ಮಾಹಿತಿ ಇರುವಲ್ಲಿ ಹೋಗಲು

ಸೆಕೆಂಡರಿ ಮೆನ್ಯೂಗೆ ಹೋಗಲು

ಪರಿವಿಡಿಗೆ ಹೋಗಲು

ಯೆಹೋವನ ಸಾಕ್ಷಿಗಳು

Kannada (ಕನ್ನಡ)

ನಮ್ಮ ಕ್ರೈಸ್ತ ಜೀವನ ಮತ್ತು ಸೇವೆ ಕೂಟದ ಕೈಪಿಡಿ  |  ಮಾರ್ಚ್ 2016

ಮಾದರಿ ನಿರೂಪಣೆಗಳು

ಮಾದರಿ ನಿರೂಪಣೆಗಳು

ಈ ಲೋಕವನ್ನು ಮುಂದೆ ಎಂದಾದರೂ ದೇವರು ಆಳುತ್ತಾನಾ? (T-36 ಕರಪತ್ರ)

ಪ್ರಶ್ನೆ: ಸಾವು, ನೋವು, ಕಷ್ಟ ಇಲ್ಲದ ಪರಿಸ್ಥಿತಿ ಯಾವತ್ತಾದರೂ ಬರುತ್ತಾ? [ಮನೆಯವನು ಆಸಕ್ತಿ ತೋರಿಸಿದರೆ ಮುಂದುವರಿಸಿ.] ಇದರ ಬಗ್ಗೆ ದೇವರು ಕೊಟ್ಟಿರುವ ಮಾತನ್ನು ನಿಮಗೆ ತೋರಿಸಲಾ?

ವಚನ: ಪ್ರಕ 21:3, 4

ಕರಪತ್ರ ಕೊಡುವಾಗ ಹೀಗೆ ಹೇಳಿ: ಹೆಚ್ಚಿನ ಮಾಹಿತಿ ಈ ಕರಪತ್ರದಲ್ಲಿದೆ.

ಈ ಲೋಕವನ್ನು ಮುಂದೆ ಎಂದಾದರೂ ದೇವರು ಆಳುತ್ತಾನಾ? (T-36 ಕರಪತ್ರ)

ಪ್ರಶ್ನೆ: ಈ ಭೂಮಿಯನ್ನಾಳುವ ಅತ್ಯುತ್ತಮ ಸರಕಾರದ ಬಗ್ಗೆ ತಿಳಿಯಲು ನಿಮಗೆ ಇಷ್ಟವಿದೆಯಾ? [ಮನೆಯವನು ಆಸಕ್ತಿ ತೋರಿಸಿದರೆ ವಚನ ಓದಿ.]

ವಚನ: ದಾನಿ 2:44

ಕರಪತ್ರ ಕೊಡುವಾಗ ಹೀಗೆ ಹೇಳಿ: ಇದರ ಬಗ್ಗೆ ಹೆಚ್ಚಿನ ಮಾಹಿತಿ ಈ ಕರಪತ್ರದಲ್ಲಿದೆ.

ಸ್ಮರಣೆಯ ಆಮಂತ್ರಣ ಪತ್ರ

ಆಮಂತ್ರಣ ಪತ್ರ ಕೊಡುವಾಗ ಹೀಗೆ ಹೇಳಿ: ಮಾರ್ಚ್ 23ರಂದು ಒಂದು ತುಂಬ ಮುಖ್ಯವಾದ ಕಾರ್ಯಕ್ರಮ ನಡೆಯಲಿದೆ. [ಮನೆಯವರಿಗೆ ಆಮಂತ್ರಣ ಪತ್ರವನ್ನು ಕೊಡಿ.] ಯೇಸು ಕ್ರಿಸ್ತನ ಮರಣವನ್ನು ಸ್ಮರಿಸಲು ಮತ್ತು ಆತನ ಪ್ರಾಣತ್ಯಾಗದಿಂದ ನಮಗಾಗುವ ಪ್ರಯೋಜನಗಳನ್ನು ತಿಳಿಯಲು ಒಂದು ಬೈಬಲಾಧಾರಿತ ಭಾಷಣ ಕೊಡಲಾಗುತ್ತದೆ. ಇದನ್ನು ಕೇಳಲು ಲೋಕವ್ಯಾಪಕವಾಗಿ ಲಕ್ಷಾಂತರ ಜನ ಅನೇಕ ಕಡೆಗಳಲ್ಲಿ ಕೂಡಿಬರುತ್ತಾರೆ. ಕಾರ್ಯಕ್ರಮ ನಡೆಯುವ ಸಮಯ ಮತ್ತು ನಿಮಗೆ ಹತ್ತಿರದ ಸ್ಥಳ ಇದರಲ್ಲಿದೆ. ದಯವಿಟ್ಟು ನೀವೂ ಬನ್ನಿ.

ನಿಮ್ಮ ಸ್ವಂತ ನಿರೂಪಣೆಯನ್ನು ಕೆಳಗೆ ಬರೆಯಿರಿ

ಮೇಲಿನ ಉದಾಹರಣೆಗಳನ್ನು ನೋಡಿ ಅದರಂತೆಯೇ ಕ್ಷೇತ್ರ ಸೇವೆಗಾಗಿ ನಿಮ್ಮ ಸ್ವಂತ ನಿರೂಪಣೆಯನ್ನು ತಯಾರಿಸಿ