ಮಾಹಿತಿ ಇರುವಲ್ಲಿ ಹೋಗಲು

ಪರಿವಿಡಿಗೆ ಹೋಗಲು

1 ಯೋಹಾನ 1:1-10

1  ನಾವು ಕೇಳಿಸಿಕೊಂಡಿರುವ, ಕಣ್ಣಾರೆ ಕಂಡಿರುವ, ಲಕ್ಷ್ಯವಿಟ್ಟು ನೋಡಿರುವ ಮತ್ತು ನಮ್ಮ ಕೈಗಳು ಸ್ಪರ್ಶಿಸಿರುವ ಜೀವದ ವಾಕ್ಯವು ಆರಂಭದಿಂದಲೂ ಇತ್ತು ಮತ್ತು  (ಹೌದು, ಆ ಜೀವವು ಪ್ರಕಟಿಸಲ್ಪಟ್ಟಿತು ಮತ್ತು ನಾವು ನೋಡಿದ್ದೇವೆ, ಸಾಕ್ಷಿನೀಡುತ್ತಿದ್ದೇವೆ ಮತ್ತು ತಂದೆಯ ಬಳಿಯಲ್ಲಿದ್ದು ನಮಗೆ ಪ್ರಕಟಿಸಲ್ಪಟ್ಟಂಥ ನಿತ್ಯಜೀವವನ್ನು ನಿಮಗೆ ವರದಿಮಾಡುತ್ತಿದ್ದೇವೆ,)  ಅದನ್ನು ನಾವು ನೋಡಿದ್ದೇವೆ ಹಾಗೂ ಕೇಳಿಸಿಕೊಂಡು ನಿಮಗೂ ವರದಿಮಾಡುತ್ತಿದ್ದೇವೆ; ಹೀಗೆ ನೀವು ಸಹ ನಮ್ಮೊಂದಿಗೆ ಪಾಲುಗಾರರಾಗುವಂತಾಗುವುದು. ಇದಲ್ಲದೆ ಈ ನಮ್ಮ ಪಾಲುಗಾರಿಕೆಯು ತಂದೆಯೊಂದಿಗೂ ಆತನ ಮಗನಾದ ಯೇಸು ಕ್ರಿಸ್ತನೊಂದಿಗೂ ಇರುವಂಥದ್ದಾಗಿದೆ.  ನಮ್ಮ ಆನಂದವು ಪೂರ್ಣಪ್ರಮಾಣದಲ್ಲಿರುವಂತೆ ನಾವು ಈ ವಿಷಯಗಳನ್ನು ಬರೆಯುತ್ತಿದ್ದೇವೆ.  ನಾವು ಅವನಿಂದ ಕೇಳಿಸಿಕೊಂಡು ನಿಮಗೆ ಪ್ರಕಟಿಸುವಂಥ ಸಂದೇಶವೇನೆಂದರೆ, ದೇವರು ಬೆಳಕಾಗಿದ್ದಾನೆ ಮತ್ತು ಆತನಲ್ಲಿ ಯಾವ ಕತ್ತಲೆಯೂ ಇಲ್ಲ.  “ನಾವು ಆತನೊಂದಿಗೆ ಪಾಲುಗಾರಿಕೆಯನ್ನು ಹೊಂದಿದ್ದೇವೆ” ಎಂದು ಹೇಳಿ ಕತ್ತಲೆಯಲ್ಲೇ ನಡೆಯುತ್ತಾ ಇರುವುದಾದರೆ ನಾವು ಸುಳ್ಳಾಡುವವರೂ ಸತ್ಯವನ್ನು ಅನುಸರಿಸಿ ನಡೆಯದವರೂ ಆಗಿದ್ದೇವೆ.  ಆತನು ಬೆಳಕಿನಲ್ಲಿರುವಂತೆಯೇ ನಾವೂ ಬೆಳಕಿನಲ್ಲಿ ನಡೆಯುತ್ತಿರುವುದಾದರೆ ಪರಸ್ಪರ ಪಾಲುಗಾರಿಕೆಯನ್ನು ಹೊಂದಿದ್ದೇವೆ ಮತ್ತು ಆತನ ಮಗನಾದ ಯೇಸುವಿನ ರಕ್ತವು ನಮ್ಮನ್ನು ಎಲ್ಲ ಪಾಪದಿಂದ ಶುದ್ಧೀಕರಿಸುತ್ತದೆ.  “ನಮ್ಮಲ್ಲಿ ಯಾವುದೇ ಪಾಪವಿಲ್ಲ” ಎಂದು ನಾವು ಹೇಳುವುದಾದರೆ ನಮ್ಮನ್ನು ನಾವೇ ಮೋಸಗೊಳಿಸಿಕೊಳ್ಳುತ್ತಿದ್ದೇವೆ ಮತ್ತು ಸತ್ಯವು ನಮ್ಮಲ್ಲಿಲ್ಲ.  ನಾವು ನಮ್ಮ ಪಾಪಗಳನ್ನು ನಿವೇದಿಸಿಕೊಳ್ಳುವುದಾದರೆ ಆತನು ನಂಬಿಗಸ್ತನೂ ನೀತಿವಂತನೂ ಆಗಿರುವುದರಿಂದ ನಮ್ಮ ಪಾಪಗಳನ್ನು ಕ್ಷಮಿಸಿ ಎಲ್ಲ ಅನೀತಿಯಿಂದ ನಮ್ಮನ್ನು ಶುದ್ಧೀಕರಿಸುತ್ತಾನೆ. 10  “ನಾವು ಪಾಪಮಾಡಿಲ್ಲ” ಎಂದು ಹೇಳುವುದಾದರೆ ನಾವು ಆತನನ್ನು ಸುಳ್ಳುಗಾರನನ್ನಾಗಿ ಮಾಡುತ್ತೇವೆ ಮತ್ತು ಆತನ ವಾಕ್ಯವು ನಮ್ಮಲ್ಲಿ ಇಲ್ಲ.

ಪಾದಟಿಪ್ಪಣಿ