ಮಾಹಿತಿ ಇರುವಲ್ಲಿ ಹೋಗಲು

ಸೆಕೆಂಡರಿ ಮೆನ್ಯೂಗೆ ಹೋಗಲು

ಪರಿವಿಡಿಗೆ ಹೋಗಲು

ಯೆಹೋವನ ಸಾಕ್ಷಿಗಳು

Kannada (ಕನ್ನಡ)

ಆನ್‌ಲೈನ್‌ ಬೈಬಲ್ | ಪವಿತ್ರ ಶಾಸ್ತ್ರಗಳ ನೂತನ ಲೋಕ ಭಾಷಾಂತರ

2 ತಿಮೊಥೆಯ 3:1-17

3  ಆದರೆ ಕಡೇ ದಿವಸಗಳಲ್ಲಿ ನಿಭಾಯಿಸಲು ಕಷ್ಟಕರವಾದ ಕಠಿನಕಾಲಗಳು ಬರುವವು ಎಂಬುದನ್ನು ತಿಳಿದುಕೊ.  ಜನರು ಸ್ವಪ್ರೇಮಿಗಳೂ ಹಣಪ್ರೇಮಿಗಳೂ ಸ್ವಪ್ರತಿಷ್ಠೆಯುಳ್ಳವರೂ ಅಹಂಕಾರಿಗಳೂ ದೇವದೂಷಕರೂ ಹೆತ್ತವರಿಗೆ ಅವಿಧೇಯರೂ ಕೃತಜ್ಞತೆಯಿಲ್ಲದವರೂ ನಿಷ್ಠೆಯಿಲ್ಲದವರೂ  ಸ್ವಾಭಾವಿಕ ಮಮತೆಯಿಲ್ಲದವರೂ ಯಾವುದೇ ಒಪ್ಪಂದಕ್ಕೆ ಸಿದ್ಧರಿಲ್ಲದವರೂ ಮಿಥ್ಯಾಪವಾದಿಗಳೂ ಸ್ವನಿಯಂತ್ರಣವಿಲ್ಲದವರೂ ಉಗ್ರರೂ ಒಳ್ಳೇತನವನ್ನು ಪ್ರೀತಿಸದವರೂ  ದ್ರೋಹಿಗಳೂ ಹಟಮಾರಿಗಳೂ ಹೆಮ್ಮೆಯಿಂದ ಉಬ್ಬಿಕೊಂಡವರೂ ದೇವರನ್ನು ಪ್ರೀತಿಸುವ ಬದಲು ಭೋಗವನ್ನು ಪ್ರೀತಿಸುವವರೂ  ದೇವಭಕ್ತಿಯ ವೇಷವಿದ್ದು ಅದರ ಶಕ್ತಿಗೆ ವಿರುದ್ಧವಾಗಿ ವರ್ತಿಸುವವರೂ ಆಗಿರುವರು; ಇಂಥವರಿಂದ ದೂರವಿರು.  ಇಂಥವರ ಮಧ್ಯದಿಂದ ಆ ಪುರುಷರು ಎದ್ದು ಮನೆಗಳೊಳಗೆ ನುಸುಳಿ ಪಾಪಗಳಿಂದ ತುಂಬಿದವರೂ ನಾನಾ ವಿಧವಾದ ಇಚ್ಛೆಗಳಿಂದ ಪ್ರೇರಿತರೂ ಆಗಿರುವ ದುರ್ಬಲರಾದ ಸ್ತ್ರೀಯರನ್ನು ವಶಮಾಡಿಕೊಳ್ಳುವರು.  ಈ ಪುರುಷರು ಯಾವಾಗಲೂ ಕಲಿಯುತ್ತಾ ಇರುತ್ತಾರಾದರೂ ಸತ್ಯದ ನಿಷ್ಕೃಷ್ಟ ಜ್ಞಾನವನ್ನು ಎಂದಿಗೂ ಹೊಂದಶಕ್ತರಾಗಿರುವುದಿಲ್ಲ.  ಯನ್ನ ಮತ್ತು ಯಂಬ್ರ ಎನ್ನುವವರು ಮೋಶೆಯನ್ನು ವಿರೋಧಿಸಿದಂತೆಯೇ ಇವರು ಸಹ ಸತ್ಯವನ್ನು ವಿರೋಧಿಸುತ್ತಾ ಇರುತ್ತಾರೆ. ಇವರು ಸಂಪೂರ್ಣವಾಗಿ ಬುದ್ಧಿಗೆಟ್ಟವರೂ ನಂಬಿಕೆಯ ವಿಷಯದಲ್ಲಿ ಅನಂಗೀಕೃತರೂ ಆಗಿದ್ದಾರೆ.  ಹಾಗಿದ್ದರೂ ಅವರು ಇನ್ನು ಮುಂದೆ ಪ್ರಗತಿ ಹೊಂದುವುದಿಲ್ಲ, ಏಕೆಂದರೆ ಆ ಇಬ್ಬರು ಪುರುಷರ ಹುಚ್ಚುತನವು ಎಲ್ಲರಿಗೂ ಸ್ಪಷ್ಟವಾಗಿ ತಿಳಿದುಬಂದಂತೆಯೇ ಇವರದ್ದೂ ತಿಳಿದುಬರುವುದು. 