ಮಾಹಿತಿ ಇರುವಲ್ಲಿ ಹೋಗಲು

ಸುಖೀ ಸಂಸಾರಕ್ಕೆ ಸಲಹೆಗಳು | ಮಕ್ಕಳ ಪಾಲನೆ

ಸ್ಮಾರ್ಟ್‌ಫೋನ್‌ ಲೋಕದಲ್ಲಿ ಮಕ್ಕಳು—ಭಾಗ 1: ಮಕ್ಕಳಿಗೆ ಸ್ಮಾರ್ಟ್‌ಫೋನ್‌ ಬೇಕಾ? ಬೇಡ್ವಾ?

ಸ್ಮಾರ್ಟ್‌ಫೋನ್‌ ಲೋಕದಲ್ಲಿ ಮಕ್ಕಳು—ಭಾಗ 1: ಮಕ್ಕಳಿಗೆ ಸ್ಮಾರ್ಟ್‌ಫೋನ್‌ ಬೇಕಾ? ಬೇಡ್ವಾ?

ಇವತ್ತಿನ ಎಲೆಕ್ಟ್ರಾನಿಕ್‌ ಕಾಲದಲ್ಲಿ ಸ್ಮಾರ್ಟ್‌ಫೋನ್‌ * ಬಳಸದ ಮಕ್ಕಳು ಅಪರೂಪ ಆಗ್ಬಿಟ್ಟಿದ್ದಾರೆ. ಅದ್ರಲ್ಲೂ ಅವ್ರು ಒಬ್ರೇ ಇದ್ದಾಗ ಇಂಟರ್‌ನೆಟ್‌ ಉಪಯೋಗಿಸೋಕೆ ತುಂಬ ಇಷ್ಟಪಡ್ತಾರೆ. ಕಾಲ ಹೀಗೆ ಬದಲಾಗಿರೋದ್ರಿಂದ ಈ ಕೆಳಗಿನ ಪ್ರಶ್ನೆಗಳನ್ನ ಕೇಳಿಕೊಳ್ಳೋದು ಮುಖ್ಯ. ಮಕ್ಕಳಿಗೆ ಸ್ಮಾರ್ಟ್‌ಫೋನ್‌ ಕೊಡ್ಸೋದ್ರಿಂದ ಏನೆಲ್ಲಾ ತೊಂದ್ರೆಗಳಾಗುತ್ತೆ? ಇದ್ರಿಂದ ಪ್ರಯೋಜ್ನ ಇದ್ಯಾ? ಸ್ಮಾರ್ಟ್‌ಫೋನ್‌ ಜೊತೆ ಎಷ್ಟೊತ್ತು ಸಮ್ಯ ಕಳಿತೀರಾ?

 ಹೆತ್ತವರಿಗೆ ಗೊತ್ತಿರಬೇಕಾದ ವಿಷ್ಯಗಳು

ಸ್ಮಾರ್ಟ್‌ಫೋನ್‌ನ ಪ್ರಯೋಜ್ನಗಳು

 • ಮಕ್ಕಳ ಸುರಕ್ಷೆ ಮತ್ತು ಹೆತ್ತವರ ನೆಮ್ಮದಿ. “ಅಪಾಯ ತುಂಬಿರೋ ಲೋಕದಲ್ಲಿ ನಾವು ಜೀವಿಸ್ತಿರೋದ್ರಿಂದ ಮಕ್ಕಳು ಮತ್ತು ಅಪ್ಪ ಅಮ್ಮ ಯಾವಾಗಲೂ ಸಂಪರ್ಕದಲ್ಲಿ ಇರಲೇಬೇಕು.ಅಂತ ಇಬ್ಬರು ಹದಿಪ್ರಾಯದ ಮಕ್ಕಳ ತಾಯಿಯಾದ ಬೆಥನಿ ಹೇಳ್ತಾರೆ.

