ಮಾಹಿತಿ ಇರುವಲ್ಲಿ ಹೋಗಲು

ಸುಖೀ ಸಂಸಾರಕ್ಕೆ ಸಲಹೆಗಳು | ಮದುವೆ

ತಂತ್ರಜ್ಞಾನದಿಂದ ನಿಮ್ಮ ಜೀವನ ಅತಂತ್ರ ಆಗದಿರಲಿ

ತಂತ್ರಜ್ಞಾನದಿಂದ ನಿಮ್ಮ ಜೀವನ ಅತಂತ್ರ ಆಗದಿರಲಿ

ತಂತ್ರಜ್ಞಾನದಿಂದ ನಿಮ್ಮ ಮದ್ವೆ ಜೀವನಕ್ಕೆ ಸಹಾಯನೂ ಆಗುತ್ತೆ, ಸಮಸ್ಯೆನೂ ಬರುತ್ತೆ. ನಿಮ್ಮ ಜೀವನದಲ್ಲಿ ಏನಾಗ್ತಿದೆ?

 ನಿಮಗೆ ಗೊತ್ತಿರಬೇಕಾದ ವಿಷ್ಯಗಳು

  • ತಂತ್ರಜ್ಞಾನನಾ ಸರಿಯಾಗಿ ಬಳಸಿದ್ರೆ ಗಂಡ ಹೆಂಡತಿಗೆ ಇದ್ರಿಂದ ಪ್ರಯೋಜ್ನ ಇದೆ. ಉದಾಹರಣೆಗೆ, ಗಂಡ ಹೆಂಡತಿ ಕೆಲ್ಸ ಮಾಡೋವಾಗ ದೂರ ಇದ್ರೆ ಒಬ್ರಿಗೊಬ್ಬರು ಮಾತಾಡೋಕೆ ಆಗುತ್ತೆ.

    “‘ಐ ಲವ್‌ ಯು’ ಅಥವಾ ‘ನಾನು ನಿನ್ನ ಬಗ್ಗೆನೇ ಯೋಚ್ನೆ ಮಾಡ್ತಿದ್ದೀನಿ’ ಅನ್ನೋದು ಸಿಂಪಲ್‌ ಮೆಸೆಜ್‌ ಆಗಿರಬಹುದು. ಆದ್ರೆ ಅದು ಸಂಬಂಧನ ಸ್ಟ್ರಾಂಗ್‌ ಮಾಡುತ್ತೆ.”—ಜೋನಾತನ್‌.

  • ತಂತ್ರಜ್ಞಾನನಾ ಅದ್ರದ್ದೇ ಆದ ಜಾಗದಲ್ಲಿ ಇಟ್ಟಿಲ್ಲ ಅಂದ್ರೆ ಮದ್ವೆ ಜೀವನದಲ್ಲಿ ಸಮಸ್ಯೆ ಕಟ್ಟಿಟ್ಟ ಬುತ್ತಿ. ಉದಾಹರಣೆಗೆ, ಕೆಲವರು ಮೊಬೈಲ್‌ ಟ್ಯಾಬ್‌ಗಳಲ್ಲಿ ಎಷ್ಟು ಮುಳುಗಿ ಹೋಗಿರ್ತಾರೆ ಅಂದ್ರೆ ಸಂಗಾತಿಗೆ ಸಮಯ ಕೊಡೋಕೆ ಅವ್ರ ಹತ್ರ ಸಮಯನೇ ಉಳಿದಿರೋಲ್ಲ.

    “ನಾನು ಮೊಬೈಲ್‌ನಲ್ಲಿ ಜಾಸ್ತಿ ಮುಳುಗಿ ಹೋಗದೇ ಇದ್ದಿದ್ರೆ ನನ್ನ ಗಂಡ ನನ್ನ ಜೊತೆ ಜಾಸ್ತಿ ಮಾತಾಡ್ತಿದ್ರು ಅನ್ಸುತ್ತೆ.”—ಜುಲಿಸ.

