ಮಾಹಿತಿ ಇರುವಲ್ಲಿ ಹೋಗಲು

ಅವರ ನಂಬಿಕೆಯನ್ನ ಅನುಕರಿಸಿ—ನಂಬಿಗಸ್ತರು ನಿಮ್ಮ ಕಣ್ಣೆದುರು

ಈ ಸರಣಿ ಲೇಖನಗಳಲ್ಲಿ ಬೈಬಲಿನ ಸ್ತ್ರೀ-ಪುರುಷರ ದೃಢ ನಂಬಿಕೆಯನ್ನ ಎತ್ತಿ ತೋರಿಸುತ್ತೆ. a ಬೈಬಲಿನ ಜನ್ರ ಬಗ್ಗೆ ಮತ್ತು ಅವ್ರ ನಂಬಿಕೆಯ ಉದಾಹರಣೆಗಳ ಬಗ್ಗೆ ನೀವು ಕಲಿಯುವಾಗ ನಿಮ್ಮ ನಂಬಿಕೆ ಬಲವಾಗುತ್ತೆ ಮತ್ತು ನೀವು ದೇವರ ಆಪ್ತ ಸ್ನೇಹಿತರಾಗ್ತೀರ.

a ನಂಬಿಕೆಯ ಕಥೆಗಳನ್ನ ಕಣ್ಣಿಗೆ ಕಟ್ಟೋ ರೀತಿಯಲ್ಲಿ ಅನಿಸೋಕೆ ಮತ್ತು ಆಳವಾಗಿ ಯೋಚನೆ ಮಾಡೋಕೆ ಈ ಸರಣಿ ಲೇಖನಗಳಲ್ಲಿ ಬೈಬಲ್‌ನಲ್ಲಿ ಇಲ್ಲದ ಮಾಹಿತಿಯನ್ನ ಸೇರಿಸಲಾಗಿದೆ. ಈ ಮಾಹಿತಿ ಬೈಬಲ್‌ ಪ್ರಕಾರ ಇದ್ಯಾ, ಇತಿಹಾಸ ಮತ್ತು ಭೂಅಗೆತ ಶಾಸ್ತ್ರಜ್ಞರ ದಾಖಲೆಗಳ ಪ್ರಕಾರ ಇದ್ಯಾ ಅಂತ ತುಂಬ ಆಳವಾಗಿ ಸಂಶೋಧನೆ ಮಾಡಿ ತಿಳ್ಕೊಳ್ಳಲಾಗಿದೆ.

ಸೃಷ್ಟಿಯಿಂದ ಜಲಪ್ರಳಯದ ತನಕ

“ಅವನು ಸತ್ತುಹೋದರೂ . . . ಇನ್ನೂ ಮಾತಾಡುತ್ತಾನೆ”

ಬೈಬಲಿನಲ್ಲಿ ಹೇಬೆಲನ ಬಗ್ಗೆ ತೀರ ಕಡಿಮೆ ವಿಷಯಗಳು ಇರುವುದರಿಂದ ನಾವು ಅವನ ಬಗ್ಗೆ ಮತ್ತು ಅವನ ನಂಬಿಕೆಯ ಬಗ್ಗೆ ಏನು ಕಲಿಯಬಲ್ಲೆವು?

ಹನೋಕ: ‘ದೇವರನ್ನು ಮೆಚ್ಚಿಸಿದವನು’

ನಿಮಗೆ ಕುಟುಂಬವನ್ನು ಪೋಷಿಸುವ ಜವಾಬ್ದಾರಿ ಇದ್ದರೆ ಅಥವಾ ಸರಿಯಾದದ್ದನ್ನು ಮಾಡಲು ಅಥವಾ ಬೆಂಬಲಿಸಲು ಕಷ್ಟವಾದರೆ ಹನೋಕನ ನಂಬಿಕೆಯಿಂದ ಅನೇಕ ವಿಷಯಗಳನ್ನು ಕಲಿಯಬಹುದು.