  “ಕೆಲವು ಆ್ಯಪ್‌ಗಳು ಮಕ್ಕಳ ಫೋನ್‌ ಜೊತೆ ಕನೆಕ್ಟ್‌ ಆಗೋಕೆ ಸಹಾಯ ಮಾಡುತ್ತೆ. ಇದ್ರಿಂದ ಅವ್ರು ಎಲ್ಲಿದ್ದಾರೆ ಅಂತ ಗೊತ್ತಾಗುತ್ತೆ ಅಷ್ಟೇ ಅಲ್ಲ ಅವ್ರು ಎಷ್ಟು ಫಾಸ್ಟಾಗಿ ಗಾಡಿ ಓಡಿಸ್ತಿದ್ದಾರೆ ಅನ್ನೋದು ಕೂಡ ಗೊತ್ತಾಗುತ್ತೆ.” ಅಂತ ಮಕ್ಕಳ ತಾಯಿಯಾದ ಕ್ಯಾಥರಿನ್‌ ಹೇಳ್ತಾರೆ.

 • ಸ್ಕೂಲ್‌ವರ್ಕ್‌ ಮಾಡೋಕೆ ಸಹಾಯ. “ಮಕ್ಕಳ ಜೊತೆ ಟೀಚರ್ಸ್‌ ಮಾತಾಡೋಕೆ ಮತ್ತೆ ಹೋಮ್‌ವರ್ಕನ್ನ ಇಮೇಲ್‌ ಮೂಲಕ, ಮೆಸೇಜ್‌ ಮೂಲಕ ಕಳಿಸೋಕೆ ಸ್ಮಾರ್ಟ್‌ಫೋನ್‌ ಬೇಕು ಅಂತ ಮರೀ ಅನ್ನೋ ಹೆಸರಿನ ತಾಯಿ ಹೇಳ್ತಾರೆ.

ಸ್ಮಾರ್ಟ್‌ಫೋನ್‌ನಿಂದಾಗೊ ತೊಂದ್ರೆಗಳು

 • ಅತಿಯಾಗಿ ಫೋನ್‌ ಬಳಸುವುದು. ಈಗಿನ ಕಾಲದ ಯುವಜನ್ರು ತುಂಬ ಸಮಯನಾ ಫೋನಲ್ಲೇ ಕಳೀತಾರೆ. ನಿಮ್ಗೆ ಇನ್ನೊಂದು ವಿಷ್ಯ ಗೊತ್ತಾ? ಹೆತ್ತವರು ತಮ್ಮ ಮಕ್ಕಳ ಜೊತೆ ಸಮಯ ಕಳೆಯೋದಕ್ಕಿಂತ ತಮ್ಮ ಫೋನಲ್ಲೇ ಮುಳುಗಿ ಹೋಗಿರ್ತಾರೆ. ಒಬ್ಬ ಸಲಹೆಗಾರ ಹೇಳೋ ಪ್ರಕಾರ ಕೆಲವು ಮನೆಗಳಲ್ಲಿ ಏನಾಗಿದೆ ಅಂದ್ರೆ “ಒಂದೇ ಮನೇಲಿದ್ರೂ ಮಾತು ಕತೆ ಇರಲ್ಲ, ಮೊಬೈಲಲ್ಲೇ ಮುಳುಗೋಗಿರ್ತಾರೆ.” *

 • ಪೋರ್ನೋಗ್ರಫಿ. ಒಂದು ವರದಿ ಪ್ರಕಾರ, ಪ್ರತಿ ತಿಂಗಳು100 ರಲ್ಲಿ 50ಜನ ಹದಿವಯಸ್ಸಿನ ಮಕ್ಕಳು ಇಂಟರ್‌ನೆಟ್‌ನಲ್ಲಿ ಪೋರ್ನೋಗ್ರಫಿ ವಿಡಿಯೋಗಳನ್ನ ಹುಡುಕ್ತಾರೆ. ಆದ್ರೆ ತುಂಬ ದುಃಖಕರವಾದ ವಿಷ್ಯ ಏನಂದ್ರೆ ಇದಕ್ಕೆ ಅವ್ರೇನೂ ಕಷ್ಟಪಡಬೇಕಾಗಿಲ್ಲ, ತುಂಬ ಸುಲಭವಾಗಿ ಅವರ ಕೈಯಲ್ಲಿರೋ ಮೊಬೈಲ್‌ ಫೋನಲ್ಲೇ ಇಂಥಾ ಅಶ್ಲೀಲ ವಿಡಿಯೋಗಳು ಸಿಕ್ಕಿ ಬಿಡುತ್ತೆ. “ನಿಮ್ಮ ಮಕ್ಕಳಿಗೆ ಸ್ಮಾರ್ಟ್‌ಫೋನ್‌ ಕೊಡ್ಸೋದೂ ಒಂದೇ, ಪೋರ್ನೋಗ್ರಫಿ ಅಂಗಡಿನ ತೆರೆದು ಅದ್ರಲ್ಲಿ ಅವ್ರನ್ನ ಕೂರಿಸೋದೂ ಒಂದೇ.” ಅಂತ ಇಬ್ಬರು ಹದಿವಯಸ್ಸಿನ ಮಕ್ಕಳ ತಂದೆಯಾದ ವಿಲ್ಯಮ್‌ ಹೇಳ್ತಾರೆ.