  • ಮೊಬೈಲನ್ನು ಉಪಯೋಗಿಸಿಕೊಂಡು ಸಂಗಾತಿ ಜೊತೆನೂ ಚೆನ್ನಾಗಿ ಮಾತಾಡ್ಕೊಂಡು ಇರಬಹುದು ಅಂತ ಕೆಲವರು ಹೇಳ್ತಾರೆ. “ಮಲ್ಟಿಟಾಸ್ಕಿಂಗ್‌ ಬಗ್ಗೆ ಇರೋ ಸತ್ಯ”ದ ಬಗ್ಗೆ ಸಮಾಜಶಾಸ್ತ್ರಜ್ಞೆ ಶೆರಿ ಟರ್ಕಲ್‌ ಹೇಳೋದು ಏನಂದ್ರೆ “ನಾವು ಒಂದೇ ಸಮಯದಲ್ಲಿ ಜಾಸ್ತಿ ಕೆಲ್ಸ ಮಾಡೋಕೆ ಹೋದ್ರೆ ಎಲ್ಲಾ ಕೆಲ್ಸನೂ ಹಾಳಾಗುತ್ತೆ, ಯಾವುದನ್ನೂ ಚೆನ್ನಾಗಿ ಮಾಡೋಕಾಗಲ್ಲ.” * ಈ ತರ ಕೆಲ್ಸ ಮಾಡೋದು ಒಂದು ವರ ಅಂತ ಕೆಲವರು ಹೇಳೋದಾದ್ರೂ ಅದು ನಿಜ ಅಲ್ಲ.

    “ನನ್ನ ಗಂಡನ ಜೊತೆ ಮಾತಾಡೋಕೆ ನಂಗೆ ತುಂಬಾ ಖುಷಿ ಆಗುತ್ತೆ. ಆದ್ರೆ ಅವ್ರು ಎರಡು ಮೂರು ಕೆಲ್ಸನಾ ಒಟ್ಟಿಗೆ ಮಾಡ್ತಾ ನನ್ನ ಜೊತೆ ಮಾತಾಡೋವಾಗ ಅಲ್ಲ. ಆ ತರ ಕೆಲ್ಸ ಮಾಡೋವಾಗ ನಾನು ಎದುರಿಗಿದ್ರೂ ಅವರಿಗೆ ಲೆಕ್ಕಕ್ಕೆ ಇಲ್ಲದಂಗೆ. ಅದ್ರಲ್ಲಿ ಅವ್ರು ಅಷ್ಟು ಮುಳುಗಿ ಹೋಗಿರ್ತಾರೆ.”—ಸಾರಾ.

ಪಾಠ: ತಂತ್ರಜ್ಞಾನನಾ ನೀವು ಬಳಸೋ ರೀತಿಯಿಂದ ನಿಮ್ಮ ಕುಟುಂಬನಾ ಕಟ್ಟಲೂಬಹುದು, ಹೊಡಿಲೂಬಹುದು.

 ನೀವು ಮಾಡಬೇಕಾದ ವಿಷ್ಯಗಳು

ಆದ್ಯತೆಗಳನ್ನು ಇಡಿ. ‘ಹೆಚ್ಚು ಪ್ರಮುಖವಾದ ವಿಷಯಗಳನ್ನು ಖಚಿತಪಡಿಸಿಕೊಳ್ಳುವವರಾಗಿರಿ’ ಅಂತ ಬೈಬಲ್‌ ಹೇಳುತ್ತೆ. (ಫಿಲಿಪ್ಪಿ 1:10) ‘ನನ್ನ ಸಂಗಾತಿಗೆ ಕೊಡಬೇಕಾದ ಸಮಯನಾ ನಾನು ಮೊಬೈಲ್‌ನಲ್ಲೇ ಕಳೀತಿದ್ದೀನಾ‘ ಅಂತ ಕೇಳಿಕೊಳ್ಳಿ.

