ಮಾಹಿತಿ ಇರುವಲ್ಲಿ ಹೋಗಲು

ಕನ್ಯೆ ಮರಿಯ ಬಗ್ಗೆ ಬೈಬಲ್‌ ಏನು ಹೇಳುತ್ತೆ?

ಕನ್ಯೆ ಮರಿಯ ಬಗ್ಗೆ ಬೈಬಲ್‌ ಏನು ಹೇಳುತ್ತೆ?

 ಬೈಬಲ್‌ ಕೊಡೋ ಉತ್ತರ

 ಕನ್ಯೆ ಆಗಿದ್ದಾಗ್ಲೇ ಯೇಸುವಿನ ತಾಯಿ ಆಗೋ ದೊಡ್ಡ ಅವಕಾಶ ಮರಿಯಗೆ ಸಿಕ್ತು ಅಂತ ಬೈಬಲ್‌ ಹೇಳುತ್ತೆ. ಈ ಅದ್ಭುತದ ಬಗ್ಗೆ ಯೆಶಾಯ ಪುಸ್ತಕದಲ್ಲಿ ಭವಿಷ್ಯವಾಣಿ ಇತ್ತು. ಅದು ನಿಜ ಆಯ್ತು ಅಂತ ಮತ್ತಾಯ ಮತ್ತು ಲೂಕ ಪುಸ್ತಕದಲ್ಲಿ ದಾಖಲೆ ಇದೆ.

 ಮೆಸ್ಸೀಯ ಹುಟ್ಟೋದ್ರ ಬಗ್ಗೆ ಯೆಶಾಯ ಈ ಭವಿಷ್ಯವಾಣಿ ಹೇಳಿದ್ದ: “ಇಗೋ, ಒಬ್ಬ ಕನ್ನಿಕೆಯು ಗರ್ಭಿಣಿಯಾಗಿ ಮಗನನ್ನು” ಪಡಿತಾಳೆ. (ಯೆಶಾಯ 7:14) ಮರಿಯಳ ಹೊಟ್ಟೇಲಿ ಯೇಸು ಹುಟ್ತಾನೆ ಅನ್ನೋ ಯೆಶಾಯನ ಭವಿಷ್ಯವಾಣಿ ನಿಜ ಆಯ್ತು ಅಂತ ಮತ್ತಾಯ ದೇವರ ಸಹಾಯದಿಂದ ಹೇಳಿದ. ಮರಿಯ ಅದ್ಭುತವಾಗಿ ಗರ್ಭಿಣಿಯಾದ ವಿಷ್ಯವನ್ನ ಮತ್ತಾಯ ಹೇಳಿದ ಮೇಲೆ ಹೀಗಂದ: “ಯೆಹೋವನು ತನ್ನ ಪ್ರವಾದಿಯ ಮೂಲಕ ಹೇಳಿದ ಮಾತುಗಳು ನೆರವೇರುವಂತೆ ಇದೆಲ್ಲ ಸಂಭವಿಸಿತು; ಆ ಮಾತೇನೆಂದರೆ, ‘ಇಗೋ! ಒಬ್ಬ ಕನ್ಯೆಯು a ಗರ್ಭಿಣಿಯಾಗಿ ಒಂದು ಗಂಡುಮಗುವನ್ನು ಹೆರುವಳು ಮತ್ತು ಅವರು ಅವನನ್ನು ಇಮ್ಮಾನುವೇಲ್‌ ಎಂಬ ಹೆಸರಿನಿಂದ ಕರೆಯುವರು.’ ಭಾಷಾಂತರಿಸಿದಾಗ ಇದರ ಅರ್ಥ, ‘ದೇವರು ನಮ್ಮೊಂದಿಗಿದ್ದಾನೆ.’”—ಮತ್ತಾಯ 1:22, 23.

