ದೇವರು ವ್ಯಕ್ತಿನಾ ಅಥವಾ ಕೇವಲ ಒಂದು ಶಕ್ತಿನಾ?
ಬೈಬಲ್ ಕೊಡೋ ಉತ್ತರ
ಇಡೀ ವಿಶ್ವದಲ್ಲಿ ದೇವರು ತನ್ನ ಅಪಾರ ಶಕ್ತಿಯನ್ನ ಬಳಸ್ತಾನೆ. ದೇವರು ಕೊಟ್ಯಾನುಕೋಟಿ ನಕ್ಷತ್ರಗಳನ್ನ ಸೃಷ್ಟಿ ಮಾಡಿದ್ರ ಬಗ್ಗೆ ಬೈಬಲ್ ಹೀಗೆ ಹೇಳುತ್ತೆ: “ನಿಮ್ಮ ಕಣ್ಣುಗಳನ್ನ ಮೇಲೆತ್ತಿ, ಆಕಾಶದ ಕಡೆ ನೋಡಿ. ನಕ್ಷತ್ರಗಳನ್ನ ಸೃಷ್ಟಿ ಮಾಡಿದವರು ಯಾರು? ಅವುಗಳಲ್ಲಿ ಒಂದೊಂದನ್ನ ಎಣಿಸಿ ಲೆಕ್ಕಮಾಡಿದವನೇ. ಆತನು [ದೇವರು] ಅವುಗಳಲ್ಲಿ ಪ್ರತಿಯೊಂದನ್ನ ಹೆಸರಿಡಿದು ಕರಿತಾನೆ. ಆತನ ಅಪಾರ ಶಕ್ತಿಯಿಂದಾಗಿ, ಭಯವಿಸ್ಮಯ ಹುಟ್ಟಿಸೋ ಆತನ ಬಲದಿಂದಾಗಿ, ಅವುಗಳಲ್ಲಿ ಒಂದೂ ಕಾಣದೆ ಹೋಗಲ್ಲ.”—ಯೆಶಾಯ 40:25, 26.
ಆದರೆ ದೇವರಿಗೆ ಅಪಾರವಾದ ಶಕ್ತಿ ಜೊತೆ ಭಾವನೆಗಳೂ ಇದೆ. ಆತನಿಗೆ ಪ್ರೀತಿ ಹಾಗೂ ದ್ವೇಷ ಅನ್ನೋ ಭಾವನೆಗಳಿವೆ ಅಂತ ಬೈಬಲ್ ಹೇಳುತ್ತೆ. (ಕೀರ್ತನೆ 11:5; ಯೋಹಾನ 3:16) ಅಷ್ಟೇ ಅಲ್ಲ, ಜನ್ರು ನಡ್ಕೊಳ್ಳೋ ರೀತಿ ಕೂಡ ದೇವರ ಭಾವನೆಗಳ ಮೇಲೆ ಪರಿಣಾಮ ಬೀರುತ್ತೆ ಅಂತ ಬೈಬಲ್ ಹೇಳುತ್ತೆ.—ಕೀರ್ತನೆ 78:40, 41.