 • ಚಟ. ಕೆಲವ್ರು ತಮ್ಮ ಫೋನ್‌ಗೆ ಭಾವನಾತ್ಮಕವಾಗಿ ಎಷ್ಟು ಅಂಟಿಕೊಂಡಿರ್ತಾರೆ ಅಂದ್ರೆ ಫೋನಿಲ್ಲದಿರೊ ಪ್ರಪಂಚನಾ ಅವ್ರಿಂದ ಊಹಿಸ್ಕೊಳ್ಳೋಕ್ಕೂ ಆಗಲ್ಲ. ಕೆಲವ್ರಿಗಂತೂ ಫೋನಿಲ್ಲದಿದ್ರೆ ಹುಚ್ಚು ಹಿಡಿದಹಾಗೆ ಅನ್ಸುತ್ತೆ. ಫೋನ್‌ ಉಪಯೋಗಿಸೋದ್ರಿಂದ ತಮ್ಮ ಮಕ್ಕಳು ಒರಟಾಗಿ ನಡಕೊಳ್ಳೋದನ್ನ ಕೆಲವು ಹೆತ್ತವ್ರು ಗಮನಿಸಿದ್ದಾರೆ. ಕಾರ್ಮನ್‌ ಹೀಗೆ ಹೇಳ್ತಾಳೆ: “ನನ್ನ ಮಗ ಫೋನ್‌ ಬಳಸ್ತಿರ್ವಾಗ ನಾನೇನಾದ್ರೂ ಅವನನ್ನ ಮಾತಾಡಿಸ್ಬಿಟ್ರೆ ಅಷ್ಟೇ. ರೇಗಾಡಿಬಿಡ್ತಾನೆ ಯಾಕಂದ್ರೆ ಆ ಟೈಮಲ್ಲಿ ಅವನನ್ನ ಯಾರೂ ಮಾತಾಡಿಸ್ಬಾರ್ದು.”

 • ಇನ್ಯಾವ ತೊಂದರೆಗಳಿವೆ. ಸ್ಮಾರ್ಟ್‌ಫೋನ್‌ ಉಪಯೋಗದಿಂದ ಬೇರೆ ಕೆಲವು ತೊಂದ್ರೆಗಳು ಕೂಡ ಇದೆ. ಸೈಬರ್‌ಬುಲ್ಲಿಂಗ್‌ ಅಂದ್ರೆ ಸೋಶಿಯಲ್‌ ಮೀಡಿಯಾ ಮತ್ತು ಮಸ್ಸೇಜ್‌ಗಳ ಮೂಲಕ ನಿಮ್ಮ ಹೆಸ್ರು ಹಾಳು ಆಗೋ ತರ, ನಿಮ್ಗೆ ಅವಮಾನ ಆಗೋ ತರ ಮಾಡ್ತಾರೆ. ಸೆಕ್ಸ್‌ಟಿಂಗ್‌ ಅಂದ್ರೆ ಅಶ್ಲೀಲ ಮೆಸೇಜ್‌ಗಳನ್ನ ಮತ್ತು ಚಿತ್ರಗಳನ್ನ ಕಳಿಸಿ ತೊಂದ್ರೆ ಕೊಡ್ತಾರೆ. ಇದಲ್ಲದೆ ಯಾವಾಗ್ಲೂ ಫೋನನ್ನೇ ನೋಡ್ತಾ ಇರೋದ್ರಿಂದ ಕತ್ತು, ಬೆನ್ನು ನೋವು ಮತ್ತು ಸರಿಯಾಗಿ ನಿದ್ರೆ ಬರದಿರೋದು ಇಂಥಾ ಕೆಲವು ಆರೋಗ್ಯದ ಸಮಸ್ಯೆಗಳು ಕೂಡ ಬರುತ್ತೆ. ಕೆಲವು ಯುವಕರು “ಗೋಸ್ಟ್‌ ಆ್ಯಪ್‌” ಉಪಯೋಗಿಸ್ತಾರೆ. ಬೇರೆ ಆ್ಯಪ್‌ಗಳ ಹಾಗೆ ಇದೂ ಕೂಡ ಒಂದು ಆ್ಯಪ್‌. ಉದಾಹರಣೆಗೆ ಇದು ಕ್ಯಾಲ್‌ಕ್ಯುಲೇಟರ್‌ ತರ ಕಾಣಿಸುತ್ತೆ. ಆದ್ರೆ ಇದು ಮಾಡೋ ಕೆಲಸ ಏನಂದ್ರೆ ಮಕ್ಕಳು ಪೋನಲ್ಲಿ ನೋಡೋ ವಿಷ್ಯಗಳನ್ನ ಹೆತ್ತವರಿಂದ ಬಚ್ಚಿಡುತ್ತೆ. ಮಕ್ಕಳು ಮೊಬೈಲಲ್ಲಿ ಏನನ್ನ ನೋಡ್ತಿದ್ದಾರೆ, ಮಾಡ್ತಿದ್ದಾರೆ ಅನ್ನೋದು ಅಮಾಯಕ ಹೆತ್ತವರಿಗೆ ಗೊತ್ತೇ ಆಗಲ್ಲ.

