ಮಾಹಿತಿ ಇರುವಲ್ಲಿ ಹೋಗಲು

ಎಲ್ಲಾ ಧರ್ಮಗಳು ಒಂದೇನಾ? ಅವು ಸತ್ಯ ದೇವರನ್ನ ತಿಳಿದುಕೊಳ್ಳೋಕೆ ಸಹಾಯ ಮಾಡುತ್ತಾ?

ಎಲ್ಲಾ ಧರ್ಮಗಳು ಒಂದೇನಾ? ಅವು ಸತ್ಯ ದೇವರನ್ನ ತಿಳಿದುಕೊಳ್ಳೋಕೆ ಸಹಾಯ ಮಾಡುತ್ತಾ?

ಬೈಬಲ್‌ ಕೊಡೋ ಉತ್ತರ

 ಇಲ್ಲ. ಎಲ್ಲಾ ಧರ್ಮಗಳು ಒಂದೇ ಅಲ್ಲ. ಬೈಬಲಿನಲ್ಲಿ ಕೂಡ ದೇವರು ಇಷ್ಟಪಡದ ಅನೇಕ ಧರ್ಮಗಳ ಬಗ್ಗೆ ತಿಳಿಸಲಾಗಿದೆ. ಇದರಲ್ಲಿ ಎರಡು ರೀತಿ ಇದೆ.

ಒಂದನೇದು: ಸುಳ್ಳು ದೇವರುಗಳನ್ನ ಆರಾಧಿಸುವುದು

 ಸುಳ್ಳು ದೇವರುಗಳನ್ನ ಆರಾಧಿಸೋದನ್ನ ಬೈಬಲ್‌ ಖಂಡಿಸುತ್ತೆ. ಅದಕ್ಕೆ ಬೈಬಲಿನಲ್ಲಿ ಸುಳ್ಳಾರಾಧನೆ ಬಗ್ಗೆ ಮಾತಾಡುವಾಗ ಅದು “ಮೋಸಕರ,” “ಏನೂ ಪ್ರಯೋಜನ ಇಲ್ಲ” ಅಂತ ಹೇಳಿದೆ. (ಯೆರೆಮೀಯ 10:3-5; 16:19, 20) ಯೆಹೋವ a ದೇವರು ಹಿಂದಿನ ಕಾಲದಲ್ಲಿದ್ದ ಇಸ್ರಾಯೇಲ್ಯರಿಗೆ ಹೀಗೆ ಆಜ್ಞೆ ಕೊಟ್ಟನು. “ನನ್ನನ್ನ ಬಿಟ್ಟು ಬೇರೆ ಯಾರೂ ನಿಮಗೆ ದೇವರು ಆಗಿರಬಾರದು.” (ವಿಮೋಚನಕಾಂಡ 20:3, 23; 23:24) ಆದ್ರೆ ಇಸ್ರಾಯೇಲ್ಯರು ಬೇರೆ ದೇವರುಗಳನ್ನ ಆರಾಧಿಸಿದಾಗ ಅವರ ಮೇಲೆ ‘ಯೆಹೋವನಿಗೆ ತುಂಬ ಕೋಪ ಬಂತು.’​—ಅರಣ್ಯಕಾಂಡ 25:3; ಯಾಜಕಕಾಂಡ 20:2; ನ್ಯಾಯಸ್ಥಾಪಕರು 2:13, 14.

 ಇವತ್ತು ಕೂಡ ಜನ ‘ಎಷ್ಟೋ ದೇವರುಗಳನ್ನ’ ಆರಾಧನೆ ಮಾಡುತ್ತಿದ್ದಾರೆ. ಅದನ್ನ ನೋಡೋವಾಗ ಯೆಹೋವ ದೇವರಿಗೆ ತುಂಬಾ ಬೇಜಾರಾಗುತ್ತೆ. (1 ಕೊರಿಂಥ 8:5, 6; ಗಲಾತ್ಯ 4:8) ತನ್ನನ್ನ ಆರಾಧನೆ ಮಾಡೋಕೆ ಇಷ್ಟಪಡೋರು ಸುಳ್ಳು ಆರಾಧನೆ ಮಾಡುವವರ ಜೊತೆ ಸೇರಬಾರದು ಅಂತ ದೇವರು ಆಜ್ಞೆ ಕೊಟ್ಟಿದ್ದಾನೆ. ಆತನು ಹೇಳಿದ್ದು, “ಅವ್ರನ್ನ ಬಿಟ್ಟು ಬನ್ನಿ, ನೀವು ಅವ್ರಿಂದ ಬೇರೆಯಾಗಿ.” (2 ಕೊರಿಂಥ 6:​14-​17) ಎಲ್ಲಾ ಧರ್ಮಗಳು ಒಂದೇ ಆಗಿದ್ದು ಆತನ ಕಡೆ ನಡೆಸೋ ಹಾಗಿದ್ದರೆ ದೇವರು ಯಾಕೆ ಹೀಗೆ ಹೇಳ್ತಿದ್ರು?

