ಮಾಹಿತಿ ಇರುವಲ್ಲಿ ಹೋಗಲು

ಪರಿವಿಡಿಗೆ ಹೋಗಲು

ಮಾದರಿ ನಿರೂಪಣೆಗಳು

ಮಾದರಿ ನಿರೂಪಣೆಗಳು

ಸತ್ತವರು ಮತ್ತೆ ಬದುಕಿ ಬರುತ್ತಾರಾ? (T-35)

ಪ್ರಶ್ನೆ: ಸಾವೆಂದರೆ ನಮ್ಮೆಲ್ಲರಿಗೂ ಭಯ. ಸಾವಿನ ಭಯ ಇಲ್ಲದೆ ನಮ್ಮ ಪ್ರಿಯರೊಂದಿಗೆ ಬದುಕಬೇಕೆಂದು ನಾವು ಬಯಸುತ್ತೇವೆ. ಸಾವೇ ಇಲ್ಲದ ಸಮಯ ಬಂದರೆ ಹೇಗಿರುತ್ತೆ?

ವಚನ: ಯೋಹಾ 5:28, 29

ಕರಪತ್ರ ಕೊಡುವಾಗ ಹೀಗೆ ಹೇಳಿ: ನಮಗೆ ಜೀವ ಕೊಟ್ಟಿರುವ ಸೃಷ್ಟಿಕರ್ತನು ‘ಸತ್ತವರನ್ನು ಪುನಃ ಬದುಕಿಸುತ್ತೇನೆ’ ಅಂತ ಮಾತು ಕೊಟ್ಟಿದ್ದಾನೆ. ಅದರ ಬಗ್ಗೆ ಹೆಚ್ಚಿನ ವಿಷಯ ಈ ಕರಪತ್ರದಲ್ಲಿದೆ. [ಮನೆಯವರು ಇಂಟರ್‌ನೆಟ್‌ ಬಳಸುತ್ತಾರಾದರೆ, jw.org ವೆಬ್‌ಸೈಟ್‍ನಲ್ಲಿ ನೀವು ಪ್ರೀತಿಸುವ ಯಾರಾದರೊಬ್ಬರು ಸಾಯುವಾಗ ಎಂಬ ಕಿರುಹೊತ್ತಗೆಯನ್ನು ಇಲ್ಲವೆ ಸಾರ್ವಜನಿಕ ಆವೃತ್ತಿಯ ಕಾವಲಿನಬುರುಜು ನಂ. 3, 2016ನ್ನು ತೋರಿಸಿ.]

 

ಸತ್ಯವನ್ನು ಕಲಿಸಿ

ಪ್ರಶ್ನೆ: ಸಂಸಾರ ಸುಖವಾಗಿರಲು ಏನು ಅಗತ್ಯ?

ವಚನ: ಎಫೆ 5:33

ಸತ್ಯ: ಪ್ರೀತಿ ಮತ್ತು ಗೌರವ ಇದ್ದರೆ ಸಂಸಾರ ಬಲವಾಗಿರುತ್ತದೆ. [ಮನೆಯವರು ಇಂಟರ್‌ನೆಟ್‌ ಬಳಸುತ್ತಾರಾದರೆ, jw.org ವೆಬ್‌ಸೈಟ್‍ನಲ್ಲಿರುವ ಸುಖೀ ಸಂಸಾರ ಸಾಧ್ಯ! ಎಂಬ ಕಿರುಹೊತ್ತಗೆಯನ್ನು ತೋರಿಸಿ.]

 

ಈ ಪ್ರಾಮುಖ್ಯ ಪ್ರಶ್ನೆಗಳಿಗೆ ಉತ್ತರ ತಿಳಿಯಲು ಬಯಸುತ್ತೀರೋ? (kt)

ಪ್ರಶ್ನೆ: ಹೆಚ್ಚು ಒತ್ತಡದ ದೊಡ್ಡ ಸಮಸ್ಯೆಗಳು ಎದುರಾದಾಗ ನಾವು ಬಲಕ್ಕಾಗಿ ದೇವರಿಗೆ ಪ್ರಾರ್ಥಿಸುತ್ತೇವೆ. ಆದರೆ ದೇವರು ಎಲ್ಲರ ಪ್ರಾರ್ಥನೆಗಳನ್ನು ಕೇಳುತ್ತಾನಾ? ನಿಮಗೇನನಿಸುತ್ತದೆ?

ವಚನ: 1ಯೋಹಾ 5:14

ಕರಪತ್ರ ಕೊಡುವಾಗ ಹೀಗೆ ಹೇಳಿ: ನಮ್ಮ ಪ್ರಾರ್ಥನೆಗಳನ್ನು ದೇವರು ಕೇಳಬೇಕೆಂದರೆ ನಾವೇನು ಮಾಡಬೇಕಂತ ಈ ಕರಪತ್ರ ವಿವರಿಸುತ್ತೆ. [ಮನೆಯವರು ಆಸಕ್ತಿ ತೋರಿಸಿದರೆ, ಬೈಬಲನ್ನು ಯಾಕೆ ಅಧ್ಯಯನ ಮಾಡಬೇಕು? ವಿಡಿಯೋ ತೋರಿಸಿ.]

ನಿಮ್ಮ ಸ್ವಂತ ನಿರೂಪಣೆಯನ್ನು ಕೆಳಗೆ ಬರೆಯಿರಿ

ಮೇಲಿನ ಉದಾಹರಣೆಗಳನ್ನು ಉಪಯೋಗಿಸುತ್ತಾ ನಿಮ್ಮ ಸ್ವಂತ ಕ್ಷೇತ್ರ ಸೇವಾ ನಿರೂಪಣೆಯನ್ನು ತಯಾರಿಸಿ.