ಮಾಹಿತಿ ಇರುವಲ್ಲಿ ಹೋಗಲು

ಸಂತರಿಗೆ (ಸೇಂಟ್ಸ್‌) ಪ್ರಾರ್ಥನೆ ಮಾಡಬೇಕಾ?

ಸಂತರಿಗೆ (ಸೇಂಟ್ಸ್‌) ಪ್ರಾರ್ಥನೆ ಮಾಡಬೇಕಾ?

ಬೈಬಲ್‌ ಕೊಡೋ ಉತ್ತರ

ಇಲ್ಲ. ನಾವು ಯೇಸುವಿನ ಹೆಸ್ರಿನಲ್ಲಿ ದೇವರಿಗೆ ಮಾತ್ರ ಪ್ರಾರ್ಥನೆ ಮಾಡಬೇಕು ಅಂತ ಬೈಬಲ್‌ ಹೇಳುತ್ತೆ. ಯೇಸು ತನ್ನ ಶಿಷ್ಯರಿಗೆ: “ನೀವು ಹೀಗೆ ಪ್ರಾರ್ಥನೆಮಾಡತಕ್ಕದ್ದು, ಪರಲೋಕದಲ್ಲಿರುವ ನಮ್ಮ ತಂದೆಯೇ, ನಿನ್ನ ನಾಮವು ಪರಿಶುದ್ಧವೆಂದು ಎಣಿಸಲ್ಪಡಲಿ” ಅಂತ ಹೇಳಿದ್ದಾನೆ. (ಮತ್ತಾಯ 6:9, BSI) ಯೇಸು, ದೇವರನ್ನ ಬಿಟ್ಟು ‘ಸಂತರಿಗೆ, ದೂತರಿಗೆ’ ಪ್ರಾರ್ಥನೆ ಮಾಡಿ ಅಂತ ಯಾವತ್ತೂ ತನ್ನ ಶಿಷ್ಯರಿಗೆ ಹೇಳ್ಕೊಟ್ಟಿಲ್ಲ.

ಅಷ್ಟೇ ಅಲ್ಲ ಯೇಸು “ನಾನೇ ಆ ದಾರಿ, ಸತ್ಯ, ಜೀವ ಆಗಿದ್ದೀನಿ. ನನ್ನ ಮೂಲಕ ಅಲ್ಲದೆ ಯಾರೂ ತಂದೆ ಹತ್ರ ಬರೋಕಾಗಲ್ಲ” ಅಂತ ಕೂಡ ಹೇಳಿದ್ದಾನೆ. (ಯೋಹಾನ 14:6) ಇದ್ರ ಅರ್ಥ ನಮ್ಮ ಪರವಾಗಿ ದೇವರನ್ನ ಬೇಡೋಕೆ ಯೇಸುವಿಗೆ ಮಾತ್ರ ಅಧಿಕಾರ ಇದೆ.—ಇಬ್ರಿಯ 7:25.

ನಾನು ದೇವರಿಗೆ, ಸಂತರಿಗೆ ಇಬ್ಬರಿಗೂ ಪ್ರಾರ್ಥನೆ ಮಾಡಬಹುದಾ?

ಹತ್ತು ಆಜ್ಞೆಗಳಲ್ಲಿ ದೇವರು ಹೇಳಿರೋದು: ‘ನಾನೇ ನಿಮ್ಮ ದೇವರಾದ ಯೆಹೋವ. ನೀವು ನನ್ನನ್ನ ಮಾತ್ರ ಆರಾಧಿಸಬೇಕು ಅಂತ ಬಯಸೋ ದೇವರು.’ (ವಿಮೋಚನಕಾಂಡ 20:5) ಹೊಸ ಲೋಕ ಭಾಷಾಂತರದ ಪಾದಟಿಪ್ಪಣಿ ಹೀಗೆ ಹೇಳುತ್ತೆ, ದೇವರಿಗೆ “ಅನನ್ಯ ಭಕ್ತಿ ಕೇಳೋ ಹಕ್ಕಿದೆ.” ಇದ್ರ ಅರ್ಥ ದೇವರು ನಮ್ಮಿಂದ ಸಂಪೂರ್ಣ ನಿಯತ್ತನ್ನ ಬಯಸ್ತಾನೆ. ಆತನಿಗೆ ಸೇರಬೇಕಾದ ಆರಾಧನೆಯನ್ನ ಬೇರೆ ಯಾರ ಜೊತೆನೂ ಹಂಚಿಕೊಳ್ಳಲ್ಲ. ಅದ್ರಲ್ಲಿ ಪ್ರಾರ್ಥನೆ ಕೂಡ ಸೇರಿದೆ.—ಯೆಶಾಯ 48:11.

ನಾವು ದೇವರನ್ನ ಬಿಟ್ಟು ಸಂತರಿಗೆ, ದೂತರಿಗೆ ಪ್ರಾರ್ಥನೆ ಮಾಡಿದ್ರೆ ದೇವರಿಗೆ ಬೇಜಾರ್‌ ಆಗುತ್ತೆ, ಕೋಪನೂ ಬರುತ್ತೆ. ಅಪೊಸ್ತಲ ಯೋಹಾನ ದೇವದೂತನನ್ನ ಆರಾಧಿಸೋಕೆ ಕಾಲಿಗೆ ಬಿದ್ದಾಗ, ದೇವದೂತ ಅವನಿಗೆ: “ಏನು ಮಾಡ್ತಾ ಇದ್ದೀಯ? ಹಾಗೆ ಮಾಡಬೇಡ! ನಾನು ನಿನ್ನ ತರಾನೇ ಒಬ್ಬ ಸೇವಕ ಅಷ್ಟೆ. ಯೇಸು ಬಗ್ಗೆ ಹೇಳೋಕೆ ದೇವರು ನನಗೆ ಈ ಕೆಲಸ ಕೊಟ್ಟಿದ್ದಾನೆ. ದೇವರನ್ನ ಆರಾಧನೆ ಮಾಡು” ಅಂತ ಹೇಳಿದ.—ಪ್ರಕಟನೆ 19:10.