ಸತ್ಯ ದೇವರೊಂದಿಗೆ ಅನ್ಯೋನ್ಯವಾಗಿ ನಡೆದವನು

ನೋಹ ಮತ್ತು ಅವನ ಹೆಂಡತಿ ತಮ್ಮ ಮಕ್ಕಳನ್ನು ಬೆಳೆಸುವಾಗ ಯಾವ ಸವಾಲುಗಳನ್ನು ಎದುರಿಸಿದರು? ನಾವೆಯನ್ನು ಕಟ್ಟುವ ಮೂಲಕ ಆ ಕುಟುಂಬವು ತಮ್ಮ ನಂಬಿಕೆಯನ್ನು ಹೇಗೆ ತೋರಿಸಿತು?

ದೇವರು ಅವನನ್ನು ಅವನ ಕುಟುಂಬವನ್ನು ಕಾಪಾಡಿದನು

ಮನುಷ್ಯ ಕುಲ ಎಂದೂ ನೋಡಿರದಂಥ ಕಷ್ಟದ ಪರಿಸ್ಥಿತಿಯಲ್ಲಿ ನೋಹ ಮತ್ತವನ ಕುಟುಂಬ ಹೇಗೆ ಪಾರಾಯಿತು?

ಜಲಪ್ರಳಯದಿಂದ-ಈಜಿಪ್ಟ್ ಇಂದ ಬಿಡುಗಡೆ ಆಗೋ ತನಕ

ಅಬ್ರಹಾಮ—“ನಂಬಿಕೆಯಿರುವ ಎಲ್ಲರಿಗೆ . . . ತಂದೆ”

ಅಬ್ರಹಾಮ ಹೇಗೆ ನಂಬಿಕೆ ತೋರಿಸಿದನು? ಅಬ್ರಹಾಮನ ನಂಬಿಕೆಯನ್ನು ನೀವು ಯಾವ ವಿಧಗಳಲ್ಲಿ ಅನುಕರಿಸಬೇಕೆಂದಿದ್ದೀರಿ?

‘ನಾನು ದೇವರಿಗೆ ಸಮಾನನೋ?’

ದ್ವೇಷ, ಹೊಟ್ಟೆಕಿಚ್ಚು ಮತ್ತು ಮೋಸದಿಂದಾಗಿ ನಿಮ್ಮ ಕುಟುಂಬದಲ್ಲಿ ಬಿರುಕು ಬಂದಿದೆಯಾ? ಹಾಗಾದರೆ, ಯೋಸೇಫ ಅವನ ಕುಟುಂಬದೊಂದಿಗೆ ನಡೆದುಕೊಂಡ ವಿಧದಿಂದ ನಾವು ಬಹಳಷ್ಟು ಕಲಿಯಬಹುದು.

ಯೋಬ—‘ನನ್ನ ಯಥಾರ್ಥತೆಯನ್ನು ಕಳಕೊಳ್ಳೆನು!’

ನಮಗೆ ಕಷ್ಟ, ದುರಂತ ಅಥವಾ ನಂಬಿಕೆಯ ಪರೀಕ್ಷೆಗಳು ಎದುರಾದಾಗ ಅದನ್ನು ಸಹಿಸಿಕೊಳ್ಳಲು ಬೈಬಲಿನಲ್ಲಿರುವ ಯೋಬನ ಕಥೆ ಹೇಗೆ ಸಹಾಯ ಮಾಡುತ್ತೆ?

ಯೋಬ—ಯೆಹೋವ ಅವನ ನೋವನ್ನು ನೀಗಿಸಿದನು

ನಾವು ಯೋಬನ ತರ ನಂಬಿಗಸ್ತರಾಗಿ ಉಳಿದ್ರೆ ಸೈತಾನನಿಗೆ ತುಂಬ ಕೋಪ ಬರುತ್ತೆ. ಆದ್ರೆ ನಮ್ಮನ್ನ ಪ್ರೀತಿಸೋ ಯೆಹೋವನಿಗೆ ತುಂಬ ಸಂತೋಷ ಆಗುತ್ತೆ!

ಮಿರ್ಯಾಮ್‌—“ಹಾಡುತ್ತಾ ಯೆಹೋವನನ್ನ ಕೊಂಡಾಡಿದಳು!”

