ಮಾಹಿತಿ ಇರುವಲ್ಲಿ ಹೋಗಲು

ಸೆಕೆಂಡರಿ ಮೆನ್ಯೂಗೆ ಹೋಗಲು

ಯೆಹೋವನ ಸಾಕ್ಷಿಗಳು

Kannada (ಕನ್ನಡ)

ವಿಡಿಯೋ ಪಾಠಗಳು

ಬೈಬಲ್‌ ಪುಸ್ತಕಗಳ ಪರಿಚಯ

ಈ ಚಿಕ್ಕ ವಿಡಿಯೋಗಳು ಬೈಬಲ್‌ ಪುಸ್ತಕಗಳ ಹಿನ್ನಲೆಯ ಬಗ್ಗೆ ಮತ್ತು ಅದರಲ್ಲಿರುವ ವಿಷಯಗಳ ಬಗ್ಗೆ ತಿಳಿಸುತ್ತದೆ. ನಿಮ್ಮ ಬೈಬಲ್‌ ಓದುವಿಕೆ ಮತ್ತು ವೈಯಕ್ತಿಕ ಅಧ್ಯಯನವನ್ನು ಚೆನ್ನಾಗಿ ಮಾಡಲು ಇದನ್ನು ಬಳಸಿ.

ಎಜ್ರ ಪುಸ್ತಕದ ಪರಿಚಯ

ತನ್ನ ಜನರನ್ನು ಬಾಬೆಲಿನ ಸೆರೆವಾಸದಿಂದ ಬಿಡಿಸಿ, ಯೆರೂಸಲೇಮಿನಲ್ಲಿ ಸತ್ಯಾರಾಧನೆಯನ್ನು ಪುನಸ್ಥಾಪಿಸುತ್ತೇನೆಂಬ ತನ್ನ ಮಾತನ್ನು ಯೆಹೋವನು ಉಳಿಸಿಕೊಳ್ಳುತ್ತಾನೆ.

ನೆಹೆಮೀಯ ಪುಸ್ತಕದ ಪರಿಚಯ

ಇಂದಿರುವ ಸತ್ಯ ಕ್ರೈಸ್ತರಿಗೆ ನೆಹೆಮೀಯನ ಪುಸ್ತಕ ಪ್ರಾಮುಖ್ಯ ಪಾಠಗಳನ್ನು ಕಲಿಸುತ್ತದೆ.

ಎಸ್ತೇರಳು ಪುಸ್ತಕದ ಪರಿಚಯ

ಎಸ್ತೇರಳ ದಿನಗಳಲ್ಲಾದ ಘಟನೆಗಳು ತನ್ನ ಜನರನ್ನು ಕಷ್ಟಗಳಿಂದ ಪಾರುಮಾಡಲು ಯೆಹೋವ ದೇವರಿಗಿರುವ ಸಾಮರ್ಥ್ಯದ ಮೇಲಿನ ನಿಮ್ಮ ನಂಬಿಕೆಯನ್ನು ಬಲಪಡಿಸುತ್ತವೆ.

ಯೋಬ ಪುಸ್ತಕದ ಪರಿಚಯ

ಯೆಹೋವನನ್ನು ಪ್ರೀತಿಸುವವರೆಲ್ಲರಿಗೂ ಪರೀಕ್ಷೆಗಳು ಬರುವವು. ಯೋಬನ ವೃತ್ತಾಂತವು ನಾವು ನಿಷ್ಠರಾಗಿದ್ದು ಯೆಹೋವನ ಪರಮಾಧಿಕಾರವನ್ನು ಎತ್ತಿಹಿಡಿಯಲು ಸಾಧ್ಯ ಎಂಬ ಭರವಸೆಯನ್ನು ಮೂಡಿಸುತ್ತದೆ.

ಕೀರ್ತನೆಗಳು ಪುಸ್ತಕದ ಪರಿಚಯ

ಕೀರ್ತನೆಗಳು ಪುಸ್ತಕ ಯೆಹೋವ ದೇವರ ಪರಮಾಧಿಕಾರವನ್ನು ಬೆಂಬಲಿಸುತ್ತದೆ ಮತ್ತು ಯಾರು ಆತನನ್ನು ಪ್ರೀತಿಸುತ್ತಾರೋ ಅಂಥವರಿಗೆ ಸಹಾಯ ಮಾಡಿ ಸಂತೈಸುತ್ತದೆ. ಜೊತೆಗೆ ಆತನ ರಾಜ್ಯದ ಮೂಲಕ ಇಡೀ ಲೋಕ ಹೇಗೆ ಬದಲಾಗುತ್ತದೆ ಎಂದು ಸಹ ತಿಳಿಸುತ್ತದೆ.