 ಮರಿಯ ಅದ್ಭುತವಾಗಿ ಗರ್ಭಿಣಿ ಆಗಿದ್ರ ಬಗ್ಗೆ ಲೂಕ ಕೂಡ ಬರೆದಿದ್ದಾನೆ. “ದಾವೀದನ ಮನೆತನದವನಾದ ಯೋಸೇಫನೆಂಬ ಪುರುಷನಿಗೆ ವಿವಾಹ ನಿಶ್ಚಯವಾಗಿದ್ದ ಒಬ್ಬ ಕನ್ಯೆಯ ಬಳಿಗೆ ದೇವರಿಂದ ಕಳುಹಿಸಲ್ಪಟ್ಟನು; ಆ ಕನ್ಯೆಯ ಹೆಸರು ಮರಿಯ,” ಇವಳ ಹತ್ರ ಗಬ್ರಿಯೇಲ ದೇವದೂತನನ್ನ ದೇವರು ಕಳಿಸಿದ್ರ ಬಗ್ಗೆ ಲೂಕ ಬೈಬಲಲ್ಲಿ ಬರೆದಿದ್ದಾನೆ. (ಲೂಕ 1:26, 27) ತಾನು ಕನ್ಯೆ ಅಂತ ಮರಿಯ ಕೂಡ ಹೇಳಿದಳು. ಅವಳು ಮೆಸ್ಸೀಯನಾದ ಯೇಸುವಿನ ತಾಯಿ ಆಗ್ತಾಳೆ ಅನ್ನೋ ವಿಷ್ಯ ಗೊತ್ತಾದಾಗ “ಇದು ಹೇಗಾದೀತು? ನಾನು ಪುರುಷನೊಂದಿಗೆ ಸಂಭೋಗಮಾಡಲಿಲ್ಲವಲ್ಲಾ” ಅಂದಳು.—ಲೂಕ 1:34.

 ಕನ್ಯೆ ಆಗಿದ್ರೂ ಮರಿಯಗೆ ಹೇಗೆ ಮಗು ಹುಟ್ತು?

 ಮರಿಯ ಪವಿತ್ರಾತ್ಮದ ಮೂಲಕ ಅಂದ್ರೆ ದೇವರ ಶಕ್ತಿಯಿಂದ ಗರ್ಭಿಣಿ ಆದಳು. (ಮತ್ತಾಯ 1:18) ದೇವದೂತ ಮರಿಯಗೆ “ಪವಿತ್ರಾತ್ಮವು ನಿನ್ನ ಮೇಲೆ ಬರುವುದು ಮತ್ತು ಮಹೋನ್ನತನ ಶಕ್ತಿಯು ನಿನ್ನನ್ನು ಆವರಿಸುವುದು. ಈ ಕಾರಣದಿಂದ ಹುಟ್ಟುವವನು ಪವಿತ್ರನೆಂದೂ ದೇವರ ಮಗನೆಂದೂ b ಕರೆಯಲ್ಪಡುವನು” ಅಂದನು. (ಲೂಕ 1:35) ದೇವರು ತನ್ನ ಮಗನ ಜೀವವನ್ನ ಅದ್ಭುತವಾಗಿ ಮರಿಯಳ ಗರ್ಭದ ಒಳಗೆ ಹಾಕಿದನು. ಆಗ ಅವಳು ಗರ್ಭಿಣಿ ಆದಳು.

 ದೇವರು ಯಾಕೆ ಕನ್ಯೆಯನ್ನೇ ಆರಿಸ್ಕೊಂಡನು?

 ಯೇಸು ಒಬ್ಬ ಪರಿಪೂರ್ಣ ಮನುಷ್ಯನಾಗಿ ಹುಟ್ಟೋ ಅಗತ್ಯ ಇತ್ತು. ಹಾಗೆ ಹುಟ್ಟಿದ್ರೆ ಮನುಷ್ಯರನ್ನ ಪಾಪ ಮತ್ತು ಮರಣದಿಂದ ಬಿಡಿಸೋಕೆ ಯೇಸುಗೆ ಆಗ್ತಿತ್ತು. ಹಾಗಾಗಿ ಯೇಸುವಿನ ತಾಯಿ ಆಗೋಕೆ ಒಬ್ಬ ಕನ್ಯೆಯನ್ನ ದೇವರು ಆರಿಸ್ಕೊಂಡನು. (ಯೋಹಾನ 3:16; ಇಬ್ರಿಯ 10:5) ದೇವರು ಯೇಸುವಿನ ಜೀವವನ್ನ ಮರಿಯಳ ಗರ್ಭಕ್ಕೆ ಹಾಕಿದನು. ಗರ್ಭದಲ್ಲಿ ಬೆಳಿಯೋಕೆ ಶುರುವಾದ ಮಗುಗೆ ಅಪರಿಪೂರ್ಣತೆ ಒಂಚೂರೂ ತಾಗದ ಹಾಗೇ ದೇವರ ಪವಿತ್ರಾತ್ಮ ತಡೀತು.—ಲೂಕ 1:35.

