ಮಾಹಿತಿ ಇರುವಲ್ಲಿ ಹೋಗಲು

ಸುಖೀ ಸಂಸಾರಕ್ಕೆ ಸಲಹೆಗಳು

ಮದ್ಯಪಾನದ ಬಗ್ಗೆ ಮಕ್ಕಳೊಂದಿಗೆ ಮಾತಾಡಿ

ಮದ್ಯಪಾನದ ಬಗ್ಗೆ ಮಕ್ಕಳೊಂದಿಗೆ ಮಾತಾಡಿ

“ಮದ್ಯಪಾನದ ಬಗ್ಗೆ ನನ್ನ ಮಗಳ ಹತ್ತಿರ ಮಾತಾಡಿದಾಗ ಅವಳಿಗೆ ಆರು ವರ್ಷ. ಅಷ್ಟರಲ್ಲೇ ಅವಳಿಗೆ ನಾನು ಅಂದುಕೊಂಡದ್ದಕ್ಕಿಂತ ಹೆಚ್ಚು ವಿಷಯ ಗೊತ್ತಿತ್ತು. ಅದನ್ನ ನೋಡಿ ನನಗೆ ತುಂಬ ಆಶ್ಚರ್ಯ ಆಯ್ತು.”—ಅಲೆಕ್ಸಾಂಡರ್‌.

 ನಿಮಗಿದು ತಿಳಿದಿರಲಿ

ಮದ್ಯಪಾನದ ಬಗ್ಗೆ ಮಕ್ಕಳೊಂದಿಗೆ ಮಾತಾಡುವುದು ತುಂಬ ಅಗತ್ಯ. ಮಕ್ಕಳು ದೊಡ್ಡವರಾಗಲಿ ಅಂತ ಕಾಯ್ತಾ ಕೂರಬೇಡಿ. “ನನ್ನ ಮಗ ಚಿಕ್ಕವನಾಗಿದ್ದಾಗಲೇ ಅವನ ಹತ್ತಿರ ಮದ್ಯಪಾನದ ಬಗ್ಗೆ ಮಾತಾಡಬೇಕಿತ್ತು. ಮಾತಾಡಿದ್ರೆ 13ನೇ ವಯಸ್ಸಿಗೇ ಅವನು ಕುಡುಕನಾಗುತ್ತಿರಲಿಲ್ಲ, ಕೆಟ್ಟ ಮೇಲೆ ಬುದ್ಧಿ ಕಲಿತೆ” ಎಂದು ರಷ್ಯಾದ ಹಾಮಿಟ್‌ ಹೇಳುತ್ತಾರೆ.

ಅದರ ಬಗ್ಗೆ ಮಕ್ಕಳಿಗೆ ಹೇಳುವುದು ಅಷ್ಟೊಂದು ಪ್ರಾಮುಖ್ಯನಾ?

  • ಸಹಪಾಠಿಗಳು, ಜಾಹೀರಾತುಗಳು ಮತ್ತು ಟಿವಿ ಮಾಧ್ಯಮಗಳ ಪ್ರಭಾವದಿಂದ ನಿಮ್ಮ ಮಕ್ಕಳು ಮದ್ಯಪಾನದಿಂದ ಏನೂ ತೊಂದರೆ ಇಲ್ಲ ಎಂದು ನೆನಸಬಹುದು.

  • ಯು.ಎಸ್‌. ಸೆಂಟರ್ಸ್‌ ಫಾರ್‌ ಡಿಸೀಸ್‌ ಕಂಟ್ರೋಲ್‌ ಆ್ಯಂಡ್‌ ಪ್ರಿವೆನ್ಶನ್‌ ಹೇಳುವ ಪ್ರಕಾರ ಅಮೆರಿಕದಲ್ಲಿ 11 ಶೇಕಡದಷ್ಟು ಚಿಕ್ಕಪ್ರಾಯದ ಮಕ್ಕಳು ಕುಡಿಯುತ್ತಾರೆ.

ಹೆತ್ತವರು ತಮ್ಮ ಮಕ್ಕಳಿಗೆ ಮದ್ಯಪಾನದ ಬಗ್ಗೆ ಮತ್ತು ಅದರ ಪರಿಣಾಮಗಳ ಬಗ್ಗೆ ಚಿಕ್ಕವರಾಗಿರುವಾಗಲೇ ಕಲಿಸಬೇಕೆಂದು ಆರೋಗ್ಯಾಧಿಕಾರಿಗಳು ಹೇಳುತ್ತಾರೆ. ಹಾಗಾದರೆ ನೀವಿದನ್ನು ಹೇಗೆ ಮಾಡಬಹುದು?

