ಮಾಹಿತಿ ಇರುವಲ್ಲಿ ಹೋಗಲು

ಪರಿವಿಡಿಗೆ ಹೋಗಲು

ಕುಕ್‌ ದ್ವೀಪಗಳಲ್ಲಿ ಜನರನ್ನು ಕೂಟಗಳಿಗೆ ಆಮಂತ್ರಿಸುತ್ತಿದ್ದಾರೆ

ನಮ್ಮ ಕ್ರೈಸ್ತ ಜೀವನ ಮತ್ತು ಸೇವೆ ಕೂಟದ ಕೈಪಿಡಿ ಸೆಪ್ಟೆಂಬರ್ 2017

ಮಾದರಿ ನಿರೂಪಣೆಗಳು

T-37 ಕರಪತ್ರದ ಮತ್ತು ಬೈಬಲ್‌ ಹಾಗೂ ವಿಜ್ಞಾನದ ಬಗ್ಗೆ ಸತ್ಯವನ್ನು ಕಲಿಸುವ ಮಾದರಿ ನಿರೂಪಣೆಗಳು. ಉದಾಹರಣೆಗಳನ್ನು ಉಪಯೋಗಿಸಿ ಸ್ವಂತ ನಿರೂಪಣೆಗಳನ್ನು ಬರೆಯಿರಿ.

ಬೈಬಲಿನಲ್ಲಿರುವ ರತ್ನಗಳು

ಶುದ್ಧಾರಾಧನೆ ಪುನಃಸ್ಥಾಪಿಸಲ್ಪಟ್ಟಿತು!

ಯೆಹೆಜ್ಕೇಲನ ದೇವಾಲಯದ ದರ್ಶನವು ಸೆರೆ ಒಯ್ಯಲಾಗಿದ್ದವರಲ್ಲಿ ಉಳಿದ ನಂಬಿಗಸ್ತ ಯೆಹೂದ್ಯರಿಗೆ ಶುದ್ಧಾರಾಧನೆ ಪುನಃಸ್ಥಾಪಿಸಲ್ಪಡುತ್ತದೆ ಎಂಬ ಭರವಸೆ ನೀಡಿತು.

ನಮ್ಮ ಕ್ರೈಸ್ತ ಜೀವನ

ನೀವೇಕೆ ಶುದ್ಧಾರಾಧನೆಯನ್ನು ಅಮೂಲ್ಯವೆಂದು ಎಣಿಸುತ್ತೀರಿ?

ಶುದ್ಧಾರಾಧನೆಯು ಉನ್ನತವಾಗಿ ಬೆಳೆದು ನೆಲೆಗೊಂಡಿದೆ. ಯೆಹೋವನನ್ನು ತಿಳಿಯುವ, ಆತನ ಸೇವೆಮಾಡುವ ಮತ್ತು ಆರಾಧಿಸುವ ಸುಯೋಗದ ಬಗ್ಗೆ ನೀವು ಪ್ರತಿದಿನ ಧ್ಯಾನಿಸುತ್ತೀರಾ?

ಬೈಬಲಿನಲ್ಲಿರುವ ರತ್ನಗಳು

ಪುನಃಸ್ಥಾಪಿಸಲ್ಪಟ್ಟ ಇಸ್ರಾಯೇಲ್ಯರಿಗೆ ಸಿಗಲಿದ್ದ ಆಶೀರ್ವಾದಗಳು

ಯೆಹೆಜ್ಕೇಲನ ದೇವಾಲಯದ ದರ್ಶನವು ಶುದ್ಧಾರಾಧನೆ ಪುನಃಸ್ಥಾಪಿಸಲ್ಪಡುತ್ತದೆ ಮತ್ತು ಸಂಘಟನೆ, ಸಹಕಾರ ಮತ್ತು ಸಂರಕ್ಷಣೆ ಮುಂತಾದ ಆಶೀರ್ವಾದಗಳು ಸಿಗುತ್ತವೆ ಎಂಬ ಆಶ್ವಾಸನೆ ನೀಡಿತು.