“ಗಂಡ ಹೆಂಡ್ತಿ ಊಟ ಮಾಡೋಕೆ ಹೋಟೆಲ್‌ಗೆ ಹೋಗಿ ಇಬ್ರೂ ಅವ್ರ ಅವ್ರ ಮೊಬೈಲಲ್ಲಿ ಮುಳುಗಿ ಹೋಗಿರೋರನ್ನ ನೋಡಿದ್ರೆ ಬೇಜಾರಾಗುತ್ತೆ. ನಾವು ತಂತ್ರಜ್ಞಾನಕ್ಕೆ ದಾಸರಾಗಿ ನಮ್ಮ ಸಂಬಂಧನಾ ಹಾಳು ಮಾಡ್ಕೊಬಾರದು. ಮೊಬೈಲಿಗಿಂತ ನಮ್ಮ ಮದ್ವೆ ಸಂಬಂಧ ತುಂಬಾ ಮುಖ್ಯ.”—ಮ್ಯಾಥ್ಯು.

ಮಿತಿ ಇರಲಿ. “ನೀವು ನಡೆದುಕೊಳ್ಳುವ ರೀತಿಯನ್ನು ಕಟ್ಟುನಿಟ್ಟಾಗಿ ನೋಡಿಕೊಳ್ಳಿರಿ. ಅವಿವೇಕಿಗಳಂತೆ ನಡೆದುಕೊಳ್ಳದೆ ವಿವೇಕಿಗಳಂತೆ ನಡೆದುಕೊಳ್ಳಿರಿ . . . ನಿಮಗೋಸ್ಕರ ಸುಸಮಯವನ್ನು ಖರೀದಿಸಿಕೊಳ್ಳಿರಿ” ಅಂತ ಬೈಬಲ್‌ ಹೇಳುತ್ತೆ. (ಎಫೆಸ 5:15, 16) ‘ಬಂದಿದ್ದ ಮೆಸೆಜ್ನೆಲ್ಲಾ ಓದಿ ಅದಕ್ಕೆ ನಾನು ರಿಪ್ಲೈ ಮಾಡ್ಕೊಂಡೇ ಇರ್ತೀನಾ? ಅಥ್ವಾ ಅದಕ್ಕಂತ ಒಂದು ಸಮಯ ನಿಗದಿ ಮಾಡ್ತೀನಾ’ ಅಂತ ನಿಮ್ಮನ್ನೇ ಕೇಳಿಕೊಳ್ಳಿ.

“ಮೊಬೈಲನ್ನ ಸೈಲೆಂಟ್‌ ಮೋಡಲ್ಲಿ ಹಾಕಿ ಫ್ರೀ ಇರೋವಾಗ ಮೆಸೆಜ್‌ಗೆ ರಿಪ್ಲೈ ಮಾಡೋದು ಒಳ್ಳೇದು ಅಂತ ನಂಗೆ ಅನಿಸುತ್ತೆ. ಯಾಕಂದ್ರೆ ತುಂಬಾ ಪ್ರಾಮುಖ್ಯವಾದ ಫೋನ್‌ ಕಾಲ್‌ ಅಥ್ವಾ ಮೆಸೆಜ್‌ ಅಪರೂಪಕ್ಕೆ ಬರುತ್ತೆ. ಆಗ ಅದಕ್ಕೆ ತಕ್ಷಣ ರಿಪ್ಲೈ ಮಾಡಬೇಕಾಗುತ್ತೆ.”—ಜೋನಾತನ್‌.

ಆಫೀಸ್‌ ಕೆಲ್ಸನಾ ಮನೆವರೆಗೂ ತರಬೇಡಿ. “ಪ್ರತಿಯೊಂದು ಕಾರ್ಯಕ್ಕೂ ಕಾಲವು ಕ್ಲುಪ್ತವಾಗಿದೆ” ಅಂತ ಬೈಬಲ್‌ ಹೇಳುತ್ತೆ. (ಪ್ರಸಂಗಿ 3:1) ‘ಕೆಲಸಕ್ಕೆ ಸಂಬಂಧಪಟ್ಟ ವಿಷ್ಯಗಳನ್ನ ಮಾಡೋಕೆ ಮನೆಲೂ ಮೊಬೈಲನ್ನ ಉಪಯೋಗಿಸಿ ನನ್ನ ಮದ್ವೆ ಜೀವ್ನನ ಹಾಳುಮಾಡ್ಕೊತಾ ಇದ್ದೀನಾ? ಇದ್ರಿಂದ ಮದ್ವೆ ಜೀವ್ನ ಹೇಗೆ ಹಾಳಾಗ್ತಿದೆ? ಈ ಪ್ರಶ್ನೆಗೆ ನನ್ನ ಸಂಗಾತಿಯ ಉತ್ರ ಏನು?’ ಅನ್ನೋ ಪ್ರಶ್ನೆಗಳನ್ನ ಕೇಳಿಕೊಳ್ಳಿ.