 ನೀವೇನು ಮಾಡಬಹುದು?

ಮಕ್ಕಳು ಯಾವ ಪ್ರಶ್ನೆ ಕೇಳುತ್ತಾರೆಂದು ಯೋಚಿಸಿ, ತಯಾರಾಗಿ. ಚಿಕ್ಕ ಮಕ್ಕಳಿಗೆ ಕುತೂಹಲ ಜಾಸ್ತಿ. ಮಕ್ಕಳು ಬೆಳೆಯುತ್ತಾ ಹೋದಂತೆ ಕುತೂಹಲವೂ ಬೆಳೆಯುತ್ತೆ. ಆದುದರಿಂದ ಹೆತ್ತವರೇ ಯಾವ ಪ್ರಶ್ನೆಗೆ ಹೇಗೆ ಉತ್ತರ ಕೊಡಬೇಕು ಅಂತ ಮೊದಲೇ ತಯಾರಾಗಿ. ಉದಾಹರಣೆಗೆ:

  • ನಿಮ್ಮ ಮಗುವಿಗೆ ಮದ್ಯದ ರುಚಿ ಹೇಗಿರುತ್ತೆ ಅಂತ ನೋಡಲು ಕುತೂಹಲ ಎಂದಿಟ್ಟುಕೊಳ್ಳಿ. ಆಗ ನೀವು ಮಗುವಿಗೆ ವೈನ್‌ ಸ್ವಲ್ಪ ಹುಳಿಯಾದ ಹಣ್ಣಿನ ಜ್ಯೂಸ್‌ ತರ ಇರುತ್ತೆ ಮತ್ತು ಬಿಯರ್‌ ಸ್ವಲ್ಪ ಕಹಿಯಾಗಿರುತ್ತೆ ಎಂದು ವಿವರಿಸಬಹುದು.

  • ನಿಮ್ಮ ಮಗು ಮದ್ಯವನ್ನು ಸೇವಿಸಬೇಕು ಅಂತ ಹೇಳೋದಾದರೆ ಆಗ ನೀವು ಅವರಿಗೆ ‘ಮದ್ಯವು ಮಕ್ಕಳ ದೇಹಕ್ಕೆ ಒಳ್ಳೇದಲ್ಲ’ ಎಂದು ಹೇಳಬೇಕು. ಮದ್ಯವನ್ನು ಕುಡಿಯೋದರಿಂದ ಹಾಯ್‌ ಅನಿಸಿದರೂ ಹೆಚ್ಚು ಕುಡಿದರೆ ತೂರಾಡುತ್ತಾ, ಹುಚ್ಚರ ತರ ವರ್ತಿಸುತ್ತಾರೆ ಅಥವಾ ಮಾತಾಡುತ್ತಾರೆ. ಇದರಿಂದ ನಂತರ ಬೇಸರಪಡಬೇಕಾಗುತ್ತೆ ಎಂದು ವಿವರಿಸಬಹುದು.—ಜ್ಞಾನೋಕ್ತಿ 23:29-35.

ಮೊದಲು ನೀವು ತಿಳಿದುಕೊಳ್ಳಿ. “ಜಾಣನು ತನ್ನ ಕೆಲಸವನ್ನು ತಿಳುವಳಿಕೆಯಿಂದ ನಡಿಸುವನು” ಎಂದು ಬೈಬಲ್‌ ಹೇಳುತ್ತದೆ. (ಜ್ಞಾನೋಕ್ತಿ 13:16) ಮದ್ಯಪಾನದ ಬಗ್ಗೆ ಮತ್ತು ನಿಮ್ಮ ದೇಶದಲ್ಲಿ ಮದ್ಯಪಾನ ಮಾಡಲು ಇರುವ ವಯೋಮಿತಿಯ ಬಗ್ಗೆ ನಿಮಗೆ ಗೊತ್ತಿರಬೇಕು. ಆಗ ಮಾತ್ರ ನೀವು ನಿಮ್ಮ ಮಗುವಿಗೆ ಚೆನ್ನಾಗಿ ಸಹಾಯ ಮಾಡಲು ಆಗುತ್ತೆ.

