ಮಾಹಿತಿ ಇರುವಲ್ಲಿ ಹೋಗಲು

ಪರಿವಿಡಿಗೆ ಹೋಗಲು

ಮಾದರಿ ನಿರೂಪಣೆಗಳು

ಮಾದರಿ ನಿರೂಪಣೆಗಳು

ಮುಂದೆ ಈ ಲೋಕ ಹೇಗಿರುತ್ತದೆ? (T-31)

ಪ್ರಶ್ನೆ: ಕಾಯಿಲೆ, ಕಷ್ಟ, ಸಾವು, ನೋವು ಇದ್ಯಾವುದೂ ಇಲ್ಲದೆ ಸ್ನೇಹಿತರು ಮತ್ತು ಕುಟುಂಬದವರೊಂದಿಗೆ ಬದುಕುವಂಥ ದಿನ ಬಂದರೆ ಹೇಗಿರುತ್ತೆ?

ವಚನ: ಕೀರ್ತ 37:11, 29

ಕರಪತ್ರ ಕೊಡುವಾಗ ಹೀಗೆ ಹೇಳಿ: ಇದು ಹೇಗೆ ಸಾಧ್ಯ ಅಂತ ಈ ಕರಪತ್ರ ತಿಳಿಸುತ್ತೆ.

ಸತ್ಯವನ್ನು ಕಲಿಸಿ

ಪ್ರಶ್ನೆ: ನಮ್ಮ ಕಷ್ಟಗಳಿಗೆ ದೇವರು ಕಾರಣನಾ ಅಥವಾ ಬೇರೆ ಏನಾದ್ರೂನಾ, ನಿಮಗೆ ಏನು ಅನಿಸುತ್ತೆ?

ವಚನ: ಯೋಬ 34:10

ಸತ್ಯ: ದೇವರು ಯಾವತ್ತೂ ನಮಗೆ ಕಷ್ಟ ಕೊಡೋದಿಲ್ಲ. ಕಷ್ಟಗಳು ದೇವರ ವೈರಿ ಸೈತಾನನಿಂದ, ಮನುಷ್ಯರ ತಪ್ಪು ನಿರ್ಧಾರಗಳಿಂದ ಮತ್ತು ಕೆಲವೊಮ್ಮೆ ನಾವು ತಪ್ಪಾದ ಸಮಯದಲ್ಲಿ, ತಪ್ಪಾದ ಸ್ಥಳದಲ್ಲಿ ಇರುವುದರಿಂದ ಬರುತ್ತವೆ. ಕಷ್ಟಗಳು ಬಂದಾಗ ದೇವರು ಸಹಾಯ ಮಾಡಲು ಸಿದ್ಧನಿರುತ್ತಾನೆ. ಆತನಿಗೆ ನಮ್ಮ ಮೇಲೆ ತುಂಬ ಪ್ರೀತಿ ಇದೆ.

ಬೈಬಲನ್ನು ಯಾಕೆ ಅಧ್ಯಯನ ಮಾಡಬೇಕು? (ವಿಡಿಯೋ)

ಪ್ರಶ್ನೆ: ಈ ಲೋಕದಲ್ಲಿ ನಡೆಯುತ್ತಿರುವ ವಿಷಯಗಳು ದೇವರ ನಿಯಂತ್ರಣದಲ್ಲಿವೆಯಾ? [ಪ್ರತಿಕ್ರಿಯೆಗಾಗಿ ಕಾಯಿರಿ.] ಇದರ ಬಗ್ಗೆ ಬೈಬಲ್‌ ಆಶ್ಚರ್ಯವಾದ ವಿಷಯವನ್ನು ಹೇಳುತ್ತೆ. ಅದನ್ನ ಈ ವಿಡಿಯೋ ಚುಟುಕಾಗಿ ತಿಳಿಸುತ್ತೆ. [ವಿಡಿಯೋ ಹಾಕಿ.]

ಕಿರುಹೊತ್ತಗೆ ಕೊಡುವಾಗ ಹೀಗೆ ಹೇಳಿ: ಯಾಕೆ ದೇವರು ಕಷ್ಟಗಳನ್ನು ಅನುಮತಿಸಿದ್ದಾನೆ ಮತ್ತು ಇದಕ್ಕೆಲ್ಲಾ ಏನು ಮಾಡಲಿದ್ದಾನೆ ಅಂತ ಇದರ 8ನೇ ಪಾಠ ತಿಳಿಸುತ್ತೆ. [ಸಿಹಿಸುದ್ದಿ ಕಿರುಹೊತ್ತಗೆಯನ್ನು ಕೊಡಿ.]

ನಿಮ್ಮ ಸ್ವಂತ ನಿರೂಪಣೆಯನ್ನು ಕೆಳಗೆ ಬರೆಯಿರಿ

ಮೇಲಿನ ಉದಾಹರಣೆಗಳನ್ನು ನೋಡಿ ಅದರಂತೆಯೇ ಕ್ಷೇತ್ರ ಸೇವೆಗಾಗಿ ನಿಮ್ಮ ಸ್ವಂತ ನಿರೂಪಣೆಯನ್ನು ತಯಾರಿಸಿ.