ಜ್ಞಾನೋಕ್ತಿಗಳು ಪುಸ್ತಕದ ಪರಿಚಯ

ವ್ಯಾಪಾರ ವಹಿವಾಟುಗಳಿಂದ ಹಿಡಿದು ಕುಟುಂಬದ ಜೀವನದವರೆಗೆ ಹೀಗೆ ಜೀವನದ ಪ್ರತಿಯೊಂದು ವಿಷಯಗಳ ಬಗ್ಗೆ ದೈವಿಕ ಮಾರ್ಗದರ್ಶನ ಪಡೆಯಿರಿ.

ಪ್ರಸಂಗಿ ಪುಸ್ತಕದ ಪರಿಚಯ

ರಾಜ ಸೊಲೊಮೋನನು ಜೀವನದಲ್ಲಿನ ಪ್ರಾಮುಖ್ಯ ವಿಷಯಗಳಿಗೆ ಒತ್ತು ನೀಡುತ್ತಾ ಈ ವಿಷಯಗಳಿಗೂ ದೈವಿಕ ವಿವೇಕಕ್ಕೆ ವಿರುದ್ಧವಾಗಿರುವ ವಿಷಯಗಳಿಗೂ ಇರುವ ವ್ಯತ್ಯಾಸವನ್ನು ತಿಳಿಸುತ್ತಾನೆ.

ಪರಮಗೀತ ಪುಸ್ತಕದ ಪರಿಚಯ

ಶೂಲೇಮ್ಯ ಹುಡುಗಿಗೆ ಕುರುಬ ಹುಡುಗನ ಮೇಲಿದ್ದ ಅಳಿಸಲಾಗದ ಪ್ರೀತಿಯನ್ನು ‘ಯೆಹೋವನ ಜ್ವಾಲೆಗೆ’ ಹೋಲಿಸಲಾಗಿದೆ. ಏಕೆ?

ಯೆಶಾಯ ಪುಸ್ತಕದ ಪರಿಚಯ

ಯೆಶಾಯ ಪುಸ್ತಕದಲ್ಲಿ ತಿಳಿಸಲಾಗಿರುವ ಪ್ರವಾದನೆಗಳು ಚಾಚೂತಪ್ಪದೇ ನೆರವೇರಿವೆ. ಇವು ಯೆಹೋವನು ತನ್ನ ವಾಗ್ದಾನಗಳನ್ನು ಖಂಡಿತ ನೆರವೇರಿಸುತ್ತಾನೆ ಮತ್ತು ಆತನು ರಕ್ಷಣೆಯ ದೇವರು ಎಂಬ ನಿಮ್ಮ ನಂಬಿಕೆಯನ್ನು ಬಲಪಡಿಸುತ್ತವೆ.

ಯೆರೆಮಿಾಯ ಪುಸ್ತಕದ ಪರಿಚಯ

ಕಷ್ಟದ ಮಧ್ಯದಲ್ಲೂ ಯೆರೆಮಿಾಯ ಪ್ರವಾದಿಯಾಗಿ ತನಗಿದ್ದ ನೇಮಕವನ್ನು ನಂಬಿಗಸ್ತಿಕೆಯಿಂದ ಪೂರೈಸಿದ. ಇಂದು ಕ್ರೈಸ್ತರಿಗೆ ಅವನ ಮಾದರಿ ಹೇಗೆ ಸಹಾಯ ಮಾಡುತ್ತದೆಂದು ಯೋಚಿಸಿ.

ಪ್ರಲಾಪಗಳು ಪುಸ್ತಕದ ಪರಿಚಯ

ಯೆರೆಮೀಯ ಪ್ರವಾದಿ ಬರೆದ ಈ ಪ್ರಲಾಪಗಳು ಪುಸ್ತಕವು ಯೆರೂಸಲೇಮಿನ ನಾಶನದ ಬಗ್ಗೆ ದುಃಖವನ್ನು ವ್ಯಕ್ತಪಡಿಸುತ್ತದೆ ಮತ್ತು ಪಶ್ಚಾತ್ತಾಪ ಹೇಗೆ ದೈವಿಕ ಕರುಣೆಗೆ ನಡೆಸುತ್ತದೆ ಎಂದು ತಿಳಿಸುತ್ತದೆ.

ಯೆಹೆಜ್ಕೇಲ ಪುಸ್ತಕದ ಪರಿಚಯ

ಎಷ್ಟೇ ಕಷ್ಟ ಆದರೂ ಯೆಹೋವನು ನೀಡಿದ ನೇಮಕವನ್ನು ಯೆಹೆಜ್ಕೇಲನು ದೀನತೆ ಮತ್ತು ಧೈರ್ಯದಿಂದ ಮಾಡಿದನು. ಆತನ ಮಾದರಿ ನಮಗೆ ತುಂಬಾ ಅಮೂಲ್ಯವಾಗಿದೆ.