ಎರಡನೇದು: ದೇವರಿಗೆ ಇಷ್ಟ ಇಲ್ಲದ ರೀತಿಯಲ್ಲಿ ಆತನನ್ನ ಆರಾಧನೆ ಮಾಡೋದು

 ಕೆಲವು ಸಲ ಇಸ್ರಾಯೇಲ್ಯರು ಸುಳ್ಳು ದೇವರುಗಳನ್ನ ಆರಾಧನೆ ಮಾಡೋ ರೀತಿಯಲ್ಲಿ ಯೆಹೋವನನ್ನ ಆರಾಧನೆ ಮಾಡೋಕೆ ಶುರು ಮಾಡಿದ್ರು. ಈ ತರದ ನಂಬಿಕೆ, ಸಂಪ್ರದಾಯಗಳನ್ನ ಬೇರೆ ಧರ್ಮಗಳಿಂದ ನೋಡಿ ಕಲಿತಿದ್ದರು. ಆದ್ರೆ ಸತ್ಯ ಆರಾಧನೆ ಸುಳ್ಳು ಆರಾಧನೆಯೊಂದಿಗೆ ಬೆರೆಯೋದನ್ನ ಯೆಹೋವನು ಇಷ್ಟ ಪಡಲಿಲ್ಲ. (ವಿಮೋಚನಕಾಂಡ 32:8; ಧರ್ಮೋಪದೇಶಕಾಂಡ 12:2-4) ಯೇಸುವಿನ ಕಾಲದಲ್ಲಿದ್ದ ಧಾರ್ಮಿಕ ನಾಯಕರು ದೇವರನ್ನ ತಪ್ಪಾದ ರೀತಿಯಲ್ಲಿ ಆರಾಧಿಸುತ್ತಿದ್ದರು. ಅದನ್ನ ಯೇಸು ಖಂಡಿಸಿದನು. ಯಾಕಂದ್ರೆ ಅವರು ಹೊರಗೆ ನೋಡೋಕೆ ಮಾತ್ರ ದೇವರ ಭಯ ಇರುವವರ ತರ ನಡೆದುಕೊಳ್ಳುತ್ತಿದ್ದರು, ಆದರೆ ‘ನಿಯಮ ಪುಸ್ತಕದಲ್ಲಿರೋ ನ್ಯಾಯ, ಕರುಣೆ, ನಂಬಿಗಸ್ತಿಕೆ ಇಂಥ ಪ್ರಾಮುಖ್ಯ ವಿಷ್ಯಗಳನ್ನ ತಲೆಗೆ ಹಾಕೊಳ್ತಿರಲಿಲ್ಲ.’—ಮತ್ತಾಯ 23:23.

