ಮಾಹಿತಿ ಇರುವಲ್ಲಿ ಹೋಗಲು

ಸತ್ತ ಮೇಲೆ ಏನಾಗುತ್ತೆ?

ಸತ್ತ ಮೇಲೆ ಏನಾಗುತ್ತೆ?

ಬೈಬಲ್‌ ಕೊಡೋ ಉತ್ತರ

ಬೈಬಲ್‌ ಹೀಗೆ ಹೇಳುತ್ತೆ: “ಬದುಕಿರುವವ್ರಿಗೆ ಒಂದಿನ ತಾವು ಸಾಯ್ತೀವಂತ ಗೊತ್ತಿರುತ್ತೆ. ಆದ್ರೆ ಸತ್ತವ್ರಿಗೆ ಏನೂ ಗೊತ್ತಿರಲ್ಲ.” (ಪ್ರಸಂಗಿ 9:5; ಕೀರ್ತನೆ 146:4) ಹಾಗಾಗಿ ನಾವು ಸತ್ತಾಗ ಇಲ್ಲದೆ ಹೋಗ್ತೇವೆ. ಸತ್ತ ವ್ಯಕ್ತಿ ಯೋಚಿಸೋಕೆ, ಕೆಲಸ ಮಾಡೋಕೆ, ಏನೂ ಅನುಭವಿಸೋಕೆ ಆಗಲ್ಲ.

‘ನೀನು ಮತ್ತೆ ಮಣ್ಣಿಗೇ ಹೋಗ್ತಿಯ’

ದೇವರು ಮೊದಲ ಮನುಷ್ಯನಾದ ಆದಾಮನ ಹತ್ರ ಮಾತಾಡುತ್ತಿದ್ದಾಗ ಸತ್ತ ಮೇಲೆ ಏನಾಗುತ್ತೆ ಅಂತ ವಿವರಿಸಿದನು. ಆದಾಮ ದೇವರ ಮಾತು ಕೇಳದೆ ಇದಿದ್ರಿಂದ ದೇವರು ಅವನಿಗೆ, “ನೀನು ಮಣ್ಣೇ, ಮತ್ತೆ ಮಣ್ಣಿಗೇ ಹೋಗ್ತಿಯ” ಎಂದು ಹೇಳಿದನು. (ಆದಿಕಾಂಡ 3:19) ದೇವರು ಆದಾಮನನ್ನು “ನೆಲದ ಮಣ್ಣಿಂದ” ಸೃಷ್ಟಿ ಮಾಡೋ ಮುಂಚೆ ಅವನು ಅಸ್ತಿತ್ವದಲ್ಲೇ ಇರಲಿಲ್ಲ. (ಆದಿಕಾಂಡ 2:7) ಆದಾಮ ಸತ್ತ ನಂತರ ಮಣ್ಣಲ್ಲಿ ಮಣ್ಣಾದ ಮತ್ತು ಮುಂಚಿನಂತೆ ಅಸ್ತಿತ್ವದಲ್ಲಿ ಇಲ್ಲದೆ ಹೋದ.

ಈಗ ಸಾಯುವವರ ಸ್ಥಿತಿ ಹೀಗೆ ಇದೆ. ಮನುಷ್ಯ ಮತ್ತು ಪ್ರಾಣಿಯ ಬಗ್ಗೆ ಬೈಬಲ್‌ ಹೀಗೆ ಹೇಳುತ್ತೆ, “ಎಲ್ಲಾ ಮಣ್ಣಿಂದ ಆಯ್ತು, ಎಲ್ಲಾ ಮತ್ತೆ ಮಣ್ಣಿಗೇ ಸೇರುತ್ತೆ.”—ಪ್ರಸಂಗಿ 3:19, 20.

ಸಾವೇ ಎಲ್ಲದರ ಕೊನೆ ಅಲ್ಲ

ಬೈಬಲ್‌ ಸಾವನ್ನ ನಿದ್ರೆಗೆ ಹೋಲಿಸುತ್ತೆ. (ಕೀರ್ತನೆ 13:3; ಯೋಹಾನ 11:11-14; ಅಪೊಸ್ತಲರ ಕಾರ್ಯ 7:60) ಗಾಢ ನಿದ್ರೆ ಮಾಡೋ ವ್ಯಕ್ತಿಗೆ ತನ್ನ ಸುತ್ತಮುತ್ತ ಏನ್‌ ನಡಿತಿದೆ ಅಂತ ಗೊತ್ತಿರಲ್ಲ. ಅದೇ ರೀತಿ ಸತ್ತವರಿಗೆ ಏನೂ ಗೊತ್ತಿರಲ್ಲ. ನಿದ್ದೆ ಮಾಡೋ ವ್ಯಕ್ತಿಯನ್ನ ಎಬ್ಬಿಸುವಂತೆ ದೇವರು ಸತ್ತವರನ್ನ ಎಬ್ಬಿಸಿ ಜೀವ ಕೊಡ್ತಾನೆ ಅಂತ ಬೈಬಲ್‌ ಕಲಿಸುತ್ತೆ. (ಯೋಬ 14:13-15) ದೇವರು ಸತ್ತವರನ್ನ ಎಬ್ಬಿಸುವುದ್ರಿಂದ ಸಾವೇ ಎಲ್ಲದರ ಕೊನೆ ಅಲ್ಲ.