ದಾನಿಯೇಲ ಪುಸ್ತಕದ ಪರಿಚಯ

ದಾನಿಯೇಲ ಮತ್ತವನ ಸಂಗಡಿಗರು ಎಲ್ಲ ಸನ್ನಿವೇಶಗಳಲ್ಲಿ ಯೆಹೋವನಿಗೆ ನಂಬಿಗಸ್ತರಾಗಿದ್ದರು. ಅವರ ಮಾದರಿ ಮತ್ತು ಪ್ರವಾದನೆ ನೆರವೇರಿಕೆ ನಮಗೆ ಇಂದು ಯುಗದ ಸಮಾಪ್ತಿಯಲ್ಲಿ ಪ್ರಯೋಜನ ತರುತ್ತದೆ.

ಹೋಶೇಯ ಪುಸ್ತಕದ ಪರಿಚಯ

ಹೋಶೇಯ ಪ್ರವಾದನೆಯಲ್ಲಿ ಅನೇಕ ಮಹತ್ವದ ಪಾಠಗಳಿವೆ. ಯೆಹೋವನು ಪಶ್ಚಾತ್ತಾಪಪಟ್ಟ ತಪ್ಪಿತಸ್ಥರಿಗೆ ಕರುಣೆ ತೋರಿಸುತ್ತಾನೆ ಮತ್ತು ಆತನು ಎಂಥಾ ಆರಾಧನೆಯನ್ನು ಇಷ್ಟಪಡುತ್ತಾನೆ ಎಂದು ನಮಗೆ ಕಲಿಸುತ್ತದೆ.

ಯೋವೇಲ ಪುಸ್ತಕದ ಪರಿಚಯ

ಪ್ರವಾದಿ ಯೋವೇಲನು ಬರಲಿರುವ ‘ಯೆಹೋವನ ದಿನದ’ ಬಗ್ಗೆ ಮತ್ತು ಅದರಿಂದ ಪಾರಾಗಲು ಏನು ಮಾಡಬೇಕೆಂದು ತಿಳಿಸಿದನು. ಇಂದು ಆತನ ಪ್ರವಾದನೆ ತುಂಬ ತುರ್ತಿನ ವಿಷಯವಾಗಿದೆ.

ಆಮೋಸ ಪುಸ್ತಕದ ಪರಿಚಯ

ಯೆಹೋವನು ಈ ದೀನ ವ್ಯಕ್ತಿಯನ್ನು ತುಂಬಾ ಪ್ರಾಮುಖ್ಯವಾದ ಕೆಲಸಕ್ಕಾಗಿ ಬಳಸಿದನು. ಆಮೋಸನ ಮಾದರಿಯಿಂದ ಯಾವ ಪ್ರಾಮುಖ್ಯವಾದ ಪಾಠಗಳನ್ನು ಕಲಿಯಬಹುದು?

ಓಬದ್ಯ ಪುಸ್ತಕದ ಪರಿಚಯ

ಹೀಬ್ರು ಶಾಸ್ತ್ರಗ್ರಂಥದಲ್ಲಿ ಓಬದ್ಯ ಎಲ್ಲಕ್ಕಿಂತ ಚಿಕ್ಕ ಪುಸ್ತಕ. ಪ್ರವಾದಿ ನಿರೀಕ್ಷೆಯನ್ನು ಮತ್ತು ಯೆಹೋವನ ಅರಸುತನ ನಿರ್ದೋಷೀಕರಣದ ಬಗ್ಗೆ ಮಾತು ಕೊಡುತ್ತಾನೆ.

ಯೋನ ಪುಸ್ತಕದ ಪರಿಚಯ

ಪ್ರವಾದಿಯು ತಿದ್ದುಪಾಟನ್ನು ಅಂಗೀಕರಿಸಿದನು, ತನ್ನ ನೇಮಕವನ್ನು ಪೂರೈಸಿದನು ಮತ್ತು ದೇವರ ನಿಷ್ಠಾವಂತ ಪ್ರೀತಿ ಮತ್ತು ಕರುಣೆಯ ಬಗ್ಗೆ ಆತನಿಗೆ ಪ್ರಾಮುಖ್ಯವಾದ ಪಾಠವನ್ನು ಕಲಿಸಲಾಯಿತು. ಆತನ ಅನುಭವವು ನಿಮ್ಮ ಮನ ಮುಟ್ಟುತ್ತದೆ.

ಮೀಕ ಪುಸ್ತಕದ ಪರಿಚಯ

ದೇವ ಪ್ರೇರಿತವಾದ ಈ ಪ್ರವಾದನೆಯು ಯೆಹೋವನು ನಮ್ಮಿಂದ ಮಾಡಲು ಆಗುವಂಥದ್ದನ್ನು ಮತ್ತು ನಮಗೆ ಪ್ರಯೋಜನ ತರುವಂಥ ವಿಷಯಗಳನ್ನೇ ಮಾಡುವಂತೆ ಹೇಳುತ್ತಾನೆಂಬ ನಮ್ಮ ನಂಬಿಕೆಯನ್ನು ಬಲಪಡಿಸುತ್ತದೆ.