ಬೈಬಲಿನಲ್ಲಿರುವ ರತ್ನಗಳು

ಯೆಹೋವನಿಗೆ ನಿಷ್ಠರಾಗಿದ್ದರೆ ಆಶೀರ್ವಾದ ಸಿಗುತ್ತದೆ

ಮೂವರು ಇಬ್ರಿಯರ ವೃತ್ತಾಂತವು ಯೆಹೋವನಿಗೆ ನಿಷ್ಠರಾಗಿರಬೇಕೆಂಬ ನಮ್ಮ ದೃಢನಿರ್ಧಾರವನ್ನು ಬಲಪಡಿಸಬಲ್ಲದು.

ನಮ್ಮ ಕ್ರೈಸ್ತ ಜೀವನ

ಪ್ರಲೋಭನೆ ಬಂದಾಗ ನಿಷ್ಠೆಯಿಂದಿರಿ

ಯೇಸು ಪ್ರಲೋಭಿಸಲ್ಪಟ್ಟಾಗ ದೇವರಿಗೆ ನಿಷ್ಠೆ ತೋರಿಸಿದನು. ದೇವರಿಗೆ ನಿಷ್ಠೆ ತೋರಿಸದಂತೆ ಒತ್ತಡ ಹೇರುವಾಗ ಅಪರಿಪೂರ್ಣ ಮಾನವರು ಕೂಡ ನಿಷ್ಠೆ ತೋರಿಸಲು ಸಾಧ್ಯನಾ?

ನಮ್ಮ ಕ್ರೈಸ್ತ ಜೀವನ

ಸಂಬಂಧಿಕರೊಬ್ಬರ ಬಹಿಷ್ಕಾರವಾದಾಗ ನಿಷ್ಠೆ ತೋರಿಸಿ

ಸಂಬಂಧಿಕರೊಬ್ಬರ ಬಹಿಷ್ಕಾರವಾದಾಗ, ಯೆಹೋವನ ಕಡೆಗಿರುವ ನಮ್ಮ ನಿಷ್ಠೆ ಪರೀಕ್ಷಿಸಲ್ಪಡುತ್ತದೆ. ನಿಷ್ಠೆಯನ್ನು ಕಾಪಾಡಿಕೊಳ್ಳಲು ನಮಗೆ ಯಾವುದು ಸಹಾಯ ಮಾಡುತ್ತದೆ?

ಬೈಬಲಿನಲ್ಲಿರುವ ರತ್ನಗಳು

ನೀವು ಯೆಹೋವನ ಆರಾಧನೆಯನ್ನು ಬಿಡದೆ ಮಾಡುತ್ತಿದ್ದೀರಾ?

ದಾನಿಯೇಲನು ದೇವರನ್ನು ಬಿಡದೆ ಆರಾಧಿಸುತ್ತಿದ್ದನು. ತನ್ನ ಈ ಆಧ್ಯಾತ್ಮಿಕ ರೂಢಿಗೆ ಯಾವುದೇ ವಿಷಯ ಅಡ್ಡಬರದಂತೆ ನೋಡಿಕೊಂಡನು.

ನಮ್ಮ ಕ್ರೈಸ್ತ ಜೀವನ

ಯೆಹೋವನ ಸೇವೆಯನ್ನು ಬಿಡದೆ ಮಾಡಲು ತರಬೇತಿ ನೀಡಿ

ಸೇವೆಯಲ್ಲಿ ಕ್ರಮವಾಗಿ ಮತ್ತು ಹರುಪಿನಿಂದ ಭಾಗವಹಿಸಲು ಹೊಸ ಪ್ರಚಾರಕನಿಗೆ ಆರಂಭದಿಂದಲೇ ತರಬೇತಿ ನೀಡಿ. ಪರಿಣಾಮಕಾರಿ ಪ್ರಚಾರಕರಾಗಲು ನಿಮ್ಮ ವಿದ್ಯಾರ್ಥಿಗೆ ಸಹಾಯಮಾಡಿ.