ಪ್ರವಾದಿನಿಯಾದ ಮಿರ್ಯಾಮಳು ಕೆಂಪು ಸಮುದ್ರದ ಹತ್ರ ವಿಜಯಗೀತೆ ಹಾಡುವುದರಲ್ಲಿ ಮಾರ್ಗದರ್ಶಿಸ್ತಿದ್ದಾಳೆ. ನಾವು ಅವಳಿಂದ ಧೈರ್ಯ, ನಂಬಿಕೆ ಮತ್ತು ದೀನತೆಯ ಪಾಠ ಕಲಿಬಹುದು.

ಈಜಿಪ್ಟ್ ಇಂದ ಇಸ್ರಾಯೇಲಿನ ಮೊದಲನೆ ರಾಜನ ತನಕ

ರೂತ್‌—“ನೀನು ಎಲ್ಲಿಗೆ ಹೋದರೂ ನಾನೂ ಅಲ್ಲಿಗೆ ಬರುವೆನು”

ರೂತಳು ತನ್ನ ಕುಟುಂಬ ಮತ್ತು ಸ್ವದೇಶವನ್ನೂ ಬಿಟ್ಟುಹೋಗಲು ಏಕೆ ಸಿದ್ಧಳಿದ್ದಳು? ಅವಳಲ್ಲಿ ಯಾವ ಗುಣಗಳು ಇದ್ದದರಿಂದ ಯೆಹೋವನು ಆಕೆಯನ್ನು ತುಂಬ ಅಮೂಲ್ಯವಾಗಿ ಕಂಡನು?

ರೂತ್‌—“ಗುಣವಂತೆ”

ರೂತ್‌ ಮತ್ತು ಬೋವಜನ ಮದುವೆ ಗಮನಾರ್ಹವೇಕೆ? ಕುಟುಂಬದ ವಿಷಯದಲ್ಲಿ ನಾವು ರೂತ್‌ ಮತ್ತು ನೊವೊಮಿಯಿಂದ ಏನು ಕಲಿಯುತ್ತೇವೆ?

ಪ್ರಾರ್ಥನೆಯಲ್ಲಿ ದೇವರ ಬಳಿ ಹೃದಯ ತೋಡಿಕೊಂಡಾಕೆ

ಸಹಿಸಿಕೊಳ್ಳಲು ಆಗದೆಂದು ತೋರಿದ ಸನ್ನಿವೇಶವನ್ನು ನಿಭಾಯಿಸಲು ಹನ್ನಳಿಗೆ ಯೆಹೋವನಲ್ಲಿದ್ದ ನಂಬಿಕೆಯು ಹೇಗೆ ಸಹಾಯ ಮಾಡಿತು?

‘ಯೆಹೋವನ ಸನ್ನಿಧಿಯಲ್ಲೇ ದೊಡ್ಡವನಾದ’ ಸಮುವೇಲ

ಸಮುವೇಲನ ಬಾಲ್ಯ ಎಲ್ಲರಂತಿರಲಿಲ್ಲ ಏಕೆ? ಅವನು ದೇವಗುಡಾರದಲ್ಲಿದ್ದಾಗ ಅವನ ನಂಬಿಕೆ ಬೆಳೆಯಲು ಯಾವುದು ನೆರವಾಯಿತು?

ಸಮುವೇಲನು ನಿರಾಶೆಗಳ ಮಧ್ಯೆಯೂ ತಾಳಿಕೊಂಡನು

ನಮ್ಮ ನಂಬಿಕೆಗೆ ಸವಾಲೊಡ್ಡುವ ಸಂಕಷ್ಟಗಳನ್ನೂ ನಿರಾಶೆಗಳನ್ನೂ ನಾವೆಲ್ಲರೂ ಎದುರಿಸುತ್ತೇವೆ. ಸಮುವೇಲನ ತಾಳ್ಮೆ ನಮಗೇನು ಕಲಿಸುತ್ತದೆ?

