ದೇವರು ತ್ರಯೇಕದ (ಟ್ರಿನಿಟಿ) ಭಾಗನಾ?
ಬೈಬಲ್ ಕೊಡೋ ಉತ್ತರ
ಅನೇಕ ಕ್ರೈಸ್ತ ಧರ್ಮದ ಪಂಗಡಗಳು ದೇವರು ತ್ರಯೇಕದ (ಟ್ರಿನಿಟಿ) ಭಾಗ ಅಂತ ಕಲಿಸುತ್ತೆ. ಆದರೆ, ಎನ್‌ಸೈಕ್ಲೋಪೀಡಿಯಾ ಬ್ರಿಟಾನಿಕಾ ಇದರ ಬಗ್ಗೆ ಹೀಗೆ ಹೇಳುತ್ತೆ: “ತ್ರಯೇಕ (ಟ್ರಿನಿಟಿ) ಅನ್ನೋ ಪದವಾಗಲಿ ಅಥವಾ ಅಂಥ ಒಂದು ಸಿದ್ಧಾಂತವಾಗಲಿ ಹೊಸ ಒಡಂಬಡಿಕೆಯಲ್ಲಿ ಕಂಡುಬರುವುದಿಲ್ಲ . . . ಈ ಸಿದ್ಧಾಂತವು ಅನೇಕ ಶತಮಾನಗಳ ನಂತರ ತುಂಬ ವಾದವಿವಾದಗಳಾದ ಮೇಲೆ, ಸಮಯ ಕಳೆದ ಹಾಗೆ ಹುಟ್ಟಿಕೊಂಡಿದೆ.
ನಿಜ ಏನಂದ್ರೆ, ಬೈಬಲಿನಲ್ಲಿ ದೇವರನ್ನ ತ್ರಯೇಕದ ಭಾಗ ಅಂತ ಎಲ್ಲೂ ಹೇಳಿಲ್ಲ. ಇಲ್ಲಿ ಕೊಡಲಾಗಿರೋ ಕೆಲವು ಬೈಬಲ್ ವಚನಗಳನ್ನ ನೋಡಿ :
“ನಮ್ಮ ದೇವರಾದ ಯೆಹೋವ ಒಬ್ಬನೇ ಯೆಹೋವ.”—ಧರ್ಮೋಪದೇಶಕಾಂಡ 6:4.
“ಯೆಹೋವ ಅನ್ನೋ ಹೆಸ್ರಿರೋ ನೀನೊಬ್ಬನೇ ಇಡೀ ಭೂಮಿಯಲ್ಲಿ ಸರ್ವೋನ್ನತ ದೇವರು.”—ಕೀರ್ತನೆ 83:18.
“ಶಾಶ್ವತ ಜೀವ ಸಿಗಬೇಕಾದ್ರೆ ಒಬ್ಬನೇ ಸತ್ಯ ದೇವರಾಗಿರೋ ನಿನ್ನನ್ನ ಮತ್ತು ನೀನು ಕಳಿಸ್ಕೊಟ್ಟ ಯೇಸು ಕ್ರಿಸ್ತನನ್ನ ತಿಳ್ಕೊಳ್ಳಲೇಬೇಕು.”—ಯೋಹಾನ 17:3.
‘ದೇವರು ಒಬ್ಬನೇ.’—ಗಲಾತ್ಯ 3:20.
ಹೆಚ್ಚಿನ ಕ್ರೈಸ್ತ ಧರ್ಮದ ಪಂಗಡಗಳು ದೇವರು ತ್ರಯೇಕದ (ಟ್ರಿನಿಟಿ) ಭಾಗ ಅಂತ ಯಾಕೆ ಹೇಳುತ್ತೆ?

