ಮುಂದೆ ಈ ಲೋಕ ಹೇಗಿರುತ್ತದೆ? (T-31 ಮುಖಪುಟ)

ಪ್ರಶ್ನೆ: ದಯವಿಟ್ಟು ಈ ಪ್ರಶ್ನೆ ನೋಡಿ. [ಮುಖಪುಟದ ಶೀರ್ಷಿಕೆಯನ್ನು ತೋರಿಸಿ.] ನೀವೇನು ನೆನಸುತ್ತೀರಿ? ಸೃಷ್ಟಿಕರ್ತನು ಏನೆಂದು ಮಾತು ಕೊಟ್ಟಿದ್ದಾನೆ ಎನ್ನುವುದನ್ನು ತೋರಿಸಬಹುದಾ? [ಮನೆಯವನು ಒಪ್ಪಿದರೆ ವಚನ ಓದಿ.]

ವಚನ: ಪ್ರಕ 21:3, 4

ಕರಪತ್ರ ಕೊಡುವಾಗ ಹೀಗೆ ಹೇಳಿ: ದೇವರು ಹೇಗೆ ಈ ಲೋಕದ ಪರಿಸ್ಥಿತಿಯನ್ನು ಸುಧಾರಿಸುತ್ತಾನೆಂದು ಈ ಕರಪತ್ರ ವಿವರಿಸುತ್ತದೆ.

ಮುಂದೆ ಈ ಲೋಕ ಹೇಗಿರುತ್ತದೆ? (T-31 ಪುಟ 2)

ಪ್ರಶ್ನೆ: ಈ ಪವಿತ್ರ ಗ್ರಂಥದಲ್ಲಿ ಹೇಳಿರುವ ವಿಷಯ ನಿಜಕ್ಕೂ ಆಗುತ್ತದೆ ಎಂದು ನಿಮಗನಿಸುತ್ತಾ? [ಮನೆಯವನು ಆಸಕ್ತಿ ತೋರಿಸಿದರೆ ವಚನ ಓದಿ.]

ವಚನ: ಪ್ರಕ 21:3, 4

ಕರಪತ್ರ ಕೊಡುವಾಗ ಹೀಗೆ ಹೇಳಿ: ಇದು ನಿಜವಾಗಲೂ ನಡೆಯುತ್ತೆ ಅಂತ ನಾವು ಹೇಗೆ ನಂಬಬಹುದೆಂದೂ ಈ ಕರಪತ್ರ ವಿವರಿಸುತ್ತದೆ.

ದೇವರಿಂದ ನಿಮಗೊಂದು ಸಿಹಿಸುದ್ದಿ!

ಪ್ರಶ್ನೆ: ನಾವೀಗ ಅನುಭವಿಸುತ್ತಿರುವ ಎಲ್ಲಾ ಸವಾಲುಗಳನ್ನು ಎದುರಿಸಲು ಪ್ರಾರ್ಥನೆ ಸಹಾಯ ಮಾಡುತ್ತದೆಂದು ನಿಮಗಿಸುತ್ತದಾ? [ಮನೆಯವನು ಆಸಕ್ತಿ ತೋರಿಸಿದರೆ ವಚನ ಓದಿ.]

ವಚನ: ಫಿಲಿ 4:6, 7

ಕಿರುಹೊತ್ತಗೆ ಕೊಡುವಾಗ ಹೀಗೆ ಹೇಳಿ: [ಪುಟ 24ರ 2ನೇ ಪ್ಯಾರ ತೋರಿಸಿ.] ಈ ಕಿರುಹೊತ್ತಗೆ, ಪ್ರಾರ್ಥನೆಯಿಂದ ನಾವು ಹೇಗೆ ತುಂಬ ಪ್ರಯೋಜನ ಪಡೆದುಕೊಳ್ಳಬಹುದೆಂದು ತಿಳಿಸುತ್ತದೆ.

ನಿಮ್ಮ ಸ್ವಂತ ನಿರೂಪಣೆಯನ್ನು ಕೆಳಗೆ ಬರೆಯಿರಿ

ಮೇಲಿನ ಉದಾಹರಣೆಗಳನ್ನು ನೋಡಿ ಅದರಂತೆಯೇ ಕ್ಷೇತ್ರ ಸೇವೆಗಾಗಿ ನಿಮ್ಮ ಸ್ವಂತ ನಿರೂಪಣೆಯನ್ನು ತಯಾರಿಸಿ.