 ಇದ್ರಿಂದ ನಮಗೆ ಏನು ಗೊತ್ತಾಗುತ್ತೆ ಅಂದರೆ, ಸತ್ಯದ ಮೇಲೆ ಆಧರಿಸಿದ ಧರ್ಮ ಮಾತ್ರ ದೇವರಿಗೆ ಹತ್ರ ಆಗೋಕೆ ಸಹಾಯ ಮಾಡುತ್ತೆ. ಆ ಸತ್ಯ ಬೈಬಲಿನಲ್ಲಿದೆ. (ಯೋಹಾನ 4:24; 17:17; 2 ತಿಮೊತಿ 3:16, 17) ಯಾವ ಧರ್ಮಗಳ ಬೋಧನೆಗಳು ಬೈಬಲಿಗೆ ವಿರುದ್ಧವಾಗಿರುತ್ತೋ ಆ ಧರ್ಮಗಳು ಜನರನ್ನ ದೇವರಿಂದ ದೂರ ಮಾಡುತ್ತವೆ. ಅನೇಕ ಜನರು ತ್ರಿಯೇಕ, ಆತ್ಮದ ಅಮರತ್ವ ಮತ್ತು ನರಕದಂಥ ಬೋಧನೆಗಳು ಬೈಬಲಿನ ಬೋಧನೆಗಳು ಅಂತ ಅಂದ್ಕೊಂಡಿದ್ದಾರೆ. ಆದ್ರೆ ಈ ಎಲ್ಲಾ ಬೋಧನೆಗಳು ಸುಳ್ಳು ಧರ್ಮದ ನಂಬಿಕೆ ಅಥವಾ ಬೋಧನೆಗಳಾಗಿವೆ. ಇಂಥಾ ಬೋಧನೆಗಳಿರೋ ಆರಾಧನೆ “ವ್ಯರ್ಥ” ಅಥವಾ ಅದ್ರಿಂದ ಯಾವ ಪ್ರಯೋಜನನೂ ಇಲ್ಲ. ಯಾಕಂದ್ರೆ ಇದು ದೇವರ ಇಷ್ಟದ ಬದಲಿಗೆ ಬರೀ ಸಂಪ್ರದಾಯಗಳನ್ನ ಕಲಿಸುತ್ತೆ.—ಮಾರ್ಕ 7:7, 8.

 ಹೊರಗೆ ದೇವರ ಮೇಲೆ ಭಯ ಇರೋ ತರ ನಡ್ಕೊಂಡು ಆತನು ಹೇಳೋದನ್ನ ಮಾಡದೇ ಇರೋರನ್ನ ಕಂಡರೆ ದೇವರಿಗೆ ಅಸಹ್ಯ ಆಗುತ್ತೆ. (ತೀತ 1:16) ಜನರು ದೇವರಿಗೆ ಹತ್ತಿರ ಆಗಬೇಕು ಅಂದ್ರೆ ಅವರು ನಂಬೋ ಧರ್ಮ ಅವ್ರ ಜೀವನದ ಮೇಲೆ ಪ್ರಭಾವ ಬೀರಬೇಕೇ ಹೊರತು ಬರೀ ಸಂಪ್ರದಾಯಗಳನ್ನ ಕಲಿಸಬಾರದು. ಉದಾಹರಣೆಗೆ, ಬೈಬಲ್‌ ಹೇಳೋದು, “ದೇವರನ್ನ ಆರಾಧಿಸ್ತಾ ಇದ್ದೀನಿ ಅಂತ ಅಂದ್ಕೊಳ್ಳುವವನು ತನ್ನ ನಾಲಿಗೆಯನ್ನ ಹತೋಟಿಯಲ್ಲಿ ಇಟ್ಕೊಳ್ಳದೇ ಇದ್ರೆ ಅವನು ತನ್ನ ಮನಸ್ಸನ್ನೇ ಮೋಸ ಮಾಡ್ಕೊಳ್ತಾ ಇದ್ದಾನೆ. ಅವನ ಆರಾಧನೆ ವ್ಯರ್ಥ. ನಮ್ಮ ತಂದೆ ಆಗಿರೋ ದೇವರ ದೃಷ್ಟಿಯಲ್ಲಿ ಶುದ್ಧವಾಗಿರೋ ಕಳಂಕ ಇಲ್ಲದ ಆರಾಧನಾ ಪದ್ಧತಿ ಯಾವುದಂದ್ರೆ ಕಷ್ಟದಲ್ಲಿರೋ ಅನಾಥ ಮಕ್ಕಳನ್ನ, ವಿಧವೆಯರನ್ನ ನೋಡ್ಕೊಳ್ಳೋದು ಮತ್ತು ಈ ಲೋಕದ ಕೆಟ್ಟತನದಿಂದ ದೂರ ಇರೋದೇ ಆಗಿದೆ.” (ಯಾಕೋಬ 1:26, 27) ಕಿಂಗ್‌ ಜೇಮ್ಸ್‌ ವರ್ಷನ್‌ ಬೈಬಲಿನಲ್ಲಿ “ಸತ್ಯ ಧರ್ಮ” ಅನ್ನೋ ಪದಕ್ಕೆ ಶುದ್ಧ ಮತ್ತು ನಿಷ್ಕಪಟ ಆರಾಧನೆ ಅಂತ ಹೇಳುತ್ತೆ.