ಜೂಜಾಡೋದು ತಪ್ಪಾ?
ಬೈಬಲ್ ಕೊಡೋ ಉತ್ತರ
ಬೈಬಲ್ ಜೂಜಾಡೋದರ ಬಗ್ಗೆ ವಿವರವಾಗಿ ಏನೂ ಹೇಳೋದಿಲ್ಲ, ಆದರೆ ಜೂಜಾಡೋದು ದೇವರ ದೃಷ್ಟಿಯಲ್ಲಿ ಪಾಪವಾಗಿದೆ ಅಂತ ನಾವು ಬೈಬಲ್ ತತ್ವಗಳಿಂದ ಅರ್ಥಮಾಡಿಕೊಳ್ಳಲು ಆಗುತ್ತೆ.—ಎಫೆಸ 5:17. a
ಜೂಜಾಡೋದಕ್ಕೆ ಕಾರಣ ಅತಿಯಾಸೆ ಅಥವಾ ದುರಾಸೆ. ದೇವರು ದುರಾಸೆಯನ್ನ ದ್ವೇಷಿಸ್ತಾನೆ. (1 ಕೊರಿಂಥ 6:9, 10; ಎಫೆಸ 5:3, 5) ಜೂಜಾಡೋರು ಬೇರೆಯವರ ನಷ್ಟದಿಂದ ಲಾಭ ಪಡೆಯೋಕೆ ಇಷ್ಟ ಪಡ್ತಾರೆ, ಆದರೆ ಬೇರೆಯವರಿಗೆ ಸೇರಿದ ವಸ್ತುಗಳಿಗೆ ಆಸೆ ಪಡೋದನ್ನ ಬೈಬಲ್ ಖಂಡಿಸುತ್ತೆ.—ವಿಮೋಚನಕಾಂಡ 20:17; ರೋಮನ್ನರಿಗೆ 7:7; 13:9, 10.
ನಾವು ಸ್ವಲ್ಪ ಹಣಕ್ಕಾಗಿ ಜೂಜಾಡಿದರೂ ಅದು ನಮ್ಮಲ್ಲಿ ಅಪಾಯಕಾರಿಯಾಗಿರೋ ಹಣದಾಸೆಯನ್ನ ಬೆಳೆಸಬಹುದು.—1 ತಿಮೊತಿ 6:9, 10.
ಜೂಜಾಡೋರು ಸಾಮಾನ್ಯವಾಗಿ ಮೂಢನಂಬಿಕೆಗಳ ಮೇಲೆ ಅಥವಾ ಅದೃಷ್ಟದ ಮೇಲೆ ಭರವಸೆ ಇಟ್ಟಿರುತ್ತಾರೆ. ಆದರೆ ಇಂಥ ನಂಬಿಕೆಗಳು ಸತ್ಯಾರಾಧನೆಗೆ ವಿರುದ್ಧವಾಗಿದೆ ಹಾಗೂ ದೇವರು ಇದನ್ನ ವಿಗ್ರಹಾರಾಧನೆಗೆ ಸಮವಾಗಿ ನೋಡ್ತಾನೆ.—ಯೆಶಾಯ 65:11.
ಯಾವುದೇ ಕೆಲಸ ಮಾಡದೆ ಕೂತ್ಕೊಂಡ್ ತಿನ್ನೋದನ್ನ, ಪ್ರಯತ್ನ ಇಲ್ಲದೆ ಲಾಭ ಸಿಗಬೇಕು ಅನ್ನೋ ಯೋಚನೆಯನ್ನ ದೇವರು ಇಷ್ಟ ಪಡಲ್ಲ. ಬೈಬಲ್‌ನಲ್ಲಿ ನಾವು ಕಷ್ಟಪಟ್ಟು ದುಡಿಬೇಕು ಅಂತ ಇದೆ. (ಪ್ರಸಂಗಿ 2:24; ಎಫೆಸ 4:28) ಈ ಬೈಬಲ್ ಸಲಹೆಯನ್ನ ಪಾಲಿಸುವವರು, ಅವರೇ ದುಡಿದ ಹಣದಿಂದ ಊಟ ಮಾಡ್ತಾ ಖುಷಿಯಾಗಿರ್ತಾರೆ.—2 ಥೆಸಲೋನಿಕ 3:10, 12.
ಜೂಜಾಡೋದು ಅಪಾಯಕಾರಿ ಸ್ಪರ್ಧಾತ್ಮಕ ಮನೋಭಾವವನ್ನ ಬೆಳೆಸುತ್ತೆ. ಇಂಥ ಮನೋಭಾವವನ್ನ ಬೈಬಲ್ ಖಂಡಿಸುತ್ತೆ.—ಗಲಾತ್ಯ 5:26.
a ರೋಮನ್ ಸೈನಿಕರು ಯೇಸುವಿನ ಬಟ್ಟೆಗಾಗಿ “ಚೀಟು ಹಾಕಿದರು” ಅಥವಾ “ಜೂಜಾಡಿದರು” ಅಂತ ಬೈಬಲ್ ಹೇಳುತ್ತೆ. ಈ ಒಂದು ಸನ್ನಿವೇಶದಲ್ಲಿ ಮಾತ್ರ ಬೈಬಲ್ ನೇರವಾಗಿ ಜೂಜಾಡೋದರ ಬಗ್ಗೆ ಹೇಳುತ್ತೆ.—ಮತ್ತಾಯ 27:35; ಯೋಹಾನ 19:23, 24; ಕಂಟೆಂಪರರಿ ಇಂಗ್ಲಿಷ್ ವರ್ಷನ್; ಗುಡ್ ನ್ಯೂಸ್ ಟ್ರಾನ್ಸ್‌ಲೇಶನ್.