“ತಂತ್ರಜ್ಞಾನದ ಸಹಾಯದಿಂದ ಯಾವಾಗ ಎಲ್ಲಿ ಬೇಕಾದ್ರೂ ಕೆಲ್ಸ ಮಾಡಬಹುದು. ನಾನು ನನ್ನ ಹೆಂಡ್ತಿ ಜೊತೆ ಇರೋವಾಗ ಪದೇ ಪದೇ ಮೊಬೈಲ್‌ ನೋಡದೆ ಇರೋಕೆ, ಕೆಲಸಕ್ಕೆ ಸಂಬಂಧಪಟ್ಟ ವಿಷ್ಯಗಳನ್ನ ಮಾಡದೇ ಇರೋಕೆ ಪ್ರಯತ್ನ ಮಾಡ್ತೀನಿ.”—ಮ್ಯಾಥ್ಯು.

ತಂತ್ರಜ್ಞಾನದ ಉಪಯೋಗದ ಬಗ್ಗೆ ನಿಮ್ಮ ಸಂಗಾತಿ ಹತ್ರ ಮಾತಾಡಿ. ಬೈಬಲ್‌ “ಪ್ರತಿಯೊಬ್ಬನು ತನ್ನ ಸ್ವಹಿತವನ್ನು ಚಿಂತಿಸದೆ ಪರಹಿತವನ್ನು ಚಿಂತಿಸುತ್ತಿರಲಿ” ಅಂತ ಹೇಳುತ್ತೆ. (1 ಕೊರಿಂಥ 10:24) ತಂತ್ರಜ್ಞಾನನಾ ಇಬ್ರೂ ಹೇಗೆ ಉಪಯೋಗಿಸ್ತಾ ಇದ್ದೀರಾ, ಎಲ್ಲಿ ಬದಲಾವಣೆ ಮಾಡಬೇಕು ಅಂತ ಮಾತಾಡಿ. ಚರ್ಚಿಸಬೇಕಾದ ವಿಷ್ಯಗಳು ಅನ್ನೋ ಚೌಕನಾ ಇದಕ್ಕೆ ಬಳಸಿ.

“ನಾನು ನನ್ನ ಗಂಡ ಒಬ್ರಿಗೊಬ್ಬರು ತುಂಬಾ ಪ್ರಾಮಾಣಿಕವಾಗಿ ಇರ್ತೀವಿ. ನಮ್ಮಿಬ್ರಲ್ಲಿ ಯಾರಾದ್ರೂ ಅತಿಯಾಗಿ ಮೊಬೈಲ್‌ ಉಪಯೋಗಿಸ್ತಾ ಇದ್ರೆ ಅದನ್ನ ಹೇಳ್ತೀವಿ. ಯಾಕಂದ್ರೆ ಇದ್ರಿಂದ ನಮ್ಮ ಮಧ್ಯೆ ಸಮಸ್ಯೆ ಆಗುತ್ತೆ, ಅದಕ್ಕೆ ಎಚ್ಚರವಾಗಿರ್ತೀವಿ.”—ಡ್ಯಾನಿಯೆಲ್‌.

ಪಾಠ: ತಂತ್ರಜ್ಞಾನನಾ ನೀವು ಕಂಟ್ರೋಲ್‌ ಮಾಡಬೇಕೇ ಹೊರತು ಅದು ನಿಮ್ಮನ್ನ ಕಂಟ್ರೋಲ್‌ ಮಾಡೋ ತರ ಇರಬಾರದು

^ ಪ್ಯಾರ. 6 ರಿಕ್ಲೈಮಿಂಗ್‌ ಕನ್ವರ್ಸೇಶನ್‌—ದಿ ಪವರ್‌ ಆಫ್‌ ಟಾಕ್‌ ಇನ್‌ ಎ ಡಿಜಿಟಲ್‌ ಏಜ್‌ ಪುಸ್ತಕದಿಂದ.