  ಹದಿವಯಸ್ಸಿನ ಹುಡುಗಿಯ ತಂದೆಯಾದ ಡ್ಯಾನಿಯಲ್‌ ಹೇಳೋದು: “ಸ್ಮಾರ್ಟ್‌ಫೋನ್‌ ಒಂದು ಕಿಟಕಿ ಇದ್ದ ಹಾಗೆ. ಅದನ್ನ ತೆರೆದರೆ ಇಂಟರ್‌ನೆಟ್‌ನಲ್ಲಿ ಏನು ಬೇಕಾದ್ರೂ ನೋಡಬಹುದು. ಯಾವುದೇ ಮುಚ್ಚುಮರೆ ಇಲ್ಲದೆ ಒಳ್ಳೇದು ಕೆಟ್ಟದು ಎಲ್ಲ ನೋಡಬಹುದು.”

 ಹೆತ್ತವರು ಕೇಳ್ಕೊಬೇಕಾದ ವಿಷ್ಯಗಳು

 • ‘ನನ್ನ ಮಗುಗೆ ಸ್ಮಾರ್ಟ್‌ಫೋನ್‌ ಅವಶ್ಯಕತೆ ಇದ್ಯಾ?’

  ಬೈಬಲ್‌ ಹೇಳೋದು: “ಜಾಣನು ತನ್ನ ನಡತೆಯನ್ನು ಚೆನ್ನಾಗಿ ಗಮನಿಸುವನು.” (ಜ್ಞಾನೋಕ್ತಿ 14:15) ಇದನ್ನ ಮನಸ್ಸಲ್ಲಿಟ್ಟು ನಿಮ್ಮನ್ನೇ ಹೀಗೆ ಕೇಳಿಕೊಳ್ಳಿ:

  ‘ಸುರಕ್ಷೆ ಮತ್ತು ಬೇರೆ ಸಮಸ್ಯೆಗಳಿಗೋಸ್ಕರ ಮಕ್ಕಳಿಗೆ ಸ್ಮಾರ್ಟ್‌ಫೋನ್‌ ಕೊಡ್ಸೊ ಅನಿವಾರ್ಯ ಇದ್ಯಾ? ಇದ್ರಿಂದ ಆಗೋ ಒಳ್ಳೇದರ ಮತ್ತು ಕೆಟ್ಟದರ ಬಗ್ಗೆ ಯೋಚಿಸಿದ್ದೀನಾ? ಸ್ಮಾರ್ಟ್‌ಫೋನ್‌ ಕೊಡ್ಸೊ ಬದ್ಲು ಬೇರೆ ಇನ್ಯಾವುದಾದ್ರು ದಾರಿ ಇದ್ಯಾ?’