ಇಸ್ರಾಯೇಲಿನ ಮೊದಲನೆ ರಾಜನಿಂದ ಯೇಸು ಜನನದ ತನಕ

ಯೋನಾತಾನ—‘ಯೆಹೋವನಿಗೆ ಯಾವುದೂ ಅಸಾಧ್ಯವಲ್ಲ’

ತಾನೂ ಆಯುಧ ಹೊರುವವನೂ, ಇಬ್ಬರೇ ಸೇರಿ ಆಯುಧಗಳನ್ನು ಹೊಂದಿದ ಸೈನಿಕರ ಒಂದು ಠಾಣೆಯ ವಿರುದ್ಧ ದಾಳಿ ಮಾಡುವಂತೆ ಯೋನಾತಾನನು ಮುನ್ನಡೆಸಿ ಇತಿಹಾಸದ ಪುಟಗಳಲ್ಲಿ ದಾಖಲೆ ರಚಿಸಿದನು.

“ಯುದ್ಧಫಲವು ಯೆಹೋವನ ಕೈಯಲ್ಲಿದೆ”

ಗೊಲ್ಯಾತನನ್ನು ಸೋಲಿಸಲು ದಾವೀದನಿಗೆ ಯಾವುದು ಸಹಾಯ ಮಾಡಿತು? ದಾವೀದನಿಂದ ನಾವು ಯಾವ ಪಾಠಗಳನ್ನು ಕಲಿಯಬಹುದು?

ದಾವೀದ ಮತ್ತು ಯೋನಾತಾನ—ಪ್ರಾಣಸ್ನೇಹಿತರಾದರು

ವಯಸ್ಸಿನಲ್ಲಿ ಮತ್ತು ಹಿನ್ನೆಲೆಯಲ್ಲಿ ಅಷ್ಟೊಂದು ವ್ಯತ್ಯಾಸವಿದ್ದರೂ ಅವರಿಬ್ಬರು, ಹೇಗೆ ಅಷ್ಟು ಆಪ್ತ ಸ್ನೇಹಿತರಾದರು? ಒಳ್ಳೇ ಸ್ನೇಹ ಸಂಬಂಧಗಳನ್ನು ಬೆಳೆಸಿಕೊಳ್ಳಲು ಅವರ ಅನುಭವ ನಿಮಗೆ ಹೇಗೆ ಸಹಾಯ ಮಾಡುತ್ತದೆ?

ಅಬೀಗೈಲ್‌ ವಿವೇಚನೆಯಿಂದ ಕ್ರಿಯೆಗೈದಳು

ಅಬೀಗೈಲಳ ಕಷ್ಟಕರ ದಾಂಪತ್ಯ ಜೀವನದಿಂದ ನಾವೇನು ಕಲಿಯಬಹುದು?

ಎಲೀಯ ಶುದ್ಧಾರಾಧನೆಯ ಪಕ್ಷದಲ್ಲಿ ಸ್ಥಿರವಾಗಿ ನಿಂತನು

ಬೈಬಲ್‌ ಬೋಧನೆಯನ್ನು ಒಪ್ಪದವರೊಂದಿಗೆ ಮಾತಾಡುವಾಗ ನಾವು ಎಲೀಯನ ಮಾದರಿಯನ್ನು ಹೇಗೆ ಅನುಕರಿಸಬಲ್ಲೆವು?

ಎಲೀಯ ಗಮನಿಸುತ್ತಾ ಇದ್ದನು, ಕಾಯುತ್ತಾ ಇದ್ದನು

ಪ್ರವಾದಿ ಎಲೀಯನು ಯೆಹೋವನು ತನ್ನ ಮಾತನ್ನು ನೆರವೇರಿಸಲು ಕಾಯುತ್ತಿದ್ದಾಗ ಹೇಗೆ ಪ್ರಾರ್ಥನಾಪೂರ್ವಕ ಮನೋಭಾವವನ್ನು ತೋರಿಸಿದನು?

ಎಲೀಯ ತನ್ನ ದೇವರಿಂದ ಸಾಂತ್ವನ ಪಡೆದನು

ಎಲೀಯನು ತೀವ್ರ ಹತಾಶೆಯಲ್ಲಿ ಮುಳುಗುವಂತೆ, ಸಾವನ್ನು ಕೇಳಿಕೊಳ್ಳುವಷ್ಟರ ಮಟ್ಟಿಗೆ ಖಿನ್ನನಾಗುವಂತೆ ಮಾಡಿದ್ದು ಯಾವುದು?