 ಹೀಗೆ ಆದಾಮ ಪಾಪ ಮಾಡೋ ಮುಂಚೆ ಹೇಗೆ ಪರಿಪೂರ್ಣವಾಗಿ ಇದ್ನೋ ಅದೇ ತರ ಯೇಸು ಪರಿಪೂರ್ಣ ಮನುಷ್ಯನಾಗಿ ಹುಟ್ಟಿದನು. ಯೇಸು “ಯಾವ ಪಾಪವನ್ನೂ ಮಾಡಲಿಲ್ಲ” ಅಂತ ಬೈಬಲ್‌ ಹೇಳುತ್ತೆ. (1 ಪೇತ್ರ 2:22) ಪರಿಪೂರ್ಣ ಮನುಷ್ಯನಾಗಿ ಇದ್ದಿದ್ರಿಂದ ಯೇಸು ತನ್ನ ಪ್ರಾಣ ಕೊಟ್ಟು ಮನುಷ್ಯರನ್ನ ಪಾಪ ಮತ್ತು ಮರಣದಿಂದ ಬಿಡಿಸೋಕೆ ಆಯ್ತು.—1 ಕೊರಿಂಥ 15:21, 22; 1 ತಿಮೊತಿ 2:5, 6.

 ಮರಿಯ ಕೊನೇ ತನಕ ಕನ್ಯೆಯಾಗೇ ಇದ್ದಳಾ?

 ಕೊನೇ ತನಕ ಮರಿಯ ಕನ್ಯೆಯಾಗೇ ಇದ್ದಳು ಅಂತ ಬೈಬಲ್‌ ಕಲಿಸಲ್ಲ. ಯೇಸು ಹುಟ್ಟಿದ ಮೇಲೆ ಮರಿಯಗೆ ಬೇರೆ ಮಕ್ಕಳು ಹುಟ್ಟಿದ್ರು ಅಂತ ಬೈಬಲ್‌ ಹೇಳುತ್ತೆ.—ಮತ್ತಾಯ 12:46; ಮಾರ್ಕ 6:3; ಲೂಕ 2:7; ಯೋಹಾನ 7:5.

ಯೇಸುಗೆ ತಮ್ಮ-ತಂಗಿಯರಿದ್ರು ಅಂತ ಬೈಬಲ್‌ ಹೇಳುತ್ತೆ

 ಆದಾಮನಿಂದ ಬಂದ ಪಾಪ ಮರಿಯಳಲ್ಲಿ ಇರಲಿಲ್ವಾ?

 ಇತ್ತು. ಆದಾಮನಿಂದ ಬಂದ ಪಾಪ ಮರಿಯಳಲ್ಲಿ ಇರಲಿಲ್ಲ ಅನ್ನೋ ಬೋಧನೆ “ಕನ್ಯೆ ಮರಿಯ ಮೊದಲಿಂದನೂ ಅಂದ್ರೆ ಅವಳು ತಾಯಿ ಹೊಟ್ಟೇಲಿ ಇದ್ದಾಗಿಂದ ಅವಳಲ್ಲಿ ಪಾಪ ಇರಲಿಲ್ಲ ಅಂತ ಕಲಿಸಿದೆ. ಬೇರೆ ಎಲ್ಲಾ ಮನುಷ್ಯರಿಗೆ ಪಾಪ ಅನ್ನೋದು ರಕ್ತದಲ್ಲಿ ಬಂದಿದೆ. . . . ಆದ್ರೆ ಮರಿಯಗೆ ದೇವರ ಕೃಪೆಯಿಂದ ಆ ಪಾಪ ಯಾವತ್ತೂ ಸಿಕ್ಕಿಲ್ಲ” ಅಂತ ನ್ಯೂ ಕ್ಯಾಥೋಲಿಕ್‌ ಎನ್‌ಸೈಕ್ಲಪಿಡೀಯ ಹೇಳುತ್ತೆ. c

