ಕ್ರಿಸ್ಮಸ್‌ ಬಗ್ಗೆ ಬೈಬಲ್‌ ಏನು ಹೇಳುತ್ತೆ?

ಕ್ರಿಸ್ಮಸ್‌ ಬಗ್ಗೆ ಬೈಬಲ್‌ ಏನು ಹೇಳುತ್ತೆ?

ಬೈಬಲ್‌ ಕೊಡೋ ಉತ್ತರ

 ಯೇಸು ಹುಟ್ಟಿದ ದಿನಾಂಕ ಯಾವುದು ಅಂತಾಗ್ಲಿ ಅಥವಾ ಆತನ ಹುಟ್ಟು ಹಬ್ಬ ಮಾಡಬೇಕು ಅಂತಾಗ್ಲಿ ಬೈಬಲ್‌ ಎಲ್ಲೂ ಹೇಳಿಲ್ಲ. “ಕ್ರಿಸ್ಮಸ್‌ ಮಾಡಬೇಕು ಅಂತ ದೇವರು ಹೇಳಿಲ್ಲ ಅಥವಾ ಇದನ್ನ ಮಾಡಿ ಅನ್ನೋ ಆಜ್ಞೆ ಹೊಸ ಒಡಂಬಡಿಕೆಯಲ್ಲಿ ಇಲ್ಲ.”—ಮೆಕ್ಲಿಂಟಾಕ್‌ ಮತ್ತು ಸ್ಟ್ರಾಂಗ್ಸ್‌ ಸೈಕ್ಲೊಪೀಡಿಯ.

 ಹಾಗಾದ್ರೆ ಈ ಕ್ರಿಸ್ಮಸ್‌ ಎಲ್ಲಿಂದ ಬಂತು? ಇತಿಹಾಸನ ಚೆನ್ನಾಗಿ ನೋಡಿದ್ರೆ ಇದು ಸುಳ್ಳು ಧರ್ಮದ ಸಂಪ್ರದಾಯದಿಂದ ಬಂದಿದೆ ಅಂತ ಗೊತ್ತಾಗುತ್ತೆ. ದೇವರು ಒಪ್ಪದ ರೀತಿಯಲ್ಲಿ ಯಾರಾದ್ರೂ ಆತನನ್ನ ಆರಾಧಿಸಿದ್ರೆ ಆತನಿಗೆ ಕೋಪ ಬರುತ್ತೆ ಅಂತ ಬೈಬಲ್‌ ಹೇಳುತ್ತೆ.—ವಿಮೋಚನಕಾಂಡ 32:5-7.

ಕ್ರಿಸ್ಮಸ್‌ ಆಚರಣೆಯ ಇತಿಹಾಸ

  1.   ಯೇಸುವಿನ ಹುಟ್ಟು ಹಬ್ಬ: “ಆರಂಭದಲ್ಲಿದ್ದ ಕ್ರೈಸ್ತರು ಯೇಸುವಿನ ಹುಟ್ಟಿದ ಹಬ್ಬನ ಆಚರಿಸ್ತಾ ಇರಲಿಲ್ಲ. ಯಾಕಂದ್ರೆ ಯಾವುದೇ ವ್ಯಕ್ತಿಯ ಹುಟ್ಟಿದ ಹಬ್ಬನ ಆಚರಿಸೋದು ಸುಳ್ಳು ಧರ್ಮದ ಸಂಪ್ರದಾಯ ಅಂತ ಅವ್ರಿಗೆ ಗೊತ್ತಿತ್ತು.”—ದ ವರ್ಲ್ಡ್‌ ಬುಕ್‌ ಎನ್‌ಸೈಕ್ಲೊಪೀಡಿಯ.

  2.   ಡಿಸೆಂಬರ್‌ 25: ಯೇಸು ಈ ದಿನಾನೇ ಹುಟ್ಟಿದ್ದು ಅನ್ನೋಕೆ ಯಾವುದೇ ಆಧಾರ ಇಲ್ಲ. ಈ ಸಮಯದ ಆಸು ಪಾಸಲ್ಲಿ ಕೆಲವು ಸುಳ್ಳುಧರ್ಮದ ಹಬ್ಬಗಳನ್ನ ಆಚರಿಸುತ್ತಿದ್ರು. ಆದ್ರಿಂದ ಇದೇ ದಿನಾಂಕವನ್ನ ಚರ್ಚಿನ ಮುಖಂಡರು ಕ್ರಿಸ್ಮಸ್‌ಗೆ ಅಂತ ಆಯ್ಕೆ ಮಾಡಿದ್ರು.