ಎಲೀಯ—ಕೊನೆವರೆಗೂ ತಾಳಿಕೊಂಡ

ಎಲೀಯನು ನಂಬಿಗಸ್ತನಾಗಿ ತಾಳಿಕೊಳ್ಳುವ ಮಾದರಿಯನ್ನು ಇಟ್ಟಿದ್ದಾನೆ. ನಾವು ಬದುಕುತ್ತಿರುವ ಕಷ್ಟಕರ ಸಮಯಗಳಲ್ಲಿ ನಮ್ಮ ನಂಬಿಕೆಯನ್ನು ಹೇಗೆ ಬಲಪಡಿಸಿಕೊಳ್ಳಬಹುದು ಎಂದು ಅವನ ಮಾದರಿಯಿಂದ ಇನ್ನೂ ಚೆನ್ನಾಗಿ ತಿಳಿದುಕೊಳ್ಳಬಹುದು.

ಯೋನ ತನ್ನ ತಪ್ಪುಗಳಿಂದ ಪಾಠ ಕಲಿತನು

ನಿಮಗೊಂದು ನೇಮಕ ಸಿಕ್ಕಿದಾಗ ಅದನ್ನು ಪೂರೈಸುವುದು ಹೇಗೆಂದು ಯೋನನಂತೆ ಹೆದರಿದ್ದೀರೊ? ಯೋನನ ಕಥೆಯು ಯೆಹೋವನ ತಾಳ್ಮೆ ಮತ್ತು ಕರುಣೆಯ ಬಗ್ಗೆ ನಮಗೆ ಬಹುಮೂಲ್ಯ ಪಾಠಗಳನ್ನು ಕಲಿಸುತ್ತವೆ.

ಯೋನನು ಕರುಣೆಯ ಪಾಠ ಕಲಿತನು

ಯೋನನ ಕುರಿತ ವೃತ್ತಾಂತ ನಾವು ನಮ್ಮನ್ನೇ ಪ್ರಾಮಾಣಿಕವಾಗಿ ಪರೀಕ್ಷಿಸಿಕೊಳ್ಳುವಂತೆ ಹೇಗೆ ಸಹಾಯಮಾಡುತ್ತದೆ?

ಎಸ್ತೇರಳು ದೇವಜನರ ಪರವಹಿಸಿ ನಿಂತಳು

ಎಸ್ತೇರಳಂತೆ ಸ್ವತ್ಯಾಗದ ಪ್ರೀತಿ ತೋರಿಸಲು ನಂಬಿಕೆ ಹಾಗೂ ಧೈರ್ಯ ಇರಬೇಕು.

ಎಸ್ತೇರಳು ವಿವೇಕ, ಧೈರ್ಯ, ನಿಸ್ವಾರ್ಥದಿಂದ ಕ್ರಮಗೈದಳು

ಯೆಹೋವನಿಗಾಗಿ ಮತ್ತು ಆತನ ಜನರಿಗಾಗಿ ಎಸ್ತೇರಳು ಹೇಗೆ ನಿಸ್ವಾರ್ಥದಿಂದ ಕ್ರಮಗೈದಳು?

ಯೇಸುವಿನ ಜನನದಿಂದ ಅಪೊಸ್ತಲರ ಸಾವಿನ ತನಕ

ಮರಿಯ—“ಇಗೋ, ನಾನು ಯೆಹೋವನ ದಾಸಿ!”

ಮರಿಯಳು ದೇವದೂತ ಗಬ್ರಿಯೇಲನಿಗೆ ಕೊಟ್ಟ ಉತ್ತರದಿಂದ ಅವಳ ನಂಬಿಕೆ ಬಗ್ಗೆ ಏನು ಗೊತ್ತಾಗುತ್ತದೆ? ಅವಳು ಇನ್ಯಾವ ಅಮೂಲ್ಯ ಗುಣಗಳನ್ನು ತೋರಿಸಿದಳು?