ನಹೂಮ ಪುಸ್ತಕದ ಪರಿಚಯ

ಯೆಹೋವನು ಯಾವಾಗಲೂ ತನ್ನ ಮಾತನ್ನು ಪೂರೈಸುತ್ತಾನೆ ಮತ್ತು ಆತನ ರಾಜ್ಯದ ಕೆಳಗೆ ಶಾಂತಿ ಮತ್ತು ರಕ್ಷಣೆ ಪಡೆಯಲು ಬಯಸುವವರಿಗೆ ಸಾಂತ್ವನ ಕೊಡುತ್ತಾನೆಂಬ ನಮ್ಮ ಭರವಸೆಯನ್ನು ಈ ಪ್ರವಾದನೆಯು ಬಲಪಡಿಸುತ್ತದೆ.

ಹಬಕ್ಕೂಕ ಪುಸ್ತಕದ ಪರಿಚಯ

ತನ್ನ ಜನರನ್ನು ಸಂರಕ್ಷಿಸುವ ಅತ್ಯುತ್ತಮ ಸಮಯ ಮತ್ತು ವಿಧ ಯೆಹೋವನಿಗೆ ಗೊತ್ತಿದೆ ಎಂಬ ಭರವಸೆ ನಮಗಿದೆ.

ಚೆಫನ್ಯ ಪುಸ್ತಕದ ಪರಿಚಯ

ಯೆಹೋವನ ನ್ಯಾಯತೀರ್ಪಿನ ದಿನ ಇನ್ನೂ ದೂರ ಇದೆ ಎಂಬ ಯೋಚನೆ ಬರದಂತೆ ಯಾಕೆ ಎಚ್ಚರವಹಿಸಬೇಕು?

ಹಗ್ಗಾಯ ಪುಸ್ತಕದ ಪರಿಚಯ

ಈ ಪ್ರವಾದನೆ ನಾವು ವೈಯಕ್ತಿಕ ವಿಷಯಗಳಿಗಿಂತ ದೇವರ ಆರಾಧನೆಗೆ ಮೊದಲ ಸ್ಥಾನ ಕೊಡುವ ಪ್ರಾಮುಖ್ಯತೆಯ ಬಗ್ಗೆ ಒತ್ತಿ ಹೇಳುತ್ತದೆ.

ಜೆಕರ್ಯ ಪುಸ್ತಕದ ಪರಿಚಯ

ಹಿಂದೆ ದೇವರ ಜನರನ್ನು ಬಲಪಡಿಸಿದ ಹಲವಾರು ಪ್ರೇರಿತ ದರ್ಶನಗಳು ಮತ್ತು ಪ್ರವಾದನೆಗಳು ಇವೆ. ಅದೇ ಪ್ರವಾದನೆಗಳು ಯೆಹೋವನ ಬೆಂಬಲದ ಆಶ್ವಾಸನೆಯನ್ನು ನಮಗೆ ಈಗಲೂ ಕೊಡುತ್ತವೆ.

ಮಲಾಕಿಯ ಪುಸ್ತಕದ ಪರಿಚಯ

ಯೆಹೋವನ ಬದಲಾಗದ ತತ್ವಗಳು, ಕರುಣೆ ಮತ್ತು ಪ್ರೀತಿಯ ಬಗ್ಗೆ ತಿಳಿಸುತ್ತದೆ. ನಮ್ಮ ದಿನಗಳ ಸನ್ನಿವೇಶಗಳಿಗೆ ಪ್ರಾಮುಖ್ಯ ಪಾಠಗಳನ್ನು ತಿಳಿಸುತ್ತದೆ.

ಮತ್ತಾಯ ಪುಸ್ತಕದ ಪರಿಚಯ

ಬೈಬಲಿನಲ್ಲಿರುವ ನಾಲ್ಕು ಸುವಾರ್ತಾ ಪುಸ್ತಕಗಳಲ್ಲಿ ಮೊದನೆಯದು ಮತ್ತಾಯ ಪುಸ್ತಕ. ಇದರಲ್ಲಿರುವ ಕೆಲವು ಪ್ರಾಮುಖ್ಯ ವಿಷಯಗಳನ್ನು ತಿಳಿದುಕೊಳ್ಳಿ.

ಹೆಚ್ಚನ್ನು ಕಲಿಯಿರಿ

ಪುಸ್ತಕಗಳು ಮತ್ತು ಕಿರುಹೊತ್ತಗೆಗಳು

ಬೈಬಲ್— ಅದರಲ್ಲಿ ಏನಿದೆ?