  “ಸಾಧಾರಣ ಫೋನ್‌ಗಳು ಈಗಲೂ ಸಿಗುತ್ತೆ, ಅದ್ರಿಂದ ನಿಮ್ಮ ಮಕ್ಕಳ ಜೊತೆ ಫೋನ್‌ ಅಥ್ವಾ ಮೆಸೇಜ್‌ ಮಾಡಿ ಸಂಪರ್ಕದಲ್ಲಿ ಇರಬಹುದು ಮತ್ತೆ ದುಡ್ಡನ್ನ ಕೂಡ ಉಳಿತಾಯ ಮಾಡ್ಬಹುದು.” ಅಂತ ಟಾಡ್‌ ಅನ್ನೋ ಒಬ್ಬ ತಂದೆ ಹೇಳ್ತಾರೆ.

 • ‘ಜವಾಬ್ದಾರಿ ಹೊರಕ್ಕೆ ನನ್ನ ಮಗು ರೆಡಿನಾ?’

  ಬೈಬಲ್‌ ಹೇಳೋದು: “ಜ್ಞಾನಿಯ ಬುದ್ಧಿಯು ಅವನ ಬಲಗಡೆಯಿರುವದು,.” (ಪ್ರಸಂಗಿ 10:2) ಇದನ್ನ ಮನಸ್ಸಲ್ಲಿಟ್ಟು ನಿಮ್ಮನ್ನೇ ಹೀಗೆ ಕೇಳಿಕೊಳ್ಳಿ:

  ‘ನನ್ನ ಮಗುನ ನಂಬೋಕೆ ನನಗೆ ಏನು ಗ್ಯಾರಂಟಿ ಇದೆ? ನನ್ನ ಮಗುಗೆ ನನ್ನತ್ರ ಮನಸ್ಸುಬಿಚ್ಚಿ ಮಾತಾಡೋ ರೂಢಿ ಇದ್ಯಾ? ಯಾವಾಗ್ಲೂ ನನ್ನ ಮಗು ನನ್ನತ್ರ ಪ್ರಾಮಾಣಿಕವಾಗಿ ನಡ್ಕೊಳುತ್ತಾ, ಉದಾಹರಣೆಗೆ ಅವ್ನ ಫ್ರೆಂಡ್ಸ್‌ ಯಾರು ಅನ್ನೋದನ್ನ ಮುಚ್ಚಿಡ್ತಾನಾ? ಟಿ.ವಿ, ಟ್ಯಾಬ್‌ ಅಥ್ವಾ ಲ್ಯಾಪ್‌ಟಾಪ್‌ ಉಪಯೋಗಿಸ್ವಾಗ ಎಷ್ಟು ಹೊತ್ತು ಉಪಯೋಗಿಸಬೇಕು ಅನ್ನೋ ಸ್ವನಿಯಂತ್ರಣ ಅವನಿಗಿದ್ಯಾ?’ ಸೆರೆನಾ ಹೀಗೆ ಹೇಳ್ತಾರೆ: “ಸ್ಮಾರ್ಟ್‌ಫೋನ್‌ ಒಂದು ಅದ್ಬುತವಾದ ಕೊಡುಗೆ ಆದ್ರೆ ಅಷ್ಟೇ ಅಪಾಯಕಾರಿ ಕೂಡ, ಪ್ರಪಂಚ ಗೊತ್ತಿಲ್ಲದಿರೊ ಸಣ್ಣ ವಯಸ್ಸಿನ ಮಕ್ಕಳಿಗೆ ಸ್ಮಾರ್ಟ್‌ಫೋನ್‌ ಕೊಡ್ಸೊ ಮುಂಚೆ ಅವ್ರ ಮೇಲೆ ನೀವು ಎಂಥಾ ಹೊರೆ ಹಾಕ್ತಿದ್ದೀರ ಅನ್ನೋದು ನಿಮ್ಗೆ ಗೊತ್ತಿರಬೇಕು.”

 • ‘ಜವಾಬ್ದಾರಿ ಹೊರಕ್ಕೆ ನಾನು ರೆಡಿನಾ?’

