ಮಾಹಿತಿ ಇರುವಲ್ಲಿ ಹೋಗಲು

ಸೆಕೆಂಡರಿ ಮೆನ್ಯೂಗೆ ಹೋಗಲು

ಪರಿವಿಡಿಗೆ ಹೋಗಲು

ಯೆಹೋವನ ಸಾಕ್ಷಿಗಳು

Kannada (ಕನ್ನಡ)

ನಮ್ಮ ಕ್ರೈಸ್ತ ಜೀವನ ಮತ್ತು ಸೇವೆ ಕೂಟದ ಕೈಪಿಡಿ  |  ನವೆಂಬರ್ 2017

ಮಾದರಿ ನಿರೂಪಣೆಗಳು

ಮಾದರಿ ನಿರೂಪಣೆಗಳು

ಸುಖ ಸಂಸಾರಕ್ಕೆ ಏನು ಅವಶ್ಯ? (T-32 ಕರಪತ್ರ-ಕೊನೆಯ ಪುಟ)

ಪ್ರಶ್ನೆ: ನಮ್ಮ ಕುಟುಂಬದಲ್ಲಿ ಸಂತೋಷ, ನೆಮ್ಮದಿ ಇರಬೇಕೆಂದು ನಾವೆಲ್ಲರೂ ಬಯಸುತ್ತೇವೆ. ಆದರೆ ಆ ರೀತಿ ಇರಬೇಕೆಂದರೆ ನಾವೇನು ಮಾಡಬೇಕು? ಕುಟುಂಬದಲ್ಲಿರುವ ಪ್ರತಿಯೊಬ್ಬರಿಗೆ ಯಾವ ಪಾತ್ರಗಳಿವೆ ಮತ್ತು ಅವರು ಅವುಗಳನ್ನು ಹೇಗೆ ನಿರ್ವಹಿಸಬಹುದು? ಎಂದು ಪವಿತ್ರ ಗ್ರಂಥದಿಂದ ತೋರಿಸಬಹುದಾ?

ವಚನ: ಎಫೆ 5:1, 2 ಅಥವಾ ಕೊಲೊ 3:18-21

ಕರಪತ್ರ ಕೊಡುವಾಗ ಹೀಗೆ ಹೇಳಿ: ಈ ಕರಪತ್ರದಲ್ಲಿ ಸಂತೋಷಕರವಾದ ಕುಟುಂಬ ಜೀವನ ನಡೆಸಲು ಸಹಾಯ ಮಾಡುವ ಪವಿತ್ರ ಗ್ರಂಥದ ತತ್ವಗಳಿವೆ.

ಸತ್ಯವನ್ನು ಕಲಿಸಿ

ಪ್ರಶ್ನೆ: ದೇವರ ಹಸರೇನು?

ವಚನ: ಕೀರ್ತ 83:18

ಸತ್ಯ: ದೇವರ ಹೆಸರು ಯೆಹೋವ.

ಸುಖೀ ಸಂಸಾರ ಸಾಧ್ಯ!

ಪರಿಚಯ: ಕುಟುಂಬದ ಬಗ್ಗೆ ಈ ಚಿಕ್ಕ ವಿಡಿಯೋವನ್ನು ಎಲ್ಲರಿಗೂ ತೋರಿಸುತ್ತಿದ್ದೇವೆ. [ಸುಖೀ ಸಂಸಾರ ಸಾಧ್ಯ! ಎಂಬ ಕಿರುಹೊತ್ತಗೆಯನ್ನು ಪರಿಚಯಿಸುವ ವಿಡಿಯೋ ತೋರಿಸಿ.]

ಕಿರುಹೊತ್ತಗೆ ಕೊಡುವಾಗ ಹೀಗೆ ಹೇಳಿ: ಈ ವಿಡಿಯೋದಲ್ಲಿ ತಿಳಿಸಲಾದ ಕಿರುಹೊತ್ತಗೆಯನ್ನು ನೀವು ಓದಲು ಬಯಸುವುದಾದರೆ ಅದರ ಒಂದು ಪ್ರತಿಯನ್ನು ಕೊಡುತ್ತೇನೆ ಅಥವಾ ಇದನ್ನು ವೆಬ್‌ಸೈಟ್‍ನಿಂದ ಡೌನ್‌ಲೋಡ್‌ ಮಾಡಿಕೊಳ್ಳುವುದು ಹೇಗೆಂದು ತೋರಿಸುತ್ತೇನೆ.

ನಿಮ್ಮ ಸ್ವಂತ ನಿರೂಪಣೆಯನ್ನು ಕೆಳಗೆ ಬರೆಯಿರಿ

ಮೇಲಿನ ಉದಾಹರಣೆಗಳನ್ನು ನೋಡಿ ಅದರಂತೆಯೇ ಕ್ಷೇತ್ರ ಸೇವೆಗಾಗಿ ನಿಮ್ಮ ಸ್ವಂತ ನಿರೂಪಣೆಯನ್ನು ತಯಾರಿಸಿ.