10  ನೀನಾದರೋ ನನ್ನ ಬೋಧನೆಯನ್ನೂ ನನ್ನ ಜೀವನ ರೀತಿಯನ್ನೂ ನನ್ನ ಉದ್ದೇಶವನ್ನೂ ನನ್ನ ನಂಬಿಕೆಯನ್ನೂ ನನ್ನ ದೀರ್ಘ ಸಹನೆಯನ್ನೂ ನನ್ನ ಪ್ರೀತಿಯನ್ನೂ ನನ್ನ ತಾಳ್ಮೆಯನ್ನೂ ನಿಕಟವಾಗಿ ಅನುಸರಿಸಿದ್ದೀ 11  ಮತ್ತು ನನ್ನ ಹಿಂಸೆಗಳನ್ನೂ ನನ್ನ ಕಷ್ಟಗಳನ್ನೂ ಅಂತಿಯೋಕ್ಯ, ಇಕೋನ್ಯ ಮತ್ತು ಲುಸ್ತ್ರದಲ್ಲಿ ನನಗೆ ಸಂಭವಿಸಿದ ಸಂಗತಿಗಳನ್ನೂ ನಾನು ಎಂಥ ಹಿಂಸೆಗಳನ್ನು ಸಹಿಸಿಕೊಂಡಿದ್ದೇನೆ ಎಂಬುದನ್ನೂ ತಿಳಿದವನಾಗಿದ್ದೀ; ಅವೆಲ್ಲವುಗಳೊಳಗಿಂದ ಕರ್ತನು ನನ್ನನ್ನು ಬಿಡಿಸಿದನು. 12  ವಾಸ್ತವದಲ್ಲಿ, ಕ್ರಿಸ್ತ ಯೇಸುವಿನ ಸಂಬಂಧದಲ್ಲಿ ದೇವಭಕ್ತಿಯಿಂದ ಜೀವಿಸಲು ಬಯಸುವವರೆಲ್ಲರೂ ಹಿಂಸೆಗೂ ಒಳಗಾಗುವರು. 13  ಆದರೆ ದುಷ್ಟರೂ ವಂಚಕರೂ ಜನರನ್ನು ಮೋಸಗೊಳಿಸುತ್ತಾ ತಾವೂ ಮೋಸಹೋಗುತ್ತಾ ಕೆಟ್ಟದ್ದರಿಂದ ತೀರ ಕೆಟ್ಟದ್ದಕ್ಕೆ ಹೋಗುವರು. 14  ನೀನಾದರೋ ಕಲಿತ ವಿಷಯಗಳಲ್ಲಿಯೂ ನಂಬುವಂತೆ ಒಡಂಬಡಿಸಲ್ಪಟ್ಟ ವಿಷಯಗಳಲ್ಲಿಯೂ ಮುಂದುವರಿಯುತ್ತಾ ಇರು; ಇವುಗಳನ್ನು ಕಲಿಸಿಕೊಟ್ಟವರು ಯಾರೆಂಬುದು ನಿನಗೆ ತಿಳಿದಿದೆ. 15  ಶೈಶವದಿಂದಲೇ ನೀನು ಪವಿತ್ರ ಬರಹಗಳನ್ನು ತಿಳಿದುಕೊಂಡಿದ್ದೀ; ಇವು ನಿನ್ನನ್ನು ಕ್ರಿಸ್ತ ಯೇಸುವಿನ ಸಂಬಂಧದಲ್ಲಿರುವ ನಂಬಿಕೆಯ ಮೂಲಕ ರಕ್ಷಣೆಗಾಗಿ ವಿವೇಕಿಯನ್ನಾಗಿ ಮಾಡಬಲ್ಲವು. 16  ಇಡೀ ಶಾಸ್ತ್ರಗ್ರಂಥವು ದೇವರಿಂದ ಪ್ರೇರಿತವಾಗಿದೆ ಮತ್ತು ಬೋಧಿಸುವುದಕ್ಕೂ ಖಂಡಿಸುವುದಕ್ಕೂ ವಿಷಯಗಳನ್ನು ಸರಿಪಡಿಸುವುದಕ್ಕೂ ನೀತಿಯಲ್ಲಿ ಶಿಸ್ತುಗೊಳಿಸುವುದಕ್ಕೂ ಉಪಯುಕ್ತವಾಗಿದೆ. 17  ಇದರಿಂದಾಗಿ ದೇವರ ಮನುಷ್ಯನು ಪೂರ್ಣ ಸಮರ್ಥನಾಗಿ ಸಕಲ ಸತ್ಕಾರ್ಯಗಳಿಗೆ ಸಂಪೂರ್ಣವಾಗಿ ಸನ್ನದ್ಧನಾಗುವನು.

ಪಾದಟಿಪ್ಪಣಿ