 ಆದ್ರೆ ಬೈಬಲ್‌, ಆದಾಮನಿಂದ ಬಂದ ಪಾಪ ಮರಿಯಳಲ್ಲಿ ಇರಲಿಲ್ಲ ಅಂತ ಕಲಿಸೋದೇ ಇಲ್ಲ. (ಕೀರ್ತನೆ 51:5; ರೋಮನ್ನರಿಗೆ 5:12) ಅಷ್ಟೇ ಅಲ್ಲ, ಮೋಶೆಯ ಧರ್ಮಶಾಸ್ತ್ರದ ಪ್ರಕಾರ ತಾಯಂದಿರು ಕೊಡಬೇಕಾದ ಯಜ್ಞವನ್ನ ಮರಿಯ ಅರ್ಪಿಸಿ ತಾನು ಪಾಪಿ ಅಂತ ಒಪ್ಪಿಕೊಂಡಳು. (ಯಾಜಕಕಾಂಡ 12:2-8; ಲೂಕ 2:21-24) ನ್ಯೂ ಕ್ಯಾಥೋಲಿಕ್‌ ಎನ್‌ಸೈಕ್ಲಪಿಡೀಯ “ಆದಾಮನಿಂದ ಬಂದ ಪಾಪ ಮರಿಯಳಲ್ಲಿ ಇರಲಿಲ್ಲ ಅಂತ ಬೈಬಲಲ್ಲಿ ಎಲ್ಲೂ ಕಲಿಸಲ್ಲ. . . . ಇದು ಚರ್ಚ್‌ ಕಲಿಸೋ ಬೋಧನೆ.”

 ಮರಿಯ ಬಗ್ಗೆ ನಾವೇನು ಕಲಿಬಹುದು?

 ನಂಬಿಕೆ, ವಿಧೇಯತೆ, ದೀನತೆ, ದೇವರ ಮೇಲೆ ಭಕ್ತಿ ಇದಕ್ಕೆಲ್ಲ ಮರಿಯ ಒಳ್ಳೇ ಉದಾಹರಣೆ. ದೇವರಿಗೆ ನಂಬಿಗಸ್ತರಾಗಿದ್ದ ಬೇರೆ ವ್ಯಕ್ತಿಗಳ ಹಾಗೆ ಇವಳೂ ನಂಬಿಗಸ್ತಳಾಗಿದ್ದಳು. ಇವಳಿಂದ ನಾವು ತುಂಬ ವಿಷ್ಯ ಕಲೀಬಹುದು.—ಇಬ್ರಿಯ 6:12.

 ಯೇಸುವಿನ ತಾಯಿ ಆಗೋ ದೊಡ್ಡ ಅವಕಾಶ ಅವಳಿಗೆ ಸಿಕ್ತು ಅಂತ ಬೈಬಲ್‌ ಹೇಳುತ್ತೆ. ಆದ್ರೆ ಅವಳನ್ನ ಆರಾಧನೆ ಮಾಡಬೇಕು, ಅವಳಿಗೆ ಪ್ರಾರ್ಥಿಸಬೇಕು ಅಂತ ಬೈಬಲ್‌ ಕಲಿಸಲ್ಲ. ಯೇಸು ಕೂಡ ತನ್ನ ತಾಯಿಗೆ ವಿಶೇಷ ಗೌರವ ಕೊಟ್ಟಿಲ್ಲ, ಕೊಡಿ ಅಂತ ತನ್ನ ಶಿಷ್ಯರಿಗೂ ಹೇಳಿಲ್ಲ. ಸುವಾರ್ತಾ ಪುಸ್ತಕಗಳಲ್ಲಿ, ಅದನ್ನ ಬಿಟ್ರೆ ಅಪೊಸ್ತಲರ ಕಾರ್ಯದಲ್ಲಿ ಒಂದೇ ಒಂದು ಸಾರಿ ಮರಿಯ ಬಗ್ಗೆ ಇದೆ. ಹೊಸ ಒಡಂಬಡಿಕೆಯಲ್ಲಿ ಉಳಿದಿರೋ 22 ಪುಸ್ತಕಗಳಲ್ಲಿ ಅವಳ ಬಗ್ಗೆ ಏನೂ ಹೇಳಿಲ್ಲ.—ಅಪೊಸ್ತಲರ ಕಾರ್ಯ 1:14.