ಮರಿಯಳು ‘ತನ್ನ ಹೃದಯದಲ್ಲಿ ತೀರ್ಮಾನಗಳನ್ನು ಮಾಡಿಕೊಂಡಳು’

ಬೇತ್ಲೆಹಮಿನಲ್ಲಿ ಮರಿಯಳಿಗಾದ ಅನುಭವಗಳು ಯೆಹೋವನ ವಾಗ್ದಾನಗಳಲ್ಲಿ ಅವಳ ನಂಬಿಕೆಯನ್ನು ಬಲಪಡಿಸಿತು

ಮರಿಯಳು ಕತ್ತಿಯಿಂದ ಇರಿಯಲ್ಪಟ್ಟರೂ ಮುಂದೆ ಸಾಗಿದಳು

‘ಉದ್ದ ಕತ್ತಿಯಿಂದ’ ಇರಿದಂಥ ನೋವನ್ನು ನೀವು ಅನುಭವಿಸುತ್ತಿರುವುದಾದರೆ ಯೇಸುವಿನ ತಾಯಿ ಮರಿಯಳ ಮಾದರಿ ನಿಮಗೆ ಸಹಾಯ ಮಾಡಬಲ್ಲದು.

ಯೋಸೇಫ ಸಂರಕ್ಷಿಸಿದ, ಪೋಷಿಸಿದ, ಪಟ್ಟುಹಿಡಿದ

ಯೋಸೇಫನು ಯಾವೆಲ್ಲ ವಿಧದಲ್ಲಿ ತನ್ನ ಕುಟುಂಬವನ್ನು ಸಂರಕ್ಷಿಸಿದ? ಮರಿಯ ಮತ್ತು ಯೇಸುವನ್ನು ಏಕೆ ಐಗುಪ್ತಕ್ಕೆ ಕರಕೊಂಡು ಹೋದ?

ಮಾರ್ಥ—“ನಾನು ವಿಶ್ವಾಸವಿಟ್ಟಿದ್ದೇನೆ”

ಶೋಕದ ಸಮಯದಲ್ಲೂ ಮಾರ್ಥ ಹೇಗೆ ಗಮನಾರ್ಹ ನಂಬಿಕೆ ತೋರಿಸಿದಳು?

ಮಗ್ದಲದ ಮರಿಯ—“ನಾನು ಕರ್ತನನ್ನು ನೋಡಿದೆ!”

ಒಂದು ಸಂತೋಷದ ವಿಷ್ಯವನ್ನು ಬೇರೆಯವರಿಗೆ ತಿಳಿಸುವ ಅವಕಾಶ ಈ ನಂಬಿಗಸ್ತ ಸ್ತ್ರೀಗೆ ಸಿಕ್ಕಿತು.

ಪೇತ್ರನು ಭಯ ಮತ್ತು ಸಂದೇಹವನ್ನು ಮೆಟ್ಟಿನಿಂತನು

ಸಂದೇಹವು ಪ್ರಭಾವಶಾಲಿ, ವಿನಾಶಕಾರಿ ಪ್ರಭಾವ ಬೀರಬಲ್ಲದು. ಆದರೆ ಪೇತ್ರನು ಯೇಸುವನ್ನು ಹಿಂಬಾಲಿಸುವುದರ ಬಗ್ಗೆ ತನಗಿದ್ದ ಭಯ, ಸಂದೇಹಗಳನ್ನು ಮೆಟ್ಟಿನಿಂತನು.

ಪೇತ್ರನು ನಂಬಿಕೆಯ ಪರೀಕ್ಷೆಗಳ ಮಧ್ಯೆಯೂ ನಿಷ್ಠೆ ತೋರಿಸಿದನು

ಪೇತ್ರನಿಗಿದ್ದ ನಂಬಿಕೆ ಹಾಗೂ ನಿಷ್ಠೆಯು ಯೇಸುವಿನಿಂದ ತಿದ್ದುಪಾಟನ್ನು ಸ್ವೀಕರಿಸುವಂತೆ ಅವನಿಗೆ ಹೇಗೆ ಸಹಾಯಮಾಡಿತು?

ಪೇತ್ರನು ಕರ್ತನಿಂದ ಕ್ಷಮೆಯ ಪಾಠವನ್ನು ಕಲಿತನು

ಯೇಸು ಪೇತ್ರನಿಗೆ ಕ್ಷಮೆಯ ಬಗ್ಗೆ ಏನು ಕಲಿಸಿದನು? ಯೇಸು ತಾನು ಪೇತ್ರನನ್ನು ಕ್ಷಮಿಸಿದ್ದೇನೆಂದು ಹೇಗೆ ತೋರಿಸಿದನು?