  ಬೈಬಲ್‌ ಹೇಳೋದು: “ನಡೆಯಬೇಕಾದ ಮಾರ್ಗಕ್ಕೆ ತಕ್ಕಂತೆ ಹುಡುಗನನ್ನು ಶಿಕ್ಷಿಸು.” (ಜ್ಞಾನೋಕ್ತಿ 22:6) ಇದನ್ನ ಮನಸ್ಸಲ್ಲಿಟ್ಟು ನಿಮ್ಮನ್ನೇ ಹೀಗೆ ಕೇಳಿಕೊಳ್ಳಿ:

  ‘ಫೋನ್‌ ಉಪಯೋಗಿಸ್ವಾಗ ಆಗೋ ಅಪಾಯಗಳನ್ನ ತಿಳ್ಕೊಂಡು ನನ್ನ ಮಗುಗೆ ಸಹಾಯ ಮಾಡೋಕೆ, ಫೋನ್‌ ಬಗ್ಗೆ ನನ್ಗೆ ಸರಿಯಾದ ಜ್ಞಾನ ಇದ್ಯಾ? ನನ್ನ ಮಗು ಫೋನ್‌ನ ಎಷ್ಟು ಸಮಯ ಬಳಸಬೇಕು, ಬಳಸಬಾರದು ಅಂತ ಕಂಟ್ರೋಲ್‌ ಮಾಡೋಕೆ ನನಗಾಗುತ್ತಾ? ಫೋನ್‌ನ ಒಳ್ಳೇ ರೀತಿಯಲ್ಲಿ ಉಪಯೋಗಿಸೋಕೆ ಮಗುಗೆ ಹೇಗೆ ಸಹಾಯ ಮಾಡ್ಲಿ?’ ಈ ಮುಂಚೆ ಹೇಳಿದ ಡ್ಯಾನಿಯಲ್‌ ಹೀಗಂತಾರೆ: “ನಾನು ನೋಡಿರೊ ಪ್ರಕಾರ ತುಂಬ ಹೆತ್ತವ್ರು ಫೋನ್‌ನ ಮಕ್ಕಳ ಕೈಗೆ ಕೊಟ್ಟು ಅಲ್ಲಿಂದ ಜಾಗ ಖಾಲಿ ಮಾಡ್ಬಿಟ್ಟಿರ್ತಾರೆ.”

ಪಾಠ: ಮಕ್ಕಳು ಫೋನ್‌ನ ಸರಿಯಾಗಿ ಉಪಯೋಗಿಸ್ಬೇಕಂದ್ರೆ ಅವರಿಗೆ ಒಳ್ಳೇ ತರಬೇತಿ ಬೇಕೇ ಬೇಕು. “ಹೆತ್ತವರು ಕಂಟ್ರೋಲ್‌ ಮಾಡ್ದಿದ್ದಾಗ ಮತ್ತೆ ಅವ್ರನ್ನ ಗಮನಿಸ್ದೆ ಇದ್ದಾಗ, ಮಕ್ಕಳಿಗೆ ಫೋನೇ ಪ್ರಪಂಚ ಆಗ್ಬಿಟ್ಟಿರುತ್ತೆ, ಫೋನಲ್ಲೇ ತುಂಬ ಸಮಯ ಕಳೆಯೋ ಆಸೆಗೆ ತುಂಬ ಮಕ್ಕಳು ಬಲಿಬೀಳ್ತಿದ್ದಾರೆ.” ಅಂತ ಇನ್‌ಡಿಸ್ಟ್ರ್ಯಾಕ್‌ಟೆಬಲ್‌ ಅನ್ನೋ ಪುಸ್ತಕ ಹೇಳುತ್ತೆ.

^ ಪ್ಯಾರ. 1 “ಸ್ಮಾರ್ಟ್‌ಫೋನ್‌” ಅಂದ್ರೆ ಇಂಟರ್‌ನೆಟ್‌ ಕನೆಕ್ಷನ್‌ ಇರೊ ಸೆಲ್‌ಫೋನ್‌.

^ ಪ್ಯಾರ. 7 ಥಾಮಸ್‌ ಕಾರ್‌ಸ್ಟಿಂಗ್‌ ಬರೆದಿರೊ ಡಿಸ್‌ಕನೆಕ್ಟೆಡ್‌ ಪುಸ್ತಕ ನೋಡಿ.