ಮಾಹಿತಿ ಇರುವಲ್ಲಿ ಹೋಗಲು

ಸೆಕೆಂಡರಿ ಮೆನ್ಯೂಗೆ ಹೋಗಲು

ಪರಿವಿಡಿಗೆ ಹೋಗಲು

ಯೆಹೋವನ ಸಾಕ್ಷಿಗಳು

Kannada (ಕನ್ನಡ)

ನಮ್ಮ ಕ್ರೈಸ್ತ ಜೀವನ ಮತ್ತು ಸೇವೆ ಕೂಟದ ಕೈಪಿಡಿ  |  ಅಕ್ಟೋಬರ್ 2017

 ಅಕ್ಟೋಬರ್‌ 23-29

ಯೆಹೋವನನ್ನು ಸ್ತುತಿಸಲಿಕ್ಕಾಗಿಯೇ ಜೀವಿಸಿರಿ!

ಯೆಹೋವನನ್ನು ಸ್ತುತಿಸಲಿಕ್ಕಾಗಿಯೇ ಜೀವಿಸಿರಿ!

ಜೀವ ಒಂದು ಅಮೂಲ್ಯ ಉಡುಗೊರೆ. ನಾವು ಆ ಉಡುಗೊರೆಯನ್ನು ಎಷ್ಟು ಗಣ್ಯ ಮಾಡುತ್ತೇವೆಂದು ಪ್ರತಿದಿನ ನಾವದನ್ನು ಉಪಯೋಗಿಸುವ ರೀತಿ ತೋರಿಸುತ್ತದೆ. ಯೆಹೋವನೇ ನಮಗೆ ಜೀವ ಕೊಟ್ಟಿರುವುದರಿಂದ ಆತನ ಸಾಕ್ಷಿಗಳಾದ ನಾವು ನಮ್ಮ ಪ್ರತಿಭೆ ಮತ್ತು ಸಾಮರ್ಥ್ಯಗಳನ್ನು ಆತನಿಗೆ ಮಹಿಮೆ, ಘನತೆ ತರಲಿಕ್ಕಾಗಿ ಉಪಯೋಗಿಸುತ್ತೇವೆ. (ಕೀರ್ತ 36:9; ಪ್ರಕ 4:11) ಆದರೂ ಈ ದುಷ್ಟ ಲೋಕದಲ್ಲಿ ಎದುರಾಗುವ ದಿನನಿತ್ಯದ ಚಿಂತೆಗಳು ನಾವು ಆಧ್ಯಾತ್ಮಿಕ ವಿಷಯಗಳಿಗೆ ಎರಡನೇ ಸ್ಥಾನ ಕೊಡುವಂತೆ ಮಾಡಬಲ್ಲವು. (ಮಾರ್ಕ 4:18, 19) ನಮ್ಮಲ್ಲಿ ಪ್ರತಿಯೊಬ್ಬರು ಹೀಗೆ ಕೇಳಿಕೊಳ್ಳಬೇಕು: ‘ನಾನು ನಿಜವಾಗಿಯೂ ನನ್ನಲ್ಲಿರುವ ಅತ್ಯುತ್ತಮವಾದದ್ದನ್ನು ಯೆಹೋವನಿಗೆ ಕೊಡುತ್ತಿದ್ದೇನಾ? (ಹೋಶೇ 14:2) ನನ್ನ ಕೆಲಸ ಯೆಹೋವನ ಸೇವೆಯ ಮೇಲೆ ಎಂಥ ಪ್ರಭಾವ ಬೀರುತ್ತಿದೆ? ನನ್ನ ಆಧ್ಯಾತ್ಮಿಕ ಗುರಿಗಳು ಯಾವುವು? ನಾವು ದೇವರ ಸೇವೆಯನ್ನು ಇನ್ನೂ ಹೇಗೆ ಹೆಚ್ಚಿಸಬಹುದು?’ ಯಾವುದಾದರೊಂದು ವಿಷಯದಲ್ಲಿ ಪ್ರಗತಿ ಮಾಡಬೇಕೆಂದು ನಿಮಗೆ ಗೊತ್ತಾದರೆ ಸಹಾಯಕ್ಕಾಗಿ ಯೆಹೋವನಿಗೆ ಪ್ರಾರ್ಥಿಸಿ, ಬೇಕಾದ ಹೊಂದಾಣಿಕೆ ಮಾಡಿಕೊಳ್ಳಿ. ಪ್ರತಿ ದಿನ ಯೆಹೋವನನ್ನು ಸ್ತುತಿಸುವುದಾದರೆ ನಮ್ಮ ಜೀವನ ಖಂಡಿತ ಸಂತೃಪ್ತಿ ಮತ್ತು ಸಂತೋಷದಿಂದ ಕೂಡಿರುತ್ತದೆ.—ಕೀರ್ತ 61:8.

ನಾನು ನನ್ನ ಪ್ರತಿಭೆಯನ್ನು ಯಾರಿಗಾಗಿ ಉಪಯೋಗಿಸುತ್ತಿದ್ದೇನೆ?

ನಿಮ್ಮ ಪ್ರತಿಭೆಯನ್ನು ಯೆಹೋವನಿಗಾಗಿ ಉಪಯೋಗಿಸಿ ಎಂಬ ವಿಡಿಯೋ ನೋಡಿ. ನಂತರ, ಈ ಪ್ರಶ್ನೆಗಳನ್ನು ಉತ್ತರಿಸಿ:

  • ನಮ್ಮ ಪ್ರತಿಭೆಯನ್ನು ಸೈತಾನನ ಲೋಕಕ್ಕಾಗಿ ಉಪಯೋಗಿಸುವುದು ಮೂರ್ಖತನವಾಗಿದೆ ಯಾಕೆ? (1ಯೋಹಾ 2:17)

  • ತಮ್ಮಲ್ಲಿರುವ ಅತ್ಯುತ್ತಮವಾದದ್ದನ್ನು ಯೆಹೋವನಿಗೆ ಕೊಡುವವರಿಗೆ ಯಾವ ಆಶೀರ್ವಾದಗಳು ಸಿಗುತ್ತವೆ?

  • ನಮ್ಮ ಪ್ರತಿಭೆ ಮತ್ತು ಕೌಶಲಗಳನ್ನು ಯಾವೆಲ್ಲಾ ವಿಧದ ದೇವಸೇವೆಯಲ್ಲಿ ಉಪಯೋಗಿಸಬಹುದು?