ಈ ವಿಷಯದ ಬಗ್ಗೆ ಮಾತಾಡಲು ನೀವೇ ಹೆಜ್ಜೆ ತಗೊಳ್ಳಿ. “ಕುಡಿಯೋದರ ಬಗ್ಗೆ ಮಕ್ಕಳಿಗೆ ಗಲಿಬಿಲಿ ಇರಬಹುದು. ನನ್ನ 8 ವರ್ಷ ಪ್ರಾಯದ ಮಗನಿಗೆ, ಮದ್ಯ ಕುಡಿಯೋದು ಸರೀನಾ ತಪ್ಪಾ ನಿನ್ನ ಅಭಿಪ್ರಾಯವೇನೆಂದು ಕೇಳಿದೆ. ನಾನು ಒಳ್ಳೇ ವಾತಾವರಣ ಸೃಷ್ಟಿಸಿ ಮಗನಿಗೆ ಮುಜುಗರವಾಗದಂತೆ ಹಾಯಾಗಿರೋ ಸಮಯದಲ್ಲಿ ಮಾತಾಡಿದ್ದರಿಂದ ಅವನಿಗೆ ಮುಚ್ಚುಮರೆಯಿಲ್ಲದೆ ಮಾತಾಡಲು ಸಹಾಯವಾಯಿತು” ಎಂದು ಬ್ರಿಟನ್‌ನ ಮಾರ್ಕ್‌ ಹೇಳುತ್ತಾರೆ.

ಒಮ್ಮೆ ಅಲ್ಲ, ಬೇರೆ ಬೇರೆ ಸಂದರ್ಭಗಳಲ್ಲಿ ಮದ್ಯಪಾನದ ಬಗ್ಗೆ ಮಕ್ಕಳತ್ರ ಮಾತಾಡುವುದರಿಂದ ಅದು ಅವರ ಮನಸ್ಸಲ್ಲಿ ಅಚ್ಚೊತ್ತುತ್ತೆ. ನಿಮ್ಮ ಮಕ್ಕಳು ಬೆಳೆಯುತ್ತಿದ್ದಂತೆ ಮದ್ಯಪಾನದ ಬಗ್ಗೆ ಮಾತ್ರವಲ್ಲ, ಸಂಚಾರಿ ನಿಯಮದ ಬಗ್ಗೆ, ಲೈಂಗಿಕ ವಿಷಯಗಳ ಬಗ್ಗೆ ಹೇಳಿಕೊಡಿ.

ಒಳ್ಳೇ ಮಾದರಿಯಿಡಿ. ಮಕ್ಕಳು ಸ್ಪಂಜಿನಂತಿರುತ್ತಾರೆ. ಅವರು ಸುತ್ತಮುತ್ತ ನಡೆಯೋದನ್ನ ಬೇಗನೆ ಹೀರಿಕೊಳ್ಳುತ್ತಾರೆ. ಒಂದು ಸಮೀಕ್ಷೆಯ ಪ್ರಕಾರ ಹೆತ್ತವರೇ ಮಕ್ಕಳ ಮೇಲೆ ಹೆಚ್ಚು ಪ್ರಭಾವ ಬೀರುತ್ತಾರಂತೆ. ಒತ್ತಡದಿಂದ ಹೊರಗೆ ಬರಲು ಮತ್ತು ಹಾಯಾಗಿರಲಿಕ್ಕಾಗಿ ನೀವು ಕುಡಿಯೋದಾದರೆ ಅದು ಮಗುವನ್ನೂ ಪ್ರಭಾವಿಸುತ್ತದೆ. ಜೀವನದ ಚಿಂತೆಗಳಿಂದ, ಸಮಸ್ಯೆಯಿಂದ ಹೊರಗೆ ಬರಲು ಮದ್ಯಪಾನವೇ ದಾರಿ ಎಂದು ಅವರಿಗನಿಸುತ್ತದೆ. ಆದ್ದರಿಂದ, ಒಳ್ಳೇ ಮಾದರಿಯಿಡಿ. ನೀವು ಅಮಲೇರುವಷ್ಟು ಕುಡಿಯಬೇಡಿ.

ಕುಡಿಯುವ ವಿಷಯದಲ್ಲಿ ನಿಮ್ಮ ಮಕ್ಕಳು ನಿಮ್ಮನ್ನ ನೋಡಿ ಕಲಿಯುತ್ತಾರೆ