 ಒಂದನೇ ಶತಮಾನದ ಕ್ರೈಸ್ತರು ಮರಿಯಗೆ ವಿಶೇಷ ಗೌರವ ಕೊಡ್ತಿದ್ರು, ಅವಳನ್ನ ಆರಾಧನೆ ಮಾಡ್ತಿದ್ರು ಅಂತ ಬೈಬಲಲ್ಲಿ ಎಲ್ಲೂ ಇಲ್ಲ. ಕ್ರೈಸ್ತರು ದೇವರನ್ನ ಮಾತ್ರ ಆರಾಧಿಸಬೇಕು ಅಂತ ಬೈಬಲ್‌ ಕಲಿಸುತ್ತೆ.—ಮತ್ತಾಯ 4:10.

a “ಕನ್ನಿಕೆ” ಅನ್ನೋದಕ್ಕೆ ಯೆಶಾಯ ಬಳಸಿರೋ ಹೀಬ್ರು ಪದ ‘ಆಲ್ಮಾ.’ ಇದ್ರ ಅರ್ಥ ಕನ್ಯೆ ಅಥವಾ ಕನ್ಯೆ ಅಲ್ಲದ ಮಹಿಳೆ. ಆದ್ರೆ ದೇವರ ಸಹಾಯದಿಂದ ಮತ್ತಾಯ ಬಳಸಿರೋ ಗ್ರೀಕ್‌ ಪದ ‘ಪಾರ್ತಿನೋಸ್‌.’ ಇದ್ರ ಅರ್ಥ “ಕನ್ಯೆ.”

b ಯೇಸುವನ್ನ “ದೇವರ ಮಗ” ಅಂತ ಕರಿಯೋದು ಸರಿಯಲ್ಲ ಅಂತಾರೆ ಕೆಲವರು. ಯಾಕಂದ್ರೆ ದೇವರು ಮರಿಯಳ ಜೊತೆ ಲೈಂಗಿಕ ಸಂಬಂಧ ಇಟ್ಟುಕೊಂಡನು ಅನ್ನೋ ಅರ್ಥ ಬಂದುಬಿಡುತ್ತೆ ಅಂತ ಅವರು ಹೇಳ್ತಾರೆ. ಆದ್ರೆ ಬೈಬಲ್‌ ಹೀಗೆ ಕಲಿಸಲ್ಲ. ಬೈಬಲ್‌ ಯೇಸುವನ್ನ “ದೇವರ ಮಗ,” “ಸೃಷ್ಟಿಗೆಲ್ಲಾ ಜ್ಯೇಷ್ಠಪುತ್ರ” ಅಂತಾನೇ ಹೇಳುತ್ತೆ. ಯಾಕಂದ್ರೆ ಯೇಸುವನ್ನೇ ದೇವರು ಮೊದಲು ಸೃಷ್ಟಿ ಮಾಡಿದನು, ತನ್ನ ಕೈಯಾರೆ ಸೃಷ್ಟಿ ಮಾಡಿದನು. (ಕೊಲೊಸ್ಸೆ 1:13-15) ಮೊದಲ ಮನುಷ್ಯನಾದ ಆದಾಮನನ್ನ “ದೇವರ ಮಗ” ಅಂತ ಬೈಬಲ್‌ ಕರಿಯುತ್ತೆ. (ಲೂಕ 3:38) ಯಾಕಂದ್ರೆ ಆದಾಮನನ್ನ ದೇವರೇ ಸೃಷ್ಟಿ ಮಾಡಿದ್ದು.

c ಎರಡನೇ ಆವೃತ್ತಿ, ಸಂಚಿಕೆ 7, ಪುಟ 331.