಸ್ಕೂಲ್‌ಗೆ, ಪೊಲೀಸ್ ಸ್ಟೇಷನ್‌ಗೆ ಹೋಗಿ ಕಂಪ್ಲೇಂಟ್ ಮಾಡಿ. ಬೇಕಿದ್ರೆ ಲಾಯರ್ ಹೆಲ್ಪೂ ತಗೊಳಿ.
ಇದನ್ನ ನೆನಪಿಡಿ: ನಿಮಗೆ ಆಗ್ತಿರೋ ನೋವನ್ನ ಕಮ್ಮಿ ಮಾಡೋಕೂ ಆಗುತ್ತೆ, ರೇಗಿಸ್ತಿರೋರ ಬಾಯಿ ಮುಚ್ಚಿಸೋಕೂ ಆಗುತ್ತೆ.