  3.   ಗಿಫ್ಟ್‌ ಕೊಡೋದು, ತಿನ್ನೋದು, ಮಜಾ ಮಾಡೋದು: “ಡಿಸೆಂಬರ್‌ ತಿಂಗಳ ಮಧ್ಯದಲ್ಲಿ ಸ್ಯಾಟರ್ನೇಲ್ಯ ಅನ್ನೋ ಹಬ್ಬವನ್ನು ರೋಮನ್ನರು ಆಚರಿಸ್ತಿದ್ರು. ಇದ್ರಲ್ಲಿದ್ದ ಎಷ್ಟೋ ಸಂಪ್ರದಾಯಗಳನ್ನ ಉದಾಹರಣೆಗೆ, ಗಿಫ್ಟ್‌ ಕೊಡೋದು, ಪಾರ್ಟಿ ಮಾಡೋದು ಮತ್ತು ಕ್ಯಾಂಡಲ್‌ ಹಚ್ಚೋದನ್ನ ಇವತ್ತು ಕ್ರಿಸ್ಮಸ್‌ ಹಬ್ಬದಲ್ಲೂ ಮಾಡ್ತಿದ್ದಾರೆ” ಅಂತ ದ ಎನ್‌ಸೈಕ್ಲೋಪೀಡಿಯಾ ಅಮೆರಿಕಾನಾ ಹೇಳಿದೆ. ಸ್ಯಾಟರ್ನೇಲ್ಯ ಹಬ್ಬದ ಸಮಯದಲ್ಲಿ “ಯಾವುದೇ ಕೆಲಸ ಮತ್ತು ವ್ಯಾಪಾರಗಳನ್ನ ಮಾಡ್ತಾ ಇರ್ಲಿಲ್ಲ” ಅಂತ ದ ಎನ್‌ಸೈಕ್ಲೊಪೀಡಿಯ ಬ್ರಿಟಾನಿಕಾ ಹೇಳಿದೆ.

  4.   ಕ್ರಿಸ್ಮಸ್‌ ಲೈಟ್ಸ್‌: ಯೂರೋಪಿಯನ್ನರು ತಮ್ಮ ಮನೆಗಳನ್ನ “ಲೈಟ್‌ಗಳಿಂದ ಮತ್ತು ಹಸಿರು ಮರಗಳಿಂದ” ಅಲಂಕರಿಸ್ತಿದ್ರು ಅಂತ ದ ಎನ್‌ಸೈಕ್ಲೊಪೀಡಿಯ ಆಫ್‌ ರಿಲಿಜಿಯನ್‌ ಹೇಳಿದೆ. ಹೀಗೆ ಮಾಡಿದ್ರೆ ದೆವ್ವಗಳ ವಿರುದ್ಧ ಹೋರಾಡಬಹುದು ಅಂತ ಜನ ನೆನಸ್ತಿದ್ರು.

  5.   ಮಿಸಲ್‌ಟೋ ಮತ್ತು ಹಾಲಿ ಮರ: “ಮಿಸಲ್‌ಟೋ ಮರಗಳಲ್ಲಿ ಮಾಯಾಜಾಲದ ಶಕ್ತಿಯಿದೆ ಅಂತ ಡ್ರೂಯಿಡ್ಸ್‌ (ಧಾರ್ಮಿಕ ಮುಖಂಡರು, ಮಾಂತ್ರಿಕರು) ಎಂಬ ಗುಂಪು ಹೇಳುತ್ತಿತ್ತು. ಸೂರ್ಯ ಮತ್ತೆ ಬರ್ತಾನೆ ಅಂತ ಸೂಚಿಸೋಕೆ ನಿತ್ಯ ಹಸಿರಾಗಿರೋ ಹಾಲಿ ಅನ್ನೋ ಗಿಡವನ್ನು ಆರಾಧಿಸ್ತಿದ್ರು.”—ದ ಎನ್‌ಸೈಕ್ಲೊಪೀಡಿಯ ಅಮೆರಿಕಾನಾ.

  6.   ಕ್ರಿಸ್ಮಸ್‌ ಮರ: “ಯೂರೋಪಿನ ಹಲವಾರು ಸುಳ್ಳು ಧರ್ಮಗಳಲ್ಲಿ ಮರಗಳನ್ನ ಆರಾಧಿಸೋದು ಸಾಮಾನ್ಯವಾಗಿತ್ತು. ಇಲ್ಲಿನವರು ಕ್ರೈಸ್ತರಾಗಿ ಮತಾಂತರ ಆದಮೇಲೆ ಈ ವಾಡಿಕೆ ಕ್ರೈಸ್ತರಲ್ಲೂ ಬಂತು.” “ಚಳಿಗಾಲದ ರಜೆಯ ಸಮಯದಲ್ಲಿ ಮನೆಯ ಬಾಗಿಲ ಹತ್ರ ಅಥವಾ ಒಳಗಡೆ ಯೂಲೆ ಮರವನ್ನು (ಕ್ರಿಸ್ಮಸ್‌ ಮರ) ಇಡುವ ಪದ್ಧತಿ ಇತ್ತು.” ಹೀಗೆ ಮರವನ್ನು ಆರಾಧಿಸುವ ಪದ್ಧತಿ ಮುಂದುವರಿಯಿತು.—ಎನ್‌ಸೈಕ್ಲೊಪೀಡಿಯ ಬ್ರಿಟಾನಿಕಾ.