ಮಾಹಿತಿ ಇರುವಲ್ಲಿ ಹೋಗಲು

ಸುಖೀ ಸಂಸಾರಕ್ಕೆ ಸಲಹೆಗಳು | ಮಕ್ಕಳ ಪಾಲನೆ

ಮನಸ್ಸು ಕೆಡಿಸೋ ನ್ಯೂಸ್‌ ವಿರುದ್ಧ ಹೋರಾಡೋಕೆ ಮಕ್ಕಳಿಗೆ ಕಲಿಸಿ

ಮನಸ್ಸು ಕೆಡಿಸೋ ನ್ಯೂಸ್‌ ವಿರುದ್ಧ ಹೋರಾಡೋಕೆ ಮಕ್ಕಳಿಗೆ ಕಲಿಸಿ

ಎದೆ ಒಡೆದು ಹೋಗುವಂಥ ನ್ಯೂಸ್‌ಗಳು 24 ಗಂಟೆ ಟಿವಿ, ಫೋನ್‌, ಟ್ಯಾಬ್‌ ಮತ್ತು ಕಂಪ್ಯೂಟರ್‌ನಲ್ಲಿ ಬರ್ತಾ ಇರುತ್ತೆ.

ಇದನ್ನ ಮಕ್ಕಳು ನೋಡ್ತಾರೆ.

ಭಯ ಹುಟ್ಟಿಸೋ ನ್ಯೂಸ್‌ಗಳಿಂದ ನಿಮ್ಮ ಮಕ್ಕಳನ್ನ ತಡಿಯೋಕೆ ನೀವೇನು ಮಾಡಬಹುದು?

 ಇಂಥ ನ್ಯೂಸ್‌ಗಳು ಮಕ್ಕಳ ಮೇಲೆ ಯಾವ ಪರಿಣಾಮ ಬೀರುತ್ತೆ?

 • ಅನೇಕ ಮಕ್ಕಳು ಭಯ ಹುಟ್ಟಿಸುವ ನ್ಯೂಸ್‌ಗಳನ್ನ ನೋಡಿ ಹೆದರುತ್ತಾರೆ. ಕೆಲವು ಮಕ್ಕಳು ಎಲ್ಲವನ್ನ ಬಾಯಿ ಬಿಟ್ಟು ಹೇಳಲ್ಲ. ಆದ್ರೆ ಭಯ ಹುಟ್ಟಿಸೋ ನ್ಯೂಸ್‌ಗಳಿಂದ ಅವ್ರ ಮನಸ್ಸಿಗೆ ಘಾಸಿ ಆಗಬಹುದು. * ಅಪ್ಪ-ಅಮ್ಮ ಅದ್ರ ಬಗ್ಗೆ ಅತಿಯಾಗಿ ಚಿಂತೆ ಮಾಡಿದ್ರೆ ಮಕ್ಕಳು ಭಯ ಪಡೋದು ಇನ್ನೂ ಜಾಸ್ತಿ.

 • ನ್ಯೂಸ್‌ನ್ನ ನೋಡಿ ಮಕ್ಕಳು ತಪ್ಪಾರ್ಥ ಮಾಡ್ಕೋಬಹುದು. ಉದಾಹರಣೆಗೆ, ನೋಡಿದ ಘಟನೆ ಅವ್ರ ಕುಟುಂಬಕ್ಕೂ ಆಗುತ್ತೆ ಅಂತ ಅಂದ್ಕೊಳ್ತಾರೆ. ಭಯ ಹುಟ್ಟಿಸೋ ಘಟನೆಯ ವಿಡಿಯೋಗಳನ್ನ ಮಕ್ಕಳು ಪುನಃ-ಪುನಃ ನೋಡ್ತಾ ಇದ್ರೆ ಆ ಘಟನೆ ಪುನಃ-ಪುನಃ ಆಗ್ತಾ ಇದೆ ಅಂತ ಅಂದ್ಕೊಳ್ತಾರೆ.

 • ಮಕ್ಕಳಿಗೆ ಸರಿಯಾದ ದೃಷ್ಟಿಕೋನದಿಂದ ನ್ಯೂಸ್‌ ನೋಡೋಕೆ ಆಗದೆ ಇರಬಹುದು. ವಾರ್ತಾ ಮಾಧ್ಯಮಗಳು ನ್ಯೂಸ್‌ನ್ನ ಹೆಚ್ಚು ಜನ ನೋಡೋ ತರ ಮಾಡಿದ್ರೆ ಅವ್ರಿಗೆ ಒಳ್ಳೇ ಲಾಭ ಸಿಗುತ್ತೆ. ಹಾಗಾಗಿ ಭಯಪಡೋರ ಗಮನ ನ್ಯೂಸ್‌ ಕಡೆ ಬರುವಂತೆ ಅದಕ್ಕೆ ಇನ್ನಷ್ಟು ಮಸಾಲೆ ಹಾಕಿ ಹೇಳ್ತಾರೆ. ಇದು ಮಕ್ಕಳಿಗೆ ಅರ್ಥ ಆಗದೆ ಇರಬಹುದು.

 ಮಕ್ಕಳು ನ್ಯೂಸ್‌ ನೋಡಿ ಭಯ ಬೀಳದೆ ಇರೋಕೆ ನೀವು ಹೇಗೆ ಮಕ್ಕಳಿಗೆ ಸಹಾಯ ಮಾಡಬಹುದು?

 • ಮಕ್ಕಳು ಈ ಭಯ ಹುಟ್ಟಿಸೋ ನ್ಯೂಸ್‌ ನೋಡೋದನ್ನ ಕಡಿಮೆ ಮಾಡಿಸಿ. ಇದ್ರ ಅರ್ಥ ಲೋಕದಲ್ಲಿ ಏನಾಗ್ತಿದೆ ಅಂತ ಮಕ್ಕಳು ತಿಳ್ಕೊಳ್ಳಬಾರದು ಅಂತಲ್ಲ. ಆದ್ರೆ ಅವ್ರು ಈ ಭಯ ಹುಟ್ಟಿಸೋ ನ್ಯೂಸ್‌ಗಳನ್ನ ಆಗಾಗ ನೋಡ್ತಾ ಇದ್ರೆ ಅವ್ರಿಗೇನೂ ಅದ್ರಿಂದ ಒಳ್ಳೇದಾಗಲ್ಲ.

  “ಕೆಲವೊಮ್ಮೆ ನ್ಯೂಸ್‌ಗಳ ಬಗ್ಗೆ ನಾವು ಇಂಚಿಂಚು ಮಾತಾಡ್ಕೊಳ್ತೀವಿ. ಆದ್ರೆ ಇದನ್ನ ಕೇಳಿ ಮಕ್ಕಳ ಮೇಲೆ ಎಷ್ಟು ಪರಿಣಾಮ ಬೀರುತ್ತೆ ಅಂತ ನಾವು ಅರ್ಥನೇ ಮಾಡ್ಕೊಳ್ಳಲ್ಲ.”—ಮರಿಯ.

  ಬೈಬಲ್‌ ತತ್ವ: “ಕಳವಳವು ಮನಸ್ಸನ್ನು ಕುಗ್ಗಿಸುವದು.”—ಜ್ಞಾನೋಕ್ತಿ 12:25.

 • ತಾಳ್ಮೆಯಿಂದ ಕೇಳಿಸ್ಕೊಳ್ಳಿ, ಅನುಕಂಪದಿಂದ ಉತ್ತರ ಕೊಡಿ. ನಿಮ್ಮ ಮಗುಗೆ ಘಟನೆ ಬಗ್ಗೆ ಹೇಳ್ಕೊಳ್ಳೋಕೆ ಆಗ್ತಿಲ್ಲ ಅಂದ್ರೆ ಅದನ್ನೇ ಚಿತ್ರ ಬಿಡಿಸಿ ತೋರಿಸೋಕೆ ಹೇಳಿ. ಮಗುವಿಗೆ ಏನ್‌ ಅನಿಸುತ್ತೋ ಅದ್ರ ಬಗ್ಗೆ ಮಾತಾಡೋವಾಗ ಅರ್ಥ ಆಗೋ ರೀತಿಯಲ್ಲಿ ಮಾತಾಡಿ. ಆದ್ರೆ ಘಟನೆ ಬಗ್ಗೆ ತುಂಬಾ ಆಳವಾಗಿ ಹೋಗಬೇಡಿ.

  “ನಮ್ಮ ಮಗಳ ಪಕ್ಕದಲ್ಲಿ ಕೂತು ಅವಳು ಹೇಳೋದನ್ನ ನಾವು ಕೇಳಿಸ್ಕೊಂಡ ಮೇಲೆ ಅವ್ಳಿಗೆ ಸಮಾಧಾನ ಅನಿಸುತ್ತೆ. ‘ಲೋಕದಲ್ಲಿ ಹೀಗೆ ನಡಿಯೋದು, ನಾವು ಅದಕ್ಕೆ ಹೊಂದ್ಕೊಂಡು ಹೋಗಬೇಕು’ ಅಂತ ಹೇಳಿದ್ರೆ ಅವ್ಳಿಗೆ ಕಷ್ಟ ಆಗುತ್ತೆ.”—ಸೆರಯಿ.

  ಬೈಬಲ್‌ ತತ್ವ: “ಕಿವಿಗೊಡುವುದರಲ್ಲಿ ಶೀಘ್ರನೂ ಮಾತಾಡುವುದರಲ್ಲಿ ದುಡುಕದವನೂ ಆಗಿರಬೇಕು.”—ಯಾಕೋಬ 1:19.

 • ನಿಮ್ಮ ಮಕ್ಕಳಿಗೆ ಸರಿಯಾದ ದೃಷ್ಟಿಕೋನದಿಂದ ನ್ಯೂಸ್‌ ನೋಡೋಕೆ ಸಹಾಯ ಮಾಡಿ. ಉದಾಹರಣೆಗೆ, ಕಿಡ್‌ನ್ಯಾಪ್‌ ಬಗ್ಗೆ ಇರೋ ನ್ಯೂಸ್‌ ಬರ್ತಾ ಇದೆ. ಅದನ್ನ ನ್ಯೂಸ್‌ ಹೇಳೋರು ಅದಕ್ಕೆ ಮಸಾಲೆ ಹಚ್ಚಿ ಹೇಳ್ತಿದ್ದಾರೆ. ಆಗ ನಿಮ್ಮ ಮಕ್ಕಳಿಗೆ ಅವ್ರ ಸುರಕ್ಷತೆಗೆ ನೀವು ಯಾವ ಕ್ರಮ ತಗೊಂಡಿದ್ದೀರಿ ಅಂತ ಹೇಳಿ. ಅಲ್ಲದೆ, ನೀವು ನೆನಪಿಡಬೇಕಾದ ವಿಷ್ಯ ಏನಂದ್ರೆ, ಈ ಮಾಧ್ಯಮಗಳು ನ್ಯೂಸ್‌ಗಳಲ್ಲಿ ಎಲ್ಲ ಕಡೆ ನಡಿಯೋ ಸಾಮಾನ್ಯ ಘಟನೆ ಬಗ್ಗೆ ಹೆಚ್ಚು ಹೇಳದೆ, ಅಲ್ಲಿಲ್ಲಿ ಅಪರೂಪಕ್ಕೆ ನಡಿಯೋ ಘಟನೆ ಬಗ್ಗೆ ಹೆಚ್ಚು ಹೇಳ್ತಾರೆ.

  “ನಿಮ್ಮ ಮಕ್ಕಳ ಮನಸ್ಸಲ್ಲಿ ಹುಟ್ಟಿರೋ ವಿಷ್ಯಗಳಿಂದ ಹೊರ ಬರೋಕೆ ಸಹಾಯ ಮಾಡಿ. ಯಾಕಂದ್ರೆ ಈ ವಿಷ್ಯಗಳು ಚಿಂತೆಗೆ ನಡೆಸುತ್ತೆ. ಮಕ್ಕಳು ಒಳ್ಳೇ ವಿಷ್ಯಗಳ ಕಡೆಗೆ ಗಮನ ಕೊಡೋಕೆ ನಾವು ಸಹಾಯ ಮಾಡಿದ್ರೆ ಅವ್ರು ಹಾಯಾಗಿ ಇರೋಕೆ ಆಗುತ್ತೆ.”—ಲುರ್‌ಡೆಸ್‌.

  ಬೈಬಲ್‌ ತತ್ವ: “ಜ್ಞಾನಿಯ ಹೃದಯವು ಅವನ ಬಾಯಿಗೆ ಜಾಣತನವನ್ನೂ ಅವನ ತುಟಿಗಳಿಗೆ ಉಪದೇಶಶಕ್ತಿಯನ್ನೂ ಹೆಚ್ಚಿಸುವದು.”—ಜ್ಞಾನೋಕ್ತಿ 16:23.

^ ಪ್ಯಾರ. 4 ಭಯ ಇರೋ ಮಕ್ಕಳು ರಾತ್ರಿ ಹೊತ್ತು ಹಾಸಿಗೆ ಮೇಲೆ ಸುಸ್ಸು ಮಾಡ್ಕೊಳ್ತಾರೆ, ಶಾಲೆಗೆ ಹೋಗೋಕೆ ಭಯ ಪಡ್ತಾರೆ, ಅಪ್ಪ-ಅಮ್ಮನಿಂದ ದೂರ ಇರ್ತಾರೆ.