ಕನ್ನಡ
ಯೇಸುವಿನ ಬಗ್ಗೆ ಸುವಾರ್ತಾ ಪುಸ್ತಕಗಳನ್ನ ಯಾವಾಗ ಬರೆದ್ರು?
https://cms-imgp.jw-cdn.org/img/p/502012493/univ/art/502012493_univ_sqr_xl.jpg
ijwbq ಲೇಖನ 13

ಯೇಸುವಿನ ಬಗ್ಗೆ ಸುವಾರ್ತಾ ಪುಸ್ತಕಗಳನ್ನ ಯಾವಾಗ ಬರೆದ್ರು?

ಯೇಸುವಿನ ಬಗ್ಗೆ ಸುವಾರ್ತಾ ಪುಸ್ತಕಗಳನ್ನ ಯಾವಾಗ ಬರೆದ್ರು?

ಬೈಬಲ್‌ ಕೊಡೋ ಉತ್ತರ

 ಯೇಸುವಿನ ಜೀವನದ ಬಗ್ಗೆ ಬರೆದ ಮೇಲೆ ಅಪೊಸ್ತಲ ಯೋಹಾನ ಹೀಗೆ ಹೇಳಿದ್ದಾನೆ, “ಇದನ್ನೆಲ್ಲ ಕಣ್ಣಾರೆ ನೋಡಿದವನೇ ಈ ಎಲ್ಲ ವಿಷ್ಯ ಹೇಳ್ತಾ ಇದ್ದಾನೆ. ಹೌದು, ಅವನು ಹೇಳ್ತಿರೋದೆಲ್ಲ ಸತ್ಯ. ನೀವು ಸಹ ಅದನ್ನ ನಂಬಬೇಕು ಅಂತ ಹೇಳ್ತಾ ಇದ್ದಾನೆ.”—ಯೋಹಾನ 19:35.

 ಮತ್ತಾಯ, ಮಾರ್ಕ, ಲೂಕ ಮತ್ತು ಯೋಹಾನ ಬರೆದ ಸುವಾರ್ತಾ ಪುಸ್ತಕಗಳನ್ನ ನಾವು ನಂಬಬಹುದು. ಒಂದು ಕಾರಣ ಏನಂದ್ರೆ, ಈ ಪುಸ್ತಕಗಳನ್ನ ಬರೆದಿದ್ದು, ಈ ಘಟನೆಗಳನ್ನೆಲ್ಲ ನೋಡಿದ ಜನ ಇನ್ನೂ ಜೀವಂತವಾಗಿ ಇದ್ದ ಸಮಯದಲ್ಲಿ. ಮತ್ತಾಯ ಪುಸ್ತಕವನ್ನ ಯೇಸು ಸತ್ತ ನಂತರ ಎಂಟನೇ ವರ್ಷದಲ್ಲಿ ಅಂದ್ರೆ ಕ್ರಿ.ಶ. 41ರಲ್ಲಿ ಬರೆದ್ರು ಅಂತ ಕೆಲವು ರೆಫರೆನ್ಸ್‌ ಹೇಳುತ್ತೆ. ಆದ್ರೆ ಕೆಲವು ವಿದ್ವಾಂಸರು ಇದನ್ನ ಇನ್ನೂ ತಡವಾಗಿ ಬರೆಯಲಾಯ್ತು ಅಂತ ಹೇಳ್ತಾರೆ. ಆದ್ರೆ ಎಲ್ರೂ ಹೊಸ ಒಡಂಬಡಿಕೆಯ ಎಲ್ಲ ಪುಸ್ತಕಗಳನ್ನ ಮೊದಲನೇ ಶತಮಾನದಲ್ಲಿ ಬರೆಯಲಾಯ್ತು ಅಂತ ಹೇಳಿದ್ದಾರೆ.

 ಯೇಸು ಭೂಮಿಯಲ್ಲಿದ್ದಾಗ ಆತ ಸತ್ತಿದ್ದನ್ನ, ಮತ್ತೆ ಎದ್ದು ಬಂದಿದ್ದನ್ನ ನೋಡಿದ ಜನ ಈ ಸುವಾರ್ತಾ ಪುಸ್ತಕಗಳನ್ನ ಪರೀಕ್ಷೆ ಮಾಡೋ ಅವಕಾಶ ಇತ್ತು. ಒಂದುವೇಳೆ ಅದ್ರಲ್ಲಿ ಏನಾದ್ರೂ ತಪ್ಪು ಮಾಹಿತಿ ಇದ್ದಿದ್ರೆ ಅದನ್ನ ಅವರು ಸುಲಭವಾಗಿ ಎತ್ತಿ ತೋರಿಸಬಹುದಿತ್ತು. ಪ್ರೊಫೆಸರ್‌ ಎಫ್‌. ಎಫ್‌. ಬ್ರೂಸ್‌: “ಅಪೊಸ್ತಲರು ಜನರಿಗೆ ಗೊತ್ತಿದ್ದ ವಿಷ್ಯಗಳನ್ನೇ ಸಾರಿದರು. ಆದ್ದರಿಂದ ಅವರು ಧೈರ್ಯದಿಂದ ಮಾತಾಡುತ್ತಿದ್ದರು. ತಾವು ಮಾತಾಡುತ್ತಿದ್ದ ವಿಷ್ಯಗಳ ಬಗ್ಗೆ ಅವರು ‘ಈ ಎಲ್ಲ ವಿಷ್ಯಗಳಿಗೆ ನಾವೇ ಸಾಕ್ಷಿ’ ಅಂತ ಹೇಳೋದ್ರ ಜೊತೆಗೆ ‘ಈ ವಿಷ್ಯ ನಿಮಗೂ ಚೆನ್ನಾಗಿ ಗೊತ್ತು’ ಅಂತನೂ ಹೇಳಿದ್ದಾರೆ (ಅಪೊಸ್ತಲರ ಕಾರ್ಯ 2:22).”