ಮಾಹಿತಿ ಇರುವಲ್ಲಿ ಹೋಗಲು

ಸೆಕೆಂಡರಿ ಮೆನ್ಯೂಗೆ ಹೋಗಲು

ಪರಿವಿಡಿಗೆ ಹೋಗಲು

ಯೆಹೋವನ ಸಾಕ್ಷಿಗಳು

Kannada (ಕನ್ನಡ)

ಆನ್‌ಲೈನ್‌ ಬೈಬಲ್ | ಪವಿತ್ರ ಶಾಸ್ತ್ರಗಳ ನೂತನ ಲೋಕ ಭಾಷಾಂತರ

2 ಪೇತ್ರ 1:1-21

1  ಯೇಸು ಕ್ರಿಸ್ತನ ದಾಸನೂ ಅಪೊಸ್ತಲನೂ ಆಗಿರುವ ಸೀಮೋನ ಪೇತ್ರನು ನಮ್ಮ ದೇವರ ಮತ್ತು ರಕ್ಷಕನಾದ ಯೇಸು ಕ್ರಿಸ್ತನ ನೀತಿಯಿಂದ ನಮ್ಮಂತೆಯೇ ನಂಬಿಕೆಯಲ್ಲಿ ಸಮಾನವಾದ ಸದವಕಾಶವನ್ನು ಹೊಂದಿರುವವರಿಗೆ ಬರೆಯುವುದೇನೆಂದರೆ,  ದೇವರ ಮತ್ತು ನಮ್ಮ ಕರ್ತನಾದ ಯೇಸುವಿನ ನಿಷ್ಕೃಷ್ಟ ಜ್ಞಾನದ ಮೂಲಕ ನಿಮಗೆ ಅಪಾತ್ರ ದಯೆಯೂ * ಶಾಂತಿಯೂ ಹೆಚ್ಚಾಗಲಿ,  ಏಕೆಂದರೆ ಮಹಿಮೆ ಮತ್ತು ಸದ್ಗುಣದಿಂದ ನಮ್ಮನ್ನು ಕರೆದಾತನ ನಿಷ್ಕೃಷ್ಟ ಜ್ಞಾನದ ಮೂಲಕ ಆತನ ದೈವಿಕ ಶಕ್ತಿಯು ಜೀವಕ್ಕೂ ದೇವಭಕ್ತಿಗೂ ಸಂಬಂಧಪಟ್ಟಿರುವ ಎಲ್ಲವನ್ನೂ ನಮಗೆ ಧಾರಾಳವಾಗಿ ಕೊಟ್ಟಿದೆ.  ಲೋಕದಲ್ಲಿರುವ ದುರಾಶೆಯಿಂದ ಉಂಟಾದ ಭ್ರಷ್ಟತೆಯಿಂದ ನೀವು ತಪ್ಪಿಸಿಕೊಂಡು ದೈವಿಕ ಸ್ವಭಾವದಲ್ಲಿ ಪಾಲುಗಾರರಾಗಬೇಕೆಂಬ ಉದ್ದೇಶದಿಂದ ಆತನು ನಮಗೆ ಅಮೂಲ್ಯವಾದ ಮತ್ತು ಅತಿ ಮಹತ್ತರವಾದ ವಾಗ್ದಾನಗಳನ್ನು ಈ ವಿಷಯಗಳ ಮೂಲಕ ಧಾರಾಳವಾಗಿ ಕೊಟ್ಟಿದ್ದಾನೆ.  ಹೌದು, ಈ ಕಾರಣದಿಂದಲೇ, ಇದಕ್ಕೆ ಪ್ರತಿಕ್ರಿಯಿಸುತ್ತಾ ನೀವು ಎಲ್ಲ ಶ್ರದ್ಧಾಪೂರ್ವಕ ಪ್ರಯತ್ನದಿಂದ ನಿಮ್ಮ ನಂಬಿಕೆಗೆ ಸದ್ಗುಣವನ್ನೂ ನಿಮ್ಮ ಸದ್ಗುಣಕ್ಕೆ ಜ್ಞಾನವನ್ನೂ  ನಿಮ್ಮ ಜ್ಞಾನಕ್ಕೆ ಸ್ವನಿಯಂತ್ರಣವನ್ನೂ ನಿಮ್ಮ ಸ್ವನಿಯಂತ್ರಣಕ್ಕೆ ತಾಳ್ಮೆಯನ್ನೂ ನಿಮ್ಮ ತಾಳ್ಮೆಗೆ ದೇವಭಕ್ತಿಯನ್ನೂ  ನಿಮ್ಮ ದೇವಭಕ್ತಿಗೆ ಸಹೋದರ ಮಮತೆಯನ್ನೂ ನಿಮ್ಮ ಸಹೋದರ ಮಮತೆಗೆ ಪ್ರೀತಿಯನ್ನೂ ಕೂಡಿಸಿರಿ.  ಈ ವಿಷಯಗಳು ನಿಮ್ಮಲ್ಲಿದ್ದು ಅತ್ಯಧಿಕವಾಗುವಲ್ಲಿ ನಮ್ಮ ಕರ್ತನಾದ ಯೇಸು ಕ್ರಿಸ್ತನ ನಿಷ್ಕೃಷ್ಟ ಜ್ಞಾನದ ಸಂಬಂಧದಲ್ಲಿ ನೀವು ನಿಷ್ಕ್ರಿಯರು ಅಥವಾ ನಿಷ್ಫಲರು ಆಗುವುದರಿಂದ ಅವು ನಿಮ್ಮನ್ನು ತಡೆಯುವವು.  ಈ ವಿಷಯಗಳು ಯಾವನಲ್ಲಾದರೂ ಇಲ್ಲದಿರುವಲ್ಲಿ ಅಂಥವನು ಬೆಳಕಿಗೆ ತನ್ನ ಕಣ್ಣುಗಳನ್ನು ಮುಚ್ಚಿಕೊಂಡವನಾಗಿದ್ದು ಕುರುಡನಾಗಿದ್ದಾನೆ ಮತ್ತು ಪೂರ್ವದಲ್ಲಿ ತಾನು ಮಾಡಿದ ಪಾಪಗಳಿಂದ ಶುದ್ಧನಾದದ್ದನ್ನು ಮರೆತುಬಿಟ್ಟವನಾಗಿದ್ದಾನೆ. 10  ಈ ಕಾರಣದಿಂದ ಸಹೋದರರೇ, ನಿಮ್ಮ ಕರೆಯುವಿಕೆಯನ್ನು ಮತ್ತು ಆರಿಸಿಕೊಳ್ಳುವಿಕೆಯನ್ನು ಖಚಿತಪಡಿಸಿಕೊಳ್ಳಲು ನಿಮ್ಮ ಕೈಲಾದದ್ದೆಲ್ಲವನ್ನು ಮಾಡಿರಿ; ನೀವು ಈ ವಿಷಯಗಳನ್ನು ಮಾಡುತ್ತಾ ಇರುವುದಾದರೆ ಎಂದಿಗೂ ವಿಫಲವಾಗುವುದೇ ಇಲ್ಲ. 11  ಹೀಗೆ, ನಮ್ಮ ಕರ್ತನೂ ರಕ್ಷಕನೂ ಆದ ಯೇಸು ಕ್ರಿಸ್ತನ ನಿತ್ಯರಾಜ್ಯದೊಳಗೆ ಪ್ರವೇಶವು ನಿಮಗೆ ಧಾರಾಳವಾಗಿ ಒದಗಿಸಲ್ಪಡುವುದು. 12  ಈ ಕಾರಣದಿಂದ ನೀವು ಈ ವಿಷಯಗಳನ್ನು ತಿಳಿದವರಾಗಿದ್ದು ನಿಮ್ಮಲ್ಲಿರುವ ಸತ್ಯದಲ್ಲಿ ಸ್ಥಿರವಾಗಿರುವುದಾದರೂ ಇವುಗಳ ಕುರಿತು ನಿಮಗೆ ಜ್ಞಾಪಕಹುಟ್ಟಿಸಲು ನಾನು ಯಾವಾಗಲೂ ಸಿದ್ಧನಾಗಿರುವೆನು. 13  ನಾನು ಈ ಗುಡಾರದಲ್ಲಿರುವ ವರೆಗೆ ಜ್ಞಾಪಕಹುಟ್ಟಿಸುವ ಮೂಲಕ ನಿಮಗೆ ಪ್ರಚೋದನೆಯನ್ನು ನೀಡುವುದನ್ನು ಯುಕ್ತವೆಂದೆಣಿಸುತ್ತೇನೆ. 14  ಏಕೆಂದರೆ ನಮ್ಮ ಕರ್ತನಾದ ಯೇಸು ಕ್ರಿಸ್ತನು ನನಗೆ ಸೂಚಿಸಿದಂತೆಯೇ ನನ್ನ ಗುಡಾರವು ತೆಗೆದುಹಾಕಲ್ಪಡುವ ಸಮಯವು ಬೇಗನೆ ಬರಲಿಕ್ಕಿದೆ ಎಂಬುದು ನನಗೆ ತಿಳಿದಿದೆ. 15  ಆದುದರಿಂದ ನಾನು ಹೋದ ಬಳಿಕ ನೀವು ಈ ವಿಷಯಗಳನ್ನು ಯಾವಾಗಲೂ ನೆನಪಿಸಿಕೊಳ್ಳಲು ಸಾಧ್ಯವಾಗುವಂತೆ ಪ್ರತಿ ಸಲವೂ ನನ್ನಿಂದಾದಷ್ಟು ಮಟ್ಟಿಗೆ ಪ್ರಯಾಸಪಡುವೆನು. 16  ನಾವು ನಮ್ಮ ಕರ್ತನಾದ ಯೇಸು ಕ್ರಿಸ್ತನ ಶಕ್ತಿಯನ್ನೂ ಸಾನ್ನಿಧ್ಯವನ್ನೂ ನಿಮಗೆ ತಿಳಿಯಪಡಿಸಿದ್ದು ಚಾತುರ್ಯದಿಂದ ಕಲ್ಪಿಸಿದ ಸುಳ್ಳು ಕಥೆಗಳನ್ನು ಅನುಸರಿಸುವ ಮೂಲಕವಾಗಿ ಅಲ್ಲ, ಬದಲಾಗಿ ಅವನ ಮಹತ್ತನ್ನು ಕಣ್ಣಾರೆ ಕಂಡವರಾಗಿ ತಿಳಿಯಪಡಿಸಿದೆವು. 17  “ಇವನು ನನಗೆ ಪ್ರಿಯನಾಗಿರುವ ನನ್ನ ಮಗನು, ಇವನನ್ನು ಸ್ವತಃ ನಾನೇ ಮೆಚ್ಚಿದ್ದೇನೆ” ಎಂಬಂಥ ಮಾತುಗಳು ಮಹತ್ತರವಾದ ಮಹಿಮೆಯಿಂದ ಅವನಿಗೆ ತಿಳಿಸಲ್ಪಟ್ಟಾಗ ಅವನು ತಂದೆಯಾದ ದೇವರಿಂದ ಗೌರವವನ್ನೂ ಮಹಿಮೆಯನ್ನೂ ಹೊಂದಿದನು. 18  ಹೌದು, ನಾವು ಅವನೊಂದಿಗೆ ಪವಿತ್ರ ಪರ್ವತದಲ್ಲಿದ್ದಾಗ ಈ ಮಾತುಗಳು ಸ್ವರ್ಗದಿಂದ ತಿಳಿಸಲ್ಪಟ್ಟದ್ದನ್ನು ಕೇಳಿಸಿಕೊಂಡೆವು. 19  ಇದರಿಂದಾಗಿ ಪ್ರವಾದನ ವಾಕ್ಯವು ನಮಗೆ ಇನ್ನಷ್ಟು ಹೆಚ್ಚು ದೃಢಪಡಿಸಲ್ಪಟ್ಟಿದೆ; ದಿನವು ಬೆಳಗಿ ಉದಯ ನಕ್ಷತ್ರವು ಮೂಡುವ ವರೆಗೆ ನೀವು ಆ ವಾಕ್ಯವನ್ನು ನಿಮ್ಮ ಹೃದಯಗಳಲ್ಲಿ ಕತ್ತಲೆಯಾದ ಸ್ಥಳದಲ್ಲಿ ಪ್ರಕಾಶಿಸುತ್ತಿರುವ ದೀಪವೆಂದೆಣಿಸಿ ಅದಕ್ಕೆ ಗಮನ ಕೊಡುವುದು ಒಳ್ಳೇದು. 20  ಶಾಸ್ತ್ರಗ್ರಂಥದಲ್ಲಿರುವ ಯಾವ ಪ್ರವಾದನೆಯೂ ಯಾವುದೇ ಖಾಸಗಿ ಅರ್ಥವಿವರಣೆಯಿಂದ ಉಂಟಾಗುವುದಿಲ್ಲ ಎಂಬುದನ್ನು ನೀವು ಮೊದಲು ತಿಳಿದುಕೊಳ್ಳಿರಿ. 21  ಪ್ರವಾದನೆಯು ಎಂದೂ ಮನುಷ್ಯನ ಚಿತ್ತದಿಂದ ಉಂಟಾಗಲಿಲ್ಲ, ಬದಲಿಗೆ ಮನುಷ್ಯರು ಪವಿತ್ರಾತ್ಮದಿಂದ * ಮಾರ್ಗದರ್ಶಿಸಲ್ಪಟ್ಟು ದೇವರಿಂದ ಹೊಂದಿದ್ದನ್ನೇ ಮಾತಾಡಿದರು.

ಪಾದಟಿಪ್ಪಣಿ

2ಪೇತ್ರ 1:2  ಅಥವಾ, “ಅಪಾರ ದಯೆಯೂ.”
2ಪೇತ್ರ 1:21  ಅಥವಾ, “ದೇವರ ಕಾರ್ಯಕಾರಿ ಶಕ್ತಿ.” ಪರಿಶಿಷ್ಟ 7 ನ್